ನಮ್ಮ ಹಿಂದೂ ಸಂಪ್ರದಾಯದಲ್ಲಿ ಸಂಖ್ಯೆಗಳಿಗೆ ಮಹತ್ವದ ಸ್ಥಾನ ಇದೆ. ಅದರಲ್ಲೂ ಸಂಖ್ಯೆ ಏಳು ಎನ್ನುವುದನ್ನು ಅನೇಕರು ಲಕ್ಕಿ ನಂಬರ್ ಎಂದು ಭಾವಿಸಿದ್ದಾರೆ. ಇದು ಅನೇಕರಿಗೆ ಅದೃಷ್ಟದ ಸಂಖ್ಯೆ ಆಗಿದೆ ಏಳು ಎನ್ನುವುದು ಒಂದು ಪ್ರಬಲ ಸಂಖ್ಯೆ ಆಗಿದ್ದು ಇದು ಬಹಳ ಶಕ್ತಿ ಹೊಂದಿದೆ. ಅದಕ್ಕಾಗಿ ಮದುವೆ ಮಾಡುವಾಗ ಒಂದು ಮುಖ್ಯ ಆಚರಣೆಯಾಗಿ ಸಪ್ತಪದಿಯಲ್ಲಿ ಏಳು ಹೆಜ್ಜೆಗಳನ್ನು ಹಾಕಿಸುವುದು.
ಆಕಾಶದಲ್ಲಿ ಮೂಡುವ ಕಾಮನಬಿಲ್ಲು ಏಳು ಬಣ್ಣದಲ್ಲಿರುತ್ತದೆ, ಭೂಮಿ ಮೇಲೆ ಸಪ್ತಸಾಗರಗಳಿವೆ ಮತ್ತು ಭೂಮಂಡಲದಲ್ಲಿ ಏಳು ನಕ್ಷತ್ರಪುಂಜಗಳಿವೆ, ಸಪ್ತ ಋಷಿಗಳು ಇದ್ದಾರೆ, ಮನುಷ್ಯನಿಗೆ ಏಳು ಜನ್ಮಗಳಿರುತ್ತವೆ ಎಂದು ನಂಬಲಾಗಿದೆ. ಹೀಗೆ ಏಳು ಎನ್ನುವ ಸಂಖ್ಯೆಗಿರುವ ಮಹತ್ವವನ್ನು ಬಹುತೇಕ ಎಲ್ಲರೂ ತಿಳಿದಿದ್ದಾರೆ.
ಈ ಸುದ್ದಿ ಓದಿ:- ಗೃಹಲಕ್ಷ್ಮೀ ಈ ತಿಂಗಳ ಕ್ಯಾನ್ಸಲ್ ಆದವರ ಲಿಸ್ಟ್ ಬಿಡುಗಡೆ | ಗೃಹಲಕ್ಷ್ಮೀಯಲ್ಲಿ ಮತ್ತೊಂದು ಶಾ-ಕ್..
ವಾಸ್ತು ಶಾಸ್ತ್ರದಲ್ಲೂ ಕೂಡ 7 ಎನ್ನುವ ಸಂಖ್ಯೆಗೆ ಮಹತ್ವದ ಸ್ಥಾನವಿದೆ ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳು ಮಾತವಲ್ಲದೇ ಮನೆಯಲ್ಲಿರುವ ವಸ್ತುಗಳ ಮೇಲೆ ಕೂಡ ವಾಸ್ತು ನಿರ್ಧಾರ ಆಗುತ್ತದೆ. ಈ ರೀತಿ ವಿಷಯದಲ್ಲಿ ಏಳು ಅಶ್ವಗಳು ಇರುವ ಫೋಟೋ ಹಾಕುವುದ ಮೇಲೆ ಖಂಡಿತವಾಗಿಯೂ ಎಲ್ಲರ ಗಮನ ಹೋಗುತ್ತದೆ.
ನಾವು ಮನೆಯಲ್ಲಿ ಮಾತ್ರವಲ್ಲದೆ ವ್ಯಾಪಾರ ಸ್ಥಳಗಳಲ್ಲಿ ಕಚೇರಿಗಳಲ್ಲಿ ಈ ರೀತಿ ಫೋಟೋಗಳನ್ನು ಕಾಣುತ್ತೇವೆ ಇದನ್ನು ಯಾಕೆ ಹಾಕುತ್ತಾರೆ ಎನ್ನುವುದರ ತಿಳಿದುಕೊಳ್ಳುವುದರ ಜೊತೆಗೆ ಇದಕೆಷ್ಟು ಶಕ್ತಿ ಇದೆ ಎನ್ನುವುದನ್ನು ತಿಳಿದುಕೊಂಡು ಸರಿಯಾದ ದಿಕ್ಕಿನಲ್ಲಿ ಹಾಕಿದರೆ ಇದರ ಶಕ್ತಿ ಇನ್ನೂ ಹೆಚ್ಚಾಗುತ್ತದೆ ಹಾಗಾಗಿ ಈ ಸಂಗತಿ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಡಾಕ್ಟರ್ ಬದುಕಲ್ಲ ಅಂತ ಹೇಳಿದವರು ಈ ದೇವರ ತೀರ್ಥದಿಂದ ಬದುಕಿ ಉಳಿದಿದ್ದಾರೆ.!
ಹೌದು ಈ ಮಾತು ಅಕ್ಷರಶಃ ಸತ್ಯ. ಸೂರ್ಯನ ರಥವು ಏಳು ಅಶ್ವಗಳಿಂದ ನಡೆಯುತ್ತದೆ ಹಾಗಾಗಿ ಈ ಫೋಟೋಗಳನ್ನು ಸ್ಪೂರ್ತಿಗಾಗಿ ಜನರು ಮನೆಯಲ್ಲಿ ಹಾಕಿಕೊಳ್ಳುತ್ತಾರೆ. ಇಷ್ಟೇ ಅಲ್ಲದೆ ಇದನ್ನು ಹಾಕುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ, ಮನೆಯ ಜನರ ಮನಸ್ಸಿನಲ್ಲಿ ಉತ್ಸಾಹ ಬರುತ್ತದೆ, ಕೆಲಸ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಸಾಗುತ್ತದೆ
ಆ ಮನೆಯ ವಾತಾವರಣವೇ ಬಹಳ ಚುಳುಕಾಗಿರುತ್ತದೆ ಎಂದು ನಂಬಲಾಗಿದೆ ಮತ್ತು ಇದನ್ನು ಸರಿಯಾದ ದಿಕ್ಕಿನಲ್ಲಿ ಹಾಕಿದಾಗ ಇಂತಹದ್ದೇ ಫಲವನ್ನು ಖಂಡಿತವಾಗಿಯೂ ಕೊಡುತ್ತದೆ. ಆದರೆ ಇದನ್ನು ಹಾಕುವಾಗ ಕೆಲ ನಿಯಮಗಳು ಇವೆ. ಈ ಏಳು ಅಶ್ವಗಳಿಗೆ ಲಗಾಮು ಹಾಕಿರಬಾರದು, ಅಶ್ವಗಳ ಮುಖದಲ್ಲಿ ಉಗ್ರತೆ ಇರದೇ ಶಾಂತವಾಗಿ ಅಥವಾ ಸಂತೋಷವಾಗಿ ಇರುವಂತೆ ಇರಬೇಕು.
ಈ ಸುದ್ದಿ ಓದಿ:- ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ 2 ಲಕ್ಷ ಸಿಗುತ್ತೆ…|
ಏಳು ಕುದುರೆಗಳ ಮುಖವೂ ಕೂಡ ಸ್ಪಷ್ಟವಾಗಿ ಗೋಚರಿಸಬೇಕು, ಕಡ್ಡಾಯವಾಗಿ ಕುದುರೆಗಳು ಓಡುತ್ತಿರುವ ಭಂಗಿಯಲ್ಲಿಯೇ ಇರಬೇಕು. ಮನೆಯಲ್ಲಿ ಈ ಏಳು ಅಶ್ವಗಳ ಫೋಟೋ ಹಾಕುವುದಾದರೆ ಅದನ್ನು ಹಾಲ್ ನಲ್ಲಿಯೇ ಹಾಕಬೇಕು ಮತ್ತು ಪೂರ್ವ ದಿಕ್ಕಿನಲ್ಲಿಯೇ ಹಾಕಬೇಕು ಆದರೆ ಕಚೇರಿ ಅಥವಾ ವ್ಯಾಪಾರ ಸ್ಥಳಗಳಲ್ಲಿ ಈ ಫೋಟೋ ಹಾಕುವುದಾದರೆ ಅದನ್ನು ದಕ್ಷಿಣದ ಗೋಡೆ ಮೇಲೆ ಹಾಕಿ.
ಪ್ರತಿನಿತ್ಯವೂ ಕೂಡ ಈ ಏಳು ಅಶ್ವಗಳ ದರ್ಶನ ಮಾಡುತ್ತಿದ್ದರೆ ಎಲ್ಲಾ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ನಿರೀಕ್ಷೆಗಿಂತ ಹೆಚ್ಚಿನ ಲಾಭಗಳು ದೊರೆಯುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆದರೆ ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ಈ ಏಳು ಅಶ್ವಗಳ ಫೋಟೋ ಹಾಕಬೇಡಿ ಇದು ಸಂಬಂಧಗಳಲ್ಲಿ ಕಹಿ ತರುತ್ತದೆ ಎಂದು ಹೇಳುತ್ತಾರೆ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಂಡು ಅವರಿಗೂ ಈ ಮಾಹಿತಿ ತಿಳಿಯುವಂತೆ ಮಾಡಿ.