* ನಾವು ಹೊಲಿಗೆ ಹಾಕಲು ಸೂಜಿಗಳನ್ನು ಉಪಯೋಗಿಸುತ್ತೇವೆ. ಹರಿದ ಬಟ್ಟೆಗಳನ್ನು ಹೊಲಿಯಲು ಅಥವಾ ಬಟನ್ ಗಳನ್ನು ಹಾಕಲು ಅಥವಾ ಇನ್ನೇನೋ ಕಸೂತಿ ಮಾಡಲು ಈ ರೀತಿ ಸೂಜಿಗೆ ದಾರ ಪೋಣಿಸಲೇಬೇಕು. ಕೆಲವರಿಗೆ ಕಣ್ಣು ದೃಷ್ಟಿ ಕಡಿಮೆ ಇರುವುದರಿಂದ ಅಥವಾ ವಯಸ್ಸಾದ ಕಾರಣ ಅಥವಾ ನಡುಕ ಇರುವುದರಿಂದ ಸೂಜಿ ದಾರ ಪೋಣಿಸಲು ಕಷ್ಟಪಡುತ್ತಾರೆ.
ಅವರು ಸುಲಭವಾಗಿ ಹೇಗೆ ಯಾರ ಸಹಾಯವಿಲ್ಲದೆ ಇದನ್ನು ಮಾಡಬಹುದು ಎಂದರೆ ಮೊದಲಿಗೆ ಪೊರಕೆಯಲ್ಲಿ ಒಂದು ಎಳೆಯಷ್ಟು ಕಡ್ಡಿಯನ್ನು ತೆಗೆದುಕೊಳ್ಳಿ ಅದನ್ನು ಫೋಲ್ಡ್ ಮಾಡಿ ಫೋಲ್ಡ್ ಮಾಡಿರುವ ಕೆಳಗಿನ ತುದಿಗೆ ಒಂದು ಸ್ಟಿಕ್ಕರ್ ಅನ್ನು ರೌಂಡ್ ಆಗಿ ಅಂಟಿಸಿ ಲಾಕ್ ಮಾಡಿ ಈಗ ಆ ಕಡ್ಡಿಯನ್ನು ಸೂಜಿ ಕಣ್ಣಿನಲ್ಲಿ ಪೊಲಿಸಿ ಮತ್ತು ಕಡ್ಡಿಯ ತುದಿಗೆ ದಾರವನ್ನು ಹಾಕಿ ಸೂಜಿ ಕಣ್ಣಿನಿಂದ ಎಳೆದುಕೊಳ್ಳಿ ಬಹಳ ಈಸಿಯಾಗಿ ದಾರ ಬರುತ್ತದೆ.
* ಕೆಲವೊಂದು ಸಮಯದಲ್ಲಿ ಜನ ಜಾಸ್ತಿ ಇದ್ದಾಗ ಅಥವಾ ನಾವು ಹೊರಗೆ ಹೋಗಿದ್ದಾಗ, ಹಾಸ್ಟೆಲ್ ಗಳಲ್ಲಿ ಇರುವವರು ಚಪಾತಿ ಮಾಡಲು ಲಟ್ಟಣಿಗೆ ಮಣೆ ಹುಡುಕಲು ಸಾಧ್ಯವಿಲ್ಲ. ಅರ್ಜೆಂಟಾಗಿ ಹೆಚ್ಚಿಗೆ ಚಪಾತಿ ಮಾಡಬೇಕಾದಾಗ ಈ ಟಿಪ್ ಫಾಲೋ ಮಾಡಿ.
ಎಣ್ಣೆ ಕಾಲಿ ಆದಮೇಲೆ ಎರಡು ಎಣ್ಣೆ ಕವರ್ ಗಳನ್ನು ಅಗಲವಾಗಿ ಕಟ್ ಮಾಡಿಕೊಳ್ಳಿ ಈಗ ಒಂದು ತಟ್ಟೆಯನ್ನು ನೆಲದ ಮೇಲೆ ಮಗಚಿ ಇಡಿ ಅದರ ಮೇಲೆ ಒಂದು ಎಣ್ಣೆ ಕವರ್ ಇಟ್ಟು ಚಪಾತಿ ಮಾಡಲು ಚಪಾತಿ ಹಿಟ್ಟಿನ ಉಂಡೆಯನ್ನು ಇಡಿ ಮತ್ತು ಅದರ ಮೇಲೆ ಇನ್ನೊಂದು ಎಣ್ಣೆ ಕವರ್ ಹಾಕಿ ಕ್ಲೋಸ್ ಮಾಡಿ ಮೇಲೆ ಮತ್ತೊಂದು ತಟ್ಟೆಯನ್ನು ನೇರವಾಗಿ ಹಾಕಿ ಸುತ್ತಲು ಪ್ರೆಸ್ ಮಾಡುತ್ತಾ ಬನ್ನಿ ಚಪಾತಿ ಆಕಾರದಲ್ಲಿ ಬಂದಿರುತ್ತದೆ ಬಹಳ ಬೇಗವೂ ಕೂಡ ಆಗುತ್ತದೆ.
* ಹೆಣ್ಣು ಮಕ್ಕಳು ಗ್ಯಾಸ್ ಮೇಲೆ ಹಾಲಿಟ್ಟು ಅಥವಾ ಟೀ ಕಾಫಿ ಇಟ್ಟು ಸಾಂಬಾರ್ ಹಿಟ್ಟು ಮರೆಯುವುದು ಇದ್ದೇ ಇದೆ. ಈ ರೀತಿ ಸುಟ್ಟು ಕರಕಲಾದ ಪಾತ್ರೆಯನ್ನು ಮತ್ತೆ ನೋಡಲು ಬೇಜಾರ್ ಆಗುತ್ತದೆ. ಹಾಗಾಗಿ ಕೆಲವರೂ ಅದನ್ನು ಬಿಸಾಕಿ ಬಿಡುತ್ತಾರೆ. ಇನ್ನು ಮುಂದೆ ಆ ರೀತಿ ಮಾಡಬೇಡಿ ನಾವು ಹೇಳುವ ಟಿಪ್ ನಿಂದ ನಿಮ್ಮ ಪಾತ್ರೆ ಹೊಸದರಂತೆ ಪಳಪಳ ಹೊಳೆಯುವ ಹಾಗೆ ಮಾಡಬಹುದು.
ಮೊದಲಿಗೆ ಹಿಂದಿನ ದಿನ ರಾತ್ರಿಯೇ ವಿನೆಗರ್ ಅಥವಾ ಒಂದು ಹೋಳು ನಿಂಬೆರಸವನ್ನು ಹಾಕಿ ಪಾತ್ರೆ ಪೂರ್ತಿ ಹರಡುವಂತೆ ಸ್ಪ್ರೆಡ್ ಮಾಡಿ ಈಗ ಮರುದಿನ ಒಂದು ಚಮಚ ಅಡುಗೆ ಸೋಡಾ ಅರ್ಧ ಚಮಚ ಉಪ್ಪು ಹಾಗೂ ಒಂದು ಚಮಚ ಬಟ್ಟೆ ಪೌಡರ್ ಅಥವಾ ಲಿಕ್ವಿಡ್ ಜೆಲ್ ಹಾಕಿ ಪಾತ್ರೆಗೆ 3/4 ಭಾಗ ಬರುವಷ್ಟು ನೀರನ್ನು ಹಾಕಿ ಗ್ಯಾಸ್ ಸ್ಟವ್ ಮೇಲೆ ಇಟ್ಟು ಚೆನ್ನಾಗಿ ಕುದಿಸಿ ಕುದಿಯುವಾಗ ಒಂದು ಸ್ಟೀಲ್ ಸೌಟಿನ ಸಹಾಯದಿಂದ ಸುತ್ತಲು ಕ್ಲೀನ್ ಮಾಡುತ್ತೀರಿ.
ಕರೆಯಲ್ಲಾ ಬಿಟ್ಟು ಹೋಗುತ್ತದೆ ನಂತರ ಸ್ಟವ್ ಆಫ್ ಮಾಡಿ ಕೆಳಗೆ ಇಳಿಸಿ. ಈಗಲೂ ಕೂಡ ಸ್ಟೀಲ್ ಸೌಟಿನ ಅಥವಾ ಹಲ್ಲೆಯ ಸಹಾಯದಿಂದ ಸುತ್ತಲೂ ಉಜ್ಜುತ್ತಿರಿ. ಕಪ್ಪಗೆ ಹಿಡಿದಿದ್ದ ಕಲೆಗಳು ಬಂದುಬಿಡುತ್ತವೆ ನಂತರ ಈ ನೀರನ್ನು ಬೇರೊಂದು ಪಾತ್ರೆಗೆ ಹಾಕಿ ಅಲ್ಪಸ್ವಲ್ಪ ಕಲೆ ಉಳಿದಿದ್ದರೆ ಸ್ಟೀಲ್ ಸ್ಕ್ರಬ್ ನಿಂದ ಚೆನ್ನಾಗಿ ಉಜ್ಜಿ ನಿಮ್ಮ ಪಾತ್ರೆ ಹೊಸದರಂತೆ ಹೊಳೆಯುತ್ತದೆ. ಇದಕ್ಕೆ ಬಳಸಿದ್ದ ನೀರನ್ನು ವೇಸ್ಟ್ ಮಾಡದೆ ಬಾತ್ರೂಮ್ ಟೈಲ್ಸ್ ಕ್ಲೀನ್ ಮಾಡಲು ಅಥವಾ ಸಿಂಕ್ ಕ್ಲೀನ್ ಮಾಡಲು ಉಪಯೋಗಿಸಬಹುದು.