* ವಾಸ್ತುಪ್ರಕಾರ ಪಂಚಮುಖಿ ಆಂಜನೇಯನ ಫೋಟೋ ಮನೆಯಲ್ಲಿ ದ್ದರೆ ಮನೆಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕುಟುಂಬದಲ್ಲಿ ಯಾರಿಗೇ ರೋಗ ರುಜಿನಗಳು ಇದ್ದರೆ ಹಣಕಾಸಿನ ಸಮಸ್ಯೆ ಇದ್ದರೆ ಎಲ್ಲವೂ ಪರಿಹಾರವಾಗುತ್ತದೆ. ಶತ್ರುಬಾಧೆ ಕೂಡಾ ಇರುವುದಿಲ್ಲ.
* ಮನೆಯ ದಕ್ಷಿಣ ದಿಕ್ಕಿನಲ್ಲಿ, ಉತ್ತರಕ್ಕೆ ಮುಖ ಮಾಡಿರುವಂತೆ ಆಂಜನೇಯನ ಫೋಟೋ ಇದ್ದರೆ ಒಳ್ಳೆಯದು.
* ಶ್ರೀರಾಮನ ಭಕ್ತ, ವಾಯುಪುತ್ರ, ಮಾರುತಿ, ಬಜರಂಗಬಲಿ ಎಂದೇ ಕರೆಯಲ್ಪಡುವ ಶ್ರೀ ಹನುಮಂತನು ಧೈರ್ಯ ಮತ್ತು ಶಕ್ತಿಯ ಸಂಕೇತ ಎಂದೇ ಪರಿಗಣಿಸಲಾಗಿದೆ. ಮಂಗಳವಾರ ಹಾಗೂ ಶನಿವಾರ ಆಂಜನೇ ಯನ ಆರಾಧನೆಗೆ ಉತ್ತಮ ಸಮಯ. ಆಂಜನೇಯಸ್ವಾಮಿಯನ್ನು ಯಾರು ಭಕ್ತಿಯಿಂದ ಪೂಜಿಸುವರೋ ಅವರ ಆಸೆ ಆಕಾಂಕ್ಷೆಗಳೆಲ್ಲಾ ಈಡೇರುವುದು. ಜೀವನದಲ್ಲಿ ಎದುರಾದ ಕಷ್ಟಗಳನ್ನು ನಿವಾರಿಸುವ, ಕಷ್ಟಗಳನ್ನು ಎದುರಿಸಲು ಧೈರ್ಯ ನೀಡುವ ಶಕ್ತಿ ದೇವತೆ ಹನುಮಂತ.
* ಆಂಜನೇಯ ಅಷ್ಟೋತ್ತರ ಶತನಾಮಾವಳಿ, ಹನುಮಾನ್ ಚಾಲಿಸಾ ಪಠಿಸಿದರೆ ಶನಿಯ ಸಮಸ್ಯೆಗಳಿಂದ ಪಾರಾಗಬಹುದು. ಬಹುತೇಕ ಎಲ್ಲಾ ಹಿಂದೂಗಳ ಮನೆಯಲ್ಲಿ ಆಂಜನೇಯನ ಫೋಟೋ ಇರುತ್ತದೆ. ಆದರೆ ಆಂಜನೇಯನ ಪೋಟೋ ಸೇರಿದಂತೆ ಇತರ ದೇವರ ಫೋಟೋಗಳನ್ನು ಕೆಲವರು ವಾಸ್ತುಪ್ರಕಾರ ಇಡುವುದಿಲ್ಲ.
ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿನ ಋಣಾತ್ಮಕ ಅಂಶಗಳು ಹೊರ ಹೋಗುವುದಿಲ್ಲ. ಆದರೆ ನೀವು ಸೂಕ್ತ ರೀತಿಯಲ್ಲಿ ದೇವರ ಫೋಟೋ ಇಟ್ಟರೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಮನೆಯಲ್ಲಿ ಹನುಮಂತನ ಫೋಟೋ ಹೇಗೆ ಇಡಬೇಕು? ಯಾವ ದಿಕ್ಕಿನಲ್ಲಿ ಇಡಬೇಕು? ಯಾವ ಭಂಗಿಯ ಆಂಜನೇಯನ ಫೋಟೋ ಒಳ್ಳೆ ಫಲಿತಾಂಶಗಳನ್ನು ನೀಡಲಿದೆ ಎಂಬುದನ್ನು ನೋಡೋಣ.
* ದಕ್ಷಿಣ ದಿಕ್ಕಿನಲ್ಲಿ ಇಡಲೇಬೇಕು :- ವಾಸ್ತು ಪ್ರಕಾರ ಹನುಮಂತನ ಫೋಟೋವನ್ನು ಯಾವಾಗಲೂ ದಕ್ಷಿಣ ದಿಕ್ಕಿಗೆ ಇಡಬೇಕು. ಅದೂ ಕೂಡಾ ಕೂತಿರುವ ಭಂಗಿಯಲ್ಲಿರುವ ಫೋಟೋ ಆಗಬೇಕು. ಕೆಂಪು ಬಣ್ಣದ ಫೋಟೋ ಆಗಿದ್ದಲ್ಲಿ ಮತ್ತಷ್ಟು ಒಳ್ಳೆಯದು. ಆಂಜನೇಯನ ಫೋಟೋ ದಕ್ಷಿಣ ದಿಕ್ಕಿನಲ್ಲಿ ಇದ್ದರೆ ಅದರ ಪ್ರಭಾವ ಯಾವಾಗಲೂ ಧನಾತ್ಮಕವಾಗಿರುತ್ತದೆ. ಯಾವುದೇ ದುಷ್ಟಶಕ್ತಿಯ ಪ್ರಭಾವ ಇದ್ದರೂ ನಿವಾರಣೆ ಆಗುತ್ತದೆ. ನಿಮ್ಮ ಮನೆಯಲ್ಲಿ ಸುಖ, ಸಂತೋಷ, ಐಶ್ವರ್ಯ ಹೆಚ್ಚಾಗುತ್ತದೆ.
* ಉತ್ತರ ದಿಕ್ಕಿಗೆ ಮುಖ ಮಾಡಿರುವ ಫೋಟೋ :- ಆಂಜನೇಯನ ಫೋಟೋವನ್ನು ಸದಾ ಉತ್ತರ ದಿಕ್ಕಿಗೆ ಮುಖ ಮಾಡುವಂತೆ ಇಡಬೇಕು. ಉತ್ತರಮುಖಿ ಹನುಮಂತನನ್ನು ದಿನನಿತ್ಯ ಪೂಜಿಸಿದಲ್ಲಿ ಎಲ್ಲಾ ದೇವತೆಗಳ ಅನುಗ್ರಹ ದೊರೆಯುತ್ತದೆ. ಲಕ್ಷ್ಮಿ ಕಟಾಕ್ಷ ಕೂಡಾ ನಿಮಗೆ ಸಿದ್ದಿಸಲಿದೆ. ಎಲ್ಲಾ ಋಣಾತ್ಮಕ ಅಂಶಗಳು ನಾಶವಾಗಿ ನಿಮ್ಮ ಬದುಕು ಬಂಗಾರವಾಗುತ್ತದೆ.
* ಪಂಚಮುಖಿ ಆಂಜನೇಯ :- ವಾಸ್ತುಪ್ರಕಾರ ಪಂಚಮುಖಿ ಆಂಜನೇ ಯನ ಫೋಟೋ ಮನೆಯಲ್ಲಿದ್ದರೆ ಮನೆಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕುಟುಂಬದಲ್ಲಿ ಯಾರಿಗೇ ರೋಗ ರುಜಿನಗಳು ಇದ್ದರೆ, ಹಣಕಾಸಿನ ಸಮಸ್ಯೆ ಇದ್ದರೆ ಎಲ್ಲವೂ ಪರಿಹಾರವಾಗುತ್ತದೆ. ಶತ್ರುಬಾಧೆ ಕೂಡಾ ಇರುವುದಿಲ್ಲ. ಪಂಚಮುಖಿ ಆಂಜನೇಯನ ಫೋಟೋವನ್ನು ಮನೆಯ ಮುಖ್ಯಬಾಗಿಲಿನ ಮೇಲೆ ಅಥವಾ ಎಲ್ಲರಿಗೂ ಕಾಣುವ ರೀತಿ ಇಟ್ಟರೆ ಮನೆಗೆ ದುಷ್ಟಶಕ್ತಿಯ ಪ್ರವೇಶ ಸಾಧ್ಯವೇ ಇಲ್ಲ.
* ಬೆಟ್ಟ ಎತ್ತುವ ಭಂಗಿ :- ನಿಮ್ಮ ಮನೆಯಲ್ಲಿ ಹನುಮಂತ ಪರ್ವತವನ್ನು ಎತ್ತಿರುವ ಭಂಗಿಯಲ್ಲಿರುವ ಫೋಟೋ ಇದ್ದರೆ ಒಳ್ಳೆಯದು. ಈ ರೀತಿಯ ಫೋಟೋ ಮನೆಯಲ್ಲಿದ್ದರೆ ಧೈರ್ಯ, ಶಕ್ತಿ, ಆತ್ಮವಿಶ್ವಾಸ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ. ಈ ಭಂಗಿಯಲ್ಲಿ ರುವ ಪೋಟೋ ನಿಮ್ಮನ್ನು ಯಾವ ಕಷ್ಟದ ಪರಿಸ್ಥಿತಿಯಲ್ಲೂ ಕುಗ್ಗಿಸುವು ದಿಲ್ಲ. ಯಾವ ಸಮಸ್ಯೆ ಇದ್ದರೂ ಅದನ್ನು ಧೈರ್ಯವಾಗಿ ಎದುರಿಸುವ ಶಕ್ತಿ ನಿಮ್ಮಲ್ಲಿ ತುಂಬುತ್ತದೆ.
* ರಾಮನನ್ನು ತಬ್ಬಿರುವ ಭಂಗಿ :- ಆಂಜನೇಯನು ಶ್ರೀರಾಮನನ್ನು ತಬ್ಬಿಕೊಂಡಿರುವಂಥ ಭಂಗಿಯ ಫೋಟೋ ನಿಮ್ಮ ಮನೆಯಲ್ಲಿದ್ದರೆ ಕುಟುಂಬದ ಒಗ್ಗಟ್ಟು ಹಾಗೂ ಸಮಾಜದ ಸೌಹಾರ್ದತೆಯನ್ನು ಕಾಪಾಡುವ ಭಾವನೆ ಇರುತ್ತದೆ.