ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಜೀವನ ಉತ್ಸಾಹ ಇರಬೇಕು. ಆಗ ನಾಳೆ ಬಗ್ಗೆ ಭರವಸೆ ಬರುತ್ತದೆ ಮತ್ತು ಹೊಸದಾಗಿ ದಿನ ಆರಂಭಿಸಲು ಒಂದು ಚೈತನ್ಯ ಬರುತ್ತದೆ. ಈ ರೀತಿಯ ಭಾವನೆ ಮನಸ್ಸಿನಲ್ಲಿ ಬರಬೇಕು ಎಂದರೆ ನಾವು ನಮಗಾಗಿ ಕೂಡ ಬದುಕಬೇಕು ಒಂದು ಗಂಡು ಮಗನೇ ಆಗಿರಲಿ ಅಥವಾ ಹೆಣ್ಣು ಮಗಳೇ ಆಗಿರಲಿ ಪ್ರತಿಯೊಬ್ಬರ ಕೂಡ ಮುಖ್ಯವೇ.
ಈಗ ಸಾಮಾನ್ಯವಾಗಿ ಯಾರನ್ನಾದರೂ ಕೇಳಿ ನೋಡಿ ನಾನು ಬದುಕುತ್ತಿರುವುದೇ ನನ್ನ ಗಂಡನಿಗೋಸ್ಕರ, ಮಕ್ಕಳಿಗೋಸ್ಕರ ಹೆತ್ತವರಿಗೋಸ್ಕರ ಎಂದು ಹೇಳುತ್ತಿರುತ್ತಾರೆ. ಇದು ಖಂಡಿತ ತಪ್ಪಲ್ಲ ಇದೊಂದು ಶ್ರೇಷ್ಠ ಭಾವನೆ. ಆದರೆ ಇದರ ಜೊತೆಗೆ ನಿಮಗಾಗಿ ಕೂಡ ನೀವು ಬದುಕಬೇಕು ಎನ್ನುವುದು ಕೂಡ ಅಷ್ಟೇ ಮುಖ್ಯ ಸಂಗತಿ ಇದನ್ನು ನಿರ್ಲಕ್ಷಿಸಬೇಡಿ.
ನಿಮಗಾಗಿ ಬದುಕಲು ಏನು ಮಾಡಬೇಕು ಎನ್ನುವ ವಿಚಾರವನ್ನು ಒಂದು ಚಿಕ್ಕ ವಿಷಯದಿಂದ ಆರಂಭ ಮಾಡಬಹುದು. ಉದಾಹರಣೆಯಾಗಿ ಹೇಳುವುದಾದರೆ ನಿಮಗಾಗಿ ರೂ.100 ಉಳಿಸಿ, ಸಾಮರ್ಥ್ಯವಿರುವವರು ಹೆಚ್ಚಿಗೂ ಮಾಡಬೇಕು. ನಿಮಗಾಗಿ ನೀವು ಹಣ ಇಡುವುದು ಕೊಡುವ ಧೈರ್ಯವನ್ನು ಬೇರಾವುದೂ ಕೊಡುವುದಿಲ್ಲ.
ಈ ಸುದ್ದಿ ಓದಿ:- ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!
ಉಳಿತಾಯ ಮಾಡಿದರೆ ಸಾಕೇ ಎಂದರೆ ಈ ರೀತಿ ಹೂಡಿಕೆ ವಿಚಾರ ಮಾತ್ರ ಅಲ್ಲ ಉದ್ದೇಶ ನಿಮಗೆ ಸಂತೋಷ ನೀಡುವ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು ಎನ್ನುವುದು. ನಿಮ್ಮ ಖುಷಿಗಾಗಿ ನೀವು ರೂ.100 ಇಟ್ಟುಕೊಳ್ಳಲೇಬೇಕು ಆ ಹಣವನ್ನು ಪೂರ್ತಿಯಾಗಿ ನಿಮಗಾಗಿ ಮೀಸಲಿಡಿ.
ನಿಮ್ಮ ಹೆಸರಿನಲ್ಲಿ ಅರ್ಚನೆ ಮಾಡಿಸಲು ಅಥವಾ ನಿಮಗೆ ಬೇಕಾದವರಿಗೆ ಸಹಾಯ ಮಾಡಲು ಗಿಫ್ಟ್ ಕೊಡಲು ಅಥವಾ ನಿಮಗೆ ಇಷ್ಟವಾದ ಆಹಾರ ತಿನ್ನಲು ನಿಮಗಾಗಿ ಹೊರಗೆ ಹೋಗಿ ಬಟ್ಟೆಯನ್ನು ತೆಗೆದುಕೊಳ್ಳಲು ಪೂರ್ತಿಯಾಗಿ ಅದನ್ನು ನಿಮಗಾಗಿ ಖರ್ಚು ಮಾಡಿ.
ಈ ರೀತಿ ಆದಾಗ ನೀವು ನಿಮ್ಮ ಖುಷಿಗಾಗಿಯೂ ಬದುಕುತ್ತಿದ್ದೀರಾ ಎನ್ನುವುದು ಮನವರಿಕೆ ಆಗುತ್ತದೆ. ನಿಮ್ಮವರಿಗಾಗಿ ಎಷ್ಟು ಸಮಯ ಹಣ ಖರ್ಚು ಮಾಡಿದರು ನಮ್ಮದೇನು ತಕರಾರು ಇಲ್ಲ ಆದರೆ ನಿಮಗಾಗಿ ಕೂಡ ನೀವು ಅದರಲ್ಲಿ ಸಣ್ಣ ಭಾಗವನ್ನು ಎತ್ತಿರಲೇಬೇಕು ಸಂಪೂರ್ಣವಾಗಿ ನಿನಗೋಸ್ಕರ ಖರ್ಚು ಮಾಡಬೇಕು.
ಈ ಸುದ್ದಿ ಓದಿ:- ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!
ಒಮ್ಮೆ ಈ ರೀತಿ ಪ್ರಯೋಗ ಮಾಡಿ ನೋಡಿ ಆಗ ಆಗುವ ಬದಲಾವಣೆಯು ನಿಮ್ಮಲ್ಲಿ ಹೊಸದೊಂದು ಪರಿವರ್ತನೆ ಉಂಟು ಮಾಡಿರುತ್ತದೆ. ನೀವು ನಿಮಗಾಗಿ ಹೊಸದೇನನ್ನೋ ಕಲಿಯಲು ಅಥವಾ ಈ ಹಿಂದೆ ಆಸಕ್ತಿ ಇದ್ದು ಬದುಕಿನ ಜಂಜಾಟಗಳ ಕಾರಣದಿಂದ ಮರೆತು ಹೋಗಿದ್ದನ್ನು ಮತ್ತೆ ಆರಂಭಿಸಲು ಶುರು ಮಾಡಿ ನೋಡಿ.
ಆಗ ಮನಸ್ಸಿಗೆ ಬೇಸರ ಆಗುವುದು, ಕೆಟ್ಟ ಆಲೋಚನೆಗಳು ಕೂಡ ಬರುವುದು ಇದೆಲ್ಲಾ ನಿಲ್ಲುತ್ತದೆ. ಆಗ ನೀವು ಖುಷಿಯಾಗಿವುದರ ಜೊತೆಗೆ ನಿಮ್ಮ ಸುತ್ತಮುತ್ತ ಇರುವವರನ್ನು ಕೂಡ ಪ್ರೇರೇಪಿಸುವ ಹೊಸ ಶಕ್ತಿ ನಿಮ್ಮ ಒಳಗೆ ಬರುತ್ತದೆ.
ನೀವು ಕೂಡ ಯಾರಿಗಿಂತ ಕಡಿಮೆ ಇಲ್ಲ ನಿಮ್ಮ ಜೀವನವು ಕೂಡ ಇಲ್ಲಿ ಮುಖ್ಯ ಎನ್ನುವುದು ಅರ್ಥ ಆಗುತ್ತದೆ. ಈ ಪ್ರಪಂಚ ಎನ್ನುವುದು ದೊಡ್ಡ ಪಝಲ್ ಆದರೆ ನೀವು ಕೂಡ ಇದರಲ್ಲಿ ಒಂದು ಪ್ರಮುಖವಾದ ಚಿಕ್ಕ ಭಾಗ ಹಾಗಾಗಿ ನಿಮ್ಮನ್ನು ನೀವು ಕಡೆಗಣಿಸಬೇಡಿ ನಿಮ್ಮ ಖುಷಿ ಶಾಂತಿ ಮಾನಸಿಕ ನೆಮ್ಮದಿ ದೈಹಿಕ ಆರೋಗ್ಯ ಇದೆಲ್ಲದಕ್ಕೂ ಕೂಡ ಬೆಲೆ ನೀಡಿ.