ನಮ್ಮ ದಿನ ಆರಂಭವಾಗುವುದು ಬೆಳಗಿನ ಜಾವದಲ್ಲಿ ಮತ್ತು ಹಾಸಿಗೆಯಿಂದ ಏಳುವಾಗಲೇ ದಿನದ ಆರಂಭ ಆಗಿರುತ್ತದೆ. ಈ ರೀತಿ ಮುಂಜಾನೆ ಒಳ್ಳೇ ರೀತಿಯಲ್ಲಿ ಶುರುವಾದರೆ ದಿನಪೂರ್ತಿ ಮನಸ್ಸು ಖುಷಿಯಿಂದ ಇರುತ್ತದೆ.
ದೇಹ ಆರೋಗ್ಯವಾಗಿರುತ್ತದೆ, ಮನಸ್ಸು ಶಾಂತವಾಗಿರುತ್ತದೆ, ಲವಲವಿಕೆಯಿಂದ ನಾವು ಎಲ್ಲಾ ಕಾರ್ಯಗಳನ್ನು ಭಾಗಿಯಾಗಲು ದೇಹ ಸಹಕರಿಸುತ್ತದೆ ಮತ್ತು ಇದೆಲ್ಲ ಸರಿ ಇದ್ದಾಗ ಆರೋಗ್ಯವು ಕೂಡ ಉತ್ತಮವಾಗುತ್ತದೆ. ಹೀಗಾಗಿ ಬೆಳಿಗ್ಗೆ ನಿದ್ದೆಯಿಂದ ಎದ್ದೇಳುವ ವಿಚಾರವಾಗಿ ನಮ್ಮ ಹಿರಿಯರು ಸಾಕಷ್ಟು ಪದ್ಧತಿಗಳನ್ನು ಮಾಡಿದ್ದರು.
ಈಗ ಆಧುನಿಕ ಜೀವನ ಶೈಲಿ ಅಬ್ಬರದಲ್ಲಿ ಎಲ್ಲ ಅಸ್ತವ್ಯಸ್ತವಾಗಿ ನೂರಾರು ಬಗೆಯ ತೊಂದರೆಗಳಿಗೆ ಯುವಜನತೆ ತುತ್ತಾಗುತ್ತಿದ್ದಾರೆ. ನೀವು ಕೂಡ ಹಿರಿಯರ ರೀತಿ ಸಂಪೂರ್ಣವಾದ ಜೀವನವನ್ನು ನೆಮ್ಮದಿಯಾಗಿ ಕಳೆಯಬೇಕು ಎಂದು ಬಯಸಿದರೆ ಇನ್ನು ಮುಂದೆ ಬೆಳಗ್ಗೆ ಎದ್ದ ಕೂಡಲೇ ಈ ರೀತಿ ಕಾರ್ಯಗಳನ್ನು ಮಾಡಿ.
ಈ ಸುದ್ದಿ ಓದಿ:- 2024 ಮಾರ್ಚ್ ತಿಂಗಳ ರಾಶಿ ಫಲ, ಮಿಥುನ ರಾಶಿಯವರು ಸದೃಢರಾಗಲು ಒಂದು ಒಳ್ಳೆಯ ಅವಕಾಶ.!
* ಯಾವಾಗಲೂ ಬ್ರಾಹ್ಮಿ ಮುಹೂರ್ತದಲ್ಲಿ ನಿದ್ರೆಯಿಂದ ಎದ್ದೇಳಬೇಕು. ಈ ರೀತಿ ಬ್ರಾಹ್ಮಿ ಮುಹೂರ್ತದಲ್ಲಿ ಏಳುವವರಿಗೆ ಬ್ರಹ್ಮಾದಿಯಾಗಿ ಮುಕ್ಕೋಟಿ ದೇವತೆಗಳ ಆಶೀರ್ವಾದ ಸಿಗುತ್ತದೆ. ಆ ಸಮಯದಲ್ಲಿ ಇಡೀ ಪ್ರಕೃತಿಯೇ ಹೊಸ ದಿನವನ್ನು ಸ್ವಾಗತಿಸಲು ಎದ್ದು ಚುರುಕಾಗಿರುತ್ತದೆ. ನಾವು ಆಲಸ್ಯದಿಂದ ಮಲಗಿಕೊಂಡೆ ಇದ್ದರೆ ಈ ವೈಬ್ರೇಶನ್ ಗಳು ನಮಗೆ ಸಿಗುವುದಿಲ್ಲ. ಈ ಬ್ರಾಹ್ಮಿ ಮುಹೂರ್ತದ ಪಾಸಿಟಿವ್ ವೈಬ್ರೇಶನ್ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಬಹಳ ಉತ್ತಮ ಪರಿಣಾಮಗಳನ್ನು ಬೀಳುತ್ತದೆ ಹಾಗಾಗಿ ಬೆಳಗೆಯೇ ಎದ್ದು ಸ್ವಾಗತಿಸಿ.
* ಬೆಳಗ್ಗೆ ಎದ್ದ ಕೂಡಲೇ ಯೋಗಾ, ಧ್ಯಾನ, ವ್ಯಾಯಾಮ, ದೇವರಿಗೆ ಪ್ರಾರ್ಥನೆ ಸಲ್ಲಿಸಲು ಸಮಯ ಮೀಸಲಿಡಿ. ಇವುಗಳು ಆದ ನಂತರ ದಿನನಿತ್ಯದ ಚಟುವಟಿಕೆಗಳನ್ನು ಆರಂಭಿಸಿ ಎಲ್ಲವೂ ಯಶಸ್ಸು ಆಗುತ್ತದೆ. ಈ ರೀತಿ ಅಭ್ಯಾಸಗಳನ್ನು ರೂಢಿಸಿಕೊಳ್ಳಿ ನೀವು ಎಷ್ಟು ಚೈತನ್ಯವಂತರಾಗಿರುತ್ತೀರಿ, ಒತ್ತಡ ಮುಕ್ತರಾಗಿರುತ್ತೀರಿ ಎಂದು ನಿಮಗೆ ವ್ಯತ್ಯಾಸ ತಿಳಿಯುತ್ತದೆ. ದೇಹದ ಆರೋಗ್ಯಕ್ಕೆ ಮನಸ್ಸಿನ ನಿಯಂತ್ರಣಕ್ಕೆ ಇವುಗಳ ಅವಶ್ಯಕತೆ ಇದೆ.
* ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆರಡು ಲೋಟ ಬೆಚ್ಚಗಿನ ನೀರನ್ನು ಕುಡಿಯಬೇಕು ಈ ರೀತಿ ಮಾಡುವುದರಿಂದ ದೇಹದಲ್ಲಿರುವ ಎಲ್ಲಾ ಟಾಕ್ಸಿನ್ ಅಂಶಗಳು ಕೂಡ ಹೊರ ಹೋಗುತ್ತವೆ. ಬೆಚ್ಚಗಿನ ನೀರಿಗೆ ಒಂದು ಹೋಳು ನಿಂಬೆರಸ ಹಾಕಿಕೊಂಡು ಕುಡಿಯುವುದು ಕೂಡ ಬಹಳ ಒಳ್ಳೆಯದು. ಇದರಿಂದ ಚಯಾಪಚಯ ಕ್ರಿಯೆಗಳು ಸರಾಗವಾಗುತ್ತವೆ. ಆದರೆ ಯಾವುದೇ ಕಾರಣಕ್ಕೂ ಈ ರೀತಿ ಖಾಲಿ ಹೊಟ್ಟೆಯಲ್ಲಿ ಟೀ ಕಾಫಿಗಳನ್ನು ಸೇವಿಸಬೇಡಿ.
ಈ ಸುದ್ದಿ ಓದಿ:- ಆಧಾರ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೂ ಸಿಗಲಿದೆ ರೂ.2000.!
* ಪ್ರತಿದಿನವೂ ಬೆಳಗಿನ ಸಮಯದಲ್ಲಿ ಟಿಫನ್ ಮಾಡುವುದಕ್ಕೂ ಮುಂಚೆ ರಾತ್ರಿ ನೆನೆಸಿಟ್ಟ ಡ್ರೈ ಫ್ರೂಟ್ ಗಳನ್ನು 40 ಗ್ರಾಂ ಗಳಷ್ಟಾದರೂ ಸೇವಿಸಿ ದ್ರಾಕ್ಷಿ ಗೋಡಂಬಿ ಬಾದಾಮಿ ಕಡಲೆ ಬೀಜ ವಾಲ್ ನಟ್ ರಾತ್ರಿ ನೆನೆಸಿಟ್ಟು ಸೇವಿಸಿ ಅದರಲ್ಲೂ ಬಾದಾಮಿಯನ್ನು ಸೇವಿಸುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
* ಬೆಳಗಿನ ಉಪಹಾರವನ್ನು ಎಂದಿಗೂ ಕೂಡ ಮಿಸ್ ಮಾಡಬೇಡಿ ಬೆಳಗಿನ ಉಪಹಾರದಲ್ಲಿ ಆದಷ್ಟು ಹಸಿರು ತರಕಾರಿಗಳು ಹಸಿರು ಸೊಪ್ಪು ಹಸಿರು ಹಣ್ಣುಗಳು ಇರಲಿ ಮತ್ತು ಬೆಳಗಿನ ಆಹಾರವು ಪೋಷಿಕಾಂಶಯುಕ್ತವಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ. ಯಾಕೆಂದರೆ ದಿನಪೂರ್ತಿ ನೀವು ಆಕ್ಟಿವ್ ಆಗಿ ಎನರ್ಜಿಯಿಂದ ಇರಬೇಕೆಂದರೆ ಬೆಳಗ್ಗೆ ನೀವು ಸೇವಿಸುವ ಆಹಾರವೇ ಆಧಾರ ಇದಕ್ಕೂ ಮುನ್ನ ಪ್ರಿ ಬಯೋಟಿಕ್ ಆಗಿ ಅಗಸೆ ಬೀಜ ಹಾಕಿದ ಮಜ್ಜಿಗೆ ಸೇವಿಸಿದರೆ ಇನ್ನು ಒಳ್ಳೆಯದು.
* ಬೆಳಗ್ಗೆ ಯಾರ ಮೇಲೂ ಕೂಗಾಡಬೇಡಿ ಎದುರಿಗೆ ಸಿಕ್ಕವರಿಗೆಲ್ಲ ನಗುನಗುತ್ತಾ ಬೆಳಗಿನ ಶುಭೋದಯ ಹೇಳಿ ಮಾತನಾಡಿಸಿ. ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಕೂಡ ಇದೇ ರೀತಿ ಇರಿ ನಿಮಗೂ ಹಾಗೂ ನಿಮ್ಮಿಂದ ಇತರರಿಗೂ ಶುಭವಾಗುತ್ತದೆ.