ತುಳಸಿ ಗಿಡಕ್ಕೆ ಪುರಾಣ ಕಾಲದಿಂದಲೂ ಕೂಡ ಬಹಳ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಹಿಂದೂಗಳ ಪಾಲಿಗೆ ಇದೊಂದು ಗಿಡ ಮಾತ್ರವಲ್ಲ ಪವಿತ್ರವಾದ ವಸ್ತು. ಸಾಕ್ಷಾತ್ ಮಹಾಲಕ್ಷ್ಮಿ ದೇವಿ ರೂಪವಾಗಿ ಕಾಣುವ ಈ ತುಳಸಿ ಗಿಡವನ್ನು ಪ್ರತಿ ಮನೆ ಮುಂದೆ ಕೂಡ ನೆಡುತ್ತಾರೆ ಆಯುರ್ವೇದದಲ್ಲೂ ತುಳಸಿ ಗಿಡಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ.
ಧಾರ್ಮಿಕವಾಗಿ ಆರೋಗ್ಯ ದೃಷ್ಟಿಯಿಂದ ಕೂಡ ತುಳಸಿ ಗಿಡ ಪ್ರತಿಯೊಬ್ಬರಿಗೂ ಹತ್ತಿರವಾಗಿದೆ ಈ ರೀತಿ ತುಳಸಿ ಗಿಡವನ್ನು ಭಯ ಭಕ್ತಿಯಿಂದ ಪೂಜೆ ಮಾಡಿ ಅದಕ್ಕೆ ಲೋಪಗಳಾಗದ ರೀತಿ ನೋಡಿಕೊಂಡರೆ ನಮ್ಮ ಅದೆಷ್ಟೋ ಸಮಸ್ಯೆಗಳಿಗೆ ಇದು ಪರಿಹಾರವಾಗುತ್ತದೆ.
ತುಳಸಿ ಗಿಡಗಳಿಂದ ಏನೆಲ್ಲಾ ಪ್ರಯೋಜನಗಳಿವೆ ಮತ್ತು ಅದನ್ನು ಏಕೆ ಪೂಜಿಸಬೇಕು ಹಾಗೆ ಯಾವ ರೀತಿಯ ತಪ್ಪುಗಳಿಂದ ತುಳಸಿ ಗಿಡಕ್ಕೆ ಅಪಚಾರವಾಗಿ ನಮಗೆ ದೋಷಗಳು ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಪ್ರತಿ ಮನೆ ಮುಂದೆ ಕೂಡ ತುಳಸಿ ಗಿಡ ನೆಡಬೇಕು, ಯಾಕೆಂದರೆ ತುಳಸಿ ಗಿಡ ಇರುವ ಕಡೆ ವಾತಾವರಣ ಶುದ್ಧವಾಗುತ್ತದೆ.
ಗಾಳಿಯಲ್ಲಿ ಓಡಾಡುವ ಎಷ್ಟೋ ಸೂಕ್ಷ್ಮ ಜೀವಿಗಳನ್ನು ತುಳಸಿ ಪರಿಮಳವು ಕೊಲ್ಲುತ್ತದೆ ಮತ್ತು ತುಳಸಿ ಗಿಡದ ಸಕಾರಾತ್ಮಕ ವಾತಾವರಣವು ಮನುಷ್ಯರ ಮನಸ್ಸಿನಲ್ಲಿ ಶಕ್ತಿ ತುಂಬುತ್ತದೆ, ಹಾಗೂ ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿ ಇಡಲು ಸಹಕಾರಿಯಾಗುತ್ತದೆ.
ಎಷ್ಟೋ ಬಾರಿ ಮನೆಗೆ ಉಂಟಾಗುವ ದೃಷ್ಟಿ ದೋಷ ಮತ್ತು ಕೆಟ್ಟ ಶಕ್ತಿ ಪ್ರಭಾವವನ್ನು ತುಳಸಿ ಗಿಡವು ತಡೆದು ತಾನು ಕುಟುಂಬದವರಿಗೆ ಒಳ್ಳೆಯದನ್ನೇ ಮಾಡುತ್ತದೆ. ಆದ್ದರಿಂದ ಮನೆಯಲ್ಲಿರುವ ಗೃಹಿಣಿ ಬೆಳಗ್ಗೆ ಎದ್ದ ಕೂಡಲೇ ಮನೆ ಅಂಗಳ ಸ್ವಚ್ಛಗೊಳಿಸಿ ತುಳಸಿ ಅಂಗಳವನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಮಡಿಯುಟ್ಟು ತುಳಸಿಗೆ ಪೂಜೆ ಮಾಡಬೇಕು. ತುಳಸಿ ಕಟ್ಟೆಗೆ ಪ್ರದಕ್ಷಿಣೆ ಹಾಕಬೇಕು ಮತ್ತು ಸಂಜೆ ಸಮಯ ಕೂಡ ತುಳಸಿ ಬಳಿ ದೀಪ ಹಚ್ಚಿ ಇಡಬೇಕು.
ಈ ರೀತಿ ಪೂಜೆ ಮಾಡುವ ತುಳಸಿಯನ್ನು ನೀರು ಹಾಕುತ್ತ ಚೆನ್ನಾಗಿ ಬೆಳೆಸಬೇಕು. ಯಾವುದಾದರೂ ಕಾರಣದಿಂದ ತುಳಸಿ ಗಿಡ ಒಣಗುತ್ತಾ ಬಂದರೆ ಅದನ್ನು ತೆಗೆದು ಹರಿಯುವ ನೀರಿನಲ್ಲಿ ಬಿಡಬೇಕು ಮತ್ತು ತುಳಸಿ ಕಟ್ಟೆಯನ್ನು ಖಾಲಿ ಬಿಡದೆ ತಕ್ಷಣವೇ ಬೇರೆ ತುಳಸಿಯನ್ನು ಹಾಕಿ ಬೆಳೆಸಬೇಕು.
ತುಳಸಿ ದಳವನ್ನು ತಿನ್ನುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು, ಇದರಿಂದ ಅನೇಕ ಮನೆಮದ್ದುಗಳನ್ನು ಮಾಡಬಹುದು ಹಾಗೂ ದಿನಕ್ಕೆ ಒಂದು ಎಲೆ ತುಳಸಿ ತಿನ್ನುವುದು ಎಷ್ಟು ಕಾಯಿಲಿಗೆ ಔಷಧಿಯಾಗಿದೆ. ವೈರಲ್ ಫೀವರ್ ಗಳನ್ನು, ಹವಾಮಾನ ವೈಪರಿತದಿಂದ ಉಂಟಾಗುವ ಸಣ್ಣಪುಟ್ಟ ಆರೋಗ್ಯ ವ್ಯತ್ಯಾಸಗಳನ್ನು ಇದು ತಡೆದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಆದರೆ ತಿನ್ನಲು ಪೂಜೆ ಮಾಡಿದ ತುಳಸಿ ಗಿಡದಿಂದ ಎಲೆಗಳನ್ನು ಕೀಳುವುದರ ಬದಲು ಇದಕ್ಕಾಗಿ ಪಕ್ಕದಲ್ಲಿ ಬೇರೆ ತುಳಸಿ ಬೆಳೆಸಿದರೆ ಇನ್ನು ಒಳ್ಳೆಯದು. ಅಮಾವಾಸ್ಯೆ, ಹುಣ್ಣಿಮೆ, ಏಕಾದಶಿ, ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ದಿನದಂದು ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಕೀಳಬಾರದು. ಮೈಲಿಗೆ ಆಗಿದ್ದಾಗ ತುಳಸಿ ಗಿಡವನ್ನು ಮುಟ್ಟಬಾರದು, ತುಳಸಿ ಗಿಡದಿಂದ ತುಳಸಿ ದಳ ಕೀಳುವ ಮೊದಲು ಸ್ವಲ್ಪ ನೀರು ಹಾಕಿ ನಂತರ ತುಳಸಿ ಕೇಳಬೇಕು.
ಈ ರೀತಿ ತುಳಸಿ ಗಿಡವನ್ನು ಸ್ವಲ್ಪ ಜಾಗೃತಿಯಾಗಿ ಬಳಸಬೇಕು ಭಕ್ತಿಯಿಂದ ತುಳಸಿ ಗಿಡವನ್ನು ಪೂಜೆ ಮಾಡಿದರೆ ಎಷ್ಟೋ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ತಾಯಿ ಮಹಾಲಕ್ಷ್ಮಿ ಹಾಗೂ ಮಹಾವಿಷ್ಣುವಿನ ಅನುಗ್ರಹ ಸದಾ ಹಾಕು ಕುಟುಂಬದ ಮೇಲೆ ಇರುತ್ತದೆ ಹಾಗಾಗಿ ಇಂತಹ ತುಳಸಿ ಗಿಡವನ್ನು ಪ್ರತಿಯೊಬ್ಬರ ಪೂಜಿಸಿ.