ಕೆಲವು ಮನೆಗಳಲ್ಲಿ ಎಷ್ಟೇ ದುಡಿಯುತ್ತಿದ್ದರೂ ಕೂಡ ದುಡಿದ ಹಣ ಮನೆಗೆ ಬರುವುದೇ ಇಲ್ಲ ಬಂದರೂ ಕೂಡ ಒಂದೇ ದಿನದಲ್ಲಿ ಆ ಖರ್ಚು ಈ ಖರ್ಚು ಬಂದು ಖಾಲಿಯಾಗಿ ಬಿಡುತ್ತದೆ. ಇವರು ತಿಂಗಳು ಪೂರ್ತಿ ದೊಡ್ಡ ಹಣವನ್ನು ನಾಲ್ಕು ದಿನವೂ ಕೂಡ ಕೈಯಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ ನಡುವೆ ಯಾವುದಾದರು ಅವಶ್ಯಕತೆ ಬಂದರೆ ಮತ್ತೆ ಸಾಲ ಮಾಡಬೇಕು.
ಹೀಗೆ ಸಾಕಷ್ಟು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕಿ ಬಿಡುತ್ತಾರೆ ನಿಮಗೂ ಈ ರೀತಿ ಅನುಭವ ಆಗಿದ್ದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿಯು ನಿಲ್ಲುತ್ತಿಲ್ಲ ಕೆಲಸದಿಂದ ಅಥವಾ ಕೃಷಿಯಿಂದ ಅಥವಾ ವ್ಯಾಪಾರದಿಂದ ಹಣ ಬರುತ್ತಿದೆ ಆದರೆ ಅದರಲ್ಲಿ ನಮ್ಮ ಶ್ರಮಕ್ಕೆ ತಕ್ಕಷ್ಟು ದಕ್ಕುತ್ತಿಲ್ಲ ಎಂದರೆ ನಾವು ಹೇಳುವ ಸರಳ ವಿಧಾನಗಳನ್ನು ಇನ್ನು ಮುಂದೆ ಮನೆಯ ಗೃಹಿಣಿಯರು ಫಾಲೋ ಮಾಡಿ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
* ಮನೆಯಲ್ಲಿ ಗೃಹಿಣಿ ಯಾವಾಗಲು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ದೇವರ ಕೋಣೆಯಲ್ಲಿ ಪೂಜೆ ಮಾಡಿ ನಿತ್ಯ ಕರ್ಮಗಳಲ್ಲಿ ಭಾಗಿಯಾಗಬೇಕು. ಹಾಗೆ ಆ ಮನೆಯ ಮಕ್ಕಳು ಕೂಡ ಮುಂಜಾನೆಗೆ ಎದ್ದು ಓದಿನಲ್ಲಿ ಅಥವಾ ತಮ್ಮ ಭವಿಷ್ಯಕ್ಕೆ ಬೇಕಾದ ತಯಾರಿಗಳಲ್ಲಿ ಸಮಯ ವಿನಿಯೋಗಿಸಬೇಕು ದುಡಿಯುವ ವ್ಯಕ್ತಿಗಳು ಕೂಡ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ತಮ್ಮ ಕೆಲಸ ಕಾರ್ಯಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- ಸ್ನಾನದ ನೀರಿನಲ್ಲಿ ಇದನ್ನು ಬೆರೆಸಿ ಕೋಟಿ ಸಾಲ ಇದ್ದರೂ ತೀರುತ್ತದೆ…
* ಪ್ರತಿದಿನ ಬೆಳಿಗ್ಗೆ ಕೂಡ ಮನೆ ಮುಂದೆ ರಂಗೋಲಿ ಇಡಬೇಕು, ಹೊಸ್ತಿಲುಗಳನ್ನು ಶುದ್ಧಗೊಳಿಸಿ ಅರಿಶಿನ ಕುಂಕುಮ ಹೂವು ಇಟ್ಟು ಪೂಜೆ ಮಾಡುವುದನ್ನು ಮರೆಯಬಾರದು
* ಗೃಹಿಣಿಯು ಮನೆ ಸ್ವಚ್ಛಗೊಳಿಸುವಾಗ ಮನೆ ಒರೆಸುವ ನೀರಿಗೆ ಚಿಟಿಕೆ ಅರಿಶಿಣ ಹಾಗೂ ಸ್ವಲ್ಪ ಕಲ್ಲುಪ್ಪು ಹಾಕಿ ಮನೆ ಶುದ್ಧಗೊಳಿಸಬೇಕು ಯಾಕೆಂದರೆ ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದಾದರೂ ನಕರಾತ್ಮಕ ಶಕ್ತಿ ಇದ್ದರೆ ಅದು ಆಚೆ ಹೋಗುತ್ತದೆ ಮತ್ತು ವಾತಾವರಣ ಸಕರತ್ಮಕವಾಗಿದ್ದಾಗ ಶುದ್ಧವಾಗಿದ್ದಾಗ ಸ್ವಚ್ಛವಾಗಿದ್ದಾಗ ತಾಯಿ ಮಹಾಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾರೆ
* ಮನೆಯಲ್ಲಿ ದೇವರ ವಿಗ್ರಹಗಳನ್ನು ಇಟ್ಟುಕೊಂಡಿದ್ದರೆ ಪ್ರತಿನಿತ್ಯವೂ ಕೂಡ ಧೂಪ ದೀಪದ ಆರಾಧನೆ ಮಾಡಿ ನೈವೇದ್ಯ ಅರ್ಪಿಸಿ ಪೂಜೆ ಮಾಡಬೇಕು ಫೋಟೋಗಳು ಇದ್ದರೆ ವಾರಕ್ಕೆ ಒಮ್ಮೆಯಾದರೂ ಇವುಗಳನ್ನು ಶುದ್ಧ ಮಾಡಿ ಗಂಧ, ಕುಂಕುಮ ಹಚ್ಚಿ ಪೂಜಿಸಬೇಕು ಮತ್ತು ಪ್ರತಿನಿತ್ಯವು ದೇವರಿಗೆ ಇಡುವ ಹೂವನ್ನು ಬದಲಾಯಿಸಬೇಕು.
ಈ ಸುದ್ದಿ ಓದಿ:- 2024 ಮಾರ್ಚ್ ತಿಂಗಳ ರಾಶಿ ಫಲ, ಮಿಥುನ ರಾಶಿಯವರು ಸದೃಢರಾಗಲು ಒಂದು ಒಳ್ಳೆಯ ಅವಕಾಶ.!
* ಬೆಳಿಗ್ಗೆ ಮತ್ತು ಮುಸ್ಸಂಜೆ ಸಮಯದಲ್ಲೂ ಕೂಡ ಮನೆಯಲ್ಲಿ ದೇವರ ಕೋಣೆಯಲ್ಲಿ ದೇವರಿಗೆ ದೀಪ ಹಚ್ಚಬೇಕು ಮನೆ ಮುಂದೆ ತುಳಸಿ ಗಿಡವನ್ನು ನೆಟ್ಟು ಪೋಷಿಸಬೇಕು ಅಲ್ಲಿಯೂ ಕೂಡ ಶುದ್ಧತೆ ಕಾಪಾಡಿಕೊಳ್ಳಬೇಕು ಪ್ರತಿ ಸಂಜೆ ತುಳಸಿಯ ಮುಂದೆ ದೀಪ ಹಚ್ಚಬೇಕು
* ಮನೆಯಲ್ಲಿ ಮನೆಯ ಸದಸ್ಯರಿಗೆ ಊಟ ಕೊಡುವಂತೆ ಮನೆಯಲ್ಲಿರುವ ಸಾಕು ಪ್ರಾಣಿಗಳ ಊಟದ ವ್ಯವಸ್ಥೆಯನ್ನು ಕೂಡ ಮಾಡಬೇಕು. ಒಂದು ವೇಳೆ ಸಾಕು ಪ್ರಾಣಿಗಳು ಇಲ್ಲದೆ ಇದ್ದರೆ ನಿಮ್ಮ ಮನೆಗೆ ಬರುವ ಪ್ರಾಣಿಗಳಿಗೆ ಪ್ರಕೃತಿಯಲ್ಲಿರುವ ಪಕ್ಷಿಗಳಿಗಾಗಿ ಆಹಾರ ನೀರಿನ ವ್ಯವಸ್ಥೆ ಮಾಡಬೇಕು
* ಮನೆಯಲ್ಲಿರುವ ಕಿರಿಯರು ಹಿರಿಯರನ್ನು ಗೌರವಿಸಬೇಕು, ಹಿರಿಯರು ಕಿರಿಯರಿಗೆ ಪ್ರೀತಿ ತೋರಿ ಒಳ್ಳೆಯ ಮಾತನಾಡಬೇಕು
* ಮನೆಯಲ್ಲಿ ಪ್ರೀತಿ ವಿಶ್ವಾಸ ಬಲವಾಗಿರಬೇಕು ಯಾವಾಗಲೂ ಅಪನಂಬಿಕೆ, ಸದಾ ಜ’ಗ’ಳ ಆಡುತ್ತಿರುವುದು ಮನೆಗೆ ಬಂದರೆ ಒಂದು ರೀತಿಯ ಕಿರಿಕಿರಿ ಆಗುವುದು ಈ ರೀತಿ ವಾತಾವರಣ ಮನೆಯ ಸದಸ್ಯರಿಗೆ ಇದ್ದರೆ ಇಂತಹ ಮನೆಗಳಿಗೆ ತಾಯಿ ಮಹಾಲಕ್ಷ್ಮಿ ಕೂಡ ಬರುವುದಿಲ್ಲ ಒಂದು ವೇಳೆ ಬಂದರೂ ಕೂಡ ಮನೆ ಪರಿಸ್ಥಿತಿ ನೋಡಿ ಬೇಸರಗೊಂಡು ಹೊರಟು ಹೋಗುತ್ತಾರೆ. ಹಾಗಾಗಿ ಮನೆ ಎಂದರೆ ಗುಡಿ ರೀತಿಯೇ ಇರಬೇಕು ಮನೆಯಲ್ಲಿ ಯಾರೂ ಕೆಟ್ಟ ಮಾತುಗಳನ್ನು ಆಡಬಾರದು ಮನೆಯಲ್ಲಿ ಕುಳಿತು ಬೇರೆಯವರಿಗೆ ಕೆಟ್ಟದಾಗುವ ರೀತಿ ಯೋಚಿಸಬಾರದು ಹೀಗೆ ಮಾಡಿದರೆ ಆ ಮನೆಗೆ ಕಷ್ಟ ಬರುವುದು ಗ್ಯಾರಂಟಿ.
ಈ ಸುದ್ದಿ ಓದಿ:- ಮಹಿಳೆಯರಿಗೆ ಸಿಹಿ ಸುದ್ದಿ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕೇವಲ ರೂ.100 ಮಾತ್ರ.!
* ಮನೆಗೆ ಯಾರೇ ಅತಿಥಿಗಳು ಬಂದರೂ ಅವರ ಮನಸ್ಸಿಗೆ ನೋವು ಮಾಡಬಾರದು ಒಂದು ವೇಳೆ ಅಸಹಾಯಕರು ನಿರ್ಗತಿಕರು ಬಂದರೆ ಕೈಲಾದಷ್ಟು ನೆರವು ನೀಡಬೇಕು ಹೊರತು ನಿಂದಿಸಬಾರದು. ಹೀಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಿಂದ ನಿಮ್ಮ ಕಷ್ಟಗಳು ಕಳೆಯುತ್ತವೆ.