ರೇಷನ್ ಕಾರ್ಡ್ ಇಲ್ಲದವರಿಗೆ ಹಾಗೂ ರೇಷನ್ ಕಾರ್ಡ್ ಮಾಡಿಸಿ ಕೊಳ್ಳುವುದಕ್ಕೆ ಪ್ರಯತ್ನಿಸುವವರಿಗೆಲ್ಲರಿಗೆ, ರೇಷನ್ ಕಾರ್ಡ್ ನಿಂದ ನಿಮ್ಮ ಹೆಸರನ್ನು ತೆಗೆಸುವವರಿದ್ದರೆ ಹಾಗೂ ರೇಷನ್ ಕಾರ್ಡ್ ಗೆ ಹೊಸದಾಗಿ ಹೆಸರನ್ನು ಸೇರಿಸಲು ಪ್ರಯತ್ನಿಸುತ್ತಿರುವವರಿಗೆ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೂ ಕೂಡ ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ.
ಮತ್ತು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಬಹಳ ದಿನದಿಂದ ಕಾಯುತ್ತಾ ಕುಳಿತಿರುವವರಿಗೆ ಹೊಸ ರೇಷನ್ ಕಾರ್ಡ್ ಗಳನ್ನು ಸಹ ನೀಡಲಾಗುತ್ತದೆ. ಹಾಗಾದರೆ ಇಷ್ಟೆಲ್ಲ ಸೌಲಭ್ಯಗಳನ್ನು ನಾವು ಪಡೆದು ಕೊಳ್ಳಬೇಕು ಎಂದರೆ ಯಾವ ದಿನ ಇದಕ್ಕೆ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಎಲ್ಲಿ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಅನ್ನಭಾಗ್ಯ ಯೋಜನೆಗೆ ಸಂಬಂಧಪಟ್ಟ ಹಾಗೆ ಹೊಸ ಮಾಹಿತಿ ಹೊರ ಬಂದಿದೆ. ಕಳೆದ 8 ತಿಂಗಳಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. 10 ಕೆಜಿ ಅಕ್ಕಿಯನ್ನು BPL ಕಾರ್ಡ್ ಹೊಂದಿರುವವರಿಗೆ ಸರ್ಕಾರ ಒದಗಿಸಬೇಕಿತ್ತು.
ಈ ಸುದ್ದಿ ಓದಿ:- ಮನೆಯಲ್ಲಿ ಬಾಗಿಲುಗಳು ನೀಚ ಸ್ಥಾನದಲ್ಲಿ ಇದ್ದರೆ ಸಾಲದ ಸುಳಿಗೆ ಸಿಲುಕುತ್ತೀರಾ.!
ಆದರೆ ಸದ್ಯಕ್ಕೆ ಈಗ ಕೇಂದ್ರ ಸರ್ಕಾರದಿಂದ ಸಿಗುತ್ತಿರು ವಂತಹ 5 ಕೆಜಿ ಅಕ್ಕಿಯನ್ನು ಮಾತ್ರ ಪಡೆದುಕೊಳ್ಳಬಹುದಾಗಿದ್ದು. ಇನ್ನು 5 ಕೆಜಿ ಅಕ್ಕಿಯ ಬದಲು ರಾಜ್ಯ ಸರ್ಕಾರ ಹಣವನ್ನು ಜಮಾ ಮಾಡುತ್ತಿದೆ. ಪ್ರತಿ 1 ಕೆಜಿ ಅಕ್ಕಿಗೆ 34 ರೂಪಾಯಿಗಳು. ಅಂದರೆ 5 ಕೆಜಿ ಅಕ್ಕಿಗೆ 170 ಹಣವನ್ನು ಜಮಾ ಮಾಡಲಾಗುತ್ತಿದೆ.
ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೋ ಅಷ್ಟು ಸದಸ್ಯರಿಗೆ 5 ಕೆಜಿ ಅಕ್ಕಿ ಯ ಹಣ ಜಮಾ ಆಗುತ್ತದೆ. ಹಾಗಾಗಿ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಸಾವಿರಗಟ್ಟಲೆ ಹಣವನ್ನು ಪಡೆದುಕೊಳ್ಳುತ್ತಿ ರುವವರು ಇದ್ದಾರೆ. ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರು ವಂತಹ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವಂತಹ ಕೆಲವೊಂದ ಷ್ಟು ಕೆಲಸಗಳನ್ನು ಮಾಡಬೇಕಾಗುತ್ತದೆ.
ಇಲ್ಲವಾದರೆ ನೀವು ಸರ್ಕಾರ ದಿಂದ ಸಿಗುತ್ತಿರುವಂತಹ 5 ಕೆಜಿ ಅಕ್ಕಿ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾದರೆ ಯಾವ ಕೆಲವು ಕೆಲಸಗಳನ್ನು ನಾವು ಅಂದರೆ BPL ಕಾರ್ಡ್ ಹೊಂದಿರುವಂತಹ ಸದಸ್ಯರು ಮಾಡಬೇಕಾ ಗುತ್ತದೆ ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:- ಹಳೆ ಕುಕ್ಕರ್ ಅನ್ನೇ ಹೊಸದಾಗಿಸಿ ಚೂರು ನೀರು ಹೊರಗಡೆ ಬರಲ್ಲ….||
* ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುವುದರಿಂದ ಇದು ಡಿಜಿಟಲ್ ಪ್ರಕ್ರಿಯೆ ಆಗಿರುತ್ತದೆ. ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಅಗತ್ಯವಿರುವ ಅಪ್ಡೇಟ್ ಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ಉದಾಹರಣೆಗೆ :- ಆಧಾರ್ ಸೀಡಿಂಗ್, E KYC ಅಪ್ಡೇಟ್, NPCI ಮ್ಯಾಪಿಂಗ್, ಈ ಮೊದಲಾದ ಅಗತ್ಯ ಇರುವಂತಹ ಅಪ್ಡೇಟ್ ಗಳು ಆಗಬೇಕು.
ಹಾಗೆನಾದರು ನೀವು ಇವುಗಳನ್ನು ಅಪ್ಡೇಟ್ ಮಾಡಿಸಿಕೊಳ್ಳ ಲಿಲ್ಲ ಎಂದರೆ ನಿಮಗೆ ಯಾವುದೇ ರೀತಿಯಾದಂತಹ ಹಣ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ. ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಈ ಎಲ್ಲಾ ದಾಖಲಾತಿಗಳು ಅಪ್ಡೇಟ್ ಆಗಿದೆಯಾ ಇಲ್ಲವಾ ಎನ್ನುವುದನ್ನು ನೀವು ನೋಡುವುದಕ್ಕೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಅಥವಾ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತಹ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಬಹುದು.
ಮೇ ತಿಂಗಳ ಹಣ ಬಿಡುಗಡೆ ಇದೇ 15ನೇ ತಾರೀಕಿಗೆ 9ನೇ ಕಂತಿನ ಹಣ ಬಿಡುಗಡೆಯಾಗಲಿದೆ ತಿಂಗಳು ಮುಗಿಯುವ ಒಳಗಾಗಿ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತದೆ. ಪ್ರತಿ ಕುಟುಂಬದಲ್ಲಿಯೂ ಕೂಡ ಮನೆಯ ಯಜಮಾನನ ಖಾತೆಗೆ ಹಣ ಜಮಾ ಆಗುತ್ತದೆ.
ಈ ಸುದ್ದಿ ಓದಿ:- ಪುರುಷರೇ ಈ 6 ಗುಟ್ಟುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ..||
ಆದರೆ ಇತ್ತೀಚಿನ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಕ್ಕೆ ರೇಷನ್ ಕಾರ್ಡ್ ನಲ್ಲಿ ಮಹಿಳೆಯರ ಹೆಸರು ಪ್ರಧಾನವಾಗಿ ಇರಬೇಕು ಎನ್ನುವ ಹಿನ್ನೆಲೆಯಲ್ಲಿ ಅನ್ನ ಭಾಗ್ಯ ಯೋಜನೆಯ ಹಣ ಮಹಿಳೆಯರ ಖಾತೆಗೂ ಕೂಡ ಜಮಾ ಆಗುತ್ತಿದೆ.