ಮನೆ ಎಂದ ಮೇಲೆ ಅಲ್ಲಿ ಕೆಲವೊಂದಷ್ಟು ಜಗಳಗಳು ಮನಸ್ತಾಪಗಳು ಗಂಡ ಹೆಂಡತಿ ನಡುವೆ ಕದನಗಳು ಹೀಗೆ ಒಂದಲ್ಲ ಒಂದು ವಿಚಾರವಾಗಿ ಮನಸ್ತಾಪ ಉಂಟಾಗುತ್ತದೆ ಹಾಗೆಂದ ಮಾತ್ರಕ್ಕೆ ಇದನ್ನು ಹಾಗೆ ಬಿಡುವುದು ಒಳ್ಳೆಯದಲ್ಲ ಹೌದು ಯಾವುದಾದರೂ ಒಂದು ಕಾರಣ ದಿಂದ ಈ ರೀತಿಯ ಸಮಸ್ಯೆಗಳನ್ನು ಪ್ರತಿಯೊಬ್ಬರೂ ಕೂಡ ಅನುಭವಿಸಿರುತ್ತೀರಿ.
ಅದರಲ್ಲೂ ಗಂಡ ಹೆಂಡತಿ ನಡುವೆ ಮನಸ್ತಾಪ ಉಂಟಾಗುತ್ತಿ ದ್ದರೆ ತಮ್ಮ ಜೀವನದ ನೆಮ್ಮದಿ ಸಂಪೂರ್ಣವಾಗಿ ಹಾಳಾಗುತ್ತದೆ. ಮನೆಯ ಏಳಿಗೆ ಯಾಗದೆ ಸರಿಯಾದ ಜೀವನ ಇಲ್ಲದೆ ಹಣಕಾಸಿನ ಕೊರತೆ ಉಂಟಾಗಿ ಸಾಲ ಮಾಡಿಕೊಂಡು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಎಲ್ಲ ರೀತಿಯ ಸಮಸ್ಯೆಗಳಿಗೂ ಕೂಡ ಶಾಶ್ವತ ಪರಿಹಾರ ಎನ್ನುವುದು ಇದ್ದೇ ಇರುತ್ತದೆ.
ಹೌದು ಯಾವುದೇ ಒಂದು ಸಮಸ್ಯೆ ಬಂದರೆ ಅದು ನಮ್ಮ ಜೀವನ ಪರ್ಯಂತ ಇರುವುದಿಲ್ಲ. ಕೆಲವೊಂದಷ್ಟು ಸಮಯದವರೆಗೆ ಆ ಸಂಕಷ್ಟ ಗಳು ಇದ್ದು ಅದು ನಮಗೆ ತೊಂದರೆಯನ್ನು ಉಂಟುಮಾಡುತ್ತಿರುತ್ತದೆ. ಆಗ ನಾವು ಆ ಸಮಸ್ಯೆಗೆ ಹೆದರಿಕೊಂಡು ಕುಳಿತುಕೊಳ್ಳಬಾರದು.
ಬದಲಿಗೆ ಆ ಸಮಸ್ಯೆಯನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಅದಕ್ಕೆ ಪರಿಹಾರ ಮಾರ್ಗ ಏನು ಎನ್ನುವುದನ್ನು ತಿಳಿದುಕೊಂಡು ಅದನ್ನು ನಾವು ಸರಿಪಡಿಸಿಕೊಳ್ಳುವುದು ಉತ್ತಮ. ಬದಲಿಗೆ ಬಂದಂತಹ ಕಷ್ಟವನ್ನು ಅನುಭವಿಸುತ್ತಾ ಇದು ಯಾವಾಗ ನಮ್ಮಿಂದ ದೂರವಾಗುತ್ತದೆ ಎನ್ನುವ ಚಿಂತೆಯಲ್ಲಿ ಇರಬಾರದು.
ಹಾಗಾದರೆ ಈ ದಿನ ಈ ರೀತಿಯ ಇನ್ನು ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುವoತಹ ಪ್ರತಿಯೊಬ್ಬರು ಇದನ್ನು ದೂರ ಮಾಡಿಕೊಳ್ಳುವುದಕ್ಕೆ ಯಾವ ಪರಿಹಾರ ಮಾರ್ಗವನ್ನು ಮಾಡಬೇಕು ಹಾಗೂ ಇದಕ್ಕೆ ಯಾವುದು ಉಪಾಯ ಮಾರ್ಗ ಎನ್ನುವುದನ್ನು ತಿಳಿದು ಕೊಳ್ಳುವುದು ಬಹಳ ಮುಖ್ಯ ಹಾಗಾದರೆ ಆ ಉಪಾಯ ಕ್ರಮಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ.
ಶುದ್ಧವಾದoತಹ ಒಂದು ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ಮೇಲೆ ಕೇಸರಿ ಕುಂಕುಮದಿಂದ ಸ್ವಸ್ತಿಕ್ ಚಿನ್ಹೆಯನ್ನು ಬರೆಯಬೇಕು ಅದರ ಮೇಲೆ ಮೂರು ಲವಂಗವನ್ನು ಇಟ್ಟು ನಂತರ ಅರ್ಧಕ್ಕೆ ಕತ್ತರಿಸಿದ ನಿಂಬೆಹಣ್ಣಿಗೆ ಅರಿಶಿನ ಮತ್ತು ಕುಂಕುಮವನ್ನು ಇಟ್ಟು ಅದನ್ನು ವೀಳ್ಯದೆಲೆ ಮೇಲೆ ಇಟ್ಟು ಅದನ್ನು ನಿಮ್ಮ ಎರಡು ಕೈ ಮೇಲೆ ಇಟ್ಟು ಅದನ್ನು ದೇವರ ಮುಂದೆ ನಿಂತು ಒಂದು ಸಂಕಲ್ಪವನ್ನು ಮಾಡಬೇಕು .
ದೇವರ ಮುಂದೆ ನಿಂತು ನಮ್ಮ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅಂದರೆ ಗಂಡ ಹೆಂಡತಿ ನಡುವೆ ಮನಸ್ತಾಪ ಜಗಳ ಕಲಹ ಉಂಟಾಗಿದ್ದರೆ ಇವೆಲ್ಲವೂ ಕೂಡ ಸರಿ ಹೋಗಬೇಕು ನನ್ನ ಎಲ್ಲಾ ಸಮಸ್ಯೆಯನ್ನು ನೀವು ಸರಿಪಡಿಸಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು.
ಆನಂತರ ಮನೆಯ ಹೊರಗಡೆ ಬಂದು ಅದನ್ನು ದೃಷ್ಟಿ ತೆಗೆದು ಮೂರು ಕೂಡುವ ಜಾಗಕ್ಕೆ ಎಸೆದು ಹಿಂದಿರುಗಿ ನೋಡದೆ ಬರಬೇಕು. ಹೀಗೆ ಮಾಡಿದರೆ ಗಂಡ ಹೆಂಡತಿ ನಡುವೆ ಎಷ್ಟೇ ಮನಸ್ತಾಪ ಇದ್ದರೂ ಕೂಡ ಅದೆಲ್ಲವೂ ದೂರವಾಗುತ್ತದೆ ಆನಂತರ ನಿಮ್ಮಿಬ್ಬರ ನಡುವೆ ಉತ್ತಮವಾದಂತಹ ಬಾಂಧವ್ಯ ಪ್ರೀತಿ ವಿಶ್ವಾಸ ಎನ್ನುವುದು ಹೆಚ್ಚಾಗುತ್ತದೆ.
ಆದ್ದರಿಂದ ಯಾರೆ ಲ್ಲಾ ಗಂಡ ಹೆಂಡತಿಯರು ಈ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿ ರುತ್ತಾರೋ ಅಂತವರು ಈಗ ನಾವು ಹೇಳಿದ ಈ ವಿಧಾನವನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗೂ ಇದರಿಂದ ಹೆಚ್ಚಿನ ಪ್ರಯೋಜನವನ್ನು ಪ್ರತಿಯೊಬ್ಬರೂ ಸಹ ಪಡೆದು ಕೊಳ್ಳಬಹುದಾಗಿದೆ.