ಹಣಕಾಸಿನ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಕೂಡ ಕುಂದು ಕೊರತೆ ಇದ್ದೇ ಇರುತ್ತದೆ. ಒಬ್ಬ ಬಡವನಿಗೆ ಆತನ ದಿನದ ಕೂಲಿ ಬಗ್ಗೆ ಚಿಂತೆ ಇದ್ದರೆ, ಶ್ರೀಮಂತನಿಗೂ ಕೂಡ ತನ್ನ ವ್ಯಾಪಾರ ವ್ಯವಹಾರ ಅಭಿವೃದ್ಧಿ ಪಡಿಸುವ ಬಗ್ಗೆ ಇನ್ನು ಹೆಚ್ಚಿನ ಶ್ರೀಮಂತನಾಗುವ ಬಗ್ಗೆ ಕನಸು ಇದ್ದೇ ಇರುತ್ತದೆ.
ಈ ರೀತಿ ಹಣಕಾಸಿನ ಬಗ್ಗೆ ಆಲೋಚನೆ ಮಾಡುವುದು ಮತ್ತು ಹೆಚ್ಚು ಹಣ ಪಡೆವ ಬಗ್ಗೆ ಗುರಿ ಇಟ್ಟುಕೊಳ್ಳುವುದು ತಪ್ಪೇ ಅಲ್ಲ. ಯಾಕೆಂದರೆ ಈ ಕಾಲದಲ್ಲಿ ಹಣದಿಂದಲೇ ಎಲ್ಲವೂ ನಡೆಯುತ್ತಿರುವುದು. ಆದರೆ ಈ ಹಣಕಾಸಿನ ಕೊರತೆ ಇದ್ದರೂ ಎಂದಿಗೂ ಮನೆಯಲ್ಲಿ ಆಹಾರಕ್ಕೆ ಕೊರತೆ ಇರಬಾರದು.
ನಮ್ಮ ಮನೆಯಲ್ಲಿ ಎಲ್ಲರೂ ಹೊಟ್ಟೆ ತುಂಬಾ ತಿನ್ನುವಷ್ಟು ಹಾಗೆ ನಮ್ಮ ಮನೆಗೆ ಬರುವ ಅತಿಥಿಗಳಿಗೂ ಮತ್ತು ಆಹಾರ ಅರಸಿ ಬರುವ ಅಸಹಾಯಕರಿಗೆ ಸಂತೃಪ್ತಿಯಾಗುವಷ್ಟು ಆಹಾರ ಕೊಡುವ ಸಂಪತ್ತು ಪ್ರತಿಯೊಬ್ಬರಿಗೂ ಇರಬೇಕು.
ಈ ರೀತಿ ಮನೆಯಲ್ಲಿ ಎಂದು ಆಹಾರ ಧಾನ್ಯಗಳ ಕೊರತೆ ಉಂಟಾಗಬಾರದು ಅನ್ನಕ್ಕೆ ಸಮಸ್ಯೆ ಬರಬಾರದು ಎಂದರೆ ತಾಯಿ ಅನ್ನಪೂರ್ಣೇಶ್ವರಿಯ ಕೃಪಾಕಟಾಕ್ಷ ಆ ಕುಟುಂಬದ ಮೇಲೆ ಇರಬೇಕು. ಹೀಗೆ ಅಮ್ಮನವರ ಆಶೀರ್ವಾದ ಸಿಗಬೇಕು ಎಂದರೆ ನಾವು ದಿನನಿತ್ಯದ ಜೀವನದಲ್ಲಿ ಕೆಲವು ಕ್ರಮಗಳನ್ನು ಅನುಸರಿಸಬೇಕು, ಎಂದು ಕೂಡ ಅವುಗಳಿಗೆ ತಪ್ಪಬಾರದು ಆಗ ಆ ಮನೆಯಲ್ಲಿ ಅನ್ನಕ್ಕೆ ಮತ್ತು ಹಣಕ್ಕೆ ಕೊರತೆ ಬರುವುದಿಲ್ಲ.
ಮುಖ್ಯವಾಗಿ ಅಡುಗೆಮನೆ ಯಾವಾಗಲೂ ಶುದ್ಧವಾಗಿರಬೇಕು, ಅಡುಗೆಮನೆಯಲ್ಲಿ ದವಸ ಧಾನ್ಯಗಳು ಪೂರ್ತಿಯಾಗಿ ಎಂದಿಗೂ ಖಾಲಿ ಆಗಬಾರದು. ಅದು ಸ್ವಲ್ಪ ಇರುವಾಗಲೇ ತಂದು ಇಟ್ಟುಕೊಳ್ಳಬೇಕು ಮುಖ್ಯವಾಗಿ ಅಕ್ಕಿ ಖಾಲಿ ಆಯಿತು ಎಂದು ಮನೆಯಲ್ಲಿ ಯಾರು ಹೇಳಲೇಬಾರದು ಮತ್ತು ಅಕ್ಕಿ ಡಬ್ಬವನ್ನು ಅಕ್ಕಿಯನ್ನು, ಅಡುಗೆ ಮಾಡುವಾಗ ಅಳತೆ ಮಾಡಲು ಬಳಸುವ ಲೋಟವನ್ನು ಕಾಲಿ ಇಡಬಾರದು ಮತ್ತು ಉಲ್ಟಾ ಇಡಬಾರದು.
ಆಹಾರವನ್ನು ವ್ಯರ್ಥ ಮಾಡಬಾರದು, ಊಟ ಮಾಡುವ ಮುನ್ನ ಅನ್ನಪೂರ್ಣೇಶ್ವರಿ ಗೆ ನಮಿಸಿ ಸೇವಿಸಬೇಕು, ಆಹಾರಕ್ಕೆ ಅವಮಾನ ಮಾಡಬಾರದು, ಎಂದಿಗೂ ಕೋಪದಲ್ಲಿ ಊಟ ಮಾಡಬಾರದು, ಊಟ ಮಾಡುವಾಗ ಜಗಳವಾಡಿಕೊಳ್ಳಬಾರದು, ಊಟ ಅರ್ಧ ಇರುವಾಗಲೇ ಎದ್ದು ಹೋಗಬಾರದು, ಈ ರೀತಿಯ ಭಯ ಭಕ್ತಿಯ ಕ್ರಮಗಳನ್ನು ಪಾಲಿಸುವುದರ ಜೊತೆಗೆ ಈಗ ನಾವು ಹೇಳುವ ಈ ಒಂದು ಉಪಾಯ ಮಾಡಿ ನಿಮ್ಮ ಮನೆಯಲ್ಲಿ ಐಶ್ವರ್ಯಕ್ಕೆ ಕೊರತೆ ಬರುವುದಿಲ್ಲ.
ಈ ಉಪಾಯವನ್ನು ಮಂಗಳವಾರ ಅಥವಾ ಶುಕ್ರವಾರ ಮಾಡಿದರೆ ಒಳ್ಳೆಯದು ಮತ್ತು ಬ್ರಾಹ್ಮಿ ಮುಹೂರ್ತದಲ್ಲಿ ಉಪಾಯವನ್ನು ಮಾಡಬೇಕು. ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಆ ವಸ್ತಕ್ಕೆ 5 ಗೋಮತಿ ಚಕ್ರ, 5 ಹಳದಿ ಬಣ್ಣದ ಕವಡೆ, 5 1 ರೂಪಾಯಿ ಅಥವಾ 2 ರೂಪಾಯಿ ಅಥವಾ 5 ರೂಪಾಯಿ ನಾಣ್ಯಗಳು.
5 ಲವಂಗ ಮತ್ತು 5 ಏಲಕ್ಕಿಯನ್ನು ಹಾಕಿ ಗಂಟು ಕಟ್ಟಿ ದೇವರ ಕೋಣೆಯಲ್ಲಿ ಇಟ್ಟು ಅರಿಶಿಣ ಕುಂಕುಮ ಹಾಕಿ ಪೂಜೆ ಮಾಡಿ ತಾಯಿ ಮಹಾಲಕ್ಷ್ಮಿ ಹಾಗೂ ಅನ್ನಪೂರ್ಣೇಶ್ವರಿ ಯನ್ನು ಪ್ರಾರ್ಥಿಸಿ ನಂತರ ಅದನ್ನು ನಿಮ್ಮ ಮನೆಯ ಅಕ್ಕಿ ಡಬ್ಬಕ್ಕೆ ಹಾಕಿ ಬಚ್ಚಿಡಬೇಕು ಈ ರೀತಿ ಮಾಡುವುದರಿಂದ. ಇದು ಹೆಚ್ಚು ಹಣಕಾಸನ್ನು ಆಕರ್ಷಿಸುತ್ತದೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎಂದಿಗೂ ನೆಲೆಸಿರುತ್ತದೆ. ಮನೆ ಅಭಿವೃದ್ಧಿ ಹೊಂದುತ್ತದೆ.
ಒಂದು ವಾರ ಆದ ಬಳಿಕ ಈ ಗಂಟನ್ನು ತೆಗೆದು ಏಲಕ್ಕಿ ಹಾಗೂ ಲವಂಗವನ್ನು ಪುಡಿಮಿಡಿ ದೇವರಿಗೆ ಹಾಕುವ ಧೂಪದ ಜೊತೆ ಮಿಕ್ಸ್ ಮಾಡಬಹುದ. ನಾಣ್ಯ ಗೋಮತಿ ಚಕ್ರ ಹಾಗೂ ಕವಡೆಯನ್ನು ತೊಳೆದು ಮತ್ತೆ ಬೇರೆ ಕೆಂಪು ಬಣ್ಣದ ವಸ್ತ್ರ ತೆಗೆದುಕೊಂಡು ಗಂಟು ಕಟ್ಟಿ ಇದೇ ರೀತಿ ಮತ್ತೆ ಮಾಡಬೇಕು. ಹಳೆಯ ಕೆಂಪು ವಸ್ತ್ರವನ್ನು ತೊಳೆದು ಮತ್ತೆ ಉಪಯೋಗಿಸಬಹುದು ಅಥವಾ ಹರಿವ ನೀರಿಗೆ ಬಿಟ್ಟು ಹೊಸ ವಸ್ತ್ರ ಉಪಯೋಗಿಸಬಹುದು. ಬಹಳ ಭಯ ಭಕ್ತಿಯಿಂದ ನಂಬಿಕೆಯಿಂದ ಈ ಆಚರಣೆ ಮಾಡಿದರೆ ಶುಭ ಫಲಗಳನ್ನು ಕಾಣುತ್ತೀರಿ.