ರೋಹಿಣಿ ನಕ್ಷತ್ರ:- ಈ ನಕ್ಷತ್ರದವರು ಸಂಗಾತಿಯಾಗಿ ಸಿಕ್ಕವರು ಸುಖ ಸಂಸಾರ ಹೊಂದಿರುತ್ತಾರೆ, ಇವರಲ್ಲಿ ಹೊಂದಾಣಿಕೆ ಗುಣ ಇರುತ್ತದೆ, ಅನ್ಯೋನ್ಯವಾಗಿ ಇರುತ್ತಾರೆ.
ಹಸ್ತ ನಕ್ಷತ್ರ:- ಅಖಂಡ ಅದೃಷ್ಟ ಹೊಂದಿರುತ್ತಾರೆ. ಇವರ ಸಂಸಾರ ಜೀವನ ಚೆನ್ನಾಗಿರುತ್ತದೆ, ಸಂತೋಷವಾಗಿ ಕುಟುಂಬದೊಂದಿಗೆ ಜೀವನ ಕಳೆಯುತ್ತಾರೆ.
* ಅಶ್ವಿನಿ ನಕ್ಷತ್ರ:- ನಾಯಕತ್ವದ ಗುಣಸ್ವಭಾವ ಇರುವುದರಿಂದ ಅವರು ಹೇಳಿದರೆ ಅದು ಹಾಗೆ ನಡೆಯಬೇಕು ಎಂದು ಡಾಮಿನೇಟ್ ಮಾಡುತ್ತಾರೆ, ಅವರು ಅಂದುಕೊಂಡ ರೀತಿಯ ಕುಟುಂಬದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
* ಭರಣಿ ನಕ್ಷತ್ರ:- ಭರಣಿ ನಕ್ಷತ್ರದವರು ಧರಣಿಯನ್ನು ಆಳುತ್ತಾರೆ ಎನ್ನುವ ಗಾದೆಯು ಇದೆ. ಈ ರೀತಿ ಅವರು ಹೊರಗಿನವರು ಮಾತ್ರವಲ್ಲದೆ ಮನೆಯವರ ಮನಸ್ಸನ್ನು ಕೂಡ ಗೆಲ್ಲುತ್ತಾರೆ. ಎಲ್ಲರನ್ನೂ ಅರ್ಥ ಮಾಡಿಕೊಂಡು ಎಲ್ಲರೂ ಸುಖ ಸಂತೋಷಕ್ಕೆ ಗಮನ ಕೊಡುತ್ತಾರೆ.
* ಕೃತ್ತಿಕಾ ನಕ್ಷತ್ರಾ:- ಕೃತಿಕಾ ನಕ್ಷತ್ರದವರು ತೇಜಸ್ಸು ಉಳ್ಳವರಾಗಿರುತ್ತಾರೆ, ಇವರು ಸಾಧನೆಗಾಗಿ ಹಾತೊರೆಯುತ್ತಾರೆ, ಹಾಗಾಗಿ ಕುಟುಂಬ ಜೀವನದಲ್ಲಿ ಅಪಸ್ವರಗಳು ಆಗಾಗ ಉಂಟಾಗುತ್ತವೆ. ಆದರೂ ನಿಭಾಯಿಸಿ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನ ಪಡುತ್ತಾರೆ.
* ಮೃಗಶಿರಾ ನಕ್ಷತ್ರಾ:- ಮೃಗಶಿರ ನಕ್ಷತ್ರದವರ ಸಂಸಾರ ಜೀವನ ಚೆನ್ನಾಗಿರುತ್ತದೆ.
* ಆರಿದ್ರಾ ನಕ್ಷತ್ರ:- ಆರಿದ ನಕ್ಷತ್ರ ಅವರಿಗೆ ಖಂಡಿತವಾಗಿಯೂ ಪುತ್ರ ಸಂತಾನ ಭಾಗ್ಯವಿರುತ್ತದೆ. ಇವರ ಸಹ ಪತಿ, ಪುತ್ರ ಕುಟುಂಬದ ಹಿರಿಯರೊಂದಿಗೆ ಕೊನೆಯವರೆಗೂ ಒಟ್ಟಾಗಿ ಬಾಳುತ್ತಾರೆ.
* ಪುಷ್ಯ ನಕ್ಷತ್ರ:- ಪುಷ್ಯ ನಕ್ಷತ್ರದವರ ಕುಟುಂಬ ಜೀವನ ಅಷ್ಟೊಂದು ಹಿತಕರವಾಗಿರುವುದಿಲ್ಲ, ಸದಾ ಒಂದಲ್ಲ ಒಂದು ಕ’ಷ್ಟಗಳು ವೇದನೆ ಇದ್ದೇ ಇರುತ್ತದೆ, ಅದರಿಂದ ಈ ಬಗ್ಗೆ ಮುನ್ನೆಚ್ಚರಿಕೆಯಿಂದ ಇರುವುದು ಒಳ್ಳೆಯದು
* ಆಶ್ಲೇಷ ನಕ್ಷತ್ರ:- ಆಶ್ಲೇಷ ನಕ್ಷತ್ರದವರಿಗೆ ಎಲ್ಲ ರೀತಿಯ ಸುಖಗಳು ಸಿಗುತ್ತವೆ. ಜೀವನದಲ್ಲಿ ಇವರು ಸಂತೋಷವಾಗಿರುತ್ತಾರೆ.
* ಪುನರ್ವಸು ನಕ್ಷತ್ರ:- ಪುನರ್ವಸು ನಕ್ಷತ್ರದವರ ಜೀವನದಲ್ಲೂ ಸಂಸಾರದಲ್ಲಿ ಸಾಕಷ್ಟು ಕ’ಷ್ಟಗಳನ್ನು ಎದುರಾಗುತ್ತವೆ. ಹಾಗಾಗಿ ಇವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಯೋಚನೆ ಮಾಡಿ ಮುಂದುವರಿಯುವುದು ಒಳ್ಳೆಯದು.
* ಮಖಾ ನಕ್ಷತ್ರ:- ಮಖಾ ನಕ್ಷತ್ರದವರು ಗಂಡ ಹೆಂಡತಿ ದೂರ ಆಗುವ ಸಂದರ್ಭಗಳು ಎದುರಾಗುತ್ತವೆ. ಆದರೆ ಇದಕ್ಕೆ ಅವಕಾಶ ಕೊಡದೆ ಒಬ್ಬರು ಸ್ವಲ್ಪ ತಗ್ಗಿ ನಡೆದರೆ ಇಂತಹ ಸಮಸ್ಯೆ ಉಂಟಾಗುವುದಿಲ್ಲ, ಹಾಗಾಗಿ ಮಖ ನಕ್ಷತ್ರದವರು ತಾಳ್ಮೆಯಿಂದ ನಡೆದುಕೊಳ್ಳಿ.
* ಪುಬ್ಬಾ ನಕ್ಷತ್ರ:- ಒಬ್ಬ ನಕ್ಷತ್ರದವರು ಗಂಡು ಸಂತಾನ ಪಡೆಯುತ್ತಾರೆ, ಇವರ ತಮ್ಮ ಮಕ್ಕಳನ್ನು ಬಹಳ ಇಷ್ಟಪಡುತ್ತಾರೆ, ಮಕ್ಕಳಿಂದ ಜೀವನದಲ್ಲಿ ನೆಮ್ಮದಿ ಪಡೆಯುತ್ತಾರೆ.
* ಫಾಲ್ಗುಣಿ ನಕ್ಷತ್ರ:- ಪಾಲ್ಗುಣಿ ನಕ್ಷತದವರು ತಮ್ಮ ಮಕ್ಕಳಿಂದ ಜೀವನದಲ್ಲಿ ಸಂತೋಷ ಕಾಣುತ್ತಾರೆ ಮಕ್ಕಳು ಇವರನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ.
* ಚಿತ್ತಾ ನಕ್ಷತ್ರ:- ಚಿತ್ತ ನಕ್ಷತ್ರದಲ್ಲಿ ಜನಿಸಿದವರು ಬಹಳ ಬುದ್ಧಿವಂತರಾಗಿರುತ್ತಾರೆ, ಇವರದು ಚಿಕ್ಕದಾದ ಚೊಕ್ಕದಾದ ಸಂಸಾರವಾಗಿರುತ್ತದೆ.
* ಸ್ವಾತಿ ನಕ್ಷತ್ರ:- ಸ್ವಾತಿ ನಕ್ಷತ್ರದವರು ಬಹಳ ಅದೃಷ್ಟ ಶಾಲಿಗಳಾಗಿರುತ್ತಾರೆ. ಇವರು ಸಹ ಗಂಡ ಹೆಂಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ.
* ವಿಶಾಖ ನಕ್ಷತ್ರ:- ವಿಶಾಖ ನಕ್ಷತ್ರದವರ ಸಂಸಾರದ ಮೇಲೆ ಎಲ್ಲರ ದೃಷ್ಟಿ ಬೀಳುತ್ತದೆ ಯಾಕೆಂದರೆ ಇವರು ಅಷ್ಟು ಅನ್ಯೋನ್ಯವಾಗಿರುತ್ತಾರೆ ಎಲ್ಲರೂ ಇಷ್ಟಪಡುವ ರೀತಿ ಕುಟುಂಬವನ್ನು ಪಡೆಯುತ್ತಾರೆ.
* ಅನುರಾಧ ನಕ್ಷತ್ರ:- ಈ ನಕ್ಷತ್ರದವರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚು, ಇದರಿಂದ ಕುಟುಂಬ ಸ್ವಲ್ಪ ನೋವಿನಲ್ಲಿ ಇರುತ್ತದೆ.
* ಜೇಷ್ಠ ನಕ್ಷತ್ರ:- ಜೇಷ್ಠ ನಕ್ಷತ್ರದವರು ಹೆಚ್ಚು ಹಣಕಾಸು ನ’ಷ್ಟ ಅನುಭವಿಸುವುದರಿಂದ ಇದೇ ಕಾರಣಕ್ಕಾಗಿ ಸಂಸಾರದಲ್ಲಿ ಕಲಹಗಳು ಆಗುತ್ತಿರುತ್ತವೆ.
* ಮೂಲ ನಕ್ಷತ್ರ:- ಮೂಲ ನಕ್ಷತ್ರ ಐಶ್ವರ್ಯವಂತರಾಗಿರುತ್ತಾರೆ, ಇವರಿಗೆ ಒಳ್ಳೆಯ ಗುಣಗಳುಳ್ಳ ಸಂಗಾತಿ ಸಿಗುತ್ತಾರೆ.
* ಪೂರ್ವಾಷಾಡ ನಕ್ಷತ್ರ:- ಈ ನಕ್ಷತ್ರದವರಿಗೆ ಸಮಸ್ಯೆಗಳು ಹೆಚ್ಚು, ಆದರೂ ಕೂಡ ಕುಟುಂಬದ ಬೆಂಬಲ ಇರುತ್ತದೆ
* ಉತ್ತರಾಷಾಡ ನಕ್ಷತ್ರ:- ಉತ್ತರಾಷಾಢ ನಕ್ಷತ್ರದವರು ಸಂತೋಷದ ಜೀವನ ನಡೆಸುತ್ತಾರೆ, ಒಳ್ಳೆಯ ಕುಟುಂಬ ಪಡೆಯುತ್ತಾರೆ.
* ರೇವತಿ ನಕ್ಷತ್ರ:- ರೇವತಿ ನಕ್ಷತ್ರದವರ ಜೀವನ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಕೂಡಿರುತ್ತದೆ.
* ಶ್ರವಣ ನಕ್ಷತ್ರ:- ಶ್ರವಣ ನಕ್ಷತ್ರದವರಿಗೆ ಕಲೆಯಲ್ಲಿ ಆಸಕ್ತಿ ಇರುತ್ತದೆ, ಆದೇ ರೀತಿ ಕುಟುಂಬದಲ್ಲಿ ಬೆಂಬಲ ಸಿಗುತ್ತದೆ.
* ಶತಬಿಷಾ ನಕ್ಷತ್ರ:- ಶತಭಿಷ ನಕ್ಷತ್ರದವರಿಗೆ ಸಿಟ್ಟು ಹೆಚ್ಚಾಗಿರುವುದರಿಂದ ಇದು ಸಂಸಾರ ಜೀವನವನ್ನು ಹಾಳು ಮಾಡಬಹುದು.
* ಧನಿಷ್ಠ ನಕ್ಷತ್ರ:- ಧನಿಷ್ಠ ನಕ್ಷತ್ರ ಸುಂದರವಾಗಿರುತ್ತಾರೆ ಹಾಗೂ ಬುದ್ಧಿವಂತರಾಗಿರುತ್ತಾರೆ, ಸಂಸಾರವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.
* ಉತ್ತರಭಾದ್ರ ನಕ್ಷತ್ರ:- ಇವರು ತುಂಬಾ ನೇರವಂತಿಗೆ ಗುಣ ಹೊಂದಿರುತ್ತಾರೆ, ಅದೇ ರೀತಿ ಪ್ರಾಮಾಣಿಕವಾಗಿ ಇರುತ್ತಾರೆ. ಕುಟುಂಬವನ್ನು ಕೂಡ ಬಹಳ ಶಿಸ್ತಿನಿಂದ ನೋಡಿಕೊಳ್ಳುತ್ತಾರೆ.
* ಪೂರ್ವ ಭಾದ್ರಪದ ನಕ್ಷತ್ರ:- ಇವರ ಸಂಸಾರ ಜೀವನ ಆದರ್ಶಮಯವಾಗಿರುತ್ತದೆ. ಇವರಿಗೆ ಎಲ್ಲ ರೀತಿಯ ಸಂತೋಷಗಳೂ ಕೂಡ ಸಿಗುತ್ತದೆ.