Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅನುಷ್ಕಾ ವಿರಾಟ್ ಕೋಹ್ಲಿ ಮದುವೆಗೆ ಖರ್ಚಾಗಿದ್ದ ಹಣ ಎಷ್ಟು ಕೋಟಿ ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರ

Posted on July 16, 2022 By Kannada Trend News No Comments on ಅನುಷ್ಕಾ ವಿರಾಟ್ ಕೋಹ್ಲಿ ಮದುವೆಗೆ ಖರ್ಚಾಗಿದ್ದ ಹಣ ಎಷ್ಟು ಕೋಟಿ ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರ

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಯಾವುದೇ ದೇಶ ಭಾಷೆ ಜನಾಂಗ ಧರ್ಮದವರಾದರೂ ಕೂಡ ಈ ಒಂದು ಅದ್ಭುತ ಸಂಗತಿಯನ್ನು ಒಂದು ಹಬ್ಬದಂತೆ ಆಚರಿಸುತ್ತಾರೆ. ಆಯಾ ಪ್ರದೇಶಕ್ಕೆ ತಕ್ಕ ಸಂಪ್ರದಾಯ ಸಂಸ್ಕೃತಿ ಆಚರಣೆಗಳ ಪ್ರಕಾರ ಅವುಗಳನ್ನು ನೆರವೇರಿಸುತ್ತಾರೆ. ಈ ರೀತಿ ಎಲ್ಲ ಶಾಸ್ತ್ರ ಸಂಪ್ರದಾಯ ಹಾಗೂ ಗುರು ಹಿರಿಯರ ಒಪ್ಪಿಗೆಯೊಂದಿಗೆ ಆಶೀರ್ವಾದದೊಂದಿಗೆ ನಡೆಯುವ ಮದುವೆ ಗಳಿಗೆ ಬಾಳಿಕೆ ಹೆಚ್ಚು ಎನ್ನುವುದು ನಮ್ಮವರ ನಂಬಿಕೆ. ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಈ ಮದುವೆ ಎನ್ನುವದಕ್ಕೆ ಉಳಿದ ಎಲ್ಲಾ ಸಂಸ್ಕೃತಿಗಿಂತಲೂ ಹೆಚ್ಚಿನ ಬೆಲೆ ಇದೆ. ಗಂಡು ಹೆಣ್ಣು ಜಾತಕ ಹೊಂದಿಸುವ ದಿನದಿಂದ ಹಿಡಿದು ಅವರನ್ನು ಮದುವೆ ಮಾಡಿ ಗಂಡನ ಮನೆಗೆ ಕಳಿಸುವ ತನಕ ಪ್ರತಿಯೊಂದು ದಿನ ಕ್ಷಣವನ್ನು ಕೂಡ ಬಹಳ ಸಂಭ್ರಮದಿಂದ ಆಚರಿಸುತ್ತಾರೆ ನಮ್ಮವರು. ಹಾಗಾಗಿ ಭಾರತೀಯ ಸಂಸ್ಕೃತಿಯಲ್ಲಿಯೇ ಮದುವೆಯಾಗಲು ಎಲ್ಲರೂ ಬಯಸುತ್ತಾರೆ.

ನಮ್ಮ ದೇಶದಲ್ಲಿ ಪ್ರತಿಯೊಬ್ಬ ಹೆಣ್ಣೆತ್ತ ತಂದೆಯು ಕೂಡ ಹೆಣ್ಣು ಮಗಳ ಹುಟ್ಟಿದ ದಿನದಿಂದಲೇ ಮದುವೆ ಬಗ್ಗೆ ಕನಸು ಕಟ್ಟಿಕೊಳ್ಳುತ್ತಾನೆ ನನ್ನ ಮಗಳಿಗೆ ಇಂತಹ ವರನನ್ನು ತರಬೇಕು, ಅಂತಹ ಮನೆಗೆ ಮದುವೆ ಮಾಡಿಕೊಡಬೇಕು, ಇಷ್ಟು ದೊಡ್ಡ ಛತ್ರದಲ್ಲಿ ಮದುವೆ ಮಾಡಬೇಕು, ಅಷ್ಟು ಲಕ್ಷ ಖರ್ಚು ಮಾಡಿ ಇಷ್ಟು ಜನರನ್ನು ಕರೆಯಬೇಕು ಎಂದು ಅವರ ಮನಸ್ಸಿನಲ್ಲಿ ಅಂದಿನಿಂದಲೇ ಸಾವಿರಾರು ಆಲೋಚನೆಗಳು ಹಾಗೂ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಹಾಗೂ ಜೀವನದ ಗಳಿಕೆಯ ಪ್ರತಿಯೊಂದು ರೂಪಾಯಲ್ಲೂ ಕೂಡ ಅದಕ್ಕಾಗಿ ಪಾಲು ಮಾಡಿ ಎತ್ತಿ ಇಡುತ್ತಾನೆ. ಎಂತಹ ಬಡ ಹಾಗೂ ಮಾಧ್ಯಮ ಕುಟುಂಬದ ಜನರಾದರೂ ಕೂಡ ಮಕ್ಕಳ ಮದುವೆಯನ್ನು ಈ ರೀತಿಯಾಗಿ ಎಲ್ಲರೂ ಮೆಚ್ಚುವಂತೆ ಮಾಡಬೇಕು ಎಂದು ಆಸೆ ಪಡುತ್ತಾರೆ. ಆದರೆ ಶ್ರೀಮಂತರ ಹಾಗೂ ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಕೊಂಚ ವಿಭಿನ್ನ ಎನ್ನಬಹುದು.

ನಮ್ಮಲ್ಲಿ ಶ್ರೀಮಂತರುಗಳು ಸಂಸ್ಕೃತಿ ಸಂಪ್ರದಾಯದ ಜೊತೆಗೆ ಇನ್ನಿತರ ಹೊಸ ಹೊಸ ವಿಶೇಷತೆಗಳನ್ನು ಸೇರಿಸಿ ತಮ್ಮ ಮದುವೆಗಳನ್ನು ಹೊಸ ರೀತಿಯ ಇವೆಂಟ್ ಗಳನ್ನಾಗಿ ಮಾಡಿ ಎಲ್ಲರೂ ಮೂಗಿನ ಮೇಲೆ ಬೆರಳು ಇಡುವಷ್ಟು ಆಶ್ಚರ್ಯ ಪಡುವಂತೆ ಅದ್ದೂರಿಯಾಗಿ ನೆರವೇರೆಸಿಕೊಳ್ಳಲು ಆಸೆಪಡುತ್ತಾರೆ. ಇನ್ನು ಸೆಲೆಬ್ರಿಟಿಗಳ ವಿಚಾರಕ್ಕೆ ಬರುವುದಾದರೆ ಸೆಲೆಬ್ರಿಟಿಗಳು ಹೆಚ್ಚಾಗಿ ತಮ್ಮ ಮದುವೆಗಳನ್ನು ಸೀಕ್ರೆಟ್ ಆಗಿ ಇಟ್ಟುಕೊಂಡು ಮದುವೆಯಾದ ಬೆಳಕ ಪ್ರತಿಕಾಗೋಷ್ಠಿಯಲ್ಲಿ ಘೋಷಿಸಿಕೊಂಡು ಅಭಿಮಾನಿಗಳಿಗೆ ಆಶ್ಚರ್ಯ ನೀಡುತ್ತಾರೆ. ಇದಕ್ಕೆ ಹಲವಾರು ಕಾರಣಗಳಿವೆ ಕೆಲವೊಮ್ಮೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ತಮ್ಮ ಮದುವೆಗೆ ಅಭಿಮಾನಿಗಳು ಜಾಸ್ತಿ ಸಂಖ್ಯೆಯಲ್ಲಿ ಬಂದು ಸೇರಿದರೆ ಇದರಿಂದ ಸಮಾರಂಭ ಹಾಗೂ ಸಾರ್ವಜನಿಕರಿಗೂ ಸಹ ತೊಂದರೆ ಆಗಬಹುದು ಎಂದು ಮನದಲ್ಲಿಟ್ಟುಕೊಂಡು ಈ ರೀತಿ ಸೀಕ್ರೆಟ್ ಆಗಿ ಮದುವೆ ಆಗಲು ಇಚ್ಛೆ ಪಡುತ್ತಾರೆ. ಅಥವಾ ದೇವಸ್ಥಾನಗಳಿಗೆ ಹೋಗಿ ತೀರ ಸರಳವಾಗಿ ಮದುವೆಯಾಗಿ ನಂತರ ಬೇಕಾದವರನ್ನು ಮಾತ್ರ ಕರೆದು ರಿಸಪ್ಶನ್ ಮಾಡಿಕೊಳ್ಳುತ್ತಾರೆ.

ಮತ್ತು ಕೆಲವರು ವಿದೇಶಗಳಿಗೆ ಹೋಗಿ ತಮ್ಮ ಮದುವೆ ಮಾಡಿಕೊಂಡು ಬರುತ್ತಾರೆ ಹಾಗೂ ಅಲ್ಲಿ ಕೆಲವರಿಗಷ್ಟೇ ಆಹ್ವಾನ ಇರುತ್ತದೆ. ಇತ್ತೀಚೆಗೆ ಸ್ಟಾರ್ ನಟ ನಟಿಯರು ಹಾಗೂ ಸ್ಟಾರ್ ಕ್ರಿಕೆಟ್ಗರು ಈ ರೀತಿ ವಿದೇಶಕ್ಕೆ ಹೋಗಿ ಮದುವೆ ಆಗಿ ಬರುತ್ತಿರುವುದು ನಮ್ಮೆಲ್ಲರಿಗೂ ತಿಳಿದಿದೆ. ಈ ರೀತಿ ನಮ್ಮ ಭಾರತ ದೇಶದ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಫೇವರೆಟ್ ನಂಬರ್ ಒನ್ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನ ಸ್ಟಾರ್ ನಟಿ ಅನುಷ್ಕಾ ಅವರು ಕೂಡ ವಿದೇಶಕ್ಕೆ ಹೋಗಿ ತಮ್ಮ ಮದುವೆ ಮಾಡಿಕೊಂಡಿದ್ದು ಎಲ್ಲರಿಗೂ ತಿಳಿದಿದೆ. ಈ ಇಬ್ಬರ ಜೋಡಿಗಳು ಪ್ರೀತಿಯಲ್ಲಿದ್ದಾರೆ ಎಂದು ಮಾಧ್ಯಮಗಳಲ್ಲಿ ಯಾವಾಗಲೂ ಸುದ್ದಿಯಾಗುತ್ತಲೇ ಇತ್ತು. ಆದರೆ ಕೊನೆಯ ದಿನದವರೆಗೂ ಇವರಿಬ್ಬರು ನಾವಿಬ್ಬರು ಸ್ನೇಹಿತರು ಅಷ್ಟೇ ಎಂದೇ ಹೇಳಿಕೊಂಡು ಬಂದಿದ್ದರು.

ಒಮ್ಮೆ ಇದ್ದಕ್ಕಿದ್ದಂತೆ ದೂರದ ಇಟಲಿ ದೇಶಕ್ಕೆ ಹೋಗಿ ಅದ್ದೂರಿಯಾಗಿ ರೆಸಾರ್ಟ್ ಒಂದರಲ್ಲಿ ಖರ್ಚು ಮಾಡಿಕೊಂಡು ಮದುವೆ ಆಗಿ ಬಂದಿದ್ದಾರೆ.11 ಡಿಸೆಂಬರ್, 2017ರಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಇಟಲಿಯ ಬುರ್ಗೋಫಿನಿಚಿಯ ಆಟೋ ಎಂಬಲ್ಲಿ ಅದ್ದೂರಿ ರೆಸಾರ್ಟ್ ಒಂದರಲ್ಲಿ ಇವರಿಬ್ಬರ ವಿವಾಹ ಏರ್ಪಟ್ಟಿದೆ. ಈ ಮದುವೆಗೆ ಆಹ್ವಾನ ಇದ್ದಿದ್ದು ಕೇವಲ 44 ಮಂದಿ ವಿಐಪಿ ಗಳಿಗೆ ಮಾತ್ರ. ಆದರೂ ಕೂಡ ಅನುಷ್ಕಾ ಹಾಗೂ ವಿರಾಟ್ ಜೋಡಿ ಈ ಮದುವೆ ಖರ್ಚು ಮಾಡಿದ ಮೊತ್ತ ಬರೋಬ್ಬರಿ 77 ಕೋಟಿ ರೂಗಳು. ಕೆಲವರು ಇದನ್ನು ದುಂದು ವೆಚ್ಚ ಎನ್ನಬಹುದು ಆದರೆ ಕೆಲವರ ಪ್ರಕಾರ ಮದುವೆ ಎನ್ನುವುದು ಜೀವನದಲ್ಲಿ ಒಂದೇ ಬಾರಿ ಆಗುವುದು ಹಾಗೂ ಇಂತಹ ಅದ್ಭುತ ಸಮಾರಂಭವನ್ನು ಮತ್ತಷ್ಟು ವಿಶೇಷವಾಗಿ ಮಾಡಿಕೊಳ್ಳುವುದು ಅವರವರ ಇಷ್ಟ ಎನ್ನುವುದು ಕೆಲವರ ಅಭಿಪ್ರಾಯ. ಹಾಗಾಗಿ ಇತ್ತೀಚೆಗೆ ಸೆಲೆಬ್ರಿಟಿಗಳು ಒಬ್ಬರ ಮದುವೆಗಿಂತ ಒಬ್ಬರ ಮದುವೆಯನ್ನು ಮತ್ತಷ್ಟು ಅದ್ದೂರಿ ಮಾಡಿಕೊಳ್ಳುವ ಮೂಲಕ ಸದ್ದಿಯಾಗುತ್ತಿದ್ದಾರೆ.

ಅನುಷ್ಕಾ ಹಾಗು ವಿರಾಟ್ ತಮ್ಮ ಮದುವೆಯಲ್ಲಿ ಧರಿಸಿದ್ದ ಉಡುಪು ಕೂಡ ಬಹಳ ಬೆಲೆಬಾಳುವಂತದ್ದಾಗಿತ್ತು. ಹಾಗೂ ಇವರು ಮದುವೆ ಆಹ್ವಾನ ಪತ್ರಿಕೆಗೆ ಒಂದು ಪ್ರತಿಗೆ ಸುಮಾರು ಒಂದೂವರೆ ಲಕ್ಷದಷ್ಟು ಹಣವನ್ನು ಖರ್ಚು ಮಾಡಿ ಸ್ಪೆಷಲ್ ಆಗಿ ಡಿಸೈನ್ ಮಾಡಿಸಿದ್ದರು. ಜೊತೆಯಲ್ಲಿ ಇಟಲಿಯಲ್ಲಿ ಇವರು ತಂಗಿದ್ದ ರೆಸಾರ್ಟ್ ಬಹಳ ಹಳೆಯ ರೆಸಾರ್ಟ್ ಆಗಿದ್ದು ತುಂಬಾ ರಾಯಲ್ ಹಾಗೂ ಫೇಮಸ್ ರೆಸಾರ್ಟ್ ಆಗಿತ್ತು. ಈ ರೆಸಾರ್ಟ್ ಅಲ್ಲಿ ಒಬ್ಬ ವ್ಯಕ್ತಿಗೆ ಒಂದು ವಾರ ತಂಗಲು ಬರೋಬ್ಬರಿ ಒಂದು ಕೋಟಿ ರೂಗಳನ್ನು ಕೊಡಬೇಕಾಗುತ್ತದೆ. ಇವರು ಬಂದಿದ್ದ ಅತಿಥಿಗಳ ಆತಿತ್ಯಕ್ಕಾಗಿ ಸುಮಾರು 45 ಕೋಟಿ ರೂಗಳನ್ನು ರೆಸಾರ್ಟ್ ಒಂದಕ್ಕೆ ತೆತ್ತಿದ್ದಾರೆ ಎನ್ನಬಹುದು. ಅವರಿಬ್ಬರ ಪ್ರೇಮ ವಿವಾಹ ಒಂದು ದಾಖಲೆ ಬರೆದಿದ್ದು ಈ ಜೋಡಿ ವಿರುಷ್ಕ ಜೋಡಿ ಎಂದೇ ಭಾರತದಲ್ಲಿ ಫೇಮಸ್ ಆಗಿದೆ ಹಾಗೂ ಈ ಮುದ್ದಾದ ಜೋಡಿ ಈಗ ಹೆಣ್ಣು ಮಗುವನ್ನು ಕೂಡ ಪಡೆದು ಸಂತೋಷವಾಗಿದ್ದಾರೆ. ಈ ದುಂದು ವೆಚ್ಚದ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು.! ವಿರಾಟ್ ಕೋಹ್ಲಿ ಮಾಡಿದ್ದು ಸರಿನಾ ಅಥವಾ ತಪ್ಪಾ.? ಕಾಮೆಂಟ್ ಮುಖಾಂತರ ನಿಮ್ಮ ಅನಿಸಿಕೆ ತಿಳಿಸಿ.

Viral News Tags:Anushka sharma, Vamika virat kohli, Virat kohli, Viruska
WhatsApp Group Join Now
Telegram Group Join Now

Post navigation

Previous Post: ಅದೊಂದು ಕಾರು ಖರೀದಿಸುವುದಕ್ಕೆ ದರ್ಶನ್ ಅವರು ಇನ್ನು ಕಾಯುತ್ತಿದ್ದರಂತೆ.
Next Post: ಸ್ಟಾರ್ ನಟ ಆಗಿದ್ದರು ಅಪ್ಪು ಸಿನಿಮಾದಲ್ಲಿ ನಟನೆ ಮಾಡಲು ಪಡೆಯುತಿದ್ದ ಸಂಭಾವನೆ ಇಷ್ಟೇನಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore