ಕೆಲವರಿಗೆ ಜೀವನದಲ್ಲಿ ಅಂದುಕೊಂಡ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಪ್ರಾರಂಭಿಸಿದ ಕೆಲಸಗಳು ಪೂರ್ತಿಗೊಂಡು ಸಂತೋಷ ತರುತ್ತವೆ. ಇನ್ನೂ ಕೆಲವರು ಒಂದು ಸಣ್ಣ ಸಾಧನೆಗೂ ಕೂಡ ಬೆಟ್ಟದಷ್ಟು ಕಷ್ಟ ಪಡಬೇಕು. ಹಲವು ಕಡೆಯಿಂದ ಸಮಸ್ಯೆಗಳು ಬಂದು ಅವರಿಗೆ ಅಡ್ಡಿಪಡಿಸುತ್ತಿರುತ್ತವೆ ಮನುಷ್ಯನಾದ ಮೇಲೆ ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರಿನ ಆಸೆ ಇದ್ದೇ ಇರುತ್ತದೆ.
ಕೆಲವರಿಗೆ ಇದು ನೀರು ಕುಡಿಯದಷ್ಟು ಸರಾಗವಾಗಿದ್ದರೆ ಇನ್ನೂ ಕೆಲವರಿಗೆ ಜೀವಮಾನದ ಕನಸು. ಹಣ ಇದ್ದ ಮಾತ್ರಕ್ಕೆ ಎಲ್ಲಾ ಕಾರ್ಯಗಳು ಆಗುತ್ತವೆ ಎಂದು ಹೇಳುವುದಕ್ಕೂ ಆಗುವುದಿಲ್ಲ ಯಾಕೆಂದರೆ ಕೈತುಂಬಾ ಹಣ ಇದ್ದಾಗ ಕೂಡ ನಮ್ಮ ಮನೆ ಕನಸು ಹಾಗೆ ಉಳಿದು ಹೋಗಿರುವ ಉದಾಹರಣೆಗಳು ಇವೆ.
ಈ ರೀತಿ ಪದೇ ಪದೇ ಏನಾದರು ಅಡೆತಡೆಗಳು ಬಂದು ಆಸ್ತಿ ಕೊಂಡುಕೊಳ್ಳುವುದಕ್ಕೆ ಅಥವಾ ಮನೆ ಕಟ್ಟಿಕೊಳ್ಳುವುದಕ್ಕೆ ತೊಂದರೆಯಾಗುತ್ತಿದ್ದರೆ ಅದನ್ನು ನಾವು ಪೂರ್ವ ಜನ್ಮದ ಕರ್ಮ ಅಂದುಕೊಳ್ಳಬೇಕು. ಇವುಗಳ ನಿವಾರಣೆಗಾಗಿ ಭಗವಂತನನ್ನು ಪ್ರಾರ್ಥಿಸಬೇಕು ಮತ್ತು ಆದಷ್ಟು ಅಸಹಾಯಕರಿಗೆ ಸಹಾಯ ಮಾಡುತ್ತಾ ಪುಣ್ಯ ಸಂಪಾದನೆ ಮಾಡಬೇಕು.
ಈ ಸುದ್ದಿ ಓದಿ:- ಕನ್ಯಾ ರಾಶಿಯ ಗುಣಸ್ವಭಾವ ಹೇಗಿರುತ್ತದೆ ಗೊತ್ತಾ? ಇವರ ತಂಟೆಗೆ ಹೋಗುವ ಮುನ್ನ ವಿಚಾರ ತಿಳಿದುಕೊಳ್ಳಿ.!
ಗುರು ಹಿರಿಯರ ಆಶೀರ್ವಾದದಿಂದ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದರಿಂದ ಇಂತಹ ದೋಷಗಳು ಕಳೆಯುತ್ತವೆ. ನಿಮ್ಮ ಇಚ್ಛೆಯಂತೆ ನಡೆದು ನಿಮಗೂ ಕೂಡ ಜೀವನದಲ್ಲಿ ಶಾಂತಿ ಸಮಾಧಾನ ಎಲ್ಲವೂ ಸಿಗುತ್ತದೆ. ಇದರ ನಡುವೆ ನೀವು ಒಂದು ಸಣ್ಣ ಉಪಾಯವನ್ನು ಕೂಡ ಮಾಡಬೇಕು. ನಿಮಗೇನಾದರೂ ಸೈಟ್ ಇದ್ದು ನೀವು ಎಷ್ಟೇ ಶ್ರಮಪಟ್ಟರು ಮನೆ ಕಟ್ಟಲು ಆಗುತ್ತಿಲ್ಲ ಎಂದರೆ ಈ ಒಂದು ಉಪಾಯ ಮಾಡಿ.
ಬಿಳಿ ಸಾಸಿವೆ ಎಲ್ಲಾ ಅಂಗಡಿಗಳಲ್ಲೂ ಇರುತ್ತದೆ. ಅದನ್ನು ಖರೀದಿಸಿ ತಂದು ಒಂದು ಶುಭದಿನ ಮನೆಯಲ್ಲಿ ನಿಮ್ಮ ಮನೆ ದೇವರಿಗೆ, ಇಷ್ಟ ದೇವರಿಗೆ ಪೂಜೆ ಮಾಡಿ ಪೂಜೆ ಮಾಡುವ ಸಮಯದಲ್ಲಿ ಕೂಡ ಬಿಳಿ ಸಾಸಿವೆಯನ್ನು ಒಂದು ಡಬ್ಬದಲ್ಲಿ ತುಂಬಿ ದೇವರ ಕೋಣೆಯಲ್ಲಿ ಇಡಿ. ನಿಮ್ಮ ಮನೆ ಕಟ್ಟುವ ಕನಸು ಯಾವುದೇ ತೊಂದರೆ ಇಲ್ಲದೆ ಪೂರ್ತಿಕೊಳ್ಳುವಂತೆ ಮಾಡು ಎಂದು ಭಗವಂತನನ್ನು ಆಶೀರ್ವಾದಕ್ಕಾಗಿ ಪ್ರಾರ್ಥನೆ ಮಾಡಿ.
ನಂತರ ನೇರವಾಗಿ ನಿಮ್ಮ ಸೈಟ್ ಇರುವ ಜಾಗಕ್ಕೆ ಹೋಗಿ ಈ ರೀತಿ ಹೋಗುವಾಗ ನೀವು ದೇವರಿಗೆ ಪೂಜೆ ಮಾಡಿದ ಹೂವು ಅಕ್ಷತೆ ಇವುಗಳನ್ನು ಕೂಡ ಜೊತೆಗೆ ತೆಗೆದುಕೊಂಡು ಹೋಗಬಹುದು. ಈಗ ನಿಮ್ಮ ಸೈಟ್ ಎಷ್ಟು ಇದೆ ಎಲ್ಲಾ ಕಡೆ ಹರಡುವಂತೆ ಸಾಸಿವೆಯನ್ನು ಹಾಕುತ್ತಾ ಬನ್ನಿ.
ಈ ಸುದ್ದಿ ಓದಿ:- ಸೀದು ಕರಕಲಾದ ಪಾತ್ರೆಗಳನ್ನು ಬಿಸಾಕಬೇಡಿ, ಹೀಗೆ ಮಾಡಿ ಸಾಕು. ಬುದ್ಧಿವಂತ ಮಹಿಳೆಯರಿಗಾಗಿ ಒಂದಿಷ್ಟು ಟಿಪ್.!
ದೇವರಿಂದ ಪ್ರಸಾದವಾಗಿ ನೀವು ತೆಗೆದುಕೊಂಡ ಅಕ್ಷತೆ ಹಾಗೂ ಹೂವನ್ನು ಹಾಕಿ ಅಲ್ಲಿಯೂ ಕೂಡ ಒಮ್ಮೆ ಭೂ ವರಹಾ ಸ್ವಾಮಿಯನ್ನು ಕೇಳಿಕೊಳ್ಳಿ ಹಾಗೂ ನಿಮ್ಮ ಕುಲದೇವರು, ಗ್ರಾಮದೇವರು, ಇಷ್ಟದೇವರನ್ನು ಕೂಡ ನಿಮ್ಮ ಮನೆ ಕಟ್ಟುವ ಕನಸು ಯಾವುದೇ ತೊಂದರೆ ಇಲ್ಲದೇ ಆದಷ್ಟು ಬೇಗ ಪೂರ್ತಿಯಾಗಲಿ ಆಶೀರ್ವಾದ ಮಾಡಿ ಎಂದು ಮತ್ತೊಮ್ಮೆ ಪ್ರಾರ್ಥಿಸಿಕೊಳ್ಳಿ.
ಈ ರೀತಿ ಮಾಡಿದರೆ ಬಹಳ ಬೇಗ ನಿಮ್ಮ ಮನೆ ಕಟ್ಟುವ ಕನಸು ನನಸಾಗುತ್ತದೆ. ನೀವು ಯಾವುದಾದರೂ ತೀರ್ಥಕ್ಷೇತ್ರಕ್ಕೆ ಭೇಟಿ ಕೊಟ್ಟರೂ ಅಲ್ಲಿಂದ ತಂದ ಪ್ರಸಾದವನ್ನು ಇದೇ ರೀತಿ ಭಕ್ತಿಯಿಂದ ನಿಮ್ಮ ಸೈಟ್ ಗೆ ತೆಗೆದುಕೊಂಡು ಹೋಗಿ ಹಾಕಿ. ದೇವಸ್ಥಾನದಿಂದ ಮನೆಗೆ ಹೋಗುವಾಗಲೂ ಕೂಡ ಮೊದಲ ಸೈಟ್ ಇದ್ದ ಜಾಗಕ್ಕೆ ಹೋಗಿ ದೇವಸ್ಥಾನದಿಂದ ತಂದ ಪ್ರಸಾದವನ್ನು ಸೈಟ್ ನಲ್ಲಿ ಇಟ್ಟು ನಂತರ ಮನೆಗೆ ಬನ್ನಿ ಆಗ ನಿಮ್ಮ ಮನೆ ಕಟ್ಟುವ ಕನಸು ನನಸಾಗುತ್ತದೆ.