ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ದಾಸ ಶಾಸ್ತ್ರಿ ಸ್ಯಾಂಡಲ್ವುಡ್ ಸುಲ್ತಾನ ಡಿ ಬಾಸ್ ದಚ್ಚು ಹೀಗೆ ನಾನಾ ಹೆಸರುಗಳಿಂದ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದಾರೆ. ಆದರೆ ದರ್ಶನ್ ಅವರ ನಿಜವಾದ ಹೆಸರು ಹೇಮಂತ್ ಕುಮಾರ್ ಎಂದು. ಕನ್ನಡದ ಹಳೆಯ ನಟ ತೂಗುದೀಪ್ ಶ್ರೀನಿವಾಸ್ ಮೀನಾ ಕುಮಾರಿ ಅವರ ಜೇಷ್ಠ ಪುತ್ರನಾಗಿ ಫೆಬ್ರವರಿ 16, 1977ರಲ್ಲಿ ಶ್ರೀ ರಾಘವೇಂದ್ರ ಸೇವಾಶ್ರಮದಲ್ಲಿ ಶಿವರಾತ್ರಿ ಹಬ್ಬದ ದಿನದಂದು ಜನ್ಮ ತಳೆದ ದರ್ಶನ್ ಅವರಿಗೆ ಎಲ್ಲರೂ ನಿರ್ಧಾರ ಮಾಡಿ ಹೇಮಂತ್ ಕುಮಾರ್ ಎಂದು ಹೆಸರಿಟ್ಟರು. ನಂತರ ಮೈಸೂರಿನಲ್ಲಿ ಜೆಎಸ್ಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ತಂದೆಯು ಅನಾರೋಗ್ಯಕ್ಕೆ ಈಡಾದರೂ ಆಗ ತಾಯಿ ಮೀನಾ ಕುಮಾರಿ ಅವರು ತಮ್ಮಲ್ಲಿದ್ದ ಎಲ್ಲಾ ಹಣ ಆಸ್ತಿಯನ್ನು ಕೂಡ ಚಿಕಿತ್ಸೆಗಾಗಿ ವ್ಯಯಿಸಿದರು.
ಅಲ್ಲದೆ ತಮ್ಮ ಒಂದು ಕಿಡ್ನಿಯನ್ನು ಕೂಡ ಕೊಟ್ಟರು ಆದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ತಮ್ಮ 57ನೇ ವಯಸ್ಸಿನಲ್ಲಿ ಶ್ರೀನಿವಾಸ್ ತೂಗುದೀಪ್ ಅವರು ಇ.ಹ.ಲೋ.ಕ ತ್ಯಜಿಸಿದರು. ಅಲ್ಲಿಂದ ದರ್ಶನ್ ಅವರ ಬದುಕು ಬೇರೊಂದು ರೀತಿಯಲ್ಲಿ ಸಂಕಷ್ಟಗಳಿಗೆ ಈಡಾಯಿತು ಎನ್ನಬಹುದು. ತಂದೆ ಅನಾರೋಗ್ಯದ ಕಾರಣ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಸಂಸಾರದ ನಿರ್ವಹಣೆ ವಹಿಸಿಕೊಂಡರು. ತಾಯಿ ಮೆಸ್ ನಡೆಸುತ್ತಿದ್ದರು, ದರ್ಶನ್ ಅವರು ಒಂದು ಹಸುವನ್ನು ಸಾಕಿ ಅದರಲ್ಲಿ ಹಾಲು ಕರೆದು ಮನೆಮನೆಗಳಿಗೆ ಮಾರಾಟ ಮಾಡುತ್ತಿದ್ದರು. ಆದರೆ ಮೀನಾ ಕುಮಾರಿ ಅವರಿಗೆ ದರ್ಶನ್ ಅವರು ಈ ಕೆಲಸ ಮಾಡುವುದು ಇಷ್ಟವಿರಲಿಲ್ಲ ತನ್ನ ಮಗ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಬೇಕು ಎನ್ನುವ ಆಸೆ ಅವರಿಗಿತ್ತು. ಹಾಗಾಗಿ ದರ್ಶನ್ ಅವರಿಗೆ ಇಷ್ಟವಿಲ್ಲದಿದ್ದರೂ ಕೂಡ ಶಿವಮೊಗ್ಗದ ನೀನಾಸಂ ಅಲ್ಲಿ ಸೇರಿಸಿದರು. ನೀನಾಸಂ ಅಲ್ಲಿ ಒಂದು ವರ್ಷ ತರಬೇತಿ ಪಡೆದ ದರ್ಶನ್ ಅವರು ನಂತರ ಅವಕಾಶಗಳನ್ನು ಹರಸುತ್ತ ಬೆಂಗಳೂರಿಗೆ ಬಂದರು.
ಮೊದಮೊದಲು ಅವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳಷ್ಟು ಅವಮಾನಗಳು ಎದುರಾದವು. ಆದರೂ ಕೂಡ ದರ್ಶನ್ ಅವರು ಅವಕಾಶಗಳನ್ನು ಅರಸುತ್ತಾ ಜೊತೆಗೆ ಜೀವನ ನಿರ್ವಹಣೆಗಾಗಿ ಲೈಟ್ ಬಾಯ್ ಆಗಿ ಕೂಡ ಕೆಲಸ ಮಾಡುತ್ತಿದ್ದರು. ಆಮೇಲೆ ಅಣಜಿ ನಾಗರಾಜ್ ಅವರ ಪರಿಚಯವಾಗಿ ಅಣಜಿ ನಾಗರಾಜ್ ಅವರು ಗೌರಿಶಂಕರ್ ಅವರಿಗೆ ಪರಿಚಯವಾಗಿದ್ದ ಕಾರಣ ದರ್ಶನ್ ಅವರನ್ನು ಗೌರಿಶಂಕರ್ ಅವರ ಬಳಿ ಅಸಿಸ್ಟೆಂಟ್ ಕ್ಯಾಮರಾ ಮ್ಯಾನ್ ಆಗಿ ಸೇರಿಸಿದರು. ನಂತರ ಕೆಲವೊಂದು ಕಿರುತೆರೆ ಧಾರವಾಹಿಗಳಲ್ಲೂ ಕೂಡ ದರ್ಶನ್ ಅವರು ಅಭಿನಯಿಸಿದರು. ಜೊತೆಗೆ ಮಹಾಭಾರತ ದೇವರ ಮಗ ಮುಂತಾದ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲೂ ಕೂಡ ನಟಿಸಿದ್ದರು. ಯಾವಾಗ ದರ್ಶನ್ ಅವರು ಪಿಎನ್ ಸತ್ಯ ಅವರ ನಿರ್ದೇಶನದ ಮೆಜೆಸ್ಟಿಕ್ ಎನ್ನುವ ಸಿನಿಮಾದಲ್ಲಿ ಹೀರೋ ಆಗಿ ತೆರೆ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡರು ಅಂದಿನಿಂದ ಅವರ ಅದೃಷ್ಟ ಬದಲಾಯಿತು.
ಅಭಿನಯಿಸಿದ ಮೊದಲ ಸಿನಿಮಾವೇ ಸೂಪರ್ ಹಿಟ್ ಸಿನಿಮಾವಾಯಿತು .ನಂತರ ಸಾಲು ಸಾಲು ಒಳ್ಳೆಯ ಅವಕಾಶಗಳು ದರ್ಶನ್ ಪಾಲಿಗೆ ಬಂದವು. ಅಂದಿನಿಂದ ಇಂದಿನವರೆಗೂ ಸಂಗೊಳ್ಳಿ ರಾಯಣ್ಣ ಕುರುಕ್ಷೇತ್ರ ಯಜಮಾನ ಒಡೆಯ ರಾಬರ್ಟ್ ಬುಲ್ ಬುಲ್ ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ಅದ್ಭುತವಾದ ಯಶಸ್ಸು ಕಂಡಿರುವ ದರ್ಶನ್ ಅವರು 2006 ರಿಂದ ತಮ್ಮ ಸಹೋದರನಾದ ದಿನಕರ್ ತೂಗುದೀಪ್ ಅವರ ಜೊತೆ ಸೇರಿ ತಮ್ಮದೇ ಪ್ರೋಡಕ್ಷನ್ ಹೌಸ್ ಕೂಡ ತೆರೆದಿದ್ದಾರೆ. ಅದರಲ್ಲೂ ಕೂಡ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಎನ್ನುವ ಟೈಟಲ್‌ಗೆ ತಕ್ಕ ಹಾಗೆ ಬದುಕನ್ನು ಕೂಡ ಅದೇ ರೀತಿ ಚಾಲೆಂಜ್ ಮಾಡಿ ಬದುಕಿ ತೋರಿಸಿದವರು ದರ್ಶನ್ ಅವರು. ದರ್ಶನ್ ಅವರ ಈ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.