ಮಂಗಳಮುಖಿಯರಿಗೆ ಇತ್ತೀಚೆಗೆ ಎಲ್ಲರೂ ಗೌರವ ಕೊಡುತ್ತಿದ್ದಾರೆ. ವಿದ್ಯಾವಂತನಾದ, ವಿದ್ಯಾವಂತನಲ್ಲದಿದ್ದರೂ ಕೂಡ ಮನಸ್ಸಿನಿಂದ ಒಳ್ಳೆಯ ಭಾವನೆಗಳಿರುವ ವ್ಯಕ್ತಿ ಪ್ರಪಂಚದಲ್ಲಿ ಎಲ್ಲರಿಗೂ ಕೂಡ ತನ್ನಂತೆ ಅವರ ಇಚ್ಛೆಯ ಪ್ರಕಾರವಾಗಿ ಬದುಕುವ ಸ್ವಾತಂತ್ರ್ಯ ಇದೆ ಎನ್ನುವ ಸೂಕ್ಷ್ಮತೆ ಅರ್ಥ ಮಾಡಿಕೊಂಡ ವ್ಯಕ್ತಿಯು ಎಂದಿಗೂ ಇನ್ನೊಬ್ಬರು ಬದುಕುವ ರೀತಿಯನ್ನು ಆಡಿಕೊಂಡು ನಗುವುದಿಲ್ಲ.
ಈ ವಿಚಾರದಲ್ಲಿ ಈ ಹಿಂದಿಗಿಂತ ಈಗ ಮಂಗಳಮುಖಿಯರನ್ನು ನೋಡಿ ಅ’ವ’ಮಾ’ನಿಸುತ್ತಿದ್ದವರ, ನೋ’ಯಿಸುತ್ತಿದ್ದವರ, ಕ’ಣ್ಣೀ’ರು ಹಾಕಿಸುತ್ತಿದ್ದವರ ಸಂಖ್ಯೆ ಕಡಿಮೆ ಆಗಿದೆ ಎಂದು ಹೇಳಬಹುದು. ಯಾಕೆಂದರೆ ಮಂಗಳಮುಖಿಯರು ಎಂದರೆ ಅವರು ಅಬಲೆಯರಲ್ಲ, ಅವರು ಅರ್ಧನಾರೀಶ್ವರನ ಪ್ರತಿರೂಪ ಎಂದೇ ಹೇಳಬಹುದು. ತಮ್ಮ ಪಾಲಿಗೆ ಈ ಪ್ರಕೃತಿ ಕೊಟ್ಟಿರುವ ಈ ಸೃಷ್ಟಿಯನ್ನು ಅವರು ಮನಸ್ಪೂರ್ವಕವಾಗಿ ಒಪ್ಪಿಕೊಂಡು ಹಾಗೆ ಬದುಕುತ್ತಿರುತ್ತಾರೆ.
ಇಂಥವರ ಭಾವನೆಗಳಿಗೆ ಗೌರವ ಕೊಡುವುದು ಕೋಟಿ ಪುಣ್ಯ ಈಗಿನ ಕಾಲದಲ್ಲಿ ಮಂಗಳಮುಖಿಯರು ಕೂಡ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಲು ಪ್ರಯತ್ನಿಸುತ್ತಿದ್ದಾರೆ ಮತ್ತು ಸರ್ಕಾರಗಳು ಕೂಡ ಮಂಗಳಮುಖಿಯರಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿ ಮೀಸಲಾತಿಗಳನ್ನು ಕೊಟ್ಟು ಅವರಿಗೂ ಇತರರ ಸಮಕ್ಕೆ ಬದುಕಲು ಅವಕಾಶ ಮಾಡಿಕೊಡುತ್ತಿದೆ.
ಮಂಗಳಮುಖಿರಲ್ಲೂ ವಿದ್ಯಾವಂತರಿದ್ದಾರೆ, ಸಾಧಕರಿದ್ದಾರೆ ಆದರೆ ಅವರಿಗೆ ಅವರದ್ದೇ ಆದ ಪದ್ಧತಿಗಳು ಇರುತ್ತವೆ. ಅದು ಎಲ್ಲರಿಗೂ ಅರ್ಥ ಆಗುವುದಿಲ್ಲ. ಮಂಗಳಮುಖಿಯರನ್ನು ನೋಡಿದ ತಕ್ಷಣ ಇವರು ದುಡ್ಡು ಕೀಳಲು ಬರುತ್ತಾರೆ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಅವರು ಯಾವ ಕಾರಣಕ್ಕಾಗಿ ದುಡ್ಡು ಕೇಳುತ್ತಿದ್ದಾರೆ ಎನ್ನುವುದರ ಅರ್ಥವಾಗದೇ ಇರಬಹುದು.
ಇದು ಅವರ ಸಮುದಾಯದ ನಿಯಮವಾಗಿರಬಹುದು ಅಥವಾ ಕೆಲವು ಮಂಗಳಮುಖಿಯರಿಗೆ ಯಾರು ಕೆಲಸ ಕೊಡದ ಕಾರಣ ಹೊಟ್ಟೆಪಾಡಿಗಾಗಿ ಅವರು ದುಡ್ಡು ಕೇಳುತ್ತಿರಬಹುದು ಆ ಕಾರಣ ಏನೇ ಇರಲಿ ಅದೇ ಕಾರಣದಿಂದ ಅವರನ್ನು ತಾ’ತ್ಸ’ರದಿಂದ ನೋಡಬೇಡಿ. ಮಂಗಳಮುಖಿಯರು ರಸ್ತೆಯಲ್ಲಿ ಸಿಕ್ಕ ತಕ್ಷಣ ಹಣ ಕೇಳಲು ಬರುತ್ತಾರೆ ಎಂದು ತಪ್ಪಿಸಿಕೊಂಡು ಓಡಾಡುತ್ತಾರೆ ಅಥವಾ ಹಣ ಕೇಳಲು ಬರುವ ಮಂಗಳಮುಖಿಯರಿಗೆ ಒಡೆದು, ಬೈದು, ಕ’ಣ್ಣೀ’ರು ಹಾಕಿಸಿ ನಗುತ್ತಾರೆ. ಈ ರೀತಿ ಕ್ರೌ’ರ್ಯಮಾಡುವುದು ನಿಮಗೆ ಕೆ’ಟ್ಟ’ದ್ದು, ಮಂಗಳ ಮುಖಿಯರ ಶಾ’ಪ ತಟ್ಟುತ್ತದೆ.
ಅವರ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ ಅವರು ಯಾವಾಗಲೂ ಮನಸ್ಸಿನಲ್ಲಿ ನೊಂದುಕೊಂಡು ಈ ಸಮಾಜದಲ್ಲಿ ತಮಗೆ ಗೌರವ ಇಲ್ಲ ಎಂದು ಕೊರಗುತ್ತಿರುತ್ತಾರೆ. ಇಷ್ಟು ನೋ’ವಿರುವವರ ಶಾ’ಪ ಒಳ್ಳೆಯದಲ್ಲ, ಅವರ ಶಾ’ಪಕ್ಕೆ ನಿಮ್ಮನ್ನು ಬ’ರ್ಬಾ’ದ್ ಮಾಡುವ ಶಕ್ತಿ ಇರುತ್ತದೆ. ಬದಲಾಗಿ ನಿಮ್ಮ ಕೈಯಲ್ಲಿ ಇರುವಷ್ಟು ಹಣವನ್ನು ಅವರಿಗೆ ಕೊಡಿ. ನೀವು ಅವರಿಗೆ ಪ್ರೀತಿಯಿಂದ ಮಾತನಾಡಿಸಿ 50 ರೂಪಾಯಿ ಕೊಟ್ಟರು ಕೂಡ ಅವರು ತೆಗೆದುಕೊಳ್ಳುತ್ತಾರೆ ಮತ್ತು ಒಳ್ಳೆಯ ಮನಸ್ಸಿನಿಂದ ನಿಮಗೆ ಆಶೀರ್ವಾದ ಮಾಡುತ್ತಾರೆ.
ಮಂಗಳಮುಖಿಯರು ಹಣ ತೆಗೆದುಕೊಂಡು ಹಾಗೆ ಹೋಗುವುದಿಲ್ಲ. ಅವರ ಬಳಿ ಇರುವ ಒಂದು ನಾಣ್ಯವನ್ನು ದೃಷ್ಟಿ ತೆಗೆದು ಅವರ ಬಳೆಗಳಿಗೆ ಮುಟ್ಟಿಸಿ ಹಲ್ಲಿನಿಂದ ಕಚ್ಚಿ ಕೊಡುತ್ತಾರೆ. ನೀವೇನಾದರೂ ಮಂಗಳಮುಖಿಯರಿಂದ ಈ ರೀತಿ ನಾಣ್ಯವನ್ನು ಪಡೆದರೆ ಅಂದಿನಿಂದ ನಿಮ್ಮ ಅದೃಷ್ಟ ಬದಲಾಗಿ ಹೋಗುತ್ತದೆ ನೀವು ಬಲವಂತವಾಗಿ ಅವರಿಂದ ಪಡೆಯಬಾರದು ನಿಮ್ಮನ್ನು ನೋಡಿ ಅವರೇ ಇಷ್ಟಪಟ್ಟು ಈ ರೀತಿಯಾಗಿ ಕೊಡಬೇಕು.
ಹೀಗೆ ಆದರೆ ನಿಮ್ಮ ಅದೃಷ್ಟದ ಬಾಗಿಲು ತೆರೆದಂತೆ ಹಾಗಾಗಿ ರಸ್ತೆಯಲ್ಲಿ ಮಂಗಳಮುಖಿ ಸಿಕ್ಕಾಗ ಅವರ ಕ್ಷೇಮ ವಿಚಾರಿಸಿ ಸಾಧ್ಯವಾದರೆ ಅವರಿಗೆ ತಿನ್ನಲು ಏನಾದರೂ ಕೊಡಿಸಿ, ಕೈಯಲ್ಲಿ ಇದ್ದಷ್ಟು ಹಣ ಕೊಡಿ, ಅವರು ಹೆಚ್ಚಿಗೆ ಕೇಳಿದರೆ ನಿಮ್ಮ ಬಳಿ ಇಲ್ಲ ಅಂದಾಗ ಪರಿಸ್ಥಿತಿಯನ್ನು ವಿವರಿಸಿ, ಖಂಡಿತವಾಗಿ ಅವರು ಹಿಂ’ಸೆ ಕೊಡುವುದಿಲ್ಲ ಜೊತೆಗೆ ಕೊನೆಯಲ್ಲಿ ಹೋಗಿ ಬರುತ್ತೇನೆ ಎಂದು ಹೇಳಿ ನಿಮ್ಮ ಕಾರ್ಯಗಳಿಗೆ ಹೋಗಿ ಎಲ್ಲವೂ ಒಳ್ಳೆಯದಾಗುತ್ತದೆ.