ಹೆಚ್ಚಿನ ಜನರು ಬಹಳ ವರ್ಷಗಳಿಂದಲೂ ಕೂಡ ಫ್ರಿಡ್ಜ್ ಅನ್ನು ಉಪ ಯೋಗಿಸುತ್ತಿರುತ್ತಾರೆ ಅಂತಹ ಒಂದು ಸಂದರ್ಭದಲ್ಲಿ ಫ್ರಿಡ್ಜ್ ತನ್ನ ಕೂಲಿಂಗ್ ಅನ್ನು ಕಡಿಮೆ ಮಾಡಿಕೊಂಡಿರುತ್ತದೆ ಕೆಲವೊಮ್ಮೆ ಕೆಲವೊಂದು ತೊಂದರೆಗಳು ಸಮಸ್ಯೆಗಳು ಉಂಟಾಗುತ್ತದೆ.
ಇದರಿಂದಾಗಿ ಹೆಚ್ಚಿನ ಜನ ಹೊಸ ಫ್ರಿಡ್ಜ್ ತರುವ ನಿರ್ಧಾರವನ್ನು ಮಾಡಿರುತ್ತಾರೆ. ಅದರ ಬದಲು ಈಗ ನಾವು ಹೇಳುವಂತಹ ಈ ಕೆಲವು ವಿಧಾನಗಳನ್ನು ನೀವು ಅನುಸರಿಸುವುದರಿಂದ ಫ್ರಿಡ್ಜ್ ಹಾಳಾಗದಂತೆ ಕಾಪಾಡುತ್ತದೆ. ಹಾಗೂ ಫ್ರಿಡ್ಜ್ ಹೆಚ್ಚಿನ ದಿನಗಳ ವರೆಗೆ ಬಾಳಿಕೆಗೆ ಬರುವ ಹಾಗೆಯೂ ಕೂಡ ನೋಡಿಕೊಳ್ಳುತ್ತದೆ.
ಹಾಗಾದರೆ ಈ ದಿನ ಫ್ರಿಡ್ಜ್ ಯಾರ ಮನೆಯಲ್ಲಿ ಇರುತ್ತದೆಯೋ ಅವರು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸುವುದು ತುಂಬಾ ಒಳ್ಳೆಯದು. ಹಾಗಾದರೆ ಈ ದಿನ ಫ್ರಿಡ್ಜ್ ಅನ್ನು ನಾವು ಹೆಚ್ಚಿನ ದಿನಗಳವರೆಗೆ ಬಾಳಿಕೆ ಬರಬೇಕು ಎಂದರೆ ಮೊದಲು ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದು ತಿಳಿಯೋಣ.
* ಫ್ರಿಡ್ಜ್ ನಲ್ಲಿ ಒಂದು ರಬ್ಬರ್ ಇರುತ್ತದೆ ಅಂದರೆ ಡೋರ್ ಹಾಕುವಂತಹ ಒಂದು ಸ್ಥಳದಲ್ಲಿ ರಬ್ಬರ್ ಇರುತ್ತದೆ ಅದನ್ನು ಸದಾ ಕಾಲ ನಾವು ಜೋಪಾನವಾಗಿ ನೋಡಿ ಕೊಳ್ಳಬೇಕು ಅದನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಹಾಗೇನಾದರೂ ನೀವು ಆ ಒಂದು ರಬ್ಬರ್ ಅನ್ನು ಸರಿಯಾದ ರೀತಿ ನೋಡಿಕೊಳ್ಳದೆ ಇದ್ದರೆ ಅದು ಹಾಳಾಗುತ್ತದೆ. ಇದರಿಂದ ಫ್ರಿಡ್ಜ್ ಹೆಚ್ಚಿನ ದಿನಗಳವರೆಗೆ ಬಳಕೆಗೆ ಬರುವುದಿಲ್ಲ ಹಾಗೂ ಫ್ರಿಡ್ಜ್ ನಲ್ಲಿ ಕೂಲಿಂಗ್ ಸಹ ಕಡಿಮೆ ಯಾಗುತ್ತದೆ. ಆದ್ದರಿಂದ ಇದನ್ನು ಬಹಳ ಮುಖ್ಯವಾಗಿ ಗಮನಿಸುವುದು ತುಂಬಾ ಒಳ್ಳೆಯದು.
ಹಾಗಾಗಿ 15 ದಿನಗಳಿಗೆ ಒಮ್ಮೆಯಾದರೂ ಇದನ್ನು ಸ್ವಚ್ಛ ಮಾಡಿಕೊಳ್ಳು ವುದು ಒಳ್ಳೆಯದು. ಇಲ್ಲವಾದರೆ ಫ್ರಿಡ್ಜ್ ನಲ್ಲಿ ಇಡುವಂತಹ ಆಹಾರಗಳೆ ಲ್ಲವೂ ಕೂಡ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾದರೆ ಈ ರಬ್ಬರ್ ಹೇಗೆ ಚೆನ್ನಾಗಿದೆ ಚೆನ್ನಾಗಿಲ್ಲ ಎನ್ನುವುದನ್ನು ಕಂಡು ಹಿಡಿಯುವುದು ಎಂದು ನೋಡುವುದಾದರೆ.
ಫ್ರಿಡ್ಜ್ ಡೋರ್ ಹಾಕುವಂತಹ ಸಂದರ್ಭದಲ್ಲಿ ಒಂದು ಪೇಪರ್ ಅನ್ನು ಹಾಕಿ ಹೊರ ಗಡೆಯೂ ಸಹ ಬಿಡಬೇಕು ಆನಂತರ ಅದನ್ನು ಮೆತ್ತಗೆ ಎಳೆಯಬೇಕು ಎಳೆದ ತಕ್ಷಣವೇ ಆ ಒಂದು ಪೇಪರ್ ಬಂದರೆ ಫ್ರಿಡ್ಜ್ ನಲ್ಲಿ ಇರುವಂತಹ ರಬ್ಬರ್ ಹಾಳಾಗಿದೆ ಎಂದರ್ಥ ಆನಂತರ ನೀವು ಅದನ್ನು ಬದಲಾಯಿಸಿ ಕೊಳ್ಳುವುದು ಉತ್ತಮ.
* ಫ್ರಿಡ್ಜ್ ನಲ್ಲಿ ಕೂಲಿಂಗ್ ಎನ್ನುವಂತಹ ಒಂದು ಬಟನ್ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಕೂಲಿಂಗ್ ನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇತ್ತೀಚೆಗೆ ಎಲ್ಲಾ ಫ್ರಿಡ್ಜ್ ಗಳಲ್ಲಿಯೂ ಕೂಡ ಆಟೋಮೆಟಿಕ್ ಕೂಲಿಂಗ್ ಇರುತ್ತದೆ. ನಾವೇ ಅದನ್ನು ಸೆಟ್ ಮಾಡಿಕೊಳ್ಳಬೇಕಾಗುತ್ತದೆ ಆದ್ದರಿಂದ ಅದನ್ನು ಗಮನಿಸುವುದು ಒಳ್ಳೆಯದು.
* ಇನ್ನು ಮೂರನೆಯದಾಗಿ ಫ್ರಿಡ್ಜ್ ನಲ್ಲಿರುವಂತಹ ಏರ್ವೆಂಟ್ ಅನ್ನು ನಾವು ಮುಚ್ಚಬಾರದು ಅಂದರೆ ಕೆಲವೊಂದಷ್ಟು ಜನ ಹೆಚ್ಚಿನ ಆಹಾರ ಪದಾರ್ಥಗಳನ್ನು ಬಾಕ್ಸ್ ಗಳನ್ನು ಅದರ ಹತ್ತಿರಕ್ಕೆ ಇಟ್ಟು ಮುಚ್ಚಿರುತ್ತಾರೆ ಆದರೆ ಈ ರೀತಿ ಇಡಬಾರದು. ಈ ರೀತಿ ಇಡುವುದರಿಂದ ಅದರಲ್ಲಿ ಇರುವಂತಹ ಅಂಶ ಆಚೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ ಅಂತಹ ಸಂದರ್ಭದಲ್ಲಿ ಫ್ರಿಡ್ಜ್ ಹಾಳಾಗುವ ಸಾಧ್ಯತೆ ಇರುತ್ತದೆ.
* ಫ್ರಿಜ್ ನಲ್ಲಿರುವಂತಹ ಕಂಡೆನ್ಸರ್ ಕಾಯಿಲ್ ಗಳನ್ನು ಆರು ತಿಂಗಳಿ ಗೊಮ್ಮೆ ಸ್ವಚ್ಛ ಮಾಡುವುದು ಉತ್ತಮ. ಕೆಲವೊಂದಷ್ಟು ಜನ ಇದನ್ನು ಗಮನಿಸುವುದೇ ಇಲ್ಲ ಇದರ ಸುತ್ತ ಧೂಳು ಎಲ್ಲ ಕೂತಿರುತ್ತದೆ ಇದರಿಂದ ಫ್ರಿಡ್ಜ್ ನಲ್ಲಿ ಕೂಲಿಂಗ್ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇದನ್ನು ಗಮನಿಸುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.