ನವಗ್ರಹಗಳ ಪ್ರಭಾವ ಜೀವನದಲ್ಲಿ ಹಲವಾರು ವ್ಯತ್ಯಾಸಗಳನ್ನು ಉಂಟು ಮಾಡುತ್ತಿರುತ್ತದೆ. ಕೆಲವರು ಗುರು, ಶುಕ್ರ ಗ್ರಹಗಳು ಮಾತ್ರ ಒಳ್ಳೆಯ ಪ್ರಭಾವ ಬೀರುತ್ತವೆ. ರಾಹು, ಕೇತು, ಶನಿ, ಕುಜ ಇಂತಹ ಗ್ರಹಗಳಿಂದ ಕೆಟ್ಟ ಪ್ರಭಾವಗಳಾಗುತ್ತವೆ ಎಂದು ತಪ್ಪು ತಿಳಿದುಕೊಂಡಿದ್ದಾರೆ.
ಆದರೆ ಎಲ್ಲಾ ಗ್ರಹಗಳಿಂದಲೂ ಕೂಡ ಒಳ್ಳೆಯ ಪರಿಣಾಮ ಇರುತ್ತದೆ ಮತ್ತು ಒಂದು ಗ್ರಹಗತಿಯ ಸ್ಥಾನವು ಕೆಟ್ಟಿದ್ದರೆ ಅದು ಉಳಿದ ಎಲ್ಲಾ ಗ್ರಹಗಳ ಸ್ಥಾನವನ್ನು ಕೆಡಿಸಿ ಅವುಗಳಿಂದಲೂ ಕೆಟ್ಟ ಪ್ರಭಾವ ಉಂಟು ಮಾಡಬಹುದು ಹೀಗಾಗಿ ನವಗ್ರಹ ಪೂಜೆ, ನವಗ್ರಹ ಹೋಮ ಇತ್ಯಾದಿಗಳನ್ನು ಕೈಗೊಂಡು ಶಾಂತಿ ಮಾಡಿಸಿಕೊಳ್ಳಬೇಕು. ಸಾಧ್ಯವಾಗದೇ ಇದ್ದವರು ನವಗ್ರಹಗಳನ್ನು ಪ್ರದಕ್ಷಿಣೆ ಹಾಕುವುದರಿಂದ ಕೂಡ ತಮ್ಮ ಗ್ರಹ ಪ್ರಭಾವಗಳನ್ನು ಕಡಿಮೆ ಮಾಡಿಕೊಂಡು ಮನುಷ್ಯ ಸಹಜ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.
ನವಗ್ರಹಗಳಾದ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಎಲ್ಲವೂ ಕೂಡ ಜೀವನದ ಒಂದೊಂದು ವಿಷಯಕ್ಕೆ ಸಂಬಂಧಿಸಿವೆ. ಸೂರ್ಯ ಎಂದರೆ ಆಡಳಿತ, ಅಧಿಕಾರ. ಚಂದ್ರ – ಮನಸ್ಸು, ಮಂಗಳ – ಧೈರ್ಯ, ಬುಧ – ಬುದ್ಧಿ, ಗುರು – ಜ್ಞಾನ, ಶುಕ್ರ – ಕಲೆ ಹಾಗೂ ಹಣ, ಶನಿ ಕರ್ಮಕಾರಕ, ರಾಹು – ಅಸೂಯೆ, ಆಸೆ ಕೇತು – ಮೋಹ, ಮತ್ಸರ ಕಾರಕಗಳು ಎಂದು ಹೇಳಲಾಗುತ್ತದೆ.
ಇವುಗಳಿಗೆ ಸಂಬಂಧಿಸಿದ ವೈಪರೀತ್ಯ ಗಳು ಜೀವನದಲ್ಲಿ ಆದಾಗ ನವಗ್ರಹಗಳನ್ನು ಪ್ರದಕ್ಷಿಣೆ ಹಾಕಿ ಪರಿಹಾರ ಪಡೆಯಬಹುದು. ಆದರೆ ಕೆಲವರು ನವಗ್ರಹ ಪ್ರದರ್ಶನ ಹಾಕುವಾಗ ನವಗ್ರಹದ ಪೂಜೆ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ ಇದರಿಂದ ಅವರಿಗೆ ಪೂರ್ತಿ ಫಲ ಸಿಗುವುದಿಲ್ಲ. ಹಾಗಾದರೆ ನವಗ್ರಹದ ಪೂಜೆ ಮಾಡುವಾಗ ಯಾವ ರೀತಿ ಕ್ರಮವಾಗಿ ಮಾಡಬೇಕು ಎನ್ನುವುದರ ಕುರಿತು ಮಾಹಿತಿಯನ್ನು ನಮ್ಮ ಜ್ಞಾನಕ್ಕೆ ತಿಳಿದಷ್ಟು ತಿಳಿಸುತ್ತಿದ್ದೇವೆ.
ಶನಿವಾರದ ದಿನ ನವಗ್ರಹ ಪ್ರದಕ್ಷಿಣೆ ಹಾಕುವುದು ಒಳ್ಳೆಯದು. ಮತ್ತು 9 ಶನಿವಾರಗಳು ನವಗ್ರಹ ಪ್ರದಕ್ಷಿಣೆ ಹಾಕಿ ಪೂಜೆ ಮಾಡುವುದು ಒಳ್ಳೆಯದು. ಸಾಧ್ಯವಾದರೆ ಶನಿವಾರದಂದು ಬರಿಗಾಲಿನಲ್ಲಿ ಹೋಗಿ ನವಗ್ರಹ ಪ್ರದಕ್ಷಿಣೆ ಮಾಡಿಕೊಂಡು ಬರಬೇಕು. ದೇವಸ್ಥಾನ ಪ್ರವೇಶ ಮಾಡುವ ಮುನ್ನ ಮತ್ತೊಮ್ಮೆ ದೇವಸ್ಥಾನದ ಹೊರಗೆ ಇರುವ ನಲ್ಲಿಯಲ್ಲಿ ಕೈಕಾಲು ಮುಖ ತೊಳೆದುಕೊಂಡು ನಂತರ ನವಗ್ರಹಗಳ ಪ್ರದಕ್ಷಿಣೆ ಹಾಕಬೇಕು.
ನವಗ್ರಹಗಳನ್ನು ಮುಟ್ಟಿ ನಮಸ್ಕರಿಸಬಾರದು ಮತ್ತು ನವಗ್ರಹಗಳನ್ನು ಪ್ರದಕ್ಷಿಣೆ ಹಾಕುವಾಗ ಒಂಬತ್ತು ಸುತ್ತು ಹಾಕಬೇಕು ಆದರೆ ಇದೇ ಸಮಯದಲ್ಲಿ ಹಲವರು ತಪ್ಪು ಮಾಡುತ್ತಾರೆ. ಏನೆಂದರೆ ಸೂರ್ಯ ಮಧ್ಯದಲ್ಲಿ ಇರುತ್ತಾರೆ ಚಂದ್ರನಿಂದ ಆರಂಭ ಮಾಡಿ ಏಳು ಸುತ್ತುಗಳನ್ನು ಹಾಕಿ, ಏಳು ಪ್ರದಕ್ಷಿಣೆ ಆದಮೇಲೆ ಎರಡು ಪ್ರದಕ್ಷಿಣೆಯನ್ನು ಉಲ್ಟಾ ಎಂದರೆ ಬುಧನಿಂದ ಆರಂಭ ಮಾಡಿ ಎಡಕ್ಕೆ ಎರಡು ಸುತ್ತು ಹಾಕಬೇಕು.
ಈ ಸಮಯದಲ್ಲಿ ಓಂ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ | ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ಎಂದು ಮನಸ್ಸಿನಲ್ಲಿ ಸಾಧ್ಯವಾದಷ್ಟು ಬಾರಿ ಮಂತ್ರವನ್ನು ಹೇಳಿಕೊಳ್ಳಬೇಕು, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಗೊತ್ತಿದ್ದವರು ಅದನ್ನು ಕೂಡ ಹೇಳಿಕೊಳ್ಳಬಹುದು.
ನವಗ್ರಹಕ್ಕೆ ಬೆನ್ನು ತೋರಿಸಿ ಪ್ರದಕ್ಷಿಣೆ ಆದ ಮೇಲೆ ಬರಬಾರದು ನವಗ್ರಹಗಳನ್ನು ನೋಡುತ್ತಾ ಹಿಮ್ಮುಖವಾಗಿ ಬರಬೇಕು ಮತ್ತು ದೇವಸ್ಥಾನದಿಂದ ಹೊರಗೆ ಬರುವಾಗ ಕೈಕಾಲು ಮುಖ ತೊಳೆಯಬಾರದು ಮನೆಗೆ ಬಂದ ಮೇಲು ಕೂಡ ಕೈ ಕಾಲು ಮುಖ ತೊಳೆಯಬಾರದು. ನವಗ್ರಹ ಪ್ರದಕ್ಷಿಣೆ ಹಾಕಿದ ಮೇಲೆ ಎಲ್ಲೂ ಕೂಡ ಹೋಗಬಾರದು ನೇರವಾಗಿ ನಮ್ಮ ಮನೆಗೆ ಬರಬೇಕು. ಈ ರೀತಿ ಮಾಡಿದರೆ ಗ್ರಹ ದೋಷದಿಂದ ಉಂಟಾಗಿರುವ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ನೆಲೆಸುತ್ತದೆ.