ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್ ಖಾಲಿಯಾದರೆ ಬುಕ್ ಮಾಡಲು ಕರೆ ಮಾಡುವ ಮೂಲಕ ಅಥವಾ ಆನ್ಲೈನ್ ಮೂಲಕ ಬುಕ್ ಮಾಡುವ ವಿಧಾನವನ್ನು ಗ್ರಾಹಕರು ಬಳಸುತ್ತಾರೆ. ಅದಕ್ಕಿಂತಲೂ ಸರಳವಾಗಿಯೇ ನೀವು ದಿನನಿತ್ಯ ಬಳಸುವ ವಾಟ್ಸಾಪ್ ನಲ್ಲಿಯೇ ಬಹಳ ಈಸಿಯಾಗಿ ಸಿಲಿಂಡರ್ ಬುಕಿಂಗ್ ಮಾಡಬಹುದು.
ಬಹಳ ವರ್ಷಗಳಿಂದಲೂ ಕೂಡ ವಾಟ್ಸಪ್ ಮೂಲಕ ಸಿಲಿಂಡರ್ ಬುಕ್ ಮಾಡುವ ವಿಧಾನ ಇದೆ ಆದರೆ ಅನೇಕರಿಗೆ ಈ ಮಾಹಿತಿ ತಿಳಿದಿಲ್ಲ. ಹಾಗಾಗಿ ಇಂದು ನಾವು ಈ ಅಂಕಣದಲ್ಲಿ ಯಾವ ರೀತಿಯಾಗಿ ಯಾವ ಕಂಪನಿಯವರು ಹೇಗೆ ವಾಟ್ಸಪ್ ಮೂಲಕ ಸಿಲಿಂಡರ್ ಬುಕ್ಕಿಂಗ್ ಮಾಡಬಹುದು ಎನ್ನುವ ವಿಧಾನದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.
1. HP ಗ್ರಾಹಕರು:-
* ಮುಖ್ಯವಾದ ಕಂಡಿಷನ್ ಏನೆಂದರೆ ನೀವು ಗ್ಯಾಸ್ ಸಿಲೆಂಡರ್ ಖರೀದಿ ಮಾಡುವಾಗ ನೀಡಿರುವ ಮೊಬೈಲ್ ಸಂಖ್ಯೆನಿಂದ ಮಾತ್ರ ಬುಕಿಂಗ್ ಮಾಡಲು ಸಾಧ್ಯ ಹಾಗಾಗಿ ಆ ಮೊಬೈಲ್ ನಂಬರ್ ನಲ್ಲಿ ವಾಟ್ಸಪ್ ಅಕೌಂಟ್ ಇರಬೇಕು.
* Hindusthan petroleum ಬಿಡುಗಡೆ ಮಾಡಿರುವ ವಾಟ್ಸಾಪ್ ಸಂಖ್ಯೆಯಾದ 9222201122 ನಿಮ್ಮ ಮೊಬೈಲ್ ಫೋನ್ನಲ್ಲಿ HP Gas cylinder booking ಎಂದು ಸೇವ್ ಮಾಡಿ ಇಟ್ಟುಕೊಳ್ಳಿ
* ವಾಟ್ಸಾಪ್ ಗೆ ಹೋಗಿ ಈ ಸಂಖ್ಯೆಗೆ Hi ಎಂದು ಸಂದೇಶ ಕಳುಹಿಸಿ, HP ಕಂಪನಿಯಿಂದ Please Send any of the below keywords to get help SUBSIDY/QUOTA/LPGID/BOOK ಎಂದು ರಿಪ್ಲೈ ಬರುತ್ತದೆ.
* BOOK ಎಂದು ಮತ್ತೆ ರಿಪ್ಲೈ ಮಾಡಿ, ತಕ್ಷಣವೇ HP ಇಂದ Consumer Name, Consumer No ಬರುತ್ತದೆ ನಿಮ್ಮ ಹೆಸರು ಹಾಗೂ ನಂಬರ್ ಸರಿಯಾಗಿದೆ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ಇದರೊಂದಿಗೆ Please Send Y to Confirm Booking ಎಂದು ಇರುತ್ತದೆ Y ಎಂದು ಟೈಪ್ ಮಾಡಿ ಕಳುಹಿಸಿ.
* ನಿಮ್ಮ ಬುಕಿಂಗ್ ಸಕ್ಸಸ್ ಆಗಿದ್ದರೆ Order Ref.No, Application Code, Expected delivery date, amount ಎಲ್ಲ ಮಾಹಿತಿಯು ಇರುತ್ತದೆ.
2. Indian Gas
* Indian Gas ನಲ್ಲಿ ಎರಡು ವಿಧಾನವಾಗಿ ಬುಕ್ಕಿಂಗ್ ಮಾಡಬಹುದು
* 7588888824 ಇದು ಇಂಡಿಯನ್ ಗ್ಯಾಸ್ ವಾಟ್ಸಾಪ್ ನಂಬರ್ ಇದನ್ನು ಸೇವ್ ಮಾಡಿ ಇಟ್ಟುಕೊಂಡು ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ನಿಂದ (RMN) REFILL ಎಂದು ಟೈಪ್ ಮಾಡಿ ಕಳುಹಿಸಿ.
* ಒಂದು ವೇಳೆ ನೀವು ಬೇರೆಯವರ ಇಂಡಿಯನ್ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಕೊಡಬೇಕಿದ್ದರೆ ಅಥವಾ ನೀವೇ ಬೇರೆ ಮೊಬೈಲ್ ನಂಬರ್ ನಿಂದ ಬುಕ್ ಮಾಡಬೇಕಿದ್ದರೆ REFILL#(17 Digit Consumer ID No.) ಟೈಪ್ ಮಾಡಿ ಕಳುಹಿಸಿದರೆ ಸಿಲಿಂಡರ್ ಬುಕ್ ಆಗುತ್ತದೆ.
3. Bharath Gas
* ಭಾರತ್ ಗ್ಯಾಸ್ ಗ್ರಾಹಕರು ವಾಟ್ಸಪ್ ನಂಬರ್ 1800224344 ಭಾರತ್ ಗ್ಯಾಸ್ ಎಂದು ಸೇವ್ ಮಾಡಿ ಇಟ್ಟುಕೊಳ್ಳಿ.
* ಭಾರತ್ ಗ್ಯಾಸ್ ಗೂ ಕೂಡ ರಿಜಿಸ್ಟರ್ ಮೊಬೈಲ್ ನಂಬರ್ ನಿಂದಲೇ ಬುಕಿಂಗ್ ಮಾಡಬೇಕು
* Hi ಎಂದು ಸಂದೇಶ ಕಳುಹಿಸಿದರೆ ರಿಪ್ಲೈ ಬರುತ್ತದೆ
* ರಿಪ್ಲೈ ಬಂದ ನಂತರ BOOK ಎಂದು ಟೈಪ್ ಮಾಡಿದರೆ ಸಿಲಿಂಡರ್ ಬುಕ್ಕಿಂಗ್ ಆಗಿ ಕನ್ಫರ್ಮೇಶನ್ ಮೆಸೇಜ್ ಬರುತ್ತದೆ. ಈ ರೀತಿಯಾಗಿ ನೀವು ವಾಟ್ಸಪ್ ನಲ್ಲಿಯೇ ಸಿಲಿಂಡರ್ ಬುಕ್ಕಿಂಗ್ ಮಾಡಬಹುದು.