ಅಪ್ಪು ಓದಿರೋದು ಏಳನೇ ತರಗತಿ ಆದ್ರೂ ಕೂಡ ಇಂಗ್ಲಿಷ್ ಎಷ್ಟು ನಿರರ್ಗಳವಾಗಿ ಅಪ್ಪು ಮಾತಾಡುತ್ತಾರೆ ಗೊತ್ತಾ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಾಲ್ಯದಿಂದಲೂ ಕೂಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಆಡುವ ವಯಸಿನಲ್ಲಿಯೇ ರಾಷ್ಟ್ರಪತಿ ಅವರ ಬಳಿ ರಾಷ್ಟ್ರಪ್ರಶಸ್ತಿ ತೆಗೆದುಕೊಂಡು ಬಂದವರು. ಅವರಿಗೆ ಈ ಕಲೆ ಅವರ ತಂದೆಯಿಂದಲೇ ರಕ್ತಗತವಾಗಿ ಬಂದಿದೆ ಎಂದು ಹೇಳಬಹುದು. ಕನ್ನಡದ ಮೇರು ನಟ ಕಲಾ ಕಂಠೀರವ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಮುದ್ದಿನ ಮಗನಾದ ಪುನೀತ್ ರಾಜಕುಮಾರ್ ಅವರು ಕೂಡ ಅಪ್ಪನಂತೆಯೇ ಅಭಿನಯದಲ್ಲಿ ತುಂಬಾ ಪಳಗಿದವರು. ಬಾಲ್ಯದಲ್ಲಿಯೇ ಹಲವಾರು ಸಿನಿಮಾಗಳಲ್ಲಿ ತಮ್ಮ ಪ್ರತಿಭೆಯನ್ನು ನಿರೂಪಿಸಿದ ಇವರು ಬೆಳೆಯುತ್ತಾ ತಮ್ಮ ಕಲೆಯನ್ನು ಮತ್ತಷ್ಟು ಉತ್ತಮ ಮಟ್ಟದಲ್ಲಿ ತೆಗೆದುಕೊಂಡು ಹೋಗುವುದರ ಜೊತೆಗೆ ಇಡೀ ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿತ್ವವನ್ನು ರೂಪಿಸಿಕೊಂಡು ಇಂದು ಇಡೀ ಕರುನಾಡೇ ಕೈಮುಗಿದು ಪೂಜಿಸುತ್ತಿರುವ ಅಭಿಮಾನಿಗಳ ದೇವರು ಆಗಿ ಎಲ್ಲಾ ಅಭಿಮಾನಿಗಳ ಮನದ ದೇವಾಲಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ.
ನಮ್ಮ ಅಪ್ಪು ಅವರು ಬೆಳೆಯುತ್ತಿದ್ದಂತೆ ಸಿನಿಮಾಗಳಲ್ಲಿ ಮತ್ತೊಮ್ಮೆ ಕಂಬ್ಯಾಕ್ ಮಾಡಿ ಪೊಲೀಸ್ ಆಫೀಸರ್, ಡಿ ಸಿ, ಬಿಜಿನೆಸ್ ಮ್ಯಾನ್, ಮಿಲಿಟರಿ ಆಫೀಸರ್, ಪ್ರೆಸ್ ರಿಪೋರ್ಟರ್, ರೇಡಿಯೋ ಜಾಕಿ, ಪ್ರೊಫೆಸರ್ ಈ ರೀತಿ ನಾನಾ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರಿಗೆ ಮನೋರಂಜನೆ ನೀಡಿದ್ದಾರೆ. ಮತ್ತು ಬಹು ಮುಖ್ಯವಾಗಿ ಇವರು ನಟಿಸುತ್ತಿದ್ದ ಸಿನಿಮಾದಲ್ಲಿ ಮನರಂಜನೆ ಜೊತೆ ಇಡೀ ಯುವ ಸಮುದಾಯಕ್ಕೆ ಸ್ಪೂರ್ತಿಯಾಗುವಂತಹ ಯಾವುದಾದರೂ ಸಂದೇಶ ಇದ್ದೇ ಇರುತ್ತಿತ್ತು ಎನ್ನುವುದು ವಿಶೇಷ. ಅಲ್ಲದೆ ಪುನೀತ್ ರಾಜಕುಮಾರ್ ಅವರು ಕೇವಲ ಒಬ್ಬ ನಟ ಮಾತ್ರ ಅಲ್ಲದೆ ಒಬ್ಬ ಅತ್ಯುತ್ತಮ ಗಾಯಕ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಹಲವರು ಬ್ರಾಂಡ್ ಗಳಿಗೆ ಬ್ರಾಂಡ್ ಅಂಬಾಸಿಡರ್ ಮತ್ತು ಕನ್ನಡದಲ್ಲಿ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಕಿರುತೆರೆಯ ಯಶಸ್ವಿ ನಿರೂಪಕ ಕೂಡ ಆಗಿದ್ದರು.
ತೆರೆ ಮೇಲೆ ತುಂಬಾ ಓದಿರುವ ರೀತಿಯ ಇಂತಹ ಪಾತ್ರಗಳಲ್ಲಿ ಮಿಂಚುತ್ತಿದ್ದ ಇವರು ನಿಜವಾಗಿಯೂ ಶಿಕ್ಷಣ ಮುಗಿಸಿದ್ದು ಕೇವಲ 10ನೇ ತರಗತಿವರೆಗೆ ಎಂದರೆ ಎಲ್ಲರಿಗೂ ಆಶ್ಚರ್ಯ ಎನಿಸಬಹುದು. ಆದರೆ ಇದು ಖಂಡಿತವಾಗಿಯೂ ನಿಜ ಬಾಲ್ಯದಿಂದಲೂ ಅಪ್ಪನ ಜೊತೆ ಸಿನಿಮಾ ಸೆಟ್ಗಳಲ್ಲಿ ಹೋಗುತ್ತಿದ್ದ ಇವರು ಸಿನಿಮಾ ರಂಗದಲ್ಲಿ ಹೆಚ್ಚು ತೊಡಗಿಕೊಂಡ ಕಾರಣ ಹೆಚ್ಚಾಗಿ ಶಾಲಾ ದಿನಗಳಲ್ಲಿ ಶಾಲೆಗೆ ಹೋಗಿ ಕಲಿಯಲು ಸಾಧ್ಯವಾಗಲಿಲ್ಲ. ಆದರೂ ಕೂಡ ಹೇಗೋ ಹತ್ತನೇ ತರಗತಿವರೆಗೆ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ಇವರು ಅಲ್ಲಿಗೆ ಎಜುಕೇಶನ್ ಗೆ ಫುಲ್ ಸ್ಟಾಪ್ ಇಟ್ಟುಬಿಟ್ಟರು. ಆದರೆ ಈ ಬಗ್ಗೆ ಅವರಿಗೆ ಬೇಸರ ಇದೆ ಎಂದು ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಕೂಡ ಹೇಳಿಕೊಂಡಿದ್ದರು. ಅವರ ಮನೆಗೆ ಬರುತ್ತಿದ್ದ ಒಬ್ಬ ಶಿಕ್ಷಕಿ ಇಂದು ಅವರು ಯಾವುದೇ ಭಾಷೆ ಆದರೂ ಅರ್ಥ ಮಾಡಿಕೊಳ್ಳಲು ಮತ್ತು ಸ್ವಲ್ಪ ಜನರ ನಾಲೆಜ್ ತಿಳಿದುಕೊಳ್ಳಲು ಕಾರಣ ಎಂದು ಶಿಕ್ಷಕಿಯನ್ನು ಕೂಡ ನೆನೆಸಿಕೊಂಡಿದ್ದರು.
ಇಂತಹ ನಮ್ಮೆಲ್ಲರ ಪ್ರೀತಿಯ ಅಪ್ಪು ಅವರು ನಿರರ್ಗಳವಾಗಿ ಇಂಗ್ಲಿಷ್ ಅಲ್ಲಿ ಇಂಗ್ಲಿಷ್ ಕಾರ್ಯಕ್ರಮ ಒಂದರಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ ಅದು ಕೂಡ ಫೇಮಸ್ ಯೂಟ್ಯೂಬರ್ ಆದ ದಿ ಟಾಕ್ ವಿತ್ ಪ್ರೀತಿ ಶನೈ ಎನ್ನುವ ಕಾರ್ಯಕ್ರಮದಲ್ಲಿ. ಈ ಕಾರ್ಯಕ್ರಮವು ಇಂಗ್ಲಿಷ್ ಯೂಟ್ಯೂಬ್ ಚಾನೆಲ್ ಕಾರ್ಯಕ್ರಮ ವಾದ ಕಾರಣ ಅಲ್ಲಿನ ನಿರೂಪಕ್ಕೆ ಇಂಗ್ಲಿಷ್ ಅಲ್ಲಿ ಪುನೀತ್ ರಾಜಕುಮಾರ್ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಇಂಗ್ಲಿಷ್ನಲ್ಲಿ ಮಾತನಾಡಿಸುತ್ತಿದ್ದರು. ಅವರೆಲ್ಲಾ ಪ್ರಶ್ನೆಗಳಿಗೆ ಇಂಗ್ಲೀಷ್ ನಲ್ಲಿ ಪಟಪಟನೆ ಪುನೀತ್ ಅವರು ಉತ್ತರ ಕೊಡುತ್ತಿದ್ದರೆ ನೋಡುವವರು ಮೈಮರೆಯುವಂತಿತ್ತು. ಮತ್ತು ಈ ಕಾರ್ಯಕ್ರಮ ನೋಡಿದ ಬಳಿಕ ಎಲ್ಲರೂ ಕೂಡ ಪುನೀತ್ ಅವರ ಅವರ ಡೌನ್ ಟು ಅರ್ಥ್ ವ್ಯಕ್ತಿತ್ವವನ್ನು ಹಾಡಿ ಹೊಗಳುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಜೊತೆಗೆ ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ.