ಪ್ರತಿಯೊಬ್ಬ ವ್ಯಕ್ತಿಯೂ ಕೂಡ ದೇವರ ಪೂಜೆ ಆರಾಧನೆಯನ್ನು ಮಾಡುತ್ತಾನೆ ಹೌದು ನಮ್ಮ ಸನಾತನ ಧರ್ಮದಿಂದಲೂ ಕೂಡ ಪೂಜೆ ಮಾಡುವಂತಹ ವಿಚಾರದ ಬಗ್ಗೆ ಹಲವಾರು ಮಹಾ ಕಾವ್ಯಗಳಲ್ಲಿ ತಿಳಿಸಲಾಗಿದೆ. ಅದರಂತೆಯೇ ಪ್ರತಿಯೊಬ್ಬರು ಕೂಡ ಪೂಜೆ ಮಾಡುವ ಸಮಯದಲ್ಲಿ ಕೆಲವೊಂದಷ್ಟು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯವಾಗಿರುತ್ತದೆ.
ಇಲ್ಲವಾದರೆ ನೀವು ಮಾಡುವಂತಹ ಯಾವುದೇ ಪೂಜೆಯಲ್ಲಿ ಯಶಸ್ಸು ಎನ್ನುವುದು ಸಿಗುವುದಿಲ್ಲ. ಹೌದು ನಾವು ಯಾವುದೇ ಒಂದು ಕೆಲಸವನ್ನು ಮಾಡಬೇಕು ಎಂದರೆ ಆ ಒಂದು ಕೆಲಸವನ್ನು ಯಾವ ವಿಧಾನವನ್ನು ಅನುಸರಿಸಿ ಮಾಡುವುದರಿಂದ ಆ ಕೆಲಸ ಸುಲಭವಾಗಿ ಆಗುತ್ತದೆ ಎನ್ನುವುದನ್ನು ತಿಳಿದುಕೊಂಡು ಆನಂತರ ನಾವು ಆ ಕೆಲಸವನ್ನು ಮಾಡುತ್ತೇವೆ.
ಅದೇ ರೀತಿಯಾಗಿ ನಾವು ಪೂಜೆ ಮಾಡುವಂತಹ ಸಮಯದಲ್ಲಿಯೂ ಕೂಡ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರ ಮೂಲಕ ಪೂಜೆಯನ್ನು ಮಾಡಬೇಕು ಆಗ ಮಾತ್ರ ನಾವು ಮಾಡುವಂತಹ ಪೂಜೆ ಯಲ್ಲಿ ನಮಗೆ ಪ್ರತಿಫಲ ಎನ್ನುವುದು ಸಿಗುತ್ತದೆ. ಇಲ್ಲವಾದರೆ ಯಾವುದೇ ರೀತಿಯ ಪ್ರತಿಫಲ ಸಿಗುವುದಿಲ್ಲ.
ಈ ಸುದ್ದಿ ನೋಡಿ:- ಮಕ್ಕಳಿಗೆ ಹೆಸರಿಡುವಾಗ ತುಂಬಾ ಹುಷಾರಾಗಿರಬೇಕು…
ಹಾಗಾದರೆ ದೇವರ ಪೂಜೆ ಮಾಡುವ ಸಮಯದಲ್ಲಿ ನಾವು ಯಾವ ರೀತಿಯ ನಿಯಮಗಳನ್ನು ಅನುಸರಿಸ ಬೇಕು ಎನ್ನುವುದನ್ನು ಈ ಕೆಳಗೆ ತಿಳಿಯುತ್ತಾ ಹೋಗೋಣ. ನಾವು ಯಾವುದೇ ಪೂಜೆಯನ್ನು ಪ್ರಾರಂಭ ಮಾಡುವ ಮೊದಲು ಮೊಟ್ಟ ಮೊದಲನೆಯದಾಗಿ ಪ್ರತಿಯೊಬ್ಬರು ಶುಚಿಯಾಗಿ ಸ್ನಾನ ಮಾಡಿ ಮಡಿ ಬಟ್ಟೆಯನ್ನು ಧರಿಸಿ ದೇವರ ಮನೆಯನ್ನು ಸ್ವಚ್ಛ ಮಾಡಿ ಆನಂತರವೇ ಪೂಜಾ ಸಾಮಗ್ರಿಗಳನ್ನು ತೊಳೆದು ಪೂಜೆ ಮಾಡುವುದು ಉತ್ತಮ ಹೌದು.
ಪೂಜೆ ಮಾಡುವಾಗ ನಾವು ಸಂಪೂರ್ಣವಾಗಿ ದೇವರ ಮನೆಯನ್ನು ಸ್ವಚ್ಛ ಮಾಡಬೇಕು ಹಿಂದಿನ ದಿನ ಇಟ್ಟಂತಹ ಹೂವು ಗಂಧದ ಕಡ್ಡಿ ದೀಪದ ಬತ್ತಿ ಎಲ್ಲವನ್ನು ಕೂಡ ಬದಲಾಯಿಸಿ ಸ್ವಚ್ಛ ಮಾಡಿ ಪಾತ್ರೆಗಳನ್ನು ಇಟ್ಟು ಆನಂತರ ಪೂಜೆಯನ್ನು ಮಾಡಬೇಕು. ಮೊದಲನೆಯದಾಗಿ ನಾವು ಅನುಸರಿಸಬೇಕಾದ ಪೂಜಾ ವಿಧಾನ ಏನು ಎಂದರೆ.
* ಮೊದಲನೆಯದಾಗಿ ವಿಘ್ನ ವಿನಾಯಕನ ಆರಾಧನೆಯನ್ನು ಮಾಡಬೇಕು ನಾವು ಯಾವುದೇ ಪೂಜೆಯನ್ನು ಪ್ರಾರಂಭ ಮಾಡುವ ಮೊದಲು ವಿಜ್ಞವಿನಾಯಕ ಅಂದರೆ ಗಣಪತಿಯ ಆರಾಧನೆ ಬಹಳ ಮುಖ್ಯವಾಗಿರುತ್ತದೆ. ನೀವೇನಾದರು ಗಣಪತಿಯ ಪೂಜೆ ಮಾಡದೆ ಎಷ್ಟೇ ಪೂಜೆ ಮಾಡಿದರು ಕೂಡ ಆ ಪೂಜೆಯ ಪ್ರತಿಫಲ ಸಿಗುವುದಿಲ್ಲ.
ಈ ಸುದ್ದಿ ನೋಡಿ:- ಎಲ್ಲರಿಗೂ ಕಾಡುವ ಈ ಪ್ರಶ್ನೆ ನಾವು ಮಾಡಿದ ತಪ್ಪಿಗೆ ಶಿಕ್ಷೆ ಸಿಗುತ್ತಾ.? ಇಲ್ಲವಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.!
* ಎರಡನೆಯದಾಗಿ ಪೂಜೆ ಮಾಡುವಂತಹ ಸಮಯದಲ್ಲಿ ಯಾವುದೇ ವ್ಯಕ್ತಿ ಒಂದು ಕೈಯಿಂದ ನಮಸ್ಕರಿಸಬಾರದು ಎರಡು ಕೈಯನ್ನು ಜೋಡಿಸಿ ದೇವರ ಮುಂದೆ ಭಕ್ತಿಯಿಂದ ಶ್ರದ್ಧೆಯಿಂದ ನಿಂತು ದೇವರ ಆರಾಧನೆಯನ್ನು ಮಾಡಬೇಕು.
* ಮೂರನೆಯದಾಗಿ ಸನಾತನ ಧರ್ಮದಲ್ಲಿ ಪೂಜೆಯನ್ನು ಮಾಡುವ ಸಮಯದಲ್ಲಿ ದೀಪವನ್ನು ಬೆಳಗಿಸುವುದು ಕಡ್ಡಾಯವಾಗಿದೆ. ಇದರ ಜೊತೆಗೆ ದೇವರ ಮನೆಯಲ್ಲಿ ನಿಮ್ಮ ಎಡ ಭಾಗದಲ್ಲಿ ಅಂದರೆ ದೇವರಿಗೆ ಬಲ ಭಾಗದಲ್ಲಿ ಬರುವ ಹಾಗೆ ತುಪ್ಪದ ದೀಪವನ್ನು ಬೆಳಗಿಸಬೇಕು ಹೀಗೆ ಮಾಡುವುದರಿಂದ ನೀವು ಆ ಪೂಜೆಯ ಸಂಪೂರ್ಣವಾದ ಫಲವನ್ನು ಪಡೆದುಕೊಳ್ಳುತ್ತೀರಿ.
* ಜೊತೆಗೆ ದೇವರ ಮನೆಯಲ್ಲಿ ಶಂಖನಾದ ಮತ್ತು ಗಂಟೆ ನಾದ ಇವೆರಡ ರಲ್ಲಿ ಒಂದನ್ನು ಬಾರಿಸುವುದರಿಂದ ಆ ಒಂದು ಪೂಜೆಯ ವಿಶೇಷವಾದ ಮಹತ್ವವಾದ ಫಲ ಲಭಿಸುತ್ತದೆ ಎಂದೇ ತಿಳಿಸಲಾಗಿದೆ. ಜೊತೆಗೆ ಇದನ್ನು ಬಾರಿಸುವುದರಿಂದ ಮನೆ ಮತ್ತು ಮನಸ್ಸು ಶುದ್ಧವಾಗಿರುತ್ತದೆ ಎಂದು ನಂಬಲಾಗಿದೆ.
ಈ ಸುದ್ದಿ ನೋಡಿ:- ಇವುಗಳನ್ನು ಮೂಟೆ ಕಟ್ಟಿ ಲಕ್ಷ್ಮಿ ಫೋಟೋ ಹಿಂದೆ ಇಟ್ಟರೆ ಕೈತುಂಬ ದುಡ್ಡು ಯಾವಾಗಲೂ ಇರುತ್ತದೆ.! ಮಾರವಾಡಿ ಶ್ರೀಮಂತ ರಹಸ್ಯ.
* ಸನಾತನ ಧರ್ಮದಲ್ಲಿ ಸೂರ್ಯದೇವನಿಗೆ ಬೆಳಗಿನ ಪೂಜೆಯನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ ಆದರೆ ಕೆಲವೊಂದಷ್ಟು ಜನರು ಸಂಜೆಯ ಸಮಯ ಸೂರ್ಯದೇವನಿಗೆ ಪೂಜೆಯನ್ನು ಮಾಡುತ್ತಾರೆ ಆದರೆ ಹೀಗೆ ಮಾಡಬಾರದು ಹೀಗೆ ಮಾಡುವುದರಿಂದ ಆ ವ್ಯಕ್ತಿ ದುಃಖ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.