ಮಾರ್ಚ್ ತಿಂಗಳಲ್ಲಿ ಹಲವು ಗ್ರಹಗಳ ಸ್ಥಾನಗಳು ಬದಲಾವಣೆ ಆಗುತ್ತಿವೆ, ಮಾರ್ಚ್ 07ರಂದು ಮೀನ ರಾಶಿಗೆ ಬುಧನ ಸಂಚಾರ ಹಾಗೂ ಕುಂಭ ರಾಶಿ ಕಡೆಗೆ ಶುಕ್ರನ ಸಂಚಾರವಾಗುತ್ತಿದೆ. ಮಾರ್ಚ್ 15ರಂದು ಕುಂಭ ರಾಶಿಗೆ ಕುಜ ಗ್ರಹದ ಸಂಚಾರ, ಮಾರ್ಚ್ 25 ಮೇಷ ರಾಶಿಗೆ ಬುಧ ಗ್ರಹದ ಸಂಚಾರ ಇದೆ. ಇವು ಮಾರ್ಚ್ ತಿಂಗಳ ಪ್ರಧಾನ ಗೃಹಸ್ಥಿತಿ ಆಗಿರುತ್ತದೆ ಇವುಗಳ ಪರಿಣಾಮ ದ್ವಾದಶ ರಾಶಿಗಳ ಮೇಲೆಯೂ ಪ್ರಭಾವ ಬೀರುತ್ತದೆ.
ಈ ಗ್ರಹಗಳ ಸ್ಥಾನ ಬದಲಾವಣೆಯಿಂದ ಕೆಲವು ರಾಶಿಗಳಿಗೆ ಶುಭಫಲ ಉಂಟಾದರೆ ಇನ್ನು ಕೆಲವು ರಾಶಿಗಳವರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಕೆಲವರು ಎಚ್ಚರಿಕೆಯಿಂದ ಇರಬೇಕಾಗಿರುತ್ತದೆ. ತುಲಾ ರಾಶಿಯವರ ಮಾಸ ಭವಿಷ್ಯ ಹೇಗಿರುತ್ತದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಗೃಹಲಕ್ಷ್ಮೀ ಈ ತಿಂಗಳ ಕ್ಯಾನ್ಸಲ್ ಆದವರ ಲಿಸ್ಟ್ ಬಿಡುಗಡೆ | ಗೃಹಲಕ್ಷ್ಮೀಯಲ್ಲಿ ಮತ್ತೊಂದು ಶಾ-ಕ್..
ತುಲಾ ರಾಶಿಯವರಿಗೆ ಈ ಮಾರ್ಚ್ ತಿಂಗಳಲ್ಲಿ ಮೂರು ಮಹತ್ವವಾದ ಸಲಹೆಗಳಿವೆ. ಇದರ ಪ್ರಕಾರ ಬಗ್ಗೆ ಅವರು ನಡೆದುಕೊಂಡಾಗ ಹೆಚ್ಚಿನ ಲಾಭವನ್ನು ಕಾಣಬಹುದು ಅಥವಾ ಇರುವ ಶುಭ ಘಳಿಗೆ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆದುಕೊಂಡು ಜೀವನವನ್ನು ಉತ್ತಮಗೊಳಿಸಿಕೊಳ್ಳಬಹುದು. ಸಮಸ್ಯೆಯಿಂದ ಹೊರ ಬರಬಹುದು ಮತ್ತು ಈ ಸಮಯವನ್ನು ಎಚ್ಚರಿಕೆಯಿಂದ ಜಾಗೃತೆಯಿಂದ ಕಳೆಯಬಹುದು. ಆ ಮೂರು ಮುಖ್ಯ ಬದಲಾವಣೆಗಳು ಯಾವುವೆಂದರೆ,
1. ತುಲಾ ರಾಶಿಯವರಿಗೆ ಹೆಚ್ಚಿನ ಲಾಭವಾಗುವ ಸೂಚನೆ ಇದೆ ಅನಿರೀಕ್ಷಿತ ಧನಲಾಭದ ಸಾಧ್ಯತೆ ಕಡಿಮೆ ಆದರೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ಜಾಗೃತಿಯಿಂದ ನಡೆದುಕೊಂಡರೆ ಹೆಚ್ಚು ಲಾಭ ಮಾಡಿಕೊಳ್ಳುವಂತಹ ಅವಕಾಶಗಳು ಈ ಸಮಯದಲ್ಲಿ ನಿಮ್ಮ ಪಾಲಿಗೆ ಬರುತ್ತಿವೆ.
ಈ ಸುದ್ದಿ ಓದಿ:- ಡಾಕ್ಟರ್ ಬದುಕಲ್ಲ ಅಂತ ಹೇಳಿದವರು ಈ ದೇವರ ತೀರ್ಥದಿಂದ ಬದುಕಿ ಉಳಿದಿದ್ದಾರೆ.!
ಆದರೆ ಇದಕ್ಕೆ ನೀವು ಇಷ್ಟೇ ಆಸಕ್ತಿಯನ್ನು ಕೂಡ ತೋರಬೇಕು ಇಲ್ಲವಾದಲ್ಲಿ ಕೈಗೆ ಬಂದದ್ದು ಬಾಯಿಗೆ ಬರದ ರೀತಿ ಅಥವಾ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೋ ಎನ್ನುವ ರೀತಿ ಆಗುತ್ತದೆ ಹಾಗಾಗಿ ಇಂತಹ ಅವಕಾಶಗಳನ್ನು ಸರಿಪಯೋಗಪಡಿಸಿಕೊಂಡು ಹಣಕಾಸಿನ ಪರಿಸ್ಥಿತಿ ಉತ್ತಮ ಮಾಡಿಕೊಳ್ಳಿ. ಅಥವಾ ನೀವೇನಾದರೂ ಹೊಸ ವ್ಯಾಪಾರ ಹೂಡಿಕೆ ಬಗ್ಗೆ ಯೋಚಿಸುತ್ತಿದ್ದರೆ ಮಾರ್ಚ್ ತಿಂಗಳ ಮೊದಲ ಎರಡು ವಾರಗಳು ನಿಮ್ಮ ಪಾಲಿಗೆ ಹೆಚ್ಚು ಅನುಕೂಲಕರವಾಗಿದೆ
* ನಿಮ್ಮ ಪಾಲಿಗೆ ಮತ್ತೊಂದು ಅತಿ ದೊಡ್ಡ ಲಾಭವೇನೆಂದರೆ ನಿಮ್ಮ ಮನೆಯಲ್ಲಿ ಇದ್ದ ಭಿನ್ನಾಭಿಪ್ರಾಯಗಳು ಪರಿಹಾರವಾಗಿ ನಿಮ್ಮ ಮನೆ ಮತ್ತು ಮನಸ್ಸಿನಲ್ಲಿ ಸಂತೋಷವೆನಿಸುತ್ತದೆ. ಬಹಳ ದಿನಗಳಿಂದ ನೀವು ತಂದೆ-ತಾಯಿ, ಅತ್ತೆ-ಮಾವ ಅಥವಾ ಸಹೋದರರು ಸ್ನೇಹಿತರು ಅಥವಾ ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾಗಿ ಅದು ವಿಪರೀತಕ್ಕೇರಿ ದೊಡ್ಡ ಕಂದಕವಾಗಿರುತ್ತದೆ. ಈಗ ಮಾರ್ಚ್ ತಿಂಗಳಿನಲ್ಲಿ ನಿಮ್ಮ ಸಮಸ್ಯೆಗಳು ಸರಿ ಹೋಗುವ ಲಕ್ಷಣಗಳು ಇವೆ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಂತೋಷವಾಗಿರಿ.
ಈ ಸುದ್ದಿ ಓದಿ:- ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ 2 ಲಕ್ಷ ಸಿಗುತ್ತೆ…|
* ಬಹಳ ಆಸೆಪಟ್ಟು ನೀವು ಆರಂಭಿಸಿದ್ದ ಅನೇಕ ವಿಚಾರಗಳು ಅರ್ಧಕ್ಕೆ ನಿಂತಿದ್ದರೆ ಅಥವಾ ನಿಮಗೆ ತೊಂದರೆ ಆಗುತ್ತಿದ್ದ ಯಾವುದೋ ಸಮಸ್ಯೆಯಲ್ಲಿ ಸಿಲುಕಿ ನೀವು ಇದರಿಂದ ತಪ್ಪಿಸಿಕೊಳ್ಳಲು ಆಗುವುದೇ ಇಲ್ಲ ಎಂದು ನರಳುತ್ತಿದ್ದರೆ ಈಗ ಅದಕ್ಕೆ ಮುಕ್ತಿ ಹಾಡುವ ಸಮಯ. ಮಾರ್ಚ್ ತಿಂಗಳ ಮೂರನೇ ವಾರದ ನಂತರ ನಿಮಗೆ ಇಂತಹ ಜಂಜಾಟಗಳಿಂದ ಮುಕ್ತಿ ಸಿಗಲಿದೆ.
ಅದು ಸಾಲ ಇರಬಹುದು ಅಥವಾ ಕೆಟ್ಟ ಚಟಗಳು ಇರಬಹುದು ಈ ರೀತಿ ನಿಮ್ಮ ಬದುಕಿಗೆ ಬೇಡವಾಗದ ಸಂಗತಿಗಳಿಂದ ನೀವು ದೂರ ಆಗುವಂತಹ ಸಂದರ್ಭಗಳು ಈ ಮಾರ್ಚ್ ತಿಂಗಳಲ್ಲಿ ಸಿಗುತ್ತಿದೆ. ಪ್ರತಿನಿತ್ಯವು ತಪ್ಪದೇ ನಿಮ್ಮ ಇಷ್ಟದೈವ ಕುಲದೇವರನ್ನು ಪ್ರಾರ್ಥಿಸಿ ಎಲ್ಲರಿಗೂ ಶುಭವಾಗಲಿ.