ಕಳೆದ ಒಂದು ವರ್ಷದಿಂದ ಆಧಾರ್ ಕಾರ್ಡ್ ಅಪ್ಡೇಟ್ (Aadhar Update) ವಿಷಯ ದೇಶದಾದ್ಯಂತ ಸಾಕಷ್ಟು ಬಾರಿ ಸುದ್ದಿಯಾಗಿದೆ. ಕಳೆದ ಮಾರ್ಚ್ 14ರಂದು ಆಧಾರ್ ಕಾರ್ಡ್ ನೀಡುವ ಅಧಿಕೃತ ಸಂಸ್ಥೆಯಾದ UIDAI ಯಾರು ಕಳೆದ 10 ವರ್ಷಗಳಿಂದ ಒಮ್ಮೆ ಕೂಡ ತಮ್ಮ ಆಧಾರ್ ಅಪ್ಡೇಟ್ ಮಾಡಿಸಿಲ್ಲ ಅಂತವರು ಕೂಡಲೇ ತಮ್ಮ POA / POI ಗಳನ್ನು ಕೊಟ್ಟು ರಿನೀವಲ್ (Renewal) ಮಾಡಿಕೊಳ್ಳಬೇಕು.
ಒಂದು ವೇಳೆ ಹತ್ತು ವರ್ಷದಲ್ಲಿ ಯಾವಾಗಲಾದರೂ ಮೊಬೈಲ್ ಸಂಖ್ಯೆ ಅಥವಾ ಸ್ವ ವಿವರಗಳಲ್ಲಿ ತಿದ್ದುಪಡಿ ಮಾಡಿಸಿದವರಿಗೆ ಇದರ ಅವಶ್ಯಕತೆ ಬರುವುದಿಲ್ಲ ಎಂದು ಸೂಚಿಸಿತ್ತು. ಸಾಮಾನ್ಯವಾಗಿ ಆಧಾರ್ ಅಪ್ಡೇಟ್ ಗೆ ರೂ.50 ಶುಲ್ಕ ವಿಧಿಸಲಾಗುತ್ತದೆ ಆದರೆ ಈ ಬಾರಿ ದೇಶದ ಕೋಟ್ಯಂತರ ನಾಗರಿಕರಿಗೆ ಅನಿವಾರ್ಯ ಇದ್ದಿದರಿಂದ ಸರ್ಕಾರ ಉಚಿತವಾಗಿ ಜೂನ್ 14 2023ರ ವರೆಗೆ ರಿನೀವಲ್ ಗೆ ಅವಕಾಶ ನೀಡಿತ್ತು.
ಈ ಸುದ್ದಿ ಓದಿ:- ಮಹಿಳೆಯರಿಗೆ ಸಿಹಿ ಸುದ್ದಿ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕೇವಲ ರೂ.100 ಮಾತ್ರ.!
ಇದಕ್ಕೆ ಬಹಳ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿ ಬಂತು. ಸಮಯದ ಕೊರತೆ ಮತ್ತು ಇನ್ನಿತರ ಕಾರಣಗಳಿಂದಾಗಿ ಸಂಪೂರ್ಣವಾಗಿ ಆಧಾರ ರಿನೀವಲ್ ಕಾರ್ಯ ಸಾಧ್ಯವಾಗಲಿಲ್ಲ ಎಂದೇ ಹೇಳಬಹುದು ಮತ್ತು ಹೆಚ್ಚಿನ ಕಾಲಾವಕಾಶದ ಅಗತ್ಯ ಇದೆ ಎಂದು ತಿಳಿದು ಬಂದಮೇಲೆ ಸೆಪ್ಟೆಂಬರ್ 14, 2023ರವರೆಗೆ ನಂತರ ಇನ್ನೊಮ್ಮೆ ಡಿಸೆಂಬರ್ 14 2023ರ ವರೆಗೆ ಹಾಗೂ ಕೊನೆಯದಾಗಿ ಮಾರ್ಚ್ 14, 2023ರವರೆಗೆ ಉಚಿತವಾಗಿ ಆಧಾರ್ ರಿನೀವಲ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.
ಸರ್ಕಾರ ನೀಡಿದ ಈ ಕಾಲವಕಾಶ ಮುಗಿದ ಮೇಲೆ ರೂ.2000 ದಂಡ (fine) ಕಟ್ಟಿ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಆಧಾರ್ ಅಪ್ಡೇಟ್ ಮಾಡಿಸುವವರೆಗೂ ಕೂಡ ಅವುಗಳನ್ನು ತಡೆಹಿಡಿಯಲಾಗುತ್ತದೆ ನಂತರ ಆಧಾರ್ ಬಳಸಿ ಮಾಡಲಾಗುವ ಯಾವುದೇ ಕಾರ್ಯವು ಆಗುವುದಿಲ್ಲ ಹಾಗೂ ಆಧಾರ್ ಲಿಂಕ್ ಆಗಿರುವ ಯಾವುದೇ ಡಾಕ್ಯುಮೆಂಟ್ ಬಳಸಲಾಗುವುದಿಲ್ಲ.
ಈ ಸುದ್ದಿ ಓದಿ:-ನೀವು ಸಾಮಾನ್ಯ ಮನುಷ್ಯನಲ್ಲ ಎಂದು ತೋರಿಸುವ 9 ಲಕ್ಷಣಗಳು ಇವು, ಇವುಗಳು ನಿಮ್ಮಲ್ಲಿದ್ದರೆ ಭಗವಂತನೇ ನಿಮ್ಮ ಜೊತೆಗೆ ಇದ್ದಾರೆ ಎಂದು ಅರ್ಥ.!
ಹಾಗಾಗಿ ಸರ್ಕಾರದ ಸೂಚನೆಯಂತೆ ಕೂಡಲೇ ಆಧಾರ್ ಅಪ್ಡೇಟ್ ಮಾಡಿಸಿ ಎನ್ನುವ ಕಟುನಿಟ್ಟಾದ ಆದೇಶವನ್ನು ಕಳೆದ ತಿಂಗಳು ಹೊರಡಿಸಿತ್ತು. ಆ ಪ್ರಕಾರವಾಗಿ ಮಾರ್ಚ್ 14, 2024ಕ್ಕೆ ಸರ್ಕಾರ ನೀಡಿದ ಕಡೇ ಗಡುವು ಮುಕ್ತಾಯವಾಗಿದೆ. ಈ ಸಮಯದಲ್ಲಿ ಆಧಾರ್ ಅಪ್ಡೇಟ್ ಮಾಡಿದವರಿಗೆ ಬಹಳಷ್ಟು ಸಮಸ್ಯೆ ಆಗುತ್ತಿದೆ ಯಾಕೆಂದರೆ ನಾವು ಈಗ ನಮ್ಮ ಎಲ್ಲಾ ದಾಖಲೆಗಳಿಗೂ ಕೂಡ ಆಧಾರ್ ಕಾರ್ಡ್ ಲಿಂಕ್ ಮಾಡಿರುತ್ತೇವೆ.
ಅದರಲ್ಲಿಯೂ ಮುಖ್ಯವಾಗಿ ಬ್ಯಾಂಕ್ ಅಕೌಂಟ್ ಗಳಿಗೂ ಕೂಡ ಆಧಾರ್ ಲಿಂಕ್ ಆಗಿದೆ. DBT ಮೂಲಕ ಪ್ರತಿ ತಿಂಗಳು ವೃದ್ಯಾಪ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣ ಪಡೆಯುವವರು ಒಂದು ವೇಳೆ ಆಧಾರ್ ಅಪ್ಡೇಟ್ ಮಾಡಿಸದಿದ್ದರೆ ಮುಂದಿನ ತಿಂಗಳಿನಿಂದ ಹಣ ಹೋಗುವುದಿಲ್ಲ, ಹಾಗಾಗಿ ಕೂಡಲೇ ಆಧಾರ್ ಅಪ್ಡೇಟ್ ಮಾಡಿಸಬೇಕು.
ಈ ಸುದ್ದಿ ಓದಿ:-ಶೀಘ್ರ ವಿವಾಹಕ್ಕೆ ಸರಳ ಪರಿಹಾರ, ತಾಯಿ ಬನಶಂಕರಮ್ಮನಿಗೆ ಹೀಗೆ ಸಂಕಲ್ಪ ಮಾಡಿ.!
ಆದರೆ ಮಾರ್ಚ್ 14, 2023 ರವರೆಗೆ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ನೀಡಿದ್ದ ಅವಕಾಶ ಮುಕ್ತಾಯ ಆಗಿರುವುದರಿಂದ ರೂ.2000 ದಂಡ ಪಾವತಿಸಬೇಕು ಎನ್ನುವ ಬೇಸರ ಇದ್ದರೆ ನಿಮಗೊಂದು ಸಮಾಧಾನಕರ ಸುದ್ದಿ ಇದೆ. ಅದೇನೆಂದರೆ ಸರ್ಕಾರ ಈಗ ಕೊನೆಯ ಬಾರಿಗೆ ಜೂನ್ 14, 2024ರ ವರೆಗೆ ಉಚಿತವಾಗಿಯೇ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಅವಕಾಶ ನೀಡುತ್ತಿದೆ.
ಮತ್ತು ಇದು ಕೊನೆಯ ಅವಕಾಶ ಆಗಿದ್ದು ಈ ಅವಕಾಶ ಮುಕ್ತಾಯವಾದ ನಂತರ ಕಡಾ ಖಂಡಿತವಾಗಿ ಈ ಮೇಲೆ ಸೂಚಿಸಿದ್ದ ನಿಯಮಗಳು ಜಾರಿಗೆ ಬರಲಿವೆ. ಆದ್ದರಿಂದ ಕೂಡಲೇ ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ CSC ಕೇಂದ್ರ ಅಥವಾ ನೀವೇ ಆನ್ಲೈನಲ್ಲಿ UIDAIನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಿ.