ತುಲಾ ರಾಶಿಯ ರಾಶಿ ಅಧಿಪತಿಯಾಗಿರುವ ಮತ್ತು ಅಷ್ಟಮಾಧಿಪತಿಯಾದ ಶುಕ್ರನು ಏಪ್ರಿಲ್ ತಿಂಗಳಿನಲ್ಲಿ ಮೀನ ರಾಶಿಯಲ್ಲಿ ಪರಮೋಚ್ಚ ಸ್ಥಿತಿಯಲ್ಲಿ ಇರುತ್ತಾರೆ. ವಿಶೇಷವಾಗಿ ಶುಕ್ರನ ಈ ಪ್ರಭಾವದಿಂದಾಗಿ ತುಲಾ ರಾಶಿಯವರ ಜೀವನದ ಮೇಲೆ ಕೆಲವು ಉತ್ತಮ ಬದಲಾವಣೆಗಳು ಉಂಟಾಗಲಿದೆ. ಇದೇ ಮಾರ್ಚ್ 31 ನೇ ತಾರೀಖಿನಿಂದಲೇ ಇಂತಹ ಶುಭಫಲಗಳು ಉಂಟಾಗಲಿದೆ.
ಪಾಪ ಗ್ರಹಗಳು ಷಷ್ಠದಲ್ಲಿ ಇದ್ದರೆ ಶುಭ ಫಲಗಳನ್ನು ಕೊಡುತ್ತವೆ ಆದರೆ ಶುಭ ಗ್ರಹವಾದ ಶುಕ್ರನೇ ಷಷ್ಠದಲ್ಲಿ ಇರುವುದರಿಂದ ಶುಭಫಲಗಳನ್ನು ಕೊಡಲು ಆಗುವುದಿಲ್ಲ. ಆದರೆ ಶುಕ್ರ ಗ್ರಹವು ಪರಮೋಚ್ಛ ಸ್ಥಾನದಲ್ಲಿ ಇರುವುದರಿಂದ ತುಲಾ ರಾಶಿಯ ಲಾಭಾಧಿಪತಿಯಾದ ರವಿಯ ಜೊತೆ ಇರುವುದರಿಂದ ಇರುವುದರಿಂದ ಕೆಲವೊಂದು ವಿಚಾರದಲ್ಲಿ ಗಮನಾರ್ಹ ಶುಭ ಫಲಗಳು ಕೂಡ ಉಂಟಾಗುತ್ತವೆ.
ಅದರಲ್ಲಿ ಮುಖ್ಯವಾಗಿ ಹೇಳುವುದಾದರೆ ನಿಮ್ಮ ಇತ್ಯರ್ಥವಾಗದ ಹಣಕಾಸಿನ ಸಮಸ್ಯೆ ಒಂದು ಪರಿಹಾರವಾಗಲಿದೆ. ನೀವು ಯಾರಿಗಾದರೂ ಹಣಕಾಸು ಕೊಟ್ಟು ಬಹಳ ಸಮಯವಾಗಿ ನಿಮ್ಮ ಹಣ ವಾಪಸ್ಸು ಬರದಂತೆ ಸಿಲುಕಿಕೊಂಡಿದ್ದರೆ, ನೀವು ಯಾವುದಾದರೂ ಹಣಕಾಸಿನ ವಿಚಾರಕ್ಕೆ ಮಧ್ಯವರ್ತಿಯಾಗಿ ಸಿಲುಕಿದ್ದರೆ.
ಅಥವಾ ಬಹಳ ದಿನಗಳಿಂದ ಲೋನ್ ಗಾಗಿ ಬ್ಯಾಂಕ್ ಗಳಿಗೆ ಅಲೆದು ಸಾಕಾಗಿದ್ದರೆ ಉತ್ತರ ಸಿಗುವ ಅಥವಾ ನೀವೇ ಯಾವುದಾದರೂ ಸಾಲದ ಸುಳಿಯಲ್ಲಿ ಬಿದ್ದು ಎಷ್ಟೇ ಪ್ರಯತ್ನ ಪಡುತ್ತಿದ್ದರು ಕೂಡ ಸಾಲ ತೀರಿಸಲು ಆಗದೆ ಇದ್ದರೆ ಇದು ಇತ್ಯರ್ಥವಾಗುವ ಫಲಗಳು ಕಂಡುಬರುತ್ತವೆ.
ಇದರಲ್ಲಿ ಹಣ ವಾಪಸ್ ಬರುತ್ತದೆ ಅಥವಾ ನೀವು ಸಾಲ ತೀರಿಸುತ್ತೀರಿ ಅಥವಾ ನಿಮಗೆ ಲೋನ್ ಆಗುತ್ತದೆ ಅಥವಾ ಮತ್ತೊಂದು ರೀತಿಯಲ್ಲಿ ಹಣ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಹಣ ಬರುತ್ತದೆ ಅಥವಾ ಇಲ್ಲ, ಈ ಕೆಲಸ ಆಗುತ್ತದೆ ಅಥವಾ ಇಲ್ಲ ಎನ್ನುವ ನಿರ್ಣಾಯಕ ಹಂತಕ್ಕೆ ಬಂದು ಸಮಾಧಾನ ಪಟ್ಟುಕೊಳ್ಳುವಂತಹ ಸ್ಪಷ್ಟವಾದ ರಿಸಲ್ಟ್ ಸಿಗುತ್ತದೆ.
ಹಾಗೆ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಇದೇ ರೀತಿಯ ಗೊಂದಲಗಳು ಇದ್ದರೆ ಉದಾಹರಣೆಗೆ ಯಾವುದಾದರೂ ಆರೋಗ್ಯ ಸಮಸ್ಯೆಗೆ ಸ್ವಲ್ಪ ದಿನ ಕಾದು ನೋಡೋಣ ಎಂದು ಹೇಳಿದ್ದರೆ ಅಥವಾ ಯಾವುದಾದರೂ ಸಮಸ್ಯೆಗೆ ನೀವೇ ಆಸ್ಪತ್ರೆಗೆ ಹೋಗಬೇಕು ಬೇಡವ ಎನ್ನುವ ಗೊಂದಲದಲ್ಲಿ ಇದ್ದರೆ ಆಸ್ಪತ್ರೆ ವಿಚಾರವಾಗಿ ಕೂಡ ಇದು ಇತ್ಯರ್ಥವಾಗುವ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವ ಪರಿಣಾಮಗಳು ಈ ತಿಂಗಳಲ್ಲಿ ಆಗುತ್ತದೆ ನೀವು ಶುಕ್ರನ ಇನ್ನು ಅತಿಯಾದ ಫಲಗಳನ್ನು ಪಡೆಯಬೇಕು ಅಂದರೆ ಶುಕ್ರನ ಆರಾಧನೆಯನ್ನು ಮಾಡಬೇಕು.
ಶುಕ್ರನ ಅಷ್ಟೋತ್ತರಗಳನ್ನು ಕೇಳುವುದು ದುರ್ಗಾ ಹಾಗೂ ಮಹಾಲಕ್ಷ್ಮಿ ಆರಾಧನೆ ಮಾಡುವುದು ಸ್ತೋತ್ರಗಳನ್ನು ಕೇಳುವುದು ಲಕ್ಷ್ಮಿ ಸಹಸ್ರನಾಮ ಪ್ರತಿನಿತ್ಯ ಪಠಿಸುವುದು ಅಥವಾ ಕೇಳುವುದು ಶುಕ್ರನಿಗೆ ಬಿಳಿ ಹೂಗಳನ್ನು ಅರ್ಪಿಸುವುದು, ಶುಕ್ರನಿಗೆ ಅಭಿಷೇಕ ಮಾಡಿಸುವುದು ವಿಶೇಷವಾಗಿ ಸ್ಪಟಿಕದ ಮಣಿಗಳನ್ನು ವಿದಿವಿಧಾನದಿಂದ ಧರಿಸುವುದರಿಂದ ಕೂಡ ಹೆಚ್ಚುಫಲಗಳು ಸಿಗುತ್ತವೆ.
ಶುಕ್ರ ಗ್ರಹದ ಪ್ರಭಾವವಿರುವ ರತ್ನ ವಜ್ರ ಆದರೆ ವಜ್ರವನ್ನು ಖರೀದಿಸಲು ಸಾಧ್ಯವಾಗದೇ ಇರುವುದರಿಂದ ಸ್ಪಟಿಕದ ಮಣಿಗಳನ್ನು ಕೂಡ ತಂದು ಸರಿಯಾದ ರೀತಿಯಲ್ಲಿ ಧರಿಸುವುದರಿಂದ ಕೂಡ ಉತ್ತಮ ಫಲಗಳನ್ನು ಪಡೆಯುತ್ತೀರಿ. ನಿಮ್ಮ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳು ದಾಂಪತ್ಯದಲ್ಲಿ ಪತಿ-ಪತ್ನಿ ನಡುವೆ ಇರುವಂತಹ ಹೊಂದಾಣಿಕೆ ಸಮಸ್ಯೆಗಳು, ಅಥವಾ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದೆಲ್ಲದಕ್ಕೂ ಶುಕ್ರನ ಪ್ರಭಾವದಿಂದ ಪರಿಹಾರ ಸಿಗಲಿದೆ. ಏಪ್ರಿಲ್ ತಿಂಗಳ ನಾಲ್ಕು ಶುಕ್ರವಾರಗಳು ಕೂಡ 5 ಮುತ್ತೈದರಿಗೆ ಅರಿಶಿನ ಕುಂಕುಮ ಹೂ ಕೊಟ್ಟು ಆಶಿರ್ವಾದ ಪಡೆಯಿರಿ.