ಇತ್ತೀಚಿಗೆ ಸರ್ವೆ ಸಾಮಾನ್ಯವಾಗಿ ಕೇಳಿ ಬರುತ್ತಿರುವ ಕಾಯಿಲೆ ಡಯಾಬಿಟಿಸ್. ಈ ಹಿಂದೆ ಇದನ್ನು ವಯೋ ಸಹಜ ಕಾಯಿಲೆ, ಶ್ರೀಮಂತರ ಕಾಯಿಲೆ ಎನ್ನಲಾಗುತ್ತಿತ್ತು. ಆದರೆ ಇಂದು ಅತಿ ಚಿಕ್ಕ ವಯಸ್ಸಿನವರಿಗೆ ಮತ್ತು ಹಳ್ಳಿಯಲ್ಲಿ ಇರುವವರಿಗೆ ಕೂಡ ಡಯಾಬಿಟಿಸ್ ಕಾಡುತ್ತಿದೆ. ಇದಕ್ಕೆಲ್ಲ ಕಾರಣ ಇಂದು ನಮ್ಮ ಆಹಾರ ಶೈಲಿ ಸಂಪೂರ್ಣವಾಗಿ ಹದ ತಪ್ಪಿರುವುದು.
ಹಾಗೆ ನಮ್ಮ ಜೀವನ ಶೈಲಿ ಕೂಡ ಬದಲಾಗಿದೆ, ಈ ರೀತಿ ವ್ಯತ್ಯಾಸಗಳಾದಾಗ ನಮ್ಮ ದೇಹದ ಆರೋಗ್ಯವೂ ಕೂಡ ಕಂಟ್ರೋಲ್ ತಪ್ಪಿ ಕೆಲವು ಆರೋಗ್ಯ ಸಮಸ್ಯೆಗಳಾಗುತ್ತವೆ. ಆದರೆ ಇದು ಗಂಭೀರ ಕಾಯಿಲೆಗಳಲ್ಲ ಹಾಗೆಂದು ನಿರ್ಲಕ್ಷಿಸುವಂತೆಯೂ ಇಲ್ಲ. ಡಯಾಬಿಟಿಸ್ ಪೇಷಂಟ್ ಗಳಿಗೆ ಆಸ್ಪತ್ರೆಗೆ ಹೋದರೆ ವರ್ಷ ಪೂರ್ತಿ ಸೇವಿಸಲು ಮಾತ್ರೆಗಳನ್ನು ಕೊಡುತ್ತಾರೆ.
ಹಾಗಾಗಿ ಈ ರೀತಿ ಧೀರ್ಘವಾಗಿ ಮಾತ್ರೆಗಳನ್ನು ಸೇವಿಸುವ ಯಾವುದೇ ಸಮಸ್ಯೆ ಇದ್ದರೂ ಅದನ್ನು ಆದಷ್ಟು ಬೇಗ ಕಂಟ್ರೋಲ್ ಮಾಡಿಕೊಳ್ಳುವುದು ಒಳ್ಳೆಯದು ಹಾಗಾಗಿ ಇಂದು ಈ ಅಂಕಣದಲ್ಲಿ ಡಯಾಬಿಟಿಸ್ ಕಂಟ್ರೋಲ್ ಗೆ ಸುಲಭ ಮನೆಮದ್ದುಗಳನ್ನು ತಿಳಿಸಿಕೊಡುತ್ತಿದ್ದೇವೆ.
ಆಯುರ್ವೇದ ಹೇಳಿರುವ ಪ್ರಕಾರ ಸುಮಾರು 20ಕ್ಕೂ ಹೆಚ್ಚು ಡಯಾಬಿಟಿಸ್ ಗಳು ಇವೆ. ಆದರೆ ವೈದ್ಯಕೀಯ ಭಾಷೆಯಲ್ಲಿ 2 ರೀತಿ ಡಯಾಬಿಟಿಸ್ ಗಳು ಹೆಚ್ಚಾಗಿ ಕಂಡು ಬರುತ್ತದೆ. ಇದರಲ್ಲಿ ಟೈಪ್ 1 ಇನ್ಸುಲಿನ್ ಕೊರತೆಯಾಗುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಆಗದೇ ಇರುವುದು ಒಂದು ರೀತಿಯ ಸಮಸ್ಯೆ.
ಆದರೆ ಇನ್ಸುಲಿನ್ ಉತ್ಪಾದನೆ ಹೆಚ್ಚಾಗಿ ಅದು ಜೀವಕೋಶದ ಜೊತೆ ಸರಿಯಾಗಿ ರಿಜಿಸ್ಟೆನ್ಸ್ ಆಗದೆ ಇರುವುದು ಈ ಕಾರಣದಿಂದಾಗಿ ಇನ್ಸುಲಿನ್ ಹೆಚ್ಚಾಗುವುದು ಕೂಡ ಮತ್ತೊಂದು ರೀತಿಯ ಡಯಾಬಿಟಿಸ್ ಆಗಿದೆ. ಈ ರೀತಿ ಯಾವುದೇ ಡಯಾಬಿಟಿಸ್ ಇದ್ದರೂ ಕೂಡ ಈಗ ನಾವು ಹೇಳುವ ಈ ಮನೆಮದ್ದುಗಳನ್ನು ಪಾಲಿಸಿ ಒಂದೇ ವಾರದಲ್ಲಿ ನಿಮ್ಮ ಆರೋಗ್ಯ ಸುಧಾರಿಸುವುದನ್ನು ನೀವೇ ನೋಡುತ್ತೀರಿ.
* ಡಯಾಬಿಟಿಕ್ ಪೇಷಂಟ್ ಗಳು ಖಾಲಿ ಹೊಟ್ಟೆಯಲ್ಲಿ ಕೆಲವು ಜ್ಯೂಸ್ ಗಳನ್ನು ಸೇವಿಸಬೇಕು. ಒಂದು ವೇಳೆ ಖಾಲಿ ಹೊಟ್ಟೆಯಲ್ಲಿ ಸೇವಿಸಲು ಆಗದೆ ಇದ್ದವರು ಊಟಕ್ಕೂ ಮೊದಲು ಇವುಗಳನ್ನು ಸೇವಿಸಿದರೆ ಉತ್ತಮ. ಬೆಟ್ಟದ ನೆಲ್ಲಿಕಾಯಿ, ಗರಿಕೆ ಅಥವಾ ಸೋರೆಕಾಯಿ ಅಥವಾ ಬೂದುಕುಂಬಳಕಾಯಿ ಇವುಗಳನ್ನು ಜ್ಯೂಸ್ ಮಾಡಿ.
ಜ್ಯೂಸ್ ಮಾಡುವಾಗ ತಂಗಡಿ ಹೂವಿನ ದಳ 7-8, ಅಥವಾ ಬಿಲ್ಪತ್ರೆ ಎಲೆ ಗಳಿಂದ 3-5, ನಿತ್ಯ ಪುಷ್ಪ 3-4 ಇವುಗಳಲ್ಲಿ ಯಾವುದಾದರೂ ಒಂದನ್ನು ಹಾಕಿ ಜ್ಯೂಸ್ ಮಾಡಿ ಸೇವಿಸಬೇಕು. ಪ್ರತಿನಿತ್ಯವು 200ml ರಿಂದ 250ml ಸೇವಿಸಬೇಕು. ಚಿಕ್ಕ ಮಕ್ಕಳಾದರೆ 50ml ರಿಂದ 60ml ಮಾತ್ರ ಸೇವಿಸಬೇಕು ಆದರೆ ಯಾವುದೇ ಕಾರಣಕ್ಕೂ ಕಿಡ್ನಿ ಸಮಸ್ಯೆ ಇರುವವರು ಮತ್ತು ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರು ಇದನ್ನು ಸೇವಿಸುವಂತಿಲ್ಲ.
ಈ ರೀತಿ ಕನಿಷ್ಠ ಎರಡು ತಿಂಗಳು ಈ ಮೇಲೆ ತಿಳಿಸಿದ ಜ್ಯೂಸ್ ಗಳಲ್ಲಿ ಯಾವುದಾದರೂ ಒಂದನ್ನು ಪ್ರತಿದಿನ ಸೇವಿಸಿದರೆ ಆಶ್ಚರ್ಯಕರ ರೀತಿಯಲ್ಲಿ ನಿಮ್ಮ ಶುಗರ್ ಕಂಟ್ರೋಲ್ ಗೆ ಬರುತ್ತದೆ.
* ಅಪಾನ ಮುದ್ರೆಯಲ್ಲಿ ಕಪಾಲಬಾತಿ ಪ್ರಾಣಯಮ, ನಾಡಿ ಶೋಧನ ಪ್ರಾಣಾಯಾಮ ಭ್ರಮರಿ ಪ್ರಾಣಾಯಾಮ ಅಭ್ಯಾಸ ಮಾಡುವುದರಿಂದ ಕೂಡ ಶುಗರ್ ಕಂಟ್ರೋಲ್ ಗೆ ಬರುತ್ತದೆ
* ಸಕ್ಕರೆ ಕಾಯಿಲೆ ಇರುವವರು ಬರಿಕಾಲಿನಲ್ಲಿ ಮಣ್ಣಿನ ಮೇಲೆ ವಾಕಿಂಗ್ ಮಾಡುವುದು ಬಹಳ ಉತ್ತಮ ಪರಿಣಾಮವನ್ನು ನೀಡುತ್ತದೆ. ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದು ಘಂಟೆ ಇವರು ತಪ್ಪದೆ ವಾಕಿಂಗ್ ಮಾಡಬೇಕು.
* ಜಂಕ್ ಫುಡ್, ಫಾಸ್ಟ್ ಬುಕ್ ಗಳು, ಬೇಕರಿ ಪದಾರ್ಥಗಳು ತಂಬಾಕು ಧೂಮಪಾನ, ಮಧ್ಯಪಾನ ಇವುಗಳಿಂದ ದೂರ ಇದ್ದು ಹೆಚ್ಚು ಸೊಪ್ಪು ತರಕಾರಿ ಹಣ್ಣುಗಳು ಸೇವಿಸುವುದು ರೂಢಿಸಿಕೊಂಡರೆ ಸಕ್ಕರೆ ಕಾಯಿಲೆ ಕಂಟ್ರೋಲ್ ಗೆ ಬರುತ್ತದೆ.