ಕೆಲವು ವಸ್ತುಗಳಲ್ಲಿ ನಕರಾತ್ಮಕವಾದ ಪ್ರಭಾವ ಇರುತ್ತದೆ. ಇಂತಹ ವಸ್ತುಗಳನ್ನು ದರ್ಶನ ಮಾಡಿದಾಗ ಮನಸ್ಸಿನಲ್ಲೂ ಕೂಡ ಕೆಟ್ಟ ಆಲೋಚನೆಗಳು ಮತ್ತು ನಕರಾತ್ಮಕತೆ ತುಂಬಿಕೊಳ್ಳುತ್ತದೆ. ಹಾಗಾಗಿ ಹಿರಿಯರು ಮನೆಯಿಂದ ಹೊರಗೆ ಹೋಗುವಾಗ ಒಳ್ಳೆ ಕೆಲಸಗಳಿಗೆ ಹೋಗುವಾಗ ಅಥವಾ ಯಾರ ಮನೆಗಾದರೂ ಹೋದಾಗ.
ಬೆಳಗ್ಗೆ ಎದ್ದ ಕೂಡಲೇ, ಶುಭ ಕಾರ್ಯಗಳಿಗೆ ಹೋಗುವಾಗ ಕೆಲವು ವಸ್ತುಗಳನ್ನು ನೋಡಬಾರದು ಎಂದು ಪದ್ಧತಿ ಮಾಡಿದ್ದರು. ಆ ಪ್ರಕಾರವಾಗಿ ಯಾವ ವಸ್ತುಗಳನ್ನು ನೋಡಬಾರದು ಮತ್ತು ಯಾವುದನ್ನು ನೋಡುವುದರಿಂದ ಏನು ಫಲ ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!
* ಬೆಳಗ್ಗೆ ಎದ್ದ ತಕ್ಷಣ ಗಡಿಯಾರ ನೋಡುವುದು ಒಳ್ಳೆಯ ಅಭ್ಯಾಸವಲ್ಲ ಆದರೆ ಕೆಲವರಿಗೆ ಸಮಯ ನೋಡಿ ಏಳುವ ಅಭ್ಯಾಸವೇ ಇರುತ್ತದೆ. ಬೇಕಾದರೆ ಅಲಾರಾಂ ಇಟ್ಟುಕೊಳ್ಳಿ ಅದನ್ನು ಆಫ್ ಮಾಡಿ ಸಾಕು. ಸಮಯ ಆಯಿತೆಂದು ಅರ್ಥ ಮಾಡಿಕೊಂಡು ಎದ್ದೇಳಿ ಹೊರತು ಸಮಯ ಎಷ್ಟಾಗಿದೆ ಎಂದು ನೋಡಿಕೊಂಡು ಏಳಬೇಡಿ ಹಾಗೆ ಒಡೆದಿರುವ ಕೆಟ್ಟು ನಿಂತಿರುವ ಗಡಿಯಾರಗಳನ್ನು ಅಂತೂ ನೋಡಲೇಬೇಡಿ ಎಂದು ಹೇಳುತ್ತದೆ ಶಾಸ್ತ್ರ
* ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡುವ ಅಭ್ಯಾಸ ಅನೇಕರಿಗೆ ಇದೆ ಇದು ಕೂಡ ತಪ್ಪು
* ಬೆಳಿಗ್ಗೆ ಎದ್ದ ತಕ್ಷಣ ಮತ್ತೊಬ್ಬರ ನೆರಳನ್ನು ನೋಡುವುದು ಕೂಡ ಅಪಶಕುನ ಎಂದು ಹೇಳಲಾಗುತ್ತದೆ ಮತ್ತು ಇದು ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎನ್ನಲಾಗಿದೆ.
ಈ ಸುದ್ದಿ ಓದಿ:-ಈ ವೃಕ್ಷದ ನೆರಳೇನಾದರೂ ಮನೆ ಮೇಲೆ ಬಿದ್ದರೆ ಮನೆ ಉದ್ದಾರ ಆಗಲ್ಲ ಎಚ್ಚರ.!
* ಮನೆಯಲ್ಲಿ ಯಾವುದೇ ಕಾರಣಕ್ಕೂ ಒಡೆದು ಹೋಗಿರುವ ಪಾತ್ರೆಗಳು ಕೆಟ್ಟ ನಿಂತಿರುವ ಮಿಷನ್ ಗಳು ಡ್ಯಾಮೇಜ್ ಆಗಿರುವ ಪೀಠೋಪಕರಣಗಳು ಇವುಗಳನ್ನು ಇಟ್ಟುಕೊಳ್ಳಬಾರದು ಮತ್ತು ಬೆಳಗ್ಗೆ ಎದ್ದ ಕೂಡಲೇ ಮತ್ತು ಆಗಾಗ ಇವುಗಳ ದರ್ಶನ ಆಗುವುದು ಕೂಡ ಒಳ್ಳೆಯ ಸೂಚನೆಯಲ್ಲ ಹಾಗಾಗಿ ಇವುಗಳನ್ನು ಇಡುವುದು ಮತ್ತು ನೋಡುವುದನ್ನು ತಪ್ಪಿಸಿ ಎಂದು ಹೇಳುತ್ತದೆ ಶಾಸ್ತ್ರ
* ಮುಂಜಾನೆ ಎತ್ತ ಯಾವುದೇ ಕಾರಣಕ್ಕೂ ಅಡುಗೆ ಮನೆಗೆ ಹೋಗಿ ಅಡುಗೆಮನೆಯನ್ನು ಪಾತ್ರೆಗಳನ್ನು ಧಾನ್ಯಗಳನ್ನು ಹಾಲು ಇತ್ಯಾದಿಗಳನ್ನು ನೋಡಬೇಡಿ ಎಂದು ಶಾಸ್ತ್ರ ಹೇಳುತ್ತದೆ. ಸ್ನಾನ ಮಾಡಿ ಶುಚಿಯಾಗಿ ಅಡುಗೆ ಮನೆಗೆ ಹೋಗಬೇಕು ಅಥವಾ ಮುಖವನ್ನಾದರೂ ತೊಳೆದುಕೊಂಡು ಅಡುಗೆ ಮನೆಗೆ ಹೋಗಬೇಕು ಇಲ್ಲದಿದ್ದರೆ ಇದು ಕೂಡ ದೋಷ ಇದರ ಮೂಲಕ ನಿಮ್ಮ ಜೀವನದಲ್ಲಿ ಕೆಟ್ಟ ಬದಲಾವಣೆಗಳು ಉಂಟಾಗುತ್ತದೆ ಹೇಳಲಾಗಿದೆ.
ಈ ಸುದ್ದಿ ಓದಿ:-ಜೀವನದಲ್ಲಿ ಬೇಸರವಾದಾಗ ಶ್ರೀ ಕೃಷ್ಣನ ಈ ಮಾತುಗಳನ್ನು ನೆನೆಸಿಕೊಳ್ಳಿ ಮತ್ತು ಗೆಲ್ಲಲು ಈ 4 ಮಂತ್ರಗಳಲ್ಲಿ ಒಂದನ್ನು ಹೇಳಿ ಸಾಕು.!
* ರಾತ್ರಿ ಹೊತ್ತು ಊಟ ಮಾಡಿದ ನಂತರ ಅಡುಗೆ ಮಾಡಿದ ಹಾಗೂ ಊಟ ಮಾಡಿದ ಪಾತ್ರೆಗಳನ್ನು ರಾತ್ರಿ ಹೊತ್ತು ಖಾಲಿ ಮಾಡಿ ಮಲಗಬೇಕು ಯಾವುದೇ ಕಾರಣಕ್ಕೂ ಬೆಳಗ್ಗೆ ಎದ್ದು ಮುಸರೆ ಪಾತ್ರೆಗಳನ್ನು ದರ್ಶನ ಮಾಡಬಾರದು ಅಡುಗೆ ಮನೆಗೆ ಹೋದ ತಕ್ಷಣ ಈ ರೀತಿ ಮೊದಲು ಪಾತ್ರೆ ತೊಳೆಯುವುದಕ್ಕೆ ಕೈ ಹಾಕುವುದರಿಂದ ಮತ್ತು ಮೈಲಿಗೆ ಪಾತ್ರೆಗಳನ್ನು ನೋಡುವುದರಿಂದ ಧನ ಧಾನ್ಯ ದರಿದ್ರ ಉಂಟಾಗುತ್ತದೆ ಎಂದು ಹೇಳುತ್ತದೆ ಶಾಸ್ತ್ರ
* ಕುಂಬಳಕಾಯಿಯಲ್ಲಿ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳು ಇವೆ, ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಬೆಳಗ್ಗೆ ಎದ್ದ ಕೂಡಲೇ ಅಥವಾ ಶುಭ ಕಾರ್ಯಗಳಿಗೆ ಹೋಗುವಾಗ ಕುಂಬಳಕಾಯಿ ದರ್ಶನ ಮಾಡುವುದು ಅಷ್ಟೊಂದು ಒಳ್ಳೆಯದಲ್ಲ ಎಂದು ಹೇಳಲಾಗಿದೆ. ಬೆಳಗ್ಗೆ ಎದ್ದ ಕೂಡಲೇ ಚಾಕು ಚೂರಿ ಕತ್ತರಿ ಈ ರೀತಿ ಚೂಪಾದ ಅಥವಾ ಕತ್ತರಿಸುವ ಸಾಧನಗಳನ್ನು ನೋಡುವುದು ಕೂಡ ಶುಭವಲ್ಲ ಎಂದು ಹೇಳಲಾಗಿದೆ.