
* ಬೆಳಿಗ್ಗೆ ಎದ್ದ ಮೇಲೆ ಸ್ವಲ್ಪ ಹೊತ್ತು ಹೊರಗಡೆ ಓಡಾಡಿಕೊಂಡು ಬಂದು ನಂತರ ಮಲವಿಸರ್ಜನೆ ಮಾಡಬೇಕು
* ಪ್ರತಿದಿನವೂ ಕೂಡ ನಿತ್ಯ ಕರ್ಮಗಳು ಸರಿಯಾಗಿ ಆಗಬೇಕು, ಶೌಚಕಾರ್ಯಗಳು ಆದ ಮೇಲೆ ಶುದ್ಧವಾಗಿ ಕೈಕಾಲು ಮುಖ ತೊಳೆದುಕೊಂಡು ಒಂದೆರಡು ಲೋಟ ನೀರನ್ನು ಕುಡಿಯಬೇಕು
* ಪ್ರತಿ ದಿನ ನಾವು ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ತಮ್ಮ ಕರುಳು ಕ್ಲೀನ್ ಆಗುತ್ತದೆ ಹಾಗೂ ದೇಹದಲ್ಲಿರುವ ಟಾಕ್ಸಿನ್ ಅಂಶವು ಮೂತ್ರದ ಮೂಲಕ ಹೊರಗೆ ಹೋಗುತ್ತದೆ
* ಹಲ್ಲುಗಳು ಗಟ್ಟಿಮುಟ್ಟಾಗಲು ಅವುಗಳನ್ನು ಬಿಳಿ ಬಣ್ಣಕ್ಕೆ ತರಲು ಈ ರೀತಿ ಹಲ್ಲುಗಳ ಆರೋಗ್ಯಕ್ಕೆ ದಂತಧಾವನ ಚೂರ್ಣವನ್ನು ಪ್ರತಿದಿನವೂ ಬಳಸಿ ಚೆನ್ನಾಗಿ ಹಲ್ಲುಗಳನ್ನು ಕ್ಲೀನ್ ಮಾಡಬೇಕು
* ಪ್ರತಿ ಸಮಯವು ಊಟ ಆದ ತಕ್ಷಣ ನೀರಿನಿಂದ ಮುಕ್ಕಳಿಸಿ ಬಾಯನ್ನು ತೊಳೆಯಬೇಕು ಹಾಗೂ ಹಲ್ಲುಗಳನ್ನು ಬೆರಳಿನಿಂದ ಉಜ್ಜಿ ಬಾಯಿಯನ್ನು ಕ್ಲೀನ್ ಮಾಡಿಕೊಳ್ಳಬೇಕು.
* ದಿನದಲ್ಲಿ ಎರಡು ಬಾರಿ ಹಲ್ಲು ಉಜ್ಜಬೇಕು, ಬೆಳಗ್ಗೆ ಎದ್ದ ಕೂಡಲೇ ಹಲ್ಲುಜ್ಜುವುದರ ಜೊತೆಗೆ ರಾತ್ರಿ ಮಲಗುವಾಗ ಕೂಡ ನೀಟಾಗಿ ಹಲ್ಲನ್ನು ಕ್ಲೀನ್ ಮಾಡಿ ಮಲಗಬೇಕು
* ಯಾವಾಗಲೂ ಉಗುರು ಬೆಚ್ಚಗೆ ನೀರಿನಲ್ಲಿ ಸ್ನಾನ ಮಾಡಬೇಕು ಮತ್ತು ಪ್ರತಿದಿನವೂ ತಪ್ಪದೇ ಸ್ನಾನ ಮಾಡಬೇಕು, ಸ್ನಾನ ಮಾಡಲು ಒಳ್ಳೆಯ ಸೋಪನ್ನು ಬಳಸಬೇಕು
* ಸ್ನಾನ ಆದ ಮೇಲೆ ಒಣಗಿದ ಬಟ್ಟೆಗಳನ್ನು ಧರಿಸಬೇಕು ಸಾಧ್ಯವಾದರೆ ಇಸ್ತ್ರಿ ಮಾಡಿದ ಬಟ್ಟೆಗಳನ್ನು ಬಳಸುವುದು ಒಳ್ಳೆಯದು
* ಸ್ನಾನ ಮಾಡಲು ತುಂಬಾ ಬಿಸಿಯಾದ ನೀರನ್ನು ಬಳಸಬಾರದು ತುಂಬಾ ಬಿಸಿಯಾದ ನೀರನ್ನು ನೆತ್ತಿಗೆ ಹಾಕಬಾರದು ಬಿಸಿನೀರಿನಿಂದ ಸ್ನಾನ ಮಾಡುವಾಗ ಮೊದಲು ಕಾಲುಗಳನ್ನು ತೊಳೆದು ನಂತರ ತಲೆಯಿಂದ ನೀರು ಹಾಕಬೇಕು
* ದೇಹ ಬಹಳ ಆಯಾಸಕೊಂಡಿರುವಾಗ ಹಾಗೂ ವ್ಯಾಯಾಮ ಮಾಡಿದ ತಕ್ಷಣವೇ ಸ್ನಾನ ಮಾಡಬಾರದು
* ವಾರದಲ್ಲಿ ಒಮ್ಮೆಯಾದರೂ ತಲೆಗೆ ಹಾಗೂ ಅಂಗಾಂಗಗಳಿಗೆ ಚೆನ್ನಾಗಿ ಹರಳೆಣ್ಣೆಯನ್ನು ಹಿಕಿ, ತಿಕ್ಕಿ ತೊಳೆದು ಸ್ನಾನ ಮಾಡಬೇಕು
* ಊಟಕ್ಕೆ ಕೂರುವ ಮೊದಲು ಚೆನ್ನಾಗಿ ಕೈಕಾಲು ಹಾಗೂ ಬಾಯಿಯನ್ನು ತೊಳೆದುಕೊಂಡು ಆಹಾರ ಸೇವಿಸಬೇಕು
* ಹಸಿವನ್ನು ತಡೆಯಬಾರದು ಹಾಗೆ ಹಸಿವು ಇಲ್ಲದೆ ಯಾವುದೇ ಕಾರಣಕ್ಕೂ ಊಟ ಮಾಡಬಾರದು
* ಶುಚಿಯಾಗಿರುವ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಸೇವನೆ ಮಾಡಬೇಕು
* ಆತುರ ಆತುರವಾಗಿ ಆಹಾರವನ್ನು ಸೇವಿಸಬಾರದು, ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು
* ನಮ್ಮ ಊಟದಲ್ಲಿ ಹಸಿ ಸೊಪ್ಪು, ತರಕಾರಿ, ಮೊಳಕೆ ಕಟ್ಟಿದ ಕಾಳುಗಳು ಹಾಗೂ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿರಬೇಕು. ಅದೇ ರೀತಿ ದಿನ ಪೂರ್ತಿ ಸಾಧ್ಯವಾದಷ್ಟು ನೀರನ್ನು ಕುಡಿಯುತ್ತಿರಬೇಕು
* ಬಹಳ ತಣ್ಣಗಿರುವ ಆಹಾರ ಸೇವಿಸಬಾರದು ತಿನ್ನುವ ಊಟ ಯಾವಾಗಲೂ ಬಿಸಿ ಬಿಸಿಯಾಗಿರಬೇಕು
* ಆಹಾರವು ಹಳಸಿದ್ದರೆ ಹಾಗೂ ಅಪಕ್ವವಾಗಿದ್ದರೆ ಅವುಗಳನ್ನು ಸೇವಿಸಬಾರದು
* ಬಾಯಾರಿಕೆಯನ್ನು ಎಂದಿಗೂ ತಡೆಯಬಾರದು
* ಊಟ ಮಾಡಿದ ತಕ್ಷಣ ಶ್ರಮವಾದ ಕೆಲಸವನ್ನು ಮಾಡಬಾರದು ಊಟ ಮಾಡಿದ ಮೇಲೆ ಲಘು ವಿಶ್ರಾಂತಿ ತೆಗೆದುಕೊಂಡರೆ ಒಳ್ಳೆಯದು ಆದರೆ ಊಟ ಮಾಡಿದೆ ತಕ್ಷಣ ನಿದ್ರೆ ಹೋಗಬಾರದು
* ರಾತ್ರಿ ಹೊತ್ತು ಯಾವಾಗಲು ಸ್ವಲ್ಪ ಕಡಿಮೆ ಊಟ ಮಾಡಬೇಕು ಮತ್ತು ಲಘುವಾದ ಸುಲಭವಾಗಿ ಜೀರ್ಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು
* ರಾತ್ರಿ ಹೊತ್ತು ಹಣ್ಣು ಹಾಲು ಸೇವಿಸುವ ಅಭ್ಯಾಸವಿದ್ದರೆ ಊಟ ಆದ ಎರಡು ಗಂಟೆ ನಂತರ ಸೇವಿಸಬೇಕು ಹಾಗೂ ಊಟವು ಮಲಗುವ ಮೂರು ತಾಸಿನ ಮೊದಲೇ ಮಾಡಿರಬೇಕು.
* ರಾತ್ರಿ ಮಲಗುವಾಗ ಎಡ ಮಗ್ಗಲಿನಲ್ಲಿ ಮಲಗಬೇಕು ಹಾಗೂ ಏಳುವಾಗ ಬಲದ ಮಗ್ಗಲಿನಲ್ಲಿ ಏಳಬೇಕು.