ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಹೆಚ್ಚು ಜನರ ಫೇವರೆಟ್ ಹೀರೋ ಕ್ಲಾಸ್ ಸಿನಿಮಾವಾಗಲಿ ಮಾಸ್ ಸಿನಿಮಾವಾಗಲಿ ತೆರೆ ಮೇಲೆ ಅಬ್ಬರಿಸಿ ಮಿಂಚುವ, ಕುಟುಂಬದ ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗುವಂತಹ ನಟ. ಆರಡಿ ಹೈಟ್, ಸಖತ್ ಫೈಟ್, ಸೂಪರ್ ಡ್ಯಾನ್ಸ್, ಮತ್ತು ತಮಗಿರುವ ಅದ್ಭುತವಾದ ಹಾಸ್ಯ ಪ್ರಜ್ಞೆಯಿಂದ ಪ್ರತಿ ಮನೆಮನೆಗಳನ್ನು ಕೂಡ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವಂತಹ ನಟ. ಇಂದಿಗೂ ಕೂಡ ದರ್ಶನ್ ಎಂದರೆ ಕರ್ನಾಟಕದ ಜನತೆಗೆ ಬೇರೆ ಎಲ್ಲಾ ನಟರಿಗಳಿಗಿಂತ ಒಂದು ಪಟ್ಟು ಹೆಚ್ಚು ಪ್ರೀತಿ ಎನ್ನಬಹುದು. ಅದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ಎನ್ನುವ ಹೆಸರಿಗೆ ತಕ್ಕ ಹಾಗೆ ಅವರು ಬದುಕಿ ಬಂದಿರುವ ರೀತಿ. ಜೊತೆಗೆ ಕರುನಾಡಿನ ಕರ್ಣನಾಗಿ ಅವರು ಈಗ ಬದುಕುತ್ತಿರುವ ಬದುಕು ಎಲ್ಲರಿಗೂ ಅವರು ಅಚ್ಚು ಮೆಚ್ಚಾಗಿರಲು ಕಾರಣ.
ನಟ ದರ್ಶನ್ ಅವರು ಕನ್ನಡದ ಹಿರಿಯ ನಟ ತೂಗುದೀಪ್ ಶ್ರೀನಿವಾಸ್ ಅವರ ಮಗನಾಗಿರುವುದರಿಂದ ಅಪ್ಪನಲ್ಲಿರುವ ಎಲ್ಲಾ ಕಲೆಯು ಮಗನಿಗೆ ರಕ್ತಕತವಾಗಿಯೇ ಬಂದಿದೆ ಎನ್ನಬಹುದು. ದರ್ಶನ್ ಅವರು ಇಂತಹ ದೊಡ್ಡ ನಟನ ಮಗನಾಗಿದ್ದರೂ ಕೂಡ ಆರಂಭದ ದಿನಗಳಲ್ಲಿ ಬಹಳ ಕಷ್ಟವನ್ನು ಪಟ್ಟಿದ್ದಾರೆ. ಮೊದಮೊದಲು ಮಹಾಭಾರತ, ಎಲ್ಲರ ಮನೆ ದೋಸೆನೂ ತೂತೇ, ದೇವರ ಮಗ ಇನ್ನು ಮುಂತಾದ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಮಾಡುತ್ತಾ ಲೈಟ್ ಬಾಯ್ ಆಗಿ ಇದ್ದವರು ಅಸಿಸ್ಟೆಂಟ್ ಕ್ಯಾಮರಾ ಮ್ಯಾನ್ ಆಗಿ ಸೇರಿಕೊಂಡು ನಂತರ 2002ರಲ್ಲಿ ಪಿಎನ್ ಸತ್ಯ ಅವರ ನಿರ್ದೇಶನದ ಮೆಜೆಸ್ಟಿಕ್ ಸಿನಿಮಾದಲ್ಲಿ ಹೀರೋ ಆಗಿ ಅವಕಾಶ ಗಿಟ್ಟಿಸಿಕೊಳ್ಳುವವರೆಗೆ ದರ್ಶನ್ ಅವರು ತುಳಿದ ಹಾದಿ ಬಹಳ ಕಠಿಣವಾಗಿತ್ತು. ಮೆಜೆಸ್ಟಿಕ್ ಎನ್ನುವ ಒಂದು ಸಿನಿಮಾವು ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅವರ ಭದ್ರವಾಗಿ ನೆಲೆಯೂರಲು ಬಹುದೊಡ್ಡ ವೇದಿಕೆ ಸೃಷ್ಟಿಸಿ ಕೊಟ್ಟಿತ್ತು.
ಮೆಜೆಸ್ಟಿಕ್ ಸಿನಿಮಾದಲ್ಲಿ ಮೊದಲ ಬಾರಿಗೆ ತೆರೆ ಮೇಲೆ ಹೀರೋ ಆಗಿ ಕಾಣಿಸಿಕೊಂಡ ದರ್ಶನ್ ಅವರು ಕನ್ನಡದಲ್ಲಿ ಒಬ್ಬ ಭರವಸೆಯ ನಾಯಕ ಎನ್ನುವ ನಂಬಿಕೆ ಗಿಟ್ಟಿಸಿಕೊಂಡಿದ್ದರು. ಈ ಸಿನಿಮಾದಿಂದ ದರ್ಶನ್ ಅವರಿಗೆ ಅಪಾರ ಅಭಿಮಾನ ಬಳಗ ಸೃಷ್ಟಿಯಾಗಿತ್ತು. ನೆಗೆಟಿವ್ ಹಾಗೂ ಪಾಸಿಟಿವ್ ಎರಡು ರೋಲ್ ಕೂಡ ಇದ್ದ ದರ್ಶನ್ ಅವರ ಈ ಸಿನಿಮಾದ ಅಭಿನಯ ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಮೊದಲ ಸಿನಿಮಾದಲ್ಲಿ ವಿಭಿನ್ನ ಬಗೆಯ ಪ್ರಯೋಗದಿಂದ ಕನ್ನಡಿಗರ ಎಲ್ಲರ ಮನವನ್ನು ಗೆದ್ದರು ದರ್ಶನ್ ಅವರು. ಆದರೆ ದರ್ಶನ್ ಅವರಿಗೆ ಮೆಜೆಸ್ಟಿಕ್ ಸಿನಿಮಾದ ನಂತರ ಅವರು ಅಭಿನಯಿಸಿದ ಕಿಟ್ಟಿ, ನೀನಂದ್ರೆ ಇಷ್ಟ ಈ ಸಿನಿಮಾಗಳು ಅಷ್ಟರ ಮಟ್ಟಿಗೆ ಹೆಸರು ಮಾಡಲಿಲ್ಲ.
ಆದರೆ ಆನಂತರ ಬಂದ ನನ್ನ ಪ್ರೀತಿಯ ರಾಮು ಎನ್ನುವ ಒಂದು ಸುಂದರವಾದ ಸಂಗೀತಮಯವಾದ ಸಿನಿಮಾವು ದರ್ಶನ್ ಅವರ ಕೆರಿಯರ್ನಲ್ಲಿ ಬಹುದೊಡ್ಡ ಮಾರ್ಕ್ ಮಾಡಿರುವ ಸಿನಿಮಾವಾಗಿದೆ. ಅದುವರೆಗೂ ಕೂಡ ಮಾಸ್ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ಇವರು ನನ್ನ ಪ್ರೀತಿಯ ರಾಮು ಸಿನಿಮಾದಲ್ಲಿ ಅಂಧನಾಗಿ ಅಭಿನಯಿಸಿ ತಾನು ಕೂಡ ಎಲ್ಲ ಪಾತ್ರಗಳಿಗೂ ಕೂಡ ಸರಿಹೊಂದುವ ನಟ ಎನ್ನುವುದನ್ನು ಮತ್ತು ತಮ್ಮ ಅಭಿನಯ ಚಾತುರ್ಯವನ್ನು ಸಾಬೀತು ಪಡಿಸಿದರು. ಜೊತೆಗೆ ಇಳಯರಾಜ ಅವರು ಸಂಗೀತ ನೀಡಿದ್ದ ಈ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿ ಸಿನಿಮಾಗೆ ಮತ್ತೊಂದು ಮೆರಗನ್ನು ನೀಡಿತ್ತು.
ಆದರೆ ಈ ಸಿನಿಮಾದ ಅವಕಾಶ ದರ್ಶನ್ ಅವರ ಪಾಲಿಗೆ ಒಲಿಯುವುದಕ್ಕಿಂತ ಮುಂಚೆ ಸುದೀಪ್ ಹಾಗೂ ಶಿವಣ್ಣ ಅವರಿಗೆ ಈ ಸಿನಿಮಾ ಆಫರ್ ಅನ್ನು ನೀಡಲಾಗಿತ್ತಂತೆ. ಆದರೆ ಅವರಿಬ್ಬರು ಈ ಪಾತ್ರಕ್ಕೆ ಒಪ್ಪದ ಕಾರಣ ದರ್ಶನ್ ಅವರು ಈ ಪಾತ್ರವನ್ನು ಚಾಲೆಂಜ್ ಆಗಿ ಸ್ವೀಕರಿಸಿ ನಟನೆ ಮಾಡಿದ್ದಾರಂತೆ ನಿಜಕ್ಕೂ ದರ್ಶನ್ ಅವರ ಈ ಸಾಹಸವನ್ನು ನಾವು ಮೆಚ್ಚಲೇಬೇಕು ಈ ಚಿತ್ರದಲ್ಲಿ ದರ್ಶನವರು ಮಾಡಿರುವಂತಹ ಅಭಿನಯವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಈ ಕಾರಣಕ್ಕಾಗಿ ಕರ್ನಾಟಕದಲ್ಲಿ ದರ್ಶನವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇರುವುದು ದರ್ಶನ್ ಅವರ ಈ ಒಂದು ಶ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ.