ಬೇಸಿಗೆ ಕಾಲ ಬಂತು ಎಂದರೆ ಹೆಚ್ಚಿನ ಜನಕ್ಕೆ ನಿಶಕ್ತಿ ಸುಸ್ತು ಎನ್ನುವುದು ಕಾಣಿಸಿಕೊಳ್ಳುತ್ತಿರುತ್ತದೆ. ಇದರಿಂದಾಗಿ ಅವರು ತಮ್ಮ ಆರೋಗ್ಯದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ತಮ್ಮ ಆರೋಗ್ಯದ ವಿಚಾರವಾಗಿ ಆದಷ್ಟು ಕಾಳಜಿಯನ್ನು ವಹಿಸುವುದು ಬಹಳ ಮುಖ್ಯವಾಗಿರುತ್ತದೆ.
ಇಲ್ಲವಾದರೆ ಅದರಿಂದ ಮತ್ತಷ್ಟು ದೊಡ್ಡ ತೊಂದರೆಗೆ ಬೀಳಬೇಕಾಗುತ್ತದೆ ಇದರ ಜೊತೆಗೆ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಬಿಪಿ ಶುಗರ್ ಇಂತಹ ಸಮಸ್ಯೆ ಇರುವವರಿಗೆ ತುಂಬಾ ಕಷ್ಟ ಎಂದೇ ಹೇಳಬಹುದು. ಇವರು ಸಾಮಾನ್ಯ ದಿನದಲ್ಲಿಯೇ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಇನ್ನು ಇಂತಹ ಬಿಸಿಲಿನ ಸಂದರ್ಭದಲ್ಲಿ ಅವರು ತಮ್ಮ ಆರೋಗ್ಯವನ್ನು ಬಹಳಷ್ಟು ಎಚ್ಚರಿಕೆಯಿಂದ ನೋಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ
ಇಲ್ಲವಾದರೆ ಮೊದಲೇ ಹೇಳಿದಂತೆ ಚಿಕ್ಕ ಸಮಸ್ಯೆ ಮುಂದಿನ ದಿನದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಹಾಗಾದರೆ ಈ ದಿನ ಬೇಸಿಗೆ ಸಮಯದಲ್ಲಿ ಎದುರಾಗುವಂತಹ ಈ ಒಂದು ಉಷ್ಣದ ಅಂಶವನ್ನು ನಾವು ಹೇಗೆ ನಮ್ಮ ದೇಹದಿಂದ ದೂರ ಇಡುವಂತೆ ನೋಡಿಕೊಳ್ಳ ಬಹುದು ಹಾಗೂ ಈ ಒಂದು ಸಮಯದಲ್ಲಿ ನಮ್ಮ ದೇಹವನ್ನು ಹೇಗೆ ತಂಪಾಗಿ ಇಟ್ಟುಕೊಳ್ಳುವುದು.
ಈ ಸಂದರ್ಭದಲ್ಲಿ ನಾವು ಯಾವ ರೀತಿಯ ಕೆಲವು ಆಹಾರ ಪದಾರ್ಥಗಳನ್ನು ಹಾಗೂ ಯಾವ ಕೆಲವು ತಂಪಾದ ಪಾನೀಯಗಳನ್ನು ಕುಡಿಯುವುದರಿಂದ ನಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:-ಮಗು ಆದ್ಮೇಲೂ ಹೊಟ್ಟೆ ಕರಗದೆ ಇದ್ರೆ ಹೀಗೆ ಮಾಡಿ.! ಇಲ್ಲಿದೆ ಸಿಂಪಲ್ ಟಿಪ್ಸ್.!
ಮೊದಲೇ ಹೇಳಿದಂತೆ ಬೇಸಿಗೆ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ತಂಪಾಗಿರುವಂತಹ ಪಾನೀಯಗಳನ್ನು ಕುಡಿಯಬೇಕು ಎನ್ನುವಂತಹ ಹಂಬಲದಲ್ಲಿ ಇರುತ್ತಾರೆ ಏಕೆಂದರೆ ಅದನ್ನು ಕುಡಿದರೆ ನಮ್ಮ ದೇಹ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ ಎನ್ನುವ ನಂಬಿಕೆ.
ಆದರೆ ಯಾವುದೇ ಕಾರಣಕ್ಕೂ ಅಂಗಡಿಗಳಲ್ಲಿ ಸಿಗುವಂತಹ ತಂಪಾದ ಜ್ಯೂಸ್ ಪಾನೀಯಗಳನ್ನು ಕುಡಿಯುವುದು ಅಷ್ಟೊಂದು ಒಳ್ಳೆಯದಲ್ಲ ಅದರಲ್ಲಿ ಹಲವಾರು ರೀತಿಯ ಕೆಮಿಕಲ್ ಪದಾರ್ಥಗಳನ್ನು ಮಿಶ್ರಣ ಮಾಡಿರುತ್ತಾರೆ.
ಆದ್ದರಿಂದ ಅವುಗಳನ್ನು ಕುಡಿಯುವುದರ ಬದಲು ನಮ್ಮ ಮನೆಯಲ್ಲಿ ಕೆಲವೊಂದು ಮನೆಮದ್ದುಗಳನ್ನು ಮಾಡಿ ಅದನ್ನು ಪಾನೀಯವಾಗಿ ಕುಡಿದರೆ ನಮ್ಮ ಆರೋಗ್ಯಕ್ಕೂ ಕೂಡ ತಂಪು ಹಾಗೂ ಅದು ನಮಗೆ ತಕ್ಷಣದಲ್ಲಿ ಕಾಣಿಸಿಕೊಳ್ಳುವಂತಹ ಸುಸ್ತು ನಿಶಕ್ತತೆಯನ್ನು ಸಹ ಕಡಿಮೆ ಮಾಡುತ್ತದೆ. ಹಾಗಾದರೆ ಆ ಒಂದು ಪಾನೀಯ ಯಾವುದು ಅದನ್ನು ಹೇಗೆ ಮಾಡುವುದು ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:-ರಾಮನವಮಿ ದಿನ 5 ದೀಪಗಳನ್ನು ಹಚ್ಚಿ 1 ರೂಪಾಯಿ ನಾಣ್ಯದಿಂದ ಹೀಗೆ ಪೂಜೆ ಮಾಡಿ ಶ್ರೀರಾಮನ ಅನುಗ್ರಹ ಸಿಗುತ್ತೆ.!
ಈ ಒಂದು ಪಾನೀಯ ಮಾಡುವುದಕ್ಕೆ ಬೇಕಾಗಿರುವ ಪದಾರ್ಥ.
* ಕೊತ್ತಂಬರಿ
* ಬಿಳಿ ಕಲ್ಲು ಸಕ್ಕರೆ
ಸ್ವಲ್ಪ ಪ್ರಮಾಣದ ಕೊತ್ತಂಬರಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು ಆನಂತರ ಬಿಳಿ ಕಲ್ಲು ಸಕ್ಕರೆಯನ್ನು ಕುಟ್ಟಿ ಪುಡಿಮಾಡಿಕೊಂಡು ಇವೆರಡನ್ನು ಸಹ ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಪುಡಿ ಮಾಡಿಟ್ಟುಕೊಳ್ಳ ಬೇಕು. ಇದನ್ನು ಗಾಳಿಯಾಡದೆ ಇರುವಂತಹ ಒಂದು ಗಾಜಿನ ಬಾಕ್ಸ್ ನಲ್ಲಿ ಇಟ್ಟುಕೊಳ್ಳಬೇಕು.
ಯಾವ ಸಮಯದಲ್ಲಿ ನಿಮಗೆ ಸುಸ್ತು ನಿಶಕ್ತತೆ ಕಾಣಿಸುತ್ತದೆಯೋ ಆ ಸಂದರ್ಭದಲ್ಲಿ ಒಂದು ಲೋಟ ತಣ್ಣೀರಿಗೆ ಒಂದು ಚಮಚ ಈ ಒಂದು ಮಿಶ್ರಣದ ಪುಡಿಯನ್ನು ಹಾಕಿ ಒಮ್ಮೆಲೆ ಕುಡಿಯ ಬೇಕು. ಈ ರೀತಿ ಕುಡಿಯುತ್ತಾ ಬರುವುದರಿಂದ ನಿಮ್ಮ ದೇಹದಲ್ಲಿ ಕಾಣಿಸಿಕೊಳ್ಳುವಂತಹ ಸುಸ್ತು ನಿಶಕ್ತತೆ, ಎದೆ ಉರಿ, ಕೈಕಾಲುಗಳು ಪಾದಗಳು ಉರಿಯುತ್ತಿದ್ದರೆ ಅವೆಲ್ಲವೂ ಸಹ ಸರಿಹೋಗುತ್ತದೆ.
ಈ ಸುದ್ದಿ ಓದಿ:-ಫಂಕ್ಷನ್ ಪಾರ್ಟಿಗೆ ಹೋಗುವ ಮೊದಲು ಇದನ್ನು ಹಚ್ಚಿ ಹಲ್ಲು ಬೆಳ್ಳಗಾಗಿ ಹೊಳೆಯುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೂ ರಾಮಾಬಾಣ.!
ನಿಮ್ಮ ದೇಹದಲ್ಲಿರುವಂತಹ ಎಲ್ಲಾ ಉಷ್ಣಾಂಶತೆಯನ್ನು ಸಹ ಇದು ದೂರ ಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ತಂಪಾದ ಪಾನೀಯವನ್ನು ಕುಡಿಯುವುದು ತುಂಬಾ ಒಳ್ಳೆಯದು. ಅದರಲ್ಲೂ ಈ ಬೇಸಿಗೆ ಸಮಯದಲ್ಲಿ ಇದನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿರುವಂತಹ ಉಷ್ಣಾಂಶತೆಯನ್ನು ಕಡಿಮೆ ಮಾಡಬಹುದು.