ಮಾವಿನಕಾಯಿ ಎಂದಾಕ್ಷಣ ಪ್ರತಿಯೊಬ್ಬರ ಬಾಯಲ್ಲಿಯೂ ಸಹ ನೀರು ಬರುವುದು ಸಹಜ ಏಕೆಂದರೆ ಹಣ್ಣುಗಳ ರಾಜ ಮಾವಿನ ಹಣ್ಣು. ಆದ್ದರಿಂದ ಮಾವಿನ ಹಣ್ಣಾಗಿರಬಹುದು ಮಾವಿನ ಕಾಯಿ ಎಲ್ಲವನ್ನು ಸಹ ಪ್ರತಿಯೊಬ್ಬರೂ ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ಅದರಲ್ಲೂ ಮಾವಿನಕಾಯಿ ಸೀಸನ್ ಬಂದರೆ ಸಾಕು ಮಾವಿನಕಾಯಿ ಇಂದ ಹಲವಾರು ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ.
ಕೆಲವೊಂದಷ್ಟು ಜನ ಮಾವಿನ ಕಾಯಿಯನ್ನು ಹಾಗೆ ತಿನ್ನಲು ಬಯಸುತ್ತಾರೆ ಇನ್ನು ಕೆಲವೊಂದಷ್ಟು ಜನ ಮಾವಿನಕಾಯಿ ಉಪ್ಪಿನಕಾಯಿ ಮಾವಿನಕಾಯಿ ಚಟ್ನಿ ಚಿತ್ರಾನ್ನ ಸಾಂಬಾರ್ ಹೀಗೆ ಹಲವಾರು ರೀತಿಯ ಖಾದ್ಯಗಳನ್ನು ಮಾವಿನಕಾಯಿಯಲ್ಲಿ ಮಾಡುತ್ತಾರೆ.
ಈ ಸುದ್ದಿ ಓದಿ:-ಬಿಳಿ ಬಟ್ಟೆ ಮೇಲಿನ ಎಲ್ಲಾ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ವಿಧಾನ ಇಲ್ಲಿದೆ ನೋಡಿ.!
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮಾವಿನ ಕಾಯಿಯನ್ನು ಉಪಯೋಗಿಸಿ ತಿಳಿ ಸಾಂಬಾರ್ ಅನ್ನು ಹೇಗೆ ಮಾಡುವುದು ಕಡಿಮೆ ಪದಾರ್ಥಗಳನ್ನು ಉಪಯೋಗಿಸಿ ರುಚಿಕರವಾದಂತಹ ಮಾವಿನಕಾಯಿ ತಿಳಿ ಸಾಂಬಾರ್ ಹೇಗೆ ಮಾಡುವುದು ಹಾಗೂ ಈ ಒಂದು ಸಾಂಬಾರ್ ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿಯೋಣ.
ಮಾವಿನಕಾಯಿ ತಿಳಿ ಸಾರು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ನೋಡುವುದಾದರೆ.
* ಒಂದು ಮಾವಿನ ಕಾಯಿ
* ಉಪ್ಪು
* ಸ್ವಲ್ಪ ಬೆಲ್ಲ
* ಕರಿಬೇವು
* ಸಾಸಿವೆ, ಜೀರಿಗೆ
* ಇಂಗು
* ಎಣ್ಣೆ
* ಎರಡು ಒಣ ಮೆಣಸಿನಕಾಯಿ
* ಎರಡು ಹಸಿ ಮೆಣಸಿನಕಾಯಿ
* ಒಂದು ಚಮಚ ಅರಿಶಿಣ
ಇಷ್ಟು ಪದಾರ್ಥಗಳನ್ನು ಉಪಯೋಗಿಸಿ ಹೇಗೆ ತಿಳಿ ಸಾಂಬಾರ್ ಮಾಡುವುದು ಇದರ ವಿಧಾನ ಏನು ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:-ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!
ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಮಾವಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿ ಅದರ ಒಳಗಡೆ ಹಾಕಿ ಚಿಟಿಗೆ ಅರಿಶಿಣ ಹಾಗೂ ಎರಡು ಹಸಿ ಮೆಣಸಿನಕಾಯಿ ಚಿಟಿಕೆ ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು ಈ ರೀತಿ ಬೇಯಿಸಿಕೊಂಡಂತಹ ಮಾವಿನಕಾಯಿಯನ್ನು ಸ್ವಲ್ಪ ಆರಲು ಬಿಡಬೇಕು.
ಆನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ರುಬ್ಬಿಕೊಳ್ಳಬೇಕು ನಂತರ ಇದನ್ನು ಕುದಿಸಿದಂತಹ ನೀರಿನ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು ಅದರಲ್ಲಿ ಯಾವುದೇ ರೀತಿಯ ಗಂಟು ಇಲ್ಲದ ಹಾಗೆ ಚೆನ್ನಾಗಿ ಮಿಶ್ರಣ ಮಾಡಿದ ನಂತರ ಅದಕ್ಕೆ ಚಿಟಿಕೆ ಬೆಲ್ಲವನ್ನು ಹಾಕಿ ಕರಗಲು ಬಿಡಬೇಕು.
ಈ ಸುದ್ದಿ ಓದಿ:-ರೇಷ್ಮೆ ಸೀರೆ ಮೇಲೆ ಎಣ್ಣೆ ಕಲೆ ತೆಗೆಯುವ ಸುಲಭ ವಿಧಾನ.!
ಆನಂತರ ಕೊನೆಯಲ್ಲಿ ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಇಂಗು ಕರಿಬೇವಿನ ಸೊಪ್ಪು ಇಷ್ಟನ್ನು ಹಾಕಿ ಚೆನ್ನಾಗಿ ಒಗ್ಗರಣೆ ಮಾಡಿ ಆ ಒಂದು ಕುದಿಯುತ್ತಿರುವಂತಹ ಮಾವಿನಕಾಯಿ ನೀರಿಗೆ ಹಾಕಿದರೆ ಸುಲಭವಾಗಿ ತಯಾರಾದಂತಹ ಮಾವಿನಕಾಯಿ ತಿಳಿ ಸಾಂಬಾರ್ ತಯಾರಾಗುತ್ತದೆ.
ಈ ವಿಧಾನ ಬಹಳ ಸುಲಭವಾಗಿದ್ದು ಇದನ್ನು ಯಾವುದೇ ರೀತಿಯ ಹೆಚ್ಚಿನ ಪದಾರ್ಥಗಳನ್ನು ಬಳಸದೆ ಸುಲಭವಾಗಿ ತಯಾರಿಸಬಹುದು. ಇದನ್ನು ಅನ್ನಕ್ಕೆ ಹಾಕಿಯೂ ಕೂಡ ಸವಿಯಬಹುದು ಅಥವಾ ಬಾಯಿಗೆ ರುಚಿ ಬರುವಂತೆ ಲೋಟಕ್ಕೆ ಹಾಕಿ ಕುಡಿಯಲು ಬಹುದು.
ಈ ಸುದ್ದಿ ಓದಿ:-ಮಗು ಆದ್ಮೇಲೂ ಹೊಟ್ಟೆ ಕರಗದೆ ಇದ್ರೆ ಹೀಗೆ ಮಾಡಿ.! ಇಲ್ಲಿದೆ ಸಿಂಪಲ್ ಟಿಪ್ಸ್.!
ಒಟ್ಟಾರೆಯಾಗಿ ಪ್ರತಿಯೊಬ್ಬರಿಗೂ ಕೂಡ ಈ ಒಂದು ಮಾವಿನ ಕಾಯಿ ತಿಳಿ ಸಾಂಬಾರ್ ಇಷ್ಟವಾಗುವುದಂತೂ ಖಂಡಿತ ಆದ್ದರಿಂದ ಪ್ರತಿ ಯೊಬ್ಬರೂ ಕೂಡ ಈ ಒಂದು ಮಾವಿನಕಾಯಿ ಸೀಸನ್ ನಲ್ಲಿ ಈ ಒಂದು ತಿಳಿ ಸಾಂಬಾರ್ ಮಾಡಿ ಪ್ರಯತ್ನಿಸಿ ಹಾಗೂ ನಿಮ್ಮ ಮನೆಯವರಿಗೆಲ್ಲಾ ಕೊಟ್ಟು ಅವರಿಗೂ ಸಹ ಇದರ ರುಚಿಯನ್ನು ತೋರಿಸಿ ಹಾಗೂ ಅವರ ಮೆಚ್ಚುಗೆಗೆ ನೀವು ಪಾತ್ರರಾಗಿ. ಈ ಒಂದು ತಿಳಿ ಸಾರನ್ನು ಪ್ರತಿಯೊಬ್ಬರೂ ಕೂಡ ಸುಲಭವಾಗಿ ಕಡಿಮೆ ಸಮಯದಲ್ಲಿಯೇ ತಯಾರಿಸಬಹುದು.