ಪ್ರತಿಯೊಂದು ಮನೆಯನ್ನು ನಾವು ನಿರ್ಮಾಣ ಮಾಡುವಂತಹ ಸಂದರ್ಭದಲ್ಲಿ ನಮಗೆ ಇಷ್ಟ ಬಂದ ಹಾಗೆ ನಮಗೆ ಇಷ್ಟ ಇರುವಂತಹ ಜಾಗದಲ್ಲಿ ಬೆಡ್ರೂಮ್ ಅಡುಗೆಮನೆ ದೇವರ ಮನೆ ಇವುಗಳನ್ನು ನಿರ್ಮಾಣ ಮಾಡಿಸಿಕೊಳ್ಳಬಾರದು. ಬದಲಿಗೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದಷ್ಟು ನಿಯಮಗಳು ಇರುತ್ತದೆ.
ಅದನ್ನು ನಾವು ಅನುಸರಿಸು ವುದರ ಮೂಲಕ ನಮ್ಮ ಮನೆಯಲ್ಲಿ ಪ್ರತಿಯೊಂದು ಬಾಗಿಲುಗಳನ್ನು ಸಹ ನಿಯಮ ಬದ್ಧವಾಗಿ ವಾಸ್ತು ಶಾಸ್ತ್ರದ ಪ್ರಕಾರವಾಗಿ ನಿರ್ಮಾಣ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ನಾವು ನಮ್ಮ ಜೀವನಪ ರ್ಯಂತ ವಾಸಿಸುವಂತಹ ಮನೆಯು ಶಾಸ್ತ್ರ ಬದ್ಧವಾಗಿ ನಿಯಮ ಬದ್ಧವಾಗಿ ಇದ್ದರೆ ನಾವು ಆ ಒಂದು ಮನೆಯಲ್ಲಿ ನೆಮ್ಮದಿಯಾದಂತಹ ಸುಖಕರವಾದoತಹ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ.
ಬದಲಿಗೆ ನಮಗೆ ಇಷ್ಟ ಬಂದ ಹಾಗೆ ಮನೆಯನ್ನು ನಿರ್ಮಾಣ ಮಾಡುವು ದರಿಂದ ಆ ಒಂದು ಮನೆಯಲ್ಲಿ ಯಾವುದೇ ರೀತಿಯ ನೆಮ್ಮದಿ ಶಾಂತಿ ಅಭಿವೃದ್ಧಿ ಎನ್ನುವುದು ಉಂಟಾಗುವುದಿಲ್ಲ. ಬದಲಿಗೆ ಮೊದಲೇ ಹೇಳಿ ದಂತೆ ಮನೆಯಲ್ಲಿ ಇಲ್ಲ ಸಲ್ಲದ ಜಗಳಗಳು ಮನೆಯ ಸದಸ್ಯರ ನಡುವೆ ಮನಸ್ತಾಪ ಉಂಟಾಗುವುದು ಮೊದಲನೆಯದಾಗಿ ಆ ಮನೆಯ ಯಜಮಾನನ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗುವುದು ಹೀಗೆ ನಾನಾ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಆದ್ದರಿಂದ ನಾವು ಮನೆಯನ್ನು ನಿರ್ಮಾಣ ಮಾಡುವಂತ ಸಂದರ್ಭದಲ್ಲಿ ಬಹಳಷ್ಟು ಮಾಹಿತಿಗಳನ್ನು ತಿಳಿದುಕೊಂಡು ಶಾಸ್ತ್ರ ಕೇಳುವುದರ ಮೂಲಕ ವಾಸ್ತು ಶಾಸ್ತ್ರದ ಕೆಲವೊಂದಷ್ಟು ನಿಯಮಗಳನ್ನು ಅಳವಡಿಸಿಕೊಂಡು ಮನೆ ಯನ್ನು ನಿರ್ಮಾಣ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಮನೆಯಲ್ಲಿ ಯಾವುದೇ ಒಂದು ಅಡುಗೆ ಮನೆ ನಿರ್ಮಾಣ ಮಾಡುವುದಾಗಿರಬಹುದು, ದೇವರ ಮನೆ ನಿರ್ಮಾಣ ಮಾಡುವುದಾಗಿರ ಬಹುದು, ಬೆಡ್ರೂಮ್ ಇವೆಲ್ಲವನ್ನೂ ನಿರ್ಮಾಣ ಮಾಡುವಂತಹ ಸಂದರ್ಭದಲ್ಲಿ ಅವುಗಳ ಬಾಗಿಲು ಯಾವ ದಿಕ್ಕಿನಲ್ಲಿ ಇರುತ್ತದೆ ಎನ್ನುವುದು ಕೂಡ ಆ ಒಂದು ಮನೆಯ ಅಭಿವೃದ್ಧಿ ಯಶಸ್ಸಿಗೆ ಕಾರಣವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಹಾಗಾದರೆ ಈ ದಿನ ಯಾವ ಯಾವ ಬಾಗಿಲು ಯಾವ ಯಾವ ದಿಕ್ಕಿನಲ್ಲಿ ಇದ್ದರೆ ಅದು ಆ ಒಂದು ಮನೆಗೆ ಯಶಸ್ಸಿಗೆ ಕಾರಣವಾಗುತ್ತದೆ ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.
ಅದಕ್ಕೂ ಮೊದಲು ಪ್ರತಿಯೊಬ್ಬರೂ ಕೆಲವೊಂದಷ್ಟು ವಾಸ್ತುಶಾಸ್ತ್ರದ ಮಾಹಿತಿಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು ಅದೇನೆಂದರೆ.
* ಪ್ರತಿಯೊಂದು ಜಾಗಕ್ಕೂ ಕೂಡ ಉಚ್ಚ ಸ್ಥಾನ ಹಾಗೂ ನೀಚ ಸ್ಥಾನ ಎನ್ನುವುದು ಇರುತ್ತದೆ. ಅಂದರೆ ಅಡುಗೆ ಮನೆಯಾಗಿರಬಹುದು ಬಾತ್ರೂಮ್, ದೇವರ ಮನೆ, ಹೀಗೆ ಎಲ್ಲದರಲ್ಲಿಯೂ ಕೂಡ ಉಚ್ಚ ಸ್ಥಾನ ಹಾಗೂ ನೀಚ ಸ್ಥಾನ ಎನ್ನುವುದು ಇರುತ್ತದೆ. ಇದನ್ನು ಗಮನಿಸಿಕೊಂಡು ಆನಂತರ ನಾವು ಬಾಗಿಲುಗಳನ್ನು ಇಡಿಸುವುದು ಒಳ್ಳೆಯದು.
* ಉಚ್ಚ ಸ್ಥಾನ ಎಂದರೆ ಒಳ್ಳೆಯ ಶಕುನ ಎಂದರ್ಥ ಅದೇ ರೀತಿ ನೀಚ ಸ್ಥಾನ ಎಂದರೆ ಕೆಟ್ಟ ಶಕುನ ಎಂದು. ಆದ್ದರಿಂದ ಒಳ್ಳೆಯ ಶಕುನಗಳನ್ನು ನಾವು ಪಡೆಯಬೇಕು ಎಂದರೆ ಉಚ್ಚ ಸ್ಥಾನದಲ್ಲಿ ಬಾಗಿಲುಗಳನ್ನು ಇಡಬೇಕು. ಹಾಗಾದರೆ ಯಾವುದು ಉಚ್ಚ ಸ್ಥಾನ ಹಾಗೂ ಯಾವುದು ನೀಚ ಸ್ಥಾನ ಎಂದು ಈ ಕೆಳಗೆ ತಿಳಿಯೋಣ.
ಮೊದಲನೆಯದಾಗಿ ಪೂರ್ವ ಬಾಗಿಲಿನ ಬಗ್ಗೆ ತಿಳಿಯೋಣ :- ಪೂರ್ವ ಹಾಗೂ ಉತ್ತರದ ಮಧ್ಯ ಭಾಗದಲ್ಲಿ ಬರುವುದು ಈಶಾನ್ಯ ದಿಕ್ಕು. ಈ ದಿಕ್ಕುಗಳ ಮಧ್ಯ ಭಾಗದಲ್ಲಿ ನಾವು ಮುಖ್ಯದ್ವಾರವನ್ನು ಇಟ್ಟರೆ ಆ ಮನೆಯ ಗಂಡು ಮಕ್ಕಳು ಒಂದು ಒಳ್ಳೆಯ ಸ್ಥಾನಕ್ಕೆ ಹೋಗುತ್ತಾರೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.