ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ಹಣಕಾಸಿನ ಅವಶ್ಯಕತೆ ಎನ್ನುವುದು ತುಂಬಾ ಇದೆ. ಹೌದು ನಾವು ಯಾವುದೇ ಕೆಲಸ ಕಾರ್ಯ ಮಾಡಿದರು ನಮ್ಮ ದಿನನಿತ್ಯದ ಖರ್ಚುಗಳಿಗೆ ಹಣಕಾಸಿನ ಅವಶ್ಯಕತೆ ಎನ್ನುವುದು ನಮಗೆ ಅತ್ಯಗತ್ಯವಾಗಿ ಬೇಕಾಗಿದೆ. ಆದರೆ ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಎಷ್ಟೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರು ಕೂಡ ಹಣಕಾಸು ಅವರ ಕೈಯಲ್ಲಿ ನಿಲ್ಲುವುದಿಲ್ಲ.
ಒಂದಲ್ಲ ಒಂದು ರೀತಿಯಾಗಿ ಹಣ ಖರ್ಚಾಗುತ್ತ ಇರುತ್ತದೆ ಆದ್ದರಿಂದ ಅವರು ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ ಎಂದೇ ಹೇಳಬಹುದು ಆದರೆ ಈ ರೀತಿಯ ಸಮಸ್ಯೆಗಳು ಎದುರಾಗುವುದಕ್ಕೆ ಕಾರಣಗಳು ಏನು ಎಂದು ಸಹ ಅವರಿಗೆ ತಿಳಿಯುವುದಿಲ್ಲ. ಬದಲಿಗೆ ಆ ಹಣಕಾಸು ಹೇಗೆ ಉಳಿಸಿಕೊಳ್ಳಬೇಕು ಮತ್ತಷ್ಟು ಹಣಕಾಸು ಸಂಪಾದನೆ ಮಾಡಲು ಏನು ಮಾಡಬೇಕು ಎನ್ನುವ ಆಲೋಚನೆಯ ಲ್ಲಿಯೇ ಇರುತ್ತಾರೆ.
ಆದರೆ ಈ ದಿನ ನಾವು ಹೇಳುವ ಈ ಒಂದು ಪರಿಹಾರವನ್ನು ನೀವು ಶನಿವಾರದ ದಿನ ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ ಬದಲಿಗೆ ನೀವು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಸಿಗುತ್ತಾ ಹೋಗುತ್ತದೆ. ಜೊತೆಗೆ ವ್ಯರ್ಥವಾಗಿ ಹಣಕಾಸು ಖರ್ಚಾಗುತ್ತಿದ್ದರೆ ಅದೆ ಲ್ಲವೂ ಸಹ ಕಡಿಮೆಯಾಗುತ್ತದೆ.
ಹಾಗಾದರೆ ಪ್ರತಿಯೊಬ್ಬರ ಜೀವನದಲ್ಲಿ ಯಾವುದೇ ರೀತಿಯ ಹಣ ಕಾಸಿನ ಸಮಸ್ಯೆ ಇದ್ದರೆ ಅಂತವರು ಯಾವ ಒಂದು ಪರಿಹಾರ ಕ್ರಮ ವನ್ನು ಮಾಡಿಕೊಳ್ಳಬೇಕು ಈ ಒಂದು ಪರಿಹಾರ ಕ್ರಮವನ್ನು ಯಾವ ದಿನ ಹೇಗೆ ಮಾಡಿಕೊಳ್ಳಬೇಕು ಹಾಗೂ ಈ ಒಂದು ದಿನ ಅಷ್ಟೊಂದು ವಿಶೇಷ ಏನು ಹೀಗೆ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ.
ಶನಿ ದೋಷ ಎಂದರೆ ಸನಾತನ ಧರ್ಮದಲ್ಲಿ ಶನಿವಾರವನ್ನು ನ್ಯಾಯದ ದೇವರಾದ ಶನಿ ದೇವರಿಗೆ ಅರ್ಪಿಸಲಾಗಿದೆ. ಈ ದಿನ ಶನಿ ದೇವರನ್ನು ಆಚರಣೆಗಳ ಪ್ರಕಾರ ಪೂಜಿಸಲಾಗುತ್ತದೆ. ಭಕ್ತರು ತಂದುಕೊಂಡಂತಹ ಕೆಲಸ ಸರಾಗವಾಗಿ ನೆರವೇರಲಿ ಎಂದು ಶನಿ ದೇವರಿಗೆ ಉಪವಾಸಗಳನ್ನು ಸಹ ಮಾಡುತ್ತಾರೆ.
ಶನಿ ದೇವರು ಕರ್ಮಕ್ಕೆ ಅನುಗುಣವಾಗಿ ನಿರ್ದಿಷ್ಟ ವ್ಯಕ್ತಿಗೆ ಫಲಗಳನ್ನು ನೀಡುತ್ತಾನೆ ಒಳ್ಳೆಯ ಕೆಲಸಗಳನ್ನು ಮಾಡುವವರು ಶುಭಫಲಿತಾಂಶವನ್ನು ಪಡೆಯುತ್ತಾರೆ. ಆದರೆ ಅದೇ ಸಮಯದಲ್ಲಿ ಶನಿ ದೇವರು ಕೆಟ್ಟ ಕಾರ್ಯಗಳನ್ನು ಮಾಡುವವರನ್ನು ಶಿಕ್ಷಿಸುತ್ತಾನೆ. ಜ್ಯೋತಿಷಿಗಳ ಪ್ರಕಾರ ಶನಿ ದೇವರ ಕೆಟ್ಟ ದೃಷ್ಟಿಯಿಂದಾಗಿ ವ್ಯಕ್ತಿಯು ಸಾಕಷ್ಟು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಶನಿ ದೇವರನ್ನು ನಿಯಮಿತವಾಗಿ ಪೂಜಿಸಬೇಕು ಹೀಗೆ ಮಾಡುತ್ತಾ ಬಂದರೆ ಶನಿ ದೇವರ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ಇಲ್ಲವಾದಲ್ಲಿ ಶನಿಯ ಕೆಟ್ಟದೃಷ್ಟಿ ಯಿಂದ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ ಪ್ರತಿಯೊಂದರಲ್ಲೂ ಕೂಡ ನಷ್ಟವನ್ನು ಅನುಭವಿಸುತ್ತೀರಿ ಅದೇ ರೀತಿಯಾಗಿ ಯಾವುದೇ ರೀತಿಯ ಪೂಜೆಯನ್ನು ಮಾಡದೆ ಇಷ್ಟೆಲ್ಲ ರೀತಿಯ ಸಮಸ್ಯೆ ಅನು ಭವಿಸುತ್ತಿರುವವರು.
ಈಗ ನಾವು ಹೇಳುವ ಈ ಪರಿಹಾರ ಕ್ರಮವನ್ನು ಮಾಡಿಕೊಳ್ಳುವುದರಿಂದ ನೀವು ಹಣಕಾಸಿನ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಹಾಗಾದರೆ ಆ ಪರಿಹಾರ ಕ್ರಮ ಏನು ಎಂದು ತಿಳಿಯೋಣ. ನ್ಯಾಯ ದೇವರಾದ ಶನಿದೇವನು ಶಿವನ ಮತ್ತು ಶ್ರೀ ಕೃಷ್ಣನ ಪರಮ ಭಕ್ತ ಎಂದು ಧರ್ಮ ಗ್ರಂಥಗಳಲ್ಲಿ ಸೂಚಿಸಲಾಗಿದೆ. ಆದ್ದರಿಂದ ಶನಿವಾರದಂದು ಶಿವನನ್ನು ಪೂಜಿಸುವುದರಿಂದ ಶನಿ ದೇವರು ಸಂತೋಷ ಪಡುತ್ತಾನೆ.
ಅವನು ಪೂಜಿಸುವಂತಹ ವ್ಯಕ್ತಿಯ ಮೇಲೆ ತನ್ನ ಅನುಗ್ರಹವನ್ನು ಸುರಿಸುತ್ತಾನೆ ಆದ್ದರಿಂದ ಶನಿವಾರದ ದಿನ ಪ್ರತಿಯೊಬ್ಬರೂ ಕೂಡ ಶಿವನನ್ನು ಆರಾಧನೆ ಮಾಡುವುದು ತುಂಬಾ ಒಳ್ಳೆಯದು. ಈ ರೀತಿ ಮಾಡುತ್ತಾ ಬಂದರೆ ನೀವು ಹಣಕಾಸಿನ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ನೀವು ದೂರ ಮಾಡಿಕೊಳ್ಳಬಹುದು.