ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ತಾವು ದುಡಿಯುವಾಗಲೇ ತಮ್ಮ ಪರಿವಾರಕ್ಕಾಗಿ ಒಂದು ಸ್ವಂತ ಮನೆ ಕಟ್ಟಿಕೊಂಡು ಹತ್ತಾರು ವರ್ಷ ಆ ಮನೆಯಲ್ಲಿ ನೆಮ್ಮದಿಯಾಗಿ ಜೀವನ ಕಳೆಯಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ.
ಕೆಲವರು ಪ್ರತಿಷ್ಠೆಗಾಗಿ ಐಶಾರಾಮಿ ಬಂಗಳೆಗಳನ್ನು ಕಟ್ಟಿಸಬೇಕು ಎಂದು ಕನಸು ಕಂಡರೆ, ಸಾಮಾನ್ಯ ಹಾಗೂ ಬಡವರಾದರೂ ಕೂಡ ತಮ್ಮ ವಾಸಕ್ಕೆ ಒಂದು ಪುಟ್ಟ ಮನೆಯನ್ನು ಆದರೂ ಕಟ್ಟಿಕೊಂಡು ನೆಮ್ಮದಿಯಾಗಿ ಸ್ವಂತ ಜೀವನ ಕಳೆಯಬೇಕು ಎಂದು ಖಂಡಿತವಾಗಿಯೂ ಪ್ಲಾನ್ ಮಾಡುತ್ತಾರೆ.
ನಿಮಗೂ ಕೂಡ ಈ ರೀತಿ ಮನೆ ಕಟ್ಟುವ ಅಥವಾ ಮನೆ ಕೊಂಡುಕೊಳ್ಳುವ ಅಥವಾ ಸೈಟ್ ಖರೀದಿಸುವ ಇಚ್ಛೆ ಇದ್ದರೆ ಈಗ ನಾವು ಹೇಳುವ ಈ ವಿಷಯವನ್ನು ಗಮನವಿಟ್ಟು ಕೇಳಿ ಕೆಲವರು ಹಲವು ವರ್ಷಗಳಿಂದ ಈ ವಿಚಾರವಾಗಿ ಓಡಾಡುತ್ತಿದ್ದರು ಅವರ ಕೆಲಸಗಳು ಪೂರ್ತಿ ಆಗದೆ ವಿ’ಘ್ನವಾಗುತ್ತಿರುತ್ತದೆ.
ಇನ್ನೇನು ಆಯ್ತು ಎಂದುಕೊಳ್ಳುವ ಕೊನೆಯ ಹಂತದಲ್ಲಿಯೂ ಕೂಡ ಮುರಿದು ಬೀಳುತ್ತದೆ ಅಥವಾ ಈಗಷ್ಟೇ ಈ ಬಗ್ಗೆ ಪ್ಲಾನ್ ಹಾಕಿದ್ದೀರ ಎಂದರೂ ಸುಸೂತ್ರವಾಗಿ ನೆರವೇರಬೇಕು ಎಂದು ಅಂದುಕೊಂಡಿದ್ದರೆ ಈಗ ನಾವು ಹೇಳುವ ಈ ವಿಚಾರಕ್ಕೆ ಗಮನ ಕೊಡಿ. ಯಾಕೆಂದರೆ ನಮ್ಮ ಸಂಕಲ್ಪ ಏನೇ ಇದ್ದರೂ ಹೆಣ್ಣು, ಹೊನ್ನು, ಮಣ್ಣು ದೊರೆಯಬೇಕು ಎಂದರೆ ಋಣ ಇರಬೇಕು ಮತ್ತು ಅದಕ್ಕೆ ಭಗವಂತನ ಆಶೀರ್ವಾದವೂ ಕೂಡ ಇರಬೇಕು.
ದೈವಬಲ ಇಲ್ಲದಿದ್ದರೆ ಯಾವುದು ಕೂಡ ಸಲೀಸಾಗಿ ನಡೆಯುವುದಿಲ್ಲ. ಮನೆ ಕಟ್ಟಿಸುವ, ಕೊಂಡುಕೊಳ್ಳುವ, ಭೂಮಿ ಕೊಂಡುಕೊಳ್ಳುವ ವಿಚಾರದಲ್ಲಿ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರವನ್ನು ಮಂತ್ರ ಶಾಸ್ತ್ರದಲ್ಲೂ ತಿಳಿಸಲಾಗಿದೆ. ಆ ಪ್ರಕಾರವಾಗಿ ವಿಷ್ಣು ಸ್ವರೂಪವಾದ ಭೂವರಹ ಸ್ವಾಮಿಯನ್ನು ಪ್ರಾರ್ಥಿಸಿದರೆ ಈ ರೀತಿ ಭೂಮಿ ಮನೆಗೆ ಸಂಬಂಧ ಪಟ್ಟ ವಿ’ಘ್ನಗಳು ನಿವಾರಣೆಯಾಗಿ ಮಹಾವಿಷ್ಣುವಿನ ಆಶೀರ್ವಾದದಿಂದ ಶೀಘ್ರವಾಗಿ ನಿಮ್ಮ ಕನಸು ಕೈಗೂಡುತ್ತದೆ.
ಮಹಾವಿಷ್ಣುವಿನ ವರಾಹ ಅವತಾರದ ಬಗ್ಗೆ ಎಲ್ಲರಿಗೂ ತಿಳಿದಿದೆ. ಪ್ರಳಯಕಾಲದಲ್ಲಿ ಹಿರಣಾಕ್ಷ ಎನ್ನುವ ರಕ್ಕಸನು ಭೂಮಿಯನ್ನು ಅಪಹರಿಸಲು ಪ್ರಯತ್ನಿಸಿದಾಗ ಭೂಮಿಯನ್ನು ಎತ್ತಿ ರಕ್ಷಿಸಿದ ವಿಷ್ಣು ಅಂದಿನಿಂದ ಈ ಭೂಮಿ ಹಾಗೂ ಭೂಮಿಯ ಸಕಲ ಜೀವಚರಗಳ ಬಗ್ಗೆ ಕಾಳಜಿ ಮಾಡುತ್ತಿದ್ದಾರೆ ಎನ್ನುವುದು ನಮ್ಮ ಪುರಾಣದಿಂದ ನಾವು ತಿಳಿದುಕೊಂಡಿರುವ ಸಂಗತಿ.
ಆದ್ದರಿಂದ ಈ ವರಾಹ ರೂಪದಲ್ಲಿರುವ ನರಸಿಂಹ ಸ್ವಾಮಿಯ ದೇವಸ್ಥಾನಗಳಿಗೆ ಹೋಗಿ ದರ್ಶನ ಮಾಡಿ, ಪ್ರಾರ್ಥಿಸಿ, ಪೂಜಿಸಿ, ಹರಕೆಗಳನ್ನು ಕಟ್ಟಿಕೊಂಡಾಗ ಬಹಳ ಬೇಗ ಕೋರಿಕೆ ನೆರವೇರುತ್ತದೆ ಎಂದು ನಂಬಲಾಗುತ್ತದೆ. ಭೂವರಹ ಸ್ವಾಮಿ ದೇವಸ್ಥಾನಕ್ಕೆ ಹೋಗಲು ಆಗದೆ ಇದ್ದರೂ ಕೂಡ ಮನೆಯಲ್ಲೇ ಕುಳಿತು ಭಕ್ತಿಯಿಂದ ನಂಬಿಕೆಯಿಂದ ವರಾಹ ಸ್ವಾಮಿಯ ಪ್ರಭಾವಶಾಲಿಯಾದ ಈ ಒಂದು ಮಂತ್ರವನ್ನು ನಾವು ಹೇಳುವ ವಿಧಾನದಲ್ಲಿ ಪಠಿಸುವ ಮೂಲಕ ಇದೇ ರೀತಿಯ ಫಲವನ್ನು ಪಡೆಯಬಹುದು.
ಸಾಧ್ಯವಾದರೆ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಇದನ್ನು ಪಠಿಸಿದರೆ ಒಳ್ಳೆಯದು ಎದ್ದು ಸ್ನಾನ ಮಾಡಿ ಮಾಡಿ ದೇವರ ಕೋಣೆಯಲ್ಲಿ ಕುಳಿತು ಮೊದಲಿಗೆ ನಿಮ್ಮ ಕುಲದೇವರು, ಇಷ್ಟ ದೇವರು ಮತ್ತು ಲಕ್ಷ್ಮಿ ಸಮೇತ ಭೂವರಹ ಸ್ವಾಮಿಯನ್ನು ಪ್ರಾರ್ಥಿಸಿ, ತಮ್ಮ ಮನೆ ಕೊಂಡುಕೊಳ್ಳುವ, ಕಟ್ಟಿಸುವ ಕನಸನ್ನು ಶೀಘ್ರವಾಗಿ ಕೈಗೂಡುವಂತೆ ಮಾಡಿ.
ನನಗಾಗಿ ಮಾತ್ರವಲ್ಲದೆ ಕುಟುಂಬಕ್ಕಾಗಿ ಇದು ಅವಶ್ಯಕತೆ ಇದೆ ದಯವಿಟ್ಟು ಈ ಕಾರ್ಯ ಕೈಗೂಡಿಸಿ ಎಂದು ಪರಿಪರಿಯಾಗಿ ಕೇಳಿಕೊಳ್ಳಿ. ನಂತರ ಈ ಮಂತ್ರವನ್ನ ದಿನಕ್ಕೆ 21 ಬಾರಿ ಪಠಿಸಿ ನೀವು ವಿಷ್ಣು ಅವತಾರದ ಯಾವುದೇ ದೇವಸ್ಥಾನಕ್ಕೆ ಹೋದಾಗ ಕೂಡ ಅಲ್ಲಿಯೂ ಇದೇ ಪ್ರಾರ್ಥನೆ ಮಾಡಿ ಈ ಮಂತ್ರವನ್ನು ಪಠಿಸಿದರೆ ಬಹಳ ಬೇಗ ಫಲ ಸಿಗುತ್ತದೆ.