ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಹೆಸರು ಕೇಳಿದ ತಕ್ಷಣ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಯಾಕೆಂದರೆ ಇವರೊಬ್ಬ ಪ್ರತಿಭಾನ್ವಿತ ನಟ ಎನ್ನುವುದಕ್ಕಿಂತ ಹೆಚ್ಚಾಗಿ ಸರಳ ಸಜ್ಜನಿಕೆಯ ವಿಶಾಲ ಹೃದಯ ಹೊಂದಿರುವ ಕರುಣಾಮಯಿ ಎನ್ನಬಹುದು. ತೆರೆ ಮೇಲೆ ಹೀರೋ ಆಗಿ ಮಿಂಚುತ್ತಿದ್ದ ಇವರು ತೆರೆ ಹಿಂದೆ ಕೂಡ ಹಾಗೆ ಬದುಕಿ ತೋರಿಸಿದವರು ಎಂದು. ಇವರು ಬದುಕಿದ ಈ ಬದುಕು ಎಷ್ಟೋ ಜನರಿಗೆ ಆದರ್ಶವಾಗಿದೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಆದರೆ ಅಪ್ಪು ಅವರು ನಮ್ಮೊಂದಿಗೆ ಇಲ್ಲವಲ್ಲ ಎನ್ನುವ ದುಃಖ ಮಾತ್ರ ಸಹಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ಅವರು ಇದ್ದಾಗಲಿಗಿಂತ ಅವರನ್ನು ಕಳೆದುಕೊಂಡ ಮೇಲೆ ನಮಗೆ ಅವರ ಬೆಲೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ತಿಳಿಯುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೂ ಕೂಡ ಅಭಿಮಾನಿಗಳು ಅಪ್ಪು ಅವರನ್ನು ದೇವರು ಎಂದು ಕಂಡು ಅವರಿಲ್ಲದರೂ ಕೂಡ ಅವರನ್ನು ಮೊದಲಿಗಿಂತ ಹೆಚ್ಚಾಗಿಯೇ ಪ್ರೀತಿಸುತ್ತಿದ್ದಾರೆ ಹಾಗೂ ಗೌರವಿಸುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮೊದಲು ಬಾಲ ನಟನಾಗಿ ಕನ್ನಡ ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಪ್ಪನೊಂದಿಗೆ ಸಿನಿಮಾ ಸೆಟ್ ಗೆ ಬರುತ್ತಿದ್ದ ಅಪ್ಪು ಅವರಿಗೆ ಅಭಿನಯ ಎನ್ನುವುದು ರಕ್ತಕತವಾಗಿ ಬಂದಿತ್ತು ಎಂದು ಹೇಳಬಹುದು. ಹೀಗಾಗಿ ಬಾಲ್ಯದಲ್ಲೇ ಅಷ್ಟು ಅದ್ಭುತವಾದ ನಟನೆ ಅವರಿಂದ ಮಾಡಲು ಸಾಧ್ಯವಾಗಿತ್ತು. ಅಣ್ಣಾವ್ರ ಎದುರಿನಲ್ಲಿ ನಿಂತು ಪುನೀತ್ ರಾಜಕುಮಾರ್ ಅವರು ಭಕ್ತ ಪ್ರಹ್ಲಾದ ಡೈಲಾಗ್ ಹೇಳುತ್ತಿದ್ದರೆ ನಿಜಕ್ಕೂ ಮೈ ಜುಮ್ ಎನಿಸುತ್ತಿತ್ತು ಯಾಕೆಂದರೆ ಅಷ್ಟು 10 ವರ್ಷ ಕೂಡ ತುಂಬದ ಬಾಲಕ ಸಂಸ್ಕೃತದ ಶ್ಲೋಕಗಳನ್ನು ನಿರರ್ಗಳವಾಗಿ ಒಪ್ಪಿಸುತ್ತಿದ್ದರೆ ಅದು ಮುಖದ ಭಾವ ತಪ್ಪದ ಹಾಗೆ ನಿಜಕ್ಕೂ ಅವನೊಬ್ಬ ಸರಸ್ವತಿ ಪುತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಪುನೀತ್ ರಾಜಕುಮಾರ್ ಅವರು ಬಾಲ್ಯದಲ್ಲಿಯೇ ಬೆಟ್ಟದ ಹೂವು ಎನ್ನುವ ಸಿನಿಮಾಗೆ ರಾಷ್ಟ್ರಪತಿ ಅವರಿಂದ ರಾಷ್ಟ್ರಪ್ರಶಸ್ತಿ ಪಡೆದು ಬಂದಿದ್ದರು.
ಅವರ ಚಲಿಸುವ ಮೋಡಗಳು ಸಿನಿಮಾದ ಕಾಣದಂತೆ ಮಾಯವಾದನು ಹಾಡಿನ ನೃತ್ಯ ಗಾನ ಹಾಗೂ ಸ್ಟೆಪ್ಸ್ ಗಳನ್ನು ಯಾರು ಕೂಡ ಮರೆಯಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಯಾರಿವನು ಎರಡು ನಕ್ಷತ್ರಗಳು ಪರಶುರಾಮ ಸನಾದಿ ಅಪ್ಪಣ್ಣ ಭಾಗ್ಯವಂತ ಇನ್ನೂ ಮುಂತಾದ ಅನೇಕ ಸಿನಿಮಾಗಳಲ್ಲಿ ಅಪ್ಪು ಅವರು ಬಾಲ ನಟನಾಗಿ ಕಾಣಿಸಿಕೊಂಡಿದ್ದರು. ನಂತರ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡು ಪಾರ್ವತಮ್ಮ ರಾಜಕುಮಾರ್ ಅವರ ನಡೆಸುತ್ತಿದ್ದ ವಜ್ರೇಶ್ವರಿ ಕಂಬೈನ್ಸ್ ನಿರ್ಮಾಣದ ಕೆಲಸಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡರು. ಪುನೀತ್ ರಾಜಕುಮಾರ್ ಅವರು ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಿದ್ದು 2000ನೇ ಇಸವಿಯಲ್ಲಿ ತೆರೆಕಂಡ ಅಪ್ಪು ಎನ್ನುವ ರೋಮ್ಯಾಂಟಿಕ್ ಲವ್ ಸ್ಟೋರಿ ಯ ಮೂಲಕ. ಈ ಸಿನಿಮಾ ಕೂಡ ಭರ್ಜರಿ ನೂರು ದಿನಗಳ ಪ್ರದರ್ಶನ ಕಾಣುವ ಮೂಲಕ ಅಪ್ಪು ಅವರನ್ನು ಮತ್ತೊಮ್ಮೆ ಕನ್ನಡಕ್ಕೆ ಅಭಿಮಾನದಿಂದ ಸ್ವಾಗತಿಸಿತ್ತು.
ಅಲ್ಲಿಂದ ಇಲ್ಲಿಯ ತನಕ ಅಪ್ಪು ಅವರು ಸೋಲು ಕಂಡಿದ್ದೇ ಕಡಿಮೆ. ಅಪ್ಪು ಅವರು ಅಭಿನಯಿಸಿರುವ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳೇ. ಮಕ್ಕಳಿಂದ ವೃದ್ದರವರಿಗೆ ಎಲ್ಲರೂ ಕೂಡ ಇಷ್ಟಪಟ್ಟು ನೋಡುವಂತ ಸಿನಿಮಾ ಕಥೆಗಳನ್ನು ಹಾಗೂ ಪಾತ್ರಗಳನ್ನು ಮತ್ತು ಕಥೆಯ ಕೊನೆಯಲ್ಲಿ ಒಂದು ಸಂದೇಶ ಇರುವಂತಹ ಉತ್ತಮ ಸ್ಟೋರಿಗಳನ್ನು ಅಪ್ಪು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಹಾಗಾದರೆ ಅಪ್ಪು ಅವರು ತಮ್ಮ ಅಭಿನಯಕ್ಕಾಗಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎಂದರೆ ಅಪ್ಪು ಅವರು ಇತ್ತೀಚಿಗಷ್ಟೇ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದರು. ಅವರು ಒಂದು ಸಿನಿಮಾ ಗೆ 5 ರಿಂದ 8 ಕೋಟಿ ರೂಗಳನ್ನು ಪಡೆಯುತ್ತಿದ್ದರು. ಅಪ್ಪು ಅವರ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಇರುವ ಭಾವನೆಯನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.