ಒಬ್ಬ ವ್ಯಕ್ತಿ ಕನಿಷ್ಠ 6-8 ಗಂಟೆ ನಿದ್ರೆ ಮಾಡಬೇಕು ಎಂದು ವೈದ್ಯಲೋಕ ಹಾಗೂ ಆಯುರ್ವೇದ ಹೇಳುತ್ತದೆ ಮತ್ತು ಮಕ್ಕಳು ಹಾಗೂ ವೃದ್ಧರಿಗಾದರೆ ಈ ಅವಧಿ ಇನ್ನು ಹೆಚ್ಚು. ಇಲ್ಲವಾದಲ್ಲಿ ನೂರಾರು ಬಗೆಯ ದೈಹಿಕ ರೋಗಗಳು ಮಾತ್ರವಲ್ಲದೆ ಮಾನಸಿಕ ಖಿನ್ನತೆಗಳು ಕೂಡ ಕಾಡುತ್ತವೆ. ನಿದ್ರೆಗೊಮ್ಮೆ ನಿತ್ಯ ಮರ.ಣ ಎನ್ನುವುದು ಭೌತಿಕ ಜಗತ್ತಿಗೆ ಬಹಳ ಅನ್ವಯವಾಗುವ ಮಾತು ಯಾಕೆಂದರೆ ಮಲಗಿ ಎದ್ದ ತಕ್ಷಣ ಮನಸ್ಸು ಬಹಳ ಆಕ್ಟಿವ್ ಆಗುತ್ತದೆ.
ಹೀಗೆ ತನ್ನ ಜೀವಿತಾವಧಿಯ 30% ಗಿಂತ ಹೆಚ್ಚು ಭಾಗ ನಿದ್ರೆಯಲ್ಲಿ ಮನುಷ್ಯ ಕಳೆಯುವುದರಿಂದ ಖಂಡಿತವಾಗಿಯೂ ಇದು ಬಹಳ ಮುಖ್ಯ ವಿಷಯ ಎಂದು ನಂಬಬಹುದು, ಹೀಗಿದ್ದಾಗ ಇದರ ಬಗ್ಗೆ ನಿಯಮಗಳನ್ನು ಮಾಡಲಾಗಿರುತ್ತದೆ. ಮನುಷ್ಯ ಮಲಗುವ ದಿಕ್ಕಿಗೆ ಸಂಬಂಧಪಟ್ಟ ಹಾಗೆ ಖಂಡಿತಾ ಕೆಲವು ಶಾಸ್ತ್ರ ಸಂಪ್ರದಾಯಗಳಿವೆ.
ಯಾವ ರಾಶಿಯವರು ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು, ಹಿರಿಯರು ಯಾವ ದಿಕ್ಕಿನಲ್ಲಿ ಮಲಗಬೇಕು, ಯಾರು ಯಾವ ದಿಕ್ಕಿನಲ್ಲಿ ಮಲಗಲೇಬಾರದು ಇತ್ಯಾದಿ ನಿಯಮಗಳಿವೆ. ಇದನ್ನು ಪುರಾಣಗಳಲ್ಲಿಯೂ ಉಲ್ಲೇಖಿಸಲಾಗಿದೆ ಮತ್ತು ಇದಕ್ಕೆ ಅದರದ್ದೇ ಆದ ಕಾರಣಗಳು ಇವೆ. ಇಂದು ಈ ಅಂಕಣದಲ್ಲಿ ಇದರಲ್ಲೊಂದು ಮುಖ್ಯ ವಿಷಯದ ಕುರಿತು ಕೆಲ ಪ್ರಮುಖ ಅಂಶಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಈ ಸುದ್ದಿ ಓದಿ:- ಭಾರತ್, ಇಂಡಿಯನ್, HP ಯಾವುದೇ ಗ್ಯಾಸ್ ಆದರೂ ವಾಟ್ಸಾಪ್ ನಲ್ಲಿಯೇ ಬುಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!
ಉತ್ತರ ದಿಕ್ಕಿನಲ್ಲಿ ಮಲಗುವುದರಿಂದ ಆ ಮನುಷ್ಯನ ಮನಸ್ಸು ಹಾಗೂ ದೇಹದ ಮೇಲೆ ಗಂಭೀರವಾಗಿ ಕೆಟ್ಟ ಪರಿಣಾಮ ಉಂಟಾಗುತ್ತದೆ. ಪುರಾಣಗಳಲ್ಲಿಯೂ ಇದಕ್ಕೆ ಉಲ್ಲೇಖ ಇದೆ. ಗಣೇಶನ ತಲೆಯನ್ನು ಕೋಪದಲ್ಲಿ ಕಡಿದ ಶಿವನು ಉತ್ತರ ದಿಕ್ಕಿನಲ್ಲಿ ತಲೆ ಹಾಕಿ ಮಲಗಿರುವ ಪ್ರಾಣಿಯ ಶಿರಾ ಕತ್ತರಿಸಿ ಎಂದು ಆಜ್ಞೆ ಮಾಡಿದ್ದರು.
ಉತ್ತರ ದಿಕ್ಕಿನಲ್ಲಿ ಆನೆ ತಲೆ ಹಾಕಿ ಮಲಗಿದ್ದರಿಂದ ಆನೆಯ ತಲೆಯನ್ನು ಕತ್ತರಿಸಿ ತರಲಾಯಿತು ನಂತರ ಮಹಾ ಗಣಪತಿಗೆ ಜೋಡಿಸಲಾಯಿತು ಎಂದು ಹೇಳಲಾಗುತ್ತದೆ. ಹೀಗಾಗಿ ಉತ್ತರ ದಿಕ್ಕು ಯಾರಿಗೂ ಅಷ್ಟೊಂದು ಸೂಕ್ತವಲ್ಲ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ವೈಜ್ಞಾನಿಕ ಸಬೂಬು ಕೊಡುವುದಾದರೆ ಕಾಂತೀಯ ಧ್ರುವಗಳ ಕಾಂತಿಯ ತರಂಗವು ಉತ್ತರ ದಿಕ್ಕಿನಿಂದ ದಕ್ಷಿಣದ ಕಡೆಗೆ ಬರುತ್ತದೆ.
ನಮ್ಮ ದೇಹವು ಕೂಡ ಅಯಸ್ಕಾತದಂತೆ ಎರಡು ಧ್ರುವಗಳನ್ನು ಹೊಂದಿದೆ ನೆತ್ತಿ ಮೇಲಿರುವುದು ಉತ್ತರ ಭಾಗವಾದರೆ ಕಾಲಿನ ಕೆಳಗೆ ಇರುವುದು ದಕ್ಷಿಣದ ಭಾಗ. ನಾವು ಉತ್ತರದ ಕಡೆಗೆ ತಲೆ ಇಟ್ಟು ಮಲಗಿದರೆ ನಿಯಮದ ಪ್ರಕಾರವಾಗಿ ಎರಡು ವಿರುದ್ಧ ದಿಕ್ಕಿನ ಧ್ರುವಗಳು ಆಕರ್ಷಿಸಲ್ಪಡುತ್ತದೆ. ನಿದ್ರೆ ಮಾಡುವಾಗ ನಮ್ಮ ದೇಹದಲ್ಲೂ ಕೂಡ ಹಲವಾರು ರೇಡಿಯೇಷನ್ ಗಳು ಉತ್ಪತ್ತಿ ಆಗಿರುತ್ತವೆ.
ಈ ಸುದ್ದಿ ಓದಿ:- ಮನೆಯಲ್ಲಿರುವ 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಕೇಂದ್ರ ಸರ್ಕಾರ ರೂ.1000 ಪಿಂಚಣಿ ಕೊಡುವ ಯೋಜನೆ.! ಯಾರು ಪಡೆಯಬಹುದು, ಏನೆಲ್ಲ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ನಿದ್ರೆ ಸಮಯದಲ್ಲೂ ಅಲ್ಫಾ, ಬೀಟಾ, ಗಾಮ ತರಂಗಗಳು ಬಿಡುಗಡೆ ಆಗುತ್ತಿರುತ್ತವೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇವೆರಡರ ಸಂಘರ್ಷ ಏರ್ಪಡುವುದು ಮನುಷ್ಯನಿಗೆ ಮಾನಸಿಕವಾಗಿ ಒತ್ತಡವನ್ನುಂಟು ಮಾಡುತ್ತದೆ ಮತ್ತು ಮಾನಸಿಕವಾಗಿ ನಂತರ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ ಆತನ ಪರಿಸ್ಥಿತಿಯನ್ನು ಕೆಡಿಸುತ್ತದೆ.
ಮಾನಸಿಕ ಆರೋಗ್ಯ ಎನ್ನುವುದು ಬಹಳ ಮುಖ್ಯ ವ್ಯಕ್ತಿ. ಮಾನಸಿಕವಾಗಿ ಸಂತೋಷವಾಗಿದ್ದಾಗ ಮಾತ್ರ ತನ್ನ ದಿನನಿತ್ಯದ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗಿಯಾಗುತ್ತಾನೆ. ದಿನೇ ದಿನೇ ಈ ರೀತಿ ಅದರಲ್ಲೂ ನಿದ್ರೆಯ ವಿಷಯದಲ್ಲಿ ಹಾನಿ ಮಾಡಿಕೊಳ್ಳುವುದರಿಂದ ಒಂದೊಂದು ದಿನ ಅದು ಆತನ ಉದ್ಯೋಗ ಕುಟುಂಬ ಹಣಕಾಸಿನ ವಿಚಾರ ಇದೆಲ್ಲದರ ಮೇಲು ಪರಿಣಾಮ ಬೀರುತ್ತದೆ. ಇದರಿಂದ ಕೂಡ ಉತ್ತರ ದಿಕ್ಕಿಗೆ ತಲೆ ಹಾಕುವುದು ಮಲಗುವುದು ಮನೆಯಲ್ಲಿ ಯಾರಿಗೂ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.