ಭಾರತ ದೇಶವು ಸರ್ವ ಜನಾಂಗದ ಶಾಂತಿಯ ತೋಟ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದ ಭೂಮಿಯಲ್ಲಿ ಹಿಂದೂ, ಮುಸ್ಲಿಂ, ಜೈನ, ಕ್ರೈಸ್ತ, ಬೌದ್ಧ ಮುಂತಾದ ಹಲವು ಧರ್ಮಗಳ ಜನರು ಹೊಂದಾಣಿಕೆಯಿಂದ ಬದುಕುತ್ತಿದ್ದಾರೆ. ಧಾರ್ಮಿಕವಾಗಿ ಒಬ್ಬರಿಗೊಬ್ಬರ ಸಿದ್ದಾಂತಗಳು ಹೋಲಿಕೆಯಾಗದೆ ಇದ್ದರೂ ವ್ಯಾವಹಾರಿಕವಾಗಿ ಎಲ್ಲರೂ ಎಲ್ಲರ ಜೊತೆ ವ್ಯವಹರಿಸಲೇಬೇಕು ಹಾಗೆ ಸ್ನೇಹದ ವಿಚಾರದಲ್ಲಿ ಯಾರು ಕೂಡ ಲೆಕ್ಕಾಚಾರ ಹಾಕಿ ಫ್ರೆಂಡ್ಶಿಪ್ ಬೆಳೆಸುವುದಿಲ್ಲ.
ಆದರೂ ಕೂಡ ಈ ಧರ್ಮದ ವಿಚಾರ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಹಾಗಾಗಿ ಈ ಅಂಕಣದಲ್ಲಿ ಇಂದು ನಾವು ಒಂದು ವಿಶೇಷವಾದ ಗುಂಪಿನ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ. ಭಾರತವನ್ನು ಭಾರತೀಯರನ್ನು ಭಾರತಧ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುವ ಬೊಹ್ರಾ ಮುಸ್ಲಿಮರ ಬೆಳವಣಿಗೆ ಭಾರತದಲ್ಲಿ ಹೇಗಾಯಿತು ಈಗ ಏನು ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿಸುತ್ತೇವೆ. ಇದರ ಬಗ್ಗೆ ಕುತೂಹಲ ಇದ್ದರೆ ಕೊನೆ ತನಕ ಓದಿ.
ಬೊಹ್ರಾ ಮುಸ್ಲಿಮರು ಭಾರತದಲ್ಲಿ ಮಧ್ಯಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಅಪಾರ ಸಂಖ್ಯೆಯಲ್ಲಿ ಇದ್ದಾರೆ. ಇವರು ಭಾರತದ ಧಾರ್ಮಿಕ ಸಮಾರಂಭಗಳಲ್ಲಿ ಸಂತೋಷದಿಂದ ಕುಟುಂಬ ಸಮೇತ ಪಾಲ್ಗೊಳ್ಳುತ್ತಾರೆ ಹಾಗೂ ಅವರ ಮನೆಯ ಹಬ್ಬಗಳಿಗೆ ಹಿಂದುಗಳನ್ನು ಆಹ್ವಾನಿಸುತ್ತಾರೆ.
ಶ್ರೀರಾಮ ಮಂದಿರಕ್ಕೆ ಸಪೋರ್ಟ್ ಮಾಡುವುದರಿಂದ ಹಿಡಿದು ಭಾರತೀಯರ ಭಾವನೆಗೆ ತಕ್ಕ ಹಾಗೆ ಪ್ರತಿಯೊಂದು ವಿಚಾರದಲ್ಲೂ ಕೂಡ ಸ್ಪಂದಿಸುವ ಇವರು ಪ್ರಧಾನಮಂತ್ರಿಯವರಿಗೆ ಅಚ್ಚುಮೆಚ್ಚು. ಇವರ ಜನಾಂಗ ಇರುವ ಎಲ್ಲೇ ಪ್ರಧಾನಿ ಹೋದರು ಅವರನ್ನು ಸತ್ಕರಿಸಿಯೇ ಕಳುಹಿಸುತ್ತಾರೆ.
ಬೊಹ್ರಾ ಮುಸ್ಲಿಮರು ಹಾಕುವ ವೇಷಭೂಷಣ ಅವರು ಮಾಡುವ ವೃತ್ತಿಯಿಂದ ಹಿಡಿದು ಸಂಪೂರ್ಣವಾಗಿ ಅವರು ಇತರೆ ಮುಸ್ಲಿಂಗಳಿಗಿಂತ ಭಿನ್ನ ಎನಿಸುತ್ತಾರೆ. ಮುಸ್ಲಿಮರಲ್ಲಿ ಸುನ್ನಿ ಹಾಗೂ ಶಿಯ ಎನ್ನುವ ಎರಡು ಪಂಗಡಗಳಿವೆ ಸನ್ನಿ ಮುಸಲ್ಮಾನರ ಧಾರ್ಮಿಕ ಕ್ಷೇತ್ರ ಸೌದಿ ಅರೇಬಿಯಾವಾದರೆ ಶಿಯಾ ಮುಸಲ್ಮಾನರ ಪವಿತ್ರವಾದ ಸ್ಥಳ ಇರಾನ್. ಶಿಯಾ ವರ್ಗಕ್ಕೆ ಇವರು ಸೇರಿದವರಾದಗಿದ್ದರೂ ಇವರ ಪರಂಪರೆ ಶುರುವಾಗುವುದು ಫಾತಿಮತ್ ಕ್ಯಾಲಿಫೆಟ್ ಮನೆತನದಿಂದ.
ಇದು ಪ್ರವಾದಿಗಳಾದ ಫ್ರಿಫಿತ್ ಮಹಮ್ಮದ್ ಅವರ ಮಗಳಾದ ಫಾತಿಮಾ ಅವರ ಮಗನಾದ ಹುಸೇನ್ ನಿಂದ ಬೆಳೆಯಿತು ಎನ್ನುವ ಇತಿಹಾಸವಿದೆ. 10ನೇ ಶತಮಾನದ ಸಮಯದಲ್ಲಿ ಒಮೆನ್ ನಿಂದ ಈ ಮನೆತನದ ಮುಸ್ತಿಫಿರ್ ಬಿಲ್ಲಾ ಭಾರತಕ್ಕೆ ಬಂದು ಧರ್ಮ ಪ್ರಚಾರ ಮಾಡಿ ಹಲವು ಬ್ರಾಹ್ಮಣರು ಹಾಗೂ ಬನಿಯಟ್ ಟ್ರೇಡರ್ ಗಳನ್ನು ಮತಾಂತರ ಮಾಡಿದರು, ಮುಂದೆ ಅವರೇ ಬೊಹ್ರಾ ಗಳಾಗಿ ಮುಂದುವರೆದರು ಎನ್ನುವ ಉಲ್ಲೇಖಗಳಿವೆ.
ಬಳಿಕ ಭಾರತ ಮೂಲದಿಂದ ಯೂಸೆಫ್ ಸುಲೇಮಾನ್ ಉದ್ದಿನ್ ಎನ್ನುವ ಯುವಕನು ಒಮೆನ್ ಗೆ ಹೋಗಿ 23ನೇ ದಾಹಿ ಅಲ್ ಮುತ್ಲಕ್ ಬಳಿ ಶಿಷ್ಯರಾಗಿದ್ದು 24ನೇ ಬೊಹ್ರಾ ಸಮುದಾಯದ ಲೀಡರ್ ಎಂದು ಪರಿಗಣಿಸುತ್ತಾರೆ, ಇಂದಿನವರೆಗೂ ಕೂಡ ಭಾರತದ ಮೂಲದವರೇ ಬೋಹ್ರ ಸಮುದಾಯದ ಲೀಡರ್ ಆಗುತ್ತಿದ್ದಾರೆ ಈ ಕಾರಣದಿಂದ ಕೂಡ ಅವರಿಗೆ ಭಾರತ ಎಂದರೆ ಬಹಳ ಇಷ್ಟ.
ಇವರ ಉಡುಗೆತೊಡಿಗೆಗಳನ್ನು ನೋಡಿ ಇವರನ್ನು ಗುರುತಿಸಬಹುದು. ಇವರಲ್ಲಿ ಪುರುಷರ, ಹೆಣ್ಣು ಮತ್ತು ಗಂಡು ಮಕ್ಕಳು ಒಂದೇ ರೀತಿಯ ಟೋಪಿಗಳನ್ನು ಧರಿಸುತ್ತಾರೆ. ಇವರ ಟೋಪಿ ಇತರ ಮುಸ್ಲಿಮರಿಗಿಂತ ಭಿನ್ನವಾಗಿರುತ್ತದೆ. ಇವರ ಹೆಸರಿನ ಜೊತೆ ಇವರು ಮಾಡುವ ಕೆಲಸ ಅಥವಾ ಇರುವ ಸ್ಥಳದ ಗುರುತನ್ನು ಕೂಡ ಸೇರಿಸಿಕೊಂಡಿರುತ್ತಾರೆ. ಬಂದೂಕ್ ವಾಲ, ಕಾರ್ಪೆಟ್ ವಾಲ, ರಂಗೇನ್ ವಾಲ ಎಂದು ಹೆಸರಿಟ್ಟು ಕೊಂಡಿರುತ್ತಾರೆ.
ಇವರ ಹೆಸರನ್ನು ಕೇಳಿಯೂ ಇವರು ಬೊಹ್ರಾ ಸಮುದಾಯದವರು ಎಂದು ಸುಲಭವಾಗಿ ಕಂಡುಹಿಡಿಯಬಹುದು. ಮುಸ್ಲಿಮರ ಭಾಷೆಯ ಅರೇಬಿಕ್ ಮೂಲದಿಂದ ಬಂದಿದ್ದರು ಬೊಹ್ರ ಮುಸ್ಲಿಂ ಭಾಷೆಯು ಧಾವತ್ ಎನ್ನುವುದಾಗಿದೆ, ಇದು ಹೆಚ್ಚು ಗುಜರಾತಿ ಪದಗಳನ್ನು ಒಳಗೊಂಡಿದೆ.ಬೊಹಾರಾ ಎನ್ನುವುದು ಕೂಡ ವೊಹರು ಎನ್ನುವ ಗುಜರಾತಿ ಪದದಿಂದ ಬೆಳವಣಿಗೆ ಹೊಂದಿದೆ, ಇದು ವ್ಯವಹರಿಸು ಎನ್ನುವ ಅರ್ಥ ಕೊಡುತ್ತದೆ.
ಇವರು ಹೆಚ್ಚು ಬಿಸಿನೆಸ್ ನಲ್ಲಿ ಮತ್ತು ಟ್ರೇಡಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಇವರಲ್ಲಿ ಅತಿ ಹೆಚ್ಚು ಜನ ಶ್ರೀಮಂತರಾಗಿರುತ್ತಾರೆ ತಮ್ಮ ಸಮುದಾಯದವರ ಅಭಿವೃದ್ಧಿಗಾಗಿ ಸಹಾಯ ಮಾಡುತ್ತಾರೆ. ಹೆಣ್ಣು ಮಕ್ಕಳು ಕೂಡ ಬಿಸಿನೆಸ್ ನಲ್ಲಿ ಮುಂದೆ ಬರುತ್ತಾರೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಉದ್ಯೋಗವಕಾಶ ಎಲ್ಲದರಲ್ಲೂ ಸಮಾನ ಅವಕಾಶವಿದೆ. ಹೆಣ್ಣು ಮಕ್ಕಳು ಸ್ಕಾಫ್ ಧರಿಸುತ್ತಾರೆ. ಗಂಡು ಮಕ್ಕಳು ಲಿಬಾಸ್ ಉಲ್ ಅನ್ವರ್ ಎನ್ನುವ ಬಟ್ಟೆ ಧರಿಸುತ್ತಾರೆ. ಹೆಚ್ಚು ಕಡಿಮೆ ಇವರ ಆಚರಣೆಗಳು ಭಾರತದ ಪರಂಪರೆಯನ್ನೇ ಹೋಲುತ್ತವೆ.