ಕನ್ಯಾ ರಾಶಿಯು ರಾಶಿ ಚಕ್ರದಲ್ಲಿ ಐದನೇ ರಾಶಿಯಾಗಿದ್ದು, ಉತ್ತರಾಷಾಢ ನಕ್ಷತ್ರದ 2,3,4 ನೇ ಪಾದಗಳಲ್ಲಿ ಜನಿಸಿದವರು ಹಸ್ತ ಮತ್ತು ಚಿತ್ತ ನಕ್ಷತ್ರದ 1 ಮತ್ತು 2ನೇ ಪಾದಗಳಲ್ಲಿ ಜನಿಸಿದವರು ಕನ್ಯಾ ರಾಶಿಯವರಾಗಿರುತ್ತಾರೆ. ಟೊ ಪಾ ಪಿ ಪು ಷ ಣ ಠ ಪೆ ಪೊ ಈ ಅಕ್ಷರಗಳಲ್ಲಿ ಹೆಸರನ್ನು ಇಡಲಾಗಿರುತ್ತದೆ.
ಕನ್ಯಾ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವದ ಬಗ್ಗೆ ಈ ಅಂಕಣದಲ್ಲಿ ಕೆಲ ಪ್ರಮುಖ ವಿಷಯಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತಿದ್ದೇವೆ. ಕನ್ಯಾ ರಾಶಿಯವರು ಬಹಳ ಬುದ್ಧಿವಂತರಾಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದಂತಹ ಪುರುಷರು ಮತ್ತು ಮಹಿಳೆಯರು ತಮ್ಮ ವಿಭಿನ್ನ ಆಲೋಚನೆಗಳ ಮೂಲಕ ಹಾಗೂ ತಾವು ತೆಗೆದುಕೊಳ್ಳುವ ನಿರ್ಧಾರಗಳ ಮೂಲಕ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸುತ್ತಾರೆ ಮತ್ತು ಅದಕ್ಕೆ ತಕ್ಕ ಹಾಗೆ ಶ್ಲಾಘನೆಯನ್ನು ಕೂಡ ಪಡೆಯುತ್ತಾರೆ.
ಕನ್ಯಾ ರಾಶಿಯವರು ಬಹಳ ನೇರ ಸ್ವಭಾವದವರು. ತಮಗೆ ಇಷ್ಟ ಆದದ್ದನ್ನು ಒಪ್ಪಿಕೊಳ್ಳುವ ಹಾಗೂ ಬೇಡವಾದದ್ದನ್ನು ಕಟವಾಗಿ ವಿರೋಧಿಸುವಂತಹ ಸ್ವಭಾವವನ್ನು ಹೊಂದಿರುತ್ತಾರೆ. ಇವರ ಈ ಗುಣದಿಂದ ಅನೇಕರು ಇವರ ಮೇಲೆ ಮನಸ್ತಾಪ ಮಾಡಿಕೊಳ್ಳುತ್ತಾರೆ ಆದರೆ ಇವರ ವ್ಯಕ್ತಿತ್ವ ಅರ್ಥ ಆಗಲು ಎಲ್ಲರಿಗೂ ಬಹಳ ಸಮಯ ಹಿಡಿಯುತ್ತದೆ.
ಜೀವನದಲ್ಲಿ ಬಹಳ ಧೈರ್ಯವಂತರಾಗಿರುವ ಇವರು ಯಾರನ್ನು ಮೆಚ್ಚಿಸುವ ಸಲುವಾಗಿ ಬದುಕ ಬೇಕಿಲ್ಲ ಎನ್ನುವ ರೀತಿ ಜೀವನ ನಡೆಸುತ್ತಾರೆ. ಆದರೆ ಈ ವಿಚಾರವಾಗಿ ಕನ್ಯಾ ರಾಶಿಯವರಿಗೆ ಕೆಲ ಸಲಹೆಗಳು ಇವೆ. ಕೆಲವೊಮ್ಮೆ ಇವರ ಉದ್ದೇಶ ಸ್ಪಷ್ಟವಾಗಿದ್ದು ಒಳ್ಳೆಯದೇ ಆಗಿದ್ದರು ಮಾತಿನ ಧಾಟಿ ಮತ್ತು ತೋರುವ ನಡವಳಿಕೆಯಿಂದ ಕೆಟ್ಟವರಾಗಿ ಬಿಂಬಿತರಾಗುತ್ತಾರೆ. ಸಾಧ್ಯವಾದಷ್ಟು ಇದೊಂದು ಗುಣವನ್ನು ಇವರು ಸರಿಪಡಿಸಿಕೊಳ್ಳಬೇಕು.
ವಿದ್ಯಾಭ್ಯಾಸದಲ್ಲಿ ಇವರು ಬಹಳ ಉನ್ನತ ಸ್ಥಾನವನ್ನು ತಲುಪುತ್ತಾರೆ. ಆದರೆ ಉದ್ಯೋಗದ ವಿಷಯ ಬಂದಾಗ ಗೊಂದಲಕ್ಕೀಡಾಗಿ ಬೇರೆ ಕ್ಷೇತ್ರಗಳನ್ನು ಆಯ್ದುಕೊಂಡು ಹಲವು ವರ್ಷಗಳವರೆಗೆ ಸೈಕಲ್ ಹೊಡೆಯುವ ಪರಿಸ್ಥಿತಿ ತಂದುಕೊಳ್ಳುತ್ತಾರೆ. ಈ ವಿಚಾರದಲ್ಲೂ ಕೂಡ ಸ್ವಲ್ಪ ಎಚ್ಚರಿಕೆ ವಹಿಸಿದರೆ ಇವರಿಗೆ ಇವರೇ ಸಾಟಿ. ಇದೇ ಸ್ವಭಾವವನ್ನು ಮದುವೆ ವಿಷಯದಲ್ಲೂ ತೋರುತ್ತಾರೆ.
ಮದುವೆ ವಿಚಾರ ಬಂದಾಗ ಸಂಗಾತಿ ಆಯ್ಕೆ ಮಾಡಿಕೊಳ್ಳುವಾಗ ಬಹಳ ಆತುರ ಬಿದ್ದು ಜೀವನಪೂರ್ತಿ ನೊಂದುಕೊಳ್ಳಬೇಕಾದ ಸಂದಿಗ್ಧ ಪರಿಸ್ಥಿತಿಗೆ ಬರುತ್ತಾರೆ. ಹಾಗಾಗಿ ಈ ವಿಚಾರದಲ್ಲಿ ಕೂಡ ತಾಳ್ಮೆಯಿಂದ ಇರುವುದು ಒಳ್ಳೆಯದು. ಆದಷ್ಟು ಇವರು ಈ ನಿರ್ಧಾರವನ್ನು ಯಾರಿಗೂ ಕೊಡದೆ ತಮ್ಮ ಭವಿಷ್ಯದ ಆಯ್ಕೆ ತಾವೇ ಮಾಡುವುದರಿಂದ ಹೆಚ್ಚು ಸಂತೋಷದಿಂದ ಇರುತ್ತಾರೆ.
ಮದುವೆ ಆದ ನಂತರವೂ ಕೂಡ ಇವರ ಸಕ್ಸಸ್ ಕಡಿಮೆ ಆಗುವುದಿಲ್ಲ. ಪತಿ ಕುಟುಂಬದ ಸಹಕಾರದಿಂದ ಇವರು ಇನ್ನು ಉನ್ನತ ಸ್ಥಾನವನ್ನು ತಲುಪುತ್ತಾರೆ. ಸ್ನೇಹಿತರ ವಿಚಾರವಾಗಿ ಯಾವಾಗಲೂ ಅನುಮಾನದ ದೃಷ್ಟಿಯಲ್ಲಿ ನೋಡುತ್ತಾರೆ. ಯಾಕೆಂದರೆ ಇವರು ಕುಟುಂಬದವರನ್ನು ಸ್ನೇಹಿತರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ, ಒಂದು ವೇಳೆ ಸ್ನೇಹಿತರಾದರೆ ಅವರನ್ನು ಕೂಡ ಕುಟುಂಬದವರಂತೆ ಕಾಣುತ್ತಾರೆ ಇವರಿಗೆ ಮೋ’ಸ ಮಾಡಲು ಪ್ರಯತ್ನಿಸಿದರೆ ಜೀವನಪೂರ್ತಿ ಅವರನ್ನು ಕ್ಷಮಿಸುವುದಿಲ್ಲ.
ಇವರು ಉದ್ಯೋಗ ಮಾಡಿದರು ಅಥವಾ ವ್ಯಾಪಾರ ವ್ಯವಹಾರ ಅಥವಾ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡರೂ ಕೂಡ ಮದುವೆಯ ನಂತರ ತಮ್ಮ ಹಿಂದಿನ ಜೀವನಕ್ಕಿಂತ ದುಪ್ಪಟ್ಟು ಚೆನ್ನಾಗಿ ಬದುಕುತ್ತಾರೆ. ಆದರೆ ಕೆಲವೊಂದು ವಿಚಾರಗಳಲ್ಲಿ ಭಾವನಾತ್ಮಕವಾಗಿ ಕುಗ್ಗಿ ಹೋಗುತ್ತಾರೆ. ಹಣಕಾಸಿನ ಸಮಸ್ಯೆ ಇವರನ್ನು ಕಾಡುವುದು ಕಡಿಮೆ ಒಂದು ವೇಳೆ ಹಣದ ಅವಶ್ಯಕತೆ ಇದ್ದು ಅವರ ಬಳಿ ಹಣ ಇಲ್ಲ ಎಂದರು ಇವರಿಗೆ ಸಮಯಕ್ಕೆ ಸರಿಯಾಗಿ ಸಹಾಯ ದೊರೆಯುತ್ತದೆ. ಈ ರಾಶಿ ಅಧಿಪತಿ ಬುಧನಾಗಿದ್ದು ಇವರು ಯಾವಾಗಲೂ ಪಚ್ಚೆ ಉಂಗುರವನ್ನು ಧರಿಸುವುದು ಇನ್ನೂ ಹೆಚ್ಚಿನ ಶುಭಫಲ ಕೊಡುತ್ತದೆ.