ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪ್ರತಿನಿತ್ಯ ಬಳಸುವಂತಹ ಅಡುಗೆ ಪದಾರ್ಥ ಯಾವುದು ಎಂದರೆ ಅದು ಅಕ್ಕಿ. ಅಕ್ಕಿ ಇಲ್ಲ ಎಂದರೆ ನಮ್ಮ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವೇ ಇಲ್ಲ ಎಂದೇ ಹೇಳ ಬಹುದು ಅಷ್ಟೊಂದು ಪ್ರಾಮುಖ್ಯತೆಯನ್ನು ಅಕ್ಕಿ ಪಡೆದಿದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಮ್ಮೆ ನಾವು ನಮ್ಮ ಮನೆಯಲ್ಲಿ ಅಕ್ಕಿಯನ್ನು ಇಟ್ಟಂತಹ ಸಂದರ್ಭದಲ್ಲಿ ಅದರಲ್ಲಿ ಕೆಲವೊಂದು ಬಿಳಿ ಹುಳಗಳು ಹಾಗೆ ಕಪ್ಪು ಹುಳಗಳು ಕಾಣಿಸಿಕೊಳ್ಳುತ್ತಿರುತ್ತದೆ.
ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣಗಳು ಏನು ಎಂದರೆ ನಮ್ಮ ವಾತಾವರಣದಲ್ಲಿ ಉಂಟಾಗುವ ಬದಲಾವಣೆ. ಅತಿಯಾಗಿ ತಣ್ಣನೆಯ ಅಂಶ ಹಾಗೂ ಅತಿಯಾದ ಬಿಸಿಲಿನ ಅಂಶ ಇದ್ದರೂ ಕೂಡ ಅಕ್ಕಿಯಲ್ಲಿ ಈ ರೀತಿಯ ಕೆಲವು ಹುಳಗಳು ಕಾಣಿಸಿಕೊಳ್ಳುತ್ತಿರುತ್ತದೆ. ಆದರೆ ಕೆಲವೊಂದಷ್ಟು ಜನ ಅದನ್ನು ಹೇಗೆ ದೂರ ಮಾಡಬೇಕು ಎನ್ನುವಂತಹ ಮಾಹಿತಿ ತಿಳಿಯದೆ ಕೆಲವೊಂದಷ್ಟು ಜನ ಅದನ್ನು ಆಚೆ ಬಿಸಾಡುತ್ತಿರುತ್ತಾರೆ.
ಈ ಸುದ್ದಿ ಓದಿ:- ಲಕ್ಷ್ಮೀದೇವಿಗೆ ಇಷ್ಟವಾಗದ ಗುಣಗಳಿವು, ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಇಂದೇ ಬದಲಾಗಿ.!
ಆದರೆ ಇನ್ನು ಕೆಲವೊಂದಷ್ಟು ಜನ ಕೆಲವೊಂದು ವಿಧಾನವನ್ನು ಅನುಸರಿಸುವುದರ ಮೂಲಕ ಅದನ್ನು ಮತ್ತೆ ಬಳಕೆ ಮಾಡುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಕೆಲವೊಂದು ಟಿಪ್ಸ್ ಗಳನ್ನು ನೀವು ಅನುಸರಿಸಿದರೆ ಅಕ್ಕಿಯಲ್ಲಿ ಯಾವುದೇ ರೀತಿಯ ಹುಳಬಾರದಂತೆ ಅದನ್ನು ಸುರಕ್ಷಿತವಾಗಿ ನೋಡಿಕೊಳ್ಳಬಹುದು.
ಹಾಗಾದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ಅಕ್ಕಿಯಲ್ಲಿ ಬರುವಂತಹ ಹುಳಗಳನ್ನು ಸಂಪೂರ್ಣವಾಗಿ ದೂರ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಅದಕ್ಕೂ ಮೊದಲು ಅಕ್ಕಿಯಲ್ಲಿ ಹುಳ ಬರದೆ ಇರಬೇಕು ಎಂದರೆ ಯಾವ ಕೆಲವು ವಿಧಾನಗಳನ್ನು ನಾವು ಅನುಸರಿಸಬೇಕಾಗುತ್ತದೆ ಎಂದು ನೋಡುವುದಾದರೆ.
* ಅಕ್ಕಿಯನ್ನು ತುಂಬಿಸುವಂತಹ ಯಾವುದೇ ಡಬ್ಬಿ ಇರಲಿ ಅದರಲ್ಲಿ ಯಾವುದೇ ರೀತಿಯ ನೀರಿನ ಅಂಶ ಇಲ್ಲದೆ ಇರುವ ಹಾಗೆ ಚೆನ್ನಾಗಿ ಒರೆಸಿ ಆನಂತರ ಸ್ವಲ್ಪ ಅಕ್ಕಿಯನ್ನು ಹಾಕಿ ಅದರ ಮೇಲೆ ಕಹಿಬೇವಿನ ಎಲೆಯನ್ನು ಇಡಬೇಕು, ಈ ರೀತಿ ಇಟ್ಟರೆ ಅದರಲ್ಲಿ ಇರುವಂತಹ ಕಹಿ ಅಂಶಕ್ಕೆ ಅಕ್ಕಿಯಲ್ಲಿ ಯಾವುದೇ ರೀತಿಯ ಹುಳ ಬರುವುದಿಲ್ಲ.
ಈ ಸುದ್ದಿ ಓದಿ:- ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು..? ಬಂಗು ಬಂದರೆ ಏನು ದೋಷ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಈ ರೀತಿ ಕಹಿಬೇವಿನ ಸೊಪ್ಪನ್ನು ಇಟ್ಟ ಮೇಲೆ ಅದರ ಮೇಲೆ ಅಕ್ಕಿಯನ್ನು ಹಾಕಿ ಮುಚ್ಚಿಡಬೇಕು. ಆನಂತರ ಸ್ವಲ್ಪ ಕಹಿಬೇವಿನ ಸೊಪ್ಪು ಅಕ್ಕಿ ಹೀಗೆ ಸ್ವಲ್ಪ ಸ್ವಲ್ಪ ಭಾಗಕ್ಕೆ ಕಹಿಬೇವಿನ ಸೊಪ್ಪನ್ನು ಹಾಕುವುದರಿಂದ ಅಕ್ಕಿಯಲ್ಲಿ ಹುಳ ಬರುವುದನ್ನು ತಪ್ಪಿಸಬಹುದು.
* ಅದೇ ರೀತಿಯಾಗಿ ಮೇಲೆ ಹೇಳಿದ ವಿಧಾನದಲ್ಲಿಯೇ ಕಹಿಬೇವಿನ ಬದಲು ಒಣಮೆಣಸಿನಕಾಯಿಯನ್ನು ಸಹ ಇದೇ ರೀತಿಯಾಗಿ ಇಟ್ಟು ಅಕ್ಕಿಯನ್ನು ತುಂಬಿಸಬೇಕು ಈ ವಿಧಾನ ಅನುಸರಿಸುವುದರಿಂದಲೂ ಕೂಡ ಅದರಲ್ಲಿರುವ ಘಾಟಿನ ಅಂಶಕ್ಕೆ ಅಕ್ಕಿಯಲ್ಲಿ ಹುಳ ಬರುವುದಿಲ್ಲ.
ಹಾಗೂ ಪಲಾವ್ ಎಲೆಯನ್ನು ಸಹ ಅಕ್ಕಿಯ ಒಳಗಡೆ ಹಾಕಿ ಇಡುವು ದರಿಂದ ಅದರಲ್ಲಿ ಇರುವಂತಹ ಒಂದು ವಾಸನೆಗೆ ಅಕ್ಕಿಯಲ್ಲಿ ಹುಳ ಬರುವುದಿಲ್ಲ ಈ ರೀತಿಯಾಗಿ ಅಡುಗೆ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ನಾವು ಅಕ್ಕಿಯಲ್ಲಿ ಬರುವಂತಹ ಹುಳುವನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು.
ಈ ಸುದ್ದಿ ಓದಿ:- ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!
* ಇದರ ಜೊತೆ ಕರ್ಪೂರವನ್ನು ಒಂದು ಟಿಶ್ಯೂ ಪೇಪರ್ ನಲ್ಲಿ ಹಾಕಿ ಅದನ್ನು ಸಹ ಅಕ್ಕಿ ಒಳಗಡೆ ಇಡುವುದರಿಂದ ಅದರಲ್ಲಿರುವಂತಹ ಒಂದು ವಾಸನೆಗೂ ಸಹ ಅಕ್ಕಿಯಲ್ಲಿ ಯಾವುದೇ ರೀತಿಯ ಬಿಳಿ ಹುಳ ಹಾಗೂ ಕಪ್ಪು ಹುಳ ಬರುವುದಿಲ್ಲ. ಹಾಗಾಗಿ ಮಹಿಳೆಯರು ಅಡುಗೆ ಮನೆಯಲ್ಲಿ ಇಂತಹ ಕೆಲವೊಂದಷ್ಟು ಟಿಪ್ಸ್ ಗಳನ್ನು ಅನುಸರಿಸುವುದ ರಿಂದ ನಿಮ್ಮ ಅಡುಗೆ ಮನೆಯಲ್ಲಿ ಆಗುವಂತಹ ಕೆಲವೊಂದು ಸಮಸ್ಯೆಗಳನ್ನು ನೀವೇ ಸರಿಪಡಿಸಿಕೊಳ್ಳಬಹುದು.