ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯೂಟಿಫುಲ್ ಜೋಡಿ ಅಂದರೆ ಅದು ರಾಧಿಕಾ ಪಂಡಿತ್ ಯಶ್ ಅಂತಾನೇ ಹೇಳಬಹುದು ಅದರಲ್ಲಿಯೂ ಕೂಡ ಈ ದಂಪತಿಗಳಿಗೆ ಮುದ್ದಾದ ಇಬ್ಬರು ಮಕ್ಕಳು ಇದ್ದಾರೆ ಐರಾ ಮತ್ತು ಯಥರ್ವ ಇಬ್ಬರು ಕೂಡ ಬಹಳ ಚುರುಕು ಮತ್ತು ಚೂಟಿ. ಏನೇ ಹೇಳಿಕೊಟ್ಟರು ಕೂಡ ಅಷ್ಟೇ ಸರಳವಾಗಿ ಮತ್ತೆ ಹಿಂತಿರುಗು ಹೇಳುತ್ತಾರೆ ಬುದ್ಧಿವಂತಿಕೆಯಲ್ಲಿ ಇವರಿಬ್ಬರನ್ನು ಕೂಡ ಮೆಚ್ಚಿಕೊಳ್ಳಲೇಬೇಕು ಸದ್ಯಕ್ಕೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಸಿನಿಮಾ ಜರ್ನಿಯಲ್ಲಿ ಎಷ್ಟೇ ಬ್ಯುಸಿಯಾಗಿ ಇದ್ದರೂ ಕೂಡ ತಮ್ಮ ಕುಟುಂಬಕ್ಕೆ ಅಷ್ಟೇ ಸಮಯವನ್ನು ಮೀಸಲು ಇಡುತ್ತಾರೆ ಅಂತ ಹೇಳಬಹುದು. ಇದಕ್ಕೆ ಉದಾಹರಣೆಯಾಗಿ ಈ ದಂಪತಿಗಳು ಆಗಾಗ ಕುಟುಂಬದೊಟ್ಟಿಗೆ ಪ್ರವಾಸ ಹೋಗುವುದು ಹೆಚ್ಚಿನ ಸಮಯ ಕಳೆಯುವುದು ಹರಟೆ ಹೊಡೆಯುವುದು ಡ್ಯಾನ್ಸ್ ಮಾಡುವುದನ್ನು ನಾವು ನೋಡಬಹುದು. ಇಂತಹ ವಿಚಾರಗಳಿಗೆ ಸಂಬಂಧಪಟ್ಟಂತಹ ಕೆಲವೊಂದು ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರೂ ಕೂಡ ಆಗಾಗ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ.
ಕಳೆದ ಬಾರಿ ಯಶ್ ಅವರು ತಮ್ಮ ಮುದ್ದು ಮಗಳು ಐರಾಗೆ ಕನ್ನಡದ ವರ್ಣಮಾಲೆ ಆದಂತಹ ಅ ಆ ಇ ಈ ಅನ್ನು ಹೇಳಿಕೊಳ್ಳುವಂತಹ ವಿಡಿಯೋ ಒಂದನ್ನು ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದಾದ ಬಳಿಕ ರಾಧಿಕಾ ಪಂಡಿತ್ ಅವರು ಸಮುದ್ರದ ತಟದಲ್ಲಿ ತಮ್ಮ ಮಕ್ಕಳ ಅಡುಗೆಗೆ ಆಟ ಆಡುವಂತಹ ಮುದ್ದಾದ ಕ್ಯೂಟ್ ವಿಡಿಯೋ ಒಂದನ್ನು ಕೂಡ ಹಾಕಿದ್ದರು ಈ ಫೋಟೋ ಮತ್ತು ವಿಡಿಯೋಗಳನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಅಷ್ಟೇ ಅಲ್ಲದ ದಿ ಪರ್ಫೆಕ್ಟ್ ಪೇರೆಂಟ್ಸ್ ಎಂಬ ಟೈಟಲ್ ಅನ್ನು ಕೂಡ ಕೊಟ್ಟಿದ್ದರು.
ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಸದ್ಯಕ್ಕೆ ಇಡೀ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಇದಾರೆ ಹಾಗಾಗಿ ಇವರ ಬಗ್ಗೆ ಆಗಿರಬಹುದು ಅಥವಾ ಸಿನಿಮಾ ಬಗ್ಗೆ ಆಗಿರಬಹುದು ಅಥವಾ ಮಕ್ಕಳ ಬಗ್ಗೆ ಆಗಿರಬಹುದು ಯಾವುದಾದರೂ ಅಪ್ಡೇಟ್ ಸಿಕ್ಕರೆ ಸಾಕು ಅಂತ ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿರುತ್ತಾರೆ. ಅಂತಹ ಅಭಿಮಾನಿಗಳಿಗೆ ಇಂದು ಒಂದು ಸಂತಸದ ಸುದ್ದಿ ಅಂತ ಹೇಳಬಹುದು ಏಕೆಂದರೆ ಯಶ್ ಅವರು ತಮ್ಮ ಮಗನೊಟ್ಟಿಗೆ ಹರಟೆ ಹೊಡೆಯುವಂತಹ ವಿಡಿಯೋ ಒಂದು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯಶ್ ಮಗ ಯಥರ್ವ ಯಾಕೋ ಅಪ್ಪನ ಮೇಲೆ ಸಖತ್ ಗರಂ ಆಗಿದ್ದಾನೆ ಅಂತ ಕಾಣಿಸುತ್ತದೆ.
ಏಕೆಂದರೆ ವಿಡಿಯೋದಲ್ಲಿ ಅಳುತ್ತಾ ಅಮ್ಮನ ಮಡಿಲನ್ನು ಅಪ್ಪಿಕೊಂಡು ಅಪ್ಪ ನೀನು ಕೆಟ್ಟವನು ಅಮ್ಮ ಮಾತ್ರ ಒಳ್ಳೆಯವಳು ಅಂತ ಹೇಳುತ್ತಿದ್ದಾನೆ. ಡ್ಯಾಡಿ ಇಸ್ ಬ್ಯಾಡ್ ಮಮ್ಮಿ ಇಸ್ ಗುಡ್ ಅಂತ ಹೇಳುತ್ತಿದ್ದಾನೆ ಎಷ್ಟೇ ಬಾರಿ ನಿಮ್ಮ ಅಪ್ಪ ಒಳ್ಳೆಯವನು ತುಂಬಾ ಸ್ವೀಟ್ ಆತ ತುಂಬಾ ಒಳ್ಳೆಯವನು ಅಂತ ಹೇಳಿಕೊಟ್ಟರು ಕೂಡ ಯಥರ್ವ ಮಾತ್ರ ಅದನ್ನು ಕೇಳುವುದಕ್ಕೆ ಸಿದ್ಧ ಇಲ್ಲ ತುಂಬಾನೇ ಕೋಪಗೊಂಡು ಅಪ್ಪ ಕೆಟ್ಟವನು ಅಂತ ಹೇಳುತ್ತಾನೆ ಇದ್ದಾನೆ. ಸದ್ಯಕ್ಕೆ ಈ ವಿಡಿಯೋ ನೋಡಿದಂತಹ ಫ್ಯಾನ್ಸ್ ಸಿಕ್ಕಾಪಟ್ಟೆ ಮನರಂಜನೆ ಪಡೆಯುತ್ತಿದ್ದಾರೆ ಆದರೆ ಕೆಲವೊಂದು ಮಾತ್ರ ತೀ.ವ್ರ.ವಾಗಿ ವಿ.ರೋ.ಧ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಈ ವಿಡಿಯೋದಲ್ಲಿ ಯಥರ್ವ ಕೇವಲ ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸುತ್ತಿದ್ದಾನೆ ಇದನ್ನು ನೋಡಿದಂತಹ ಕನ್ನಡ ಅಭಿಮಾನಿಗಳು ಮತ್ತು ನೆಟ್ಟಿಗರು ಮೊದಲು ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಿ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.