ಸಾಮಾನ್ಯವಾಗಿ ನಾವೆಲ್ಲರೂ ಕೂಡ ಕೆಲವೊಂದಷ್ಟು ಸ್ಥಳಗಳಿಗೆ ಹೋದಂತಹ ಸಂದರ್ಭದಲ್ಲಿ ಅಂದರೆ ಕೆಲವೊಂದಷ್ಟು ಆಫೀಸ್ ಗಳಲ್ಲಿ ಮನೆಗಳಲ್ಲಿ ಕಚೇರಿಗಳಲ್ಲಿ ವ್ಯಾಪಾರ ವ್ಯವಹಾರ ಮಾಡುತ್ತಿರುವಂತಹ ಸ್ಥಳಗಳಲ್ಲಿ 7 ಬಿಳಿ ಬಣ್ಣದ ಕುದುರೆಗಳು ಓಡುತ್ತಿರುವಂತಹ ಚಿತ್ರಣಗಳನ್ನು ಇಟ್ಟುಕೊಂಡಿರುತ್ತಾರೆ ನಾವು ಇದನ್ನು ನೋಡಿರುತ್ತೇವೆ.
ಆದರೆ ಇದನ್ನು ನೋಡುತ್ತಿದ್ದ ಹಾಗೆ ಕೆಲವೊಂದಷ್ಟು ಜನರ ಮನಸ್ಸಿನಲ್ಲಿ ಯಾವ ಒಂದು ಕಾರಣಕ್ಕಾಗಿ ಈ ಫೋಟೋವನ್ನು ಇಲ್ಲಿ ಹಾಕಿದ್ದಾರೆ ಇದರಿಂದ ಏನು ಪ್ರಯೋಜನ ಎನ್ನುವಂತಹ ಪ್ರಶ್ನೆ ಮೂಡುವುದು ಸಹಜ. ಹಾಗಾದರೆ ಈ ದಿನ ಯಾವ ಒಂದು ಸ್ಥಳದಲ್ಲಿ ಈ ಕುದುರೆ ಫೋಟೋಗಳನ್ನು ಇಟ್ಟರೆ ಏನು ಫಲ ಅದರಲ್ಲೂ ಯಾವ ದಿಕ್ಕಿನಲ್ಲಿ ಇದನ್ನು ಇಟ್ಟರೆ ನಮಗೆ ಹೆಚ್ಚಿನ ಅಭಿವೃದ್ಧಿಯಾಗುತ್ತದೆ.
ಹಾಗೂ ಇದನ್ನು ಇಡುವುದರಿಂದ ಮತ್ತೆ ಯಾವುದೆಲ್ಲ ರೀತಿಯ ಲಾಭ ಗಳನ್ನು ಪಡೆಯಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿಯೋಣ. ಈ ಒಂದು ಫೋಟೋ ಇಡುವುದರ ಮೂಲ ಉದ್ದೇಶ ಏನೆಂದರೆ ಕುದುರೆ ಒಂದು ಓಡುತ್ತಿರುವಂತಹ ಚಲನೆಯ ಪ್ರತೀಕ. ಒಂದು ಶಕ್ತಿ ಎಂದೇ ಹೇಳುತ್ತಾರೆ. ಕೆಲವೊಂದಷ್ಟು ಜನ ಮಾತನಾಡುವಂತಹ ಸಂದರ್ಭದಲ್ಲಿ ಓಡುವ ಕುದುರೆಯ ಹಾಗೆ ಓಡುತ್ತಿರುವೆ ಎಂದು ಹೇಳುತ್ತಿರುತ್ತಾರೆ.
ಈ ಸುದ್ದಿ ಓದಿ:- ಮನೆಯಲ್ಲಿ ಬಾಗಿಲುಗಳು ನೀಚ ಸ್ಥಾನದಲ್ಲಿ ಇದ್ದರೆ ಸಾಲದ ಸುಳಿಗೆ ಸಿಲುಕುತ್ತೀರಾ.!
ಇದರ ಅರ್ಥ ಏನೆಂದರೆ ಒಂದು ಚಲನೆಯ ಪ್ರತಿಕ ಎಂಬಂತೆ ಈ ಒಂದು ಕುದುರೆಯು ಒಂದು ಪ್ರಗತಿಯ ಸಂಕೇತ. ಸದಾ ಚಲನೆಯ ಸಂಕೇತ ಸದಾ ಅಭಿವೃದ್ಧಿಯ ಸಂಕೇತ, ಹಣಕಾಸಿನ ಸಂಕೇತ ಯಶಸ್ಸು ಕೀರ್ತಿ ಅಂತಸ್ತು ಹಣ ಸಂಪತ್ತು ಒಂದಲ್ಲ ಎರಡಲ್ಲ ಪ್ರತಿ ಯೊಂದು ಒಳ್ಳೆಯ ಸನ್ನಿವೇಶದಲ್ಲಿಯೂ ಕೂಡ ಈ ಒಂದು ಕುದುರೆಯ ಪಾತ್ರ ಬಹಳಷ್ಟು ಪ್ರಮುಖವಾಗಿದೆ.
ಆದ್ದರಿಂದಲೇ ಕುದುರೆಗೆ ಒಂದು ಮಹತ್ತರವಾದಂತಹ ಸ್ಥಾನ ಇದೆ ಮಾತೆ ಮಹಾಲಕ್ಷ್ಮಿಯ ವಿಶೇಷವಾದಂತಹ ಆಶೀರ್ವಾದವನ್ನು ಹೊಂದಿರುವಂತಹ ಒಂದು ಸಂಕೇತ ಎಂದು ಈ ಒಂದು ಕುದುರೆಯನ್ನು ಹೇಳುತ್ತಾರೆ. ನೀವೇನಾದರೂ ಇಂತಹ ಒಂದು ಚಿತ್ರಪಟವನ್ನು ನಿಮ್ಮ ಮನೆಯಲ್ಲಿ ಇಡುತ್ತಿದ್ದರೆ ಈ ಒಂದು ದಿಕ್ಕಿನಲ್ಲಿಯೇ ಇಡಬೇಕು ಅದೇ ರೀತಿಯಾಗಿ ನೀವು ಆ ಒಂದು ಫೋಟೋವನ್ನು ಖರೀದಿ ಮಾಡುವಂತಹ ಸಂದರ್ಭದಲ್ಲಿ ಕೆಲವೊಂದಷ್ಟು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಖರೀದಿಸಬೇಕು.
ಹಾಗೂ ಕುದುರೆಯ ಮೈ ಮೇಲೆ ಯಾವುದೇ ರೀತಿಯ ಬಣ್ಣ ಇರಬಾರದು ಕುದುರೆಯ ಮುಖ ಸ್ವಚ್ಛವಾಗಿ ಕಾಣುವ ರೀತಿ ಇರಬೇಕು ಹಾಗೂ ಕುದುರೆಗಳು ಬೆಟ್ಟಗುಡ್ಡಗಳನ್ನು ಏರುತ್ತಿರುವಂತಹ ಚಿತ್ರಗಳು ಇದ್ದರೆ ಅವುಗಳನ್ನು ಯಾವುದೇ ಕಾರಣಕ್ಕೂ ಆಯ್ಕೆ ಮಾಡಿಕೊಳ್ಳಬಾರದು. ಹಾಗೂ ಬೆಟ್ಟಗುಡ್ಡಗಳಿಂದ ಇಳಿಯುತ್ತಿರುವಂತಹ ಚಿತ್ರಣಗಳನ್ನು ಸಹ ಆಯ್ಕೆ ಮಾಡಿಕೊಳ್ಳಬಾರದು.
ಈ ಸುದ್ದಿ ಓದಿ:- ದೇವರ ಮನೆ ಹೀಗಿದ್ದರೆ ನೀವು ಕೋಟ್ಯಾಧಿಪತಿಗಳಾಗುತ್ತೀರಿ……..||
ಇವೆಲ್ಲವೂ ಸಹ ನೀವು ಮಾಡುವಂತಹ ಕೆಲವೊಂದಷ್ಟು ಕೆಲಸ ಕಾರ್ಯಗಳಲ್ಲಿ ಅಡೆತಡೆಗಳನ್ನು ಉಂಟುಮಾಡು ತ್ತದೆ ಎನ್ನುವುದರ ಸೂಚನೆಯಾಗಿದೆ. ಪ್ರತಿನಿತ್ಯ ನಾವು ಎದ್ದ ತಕ್ಷಣ 7 ಕುದುರೆಯ ಫೋಟೋವನ್ನು ನೋಡಿ ಆನಂತರ ನಾವು ಮುಂದಿನ ಕೆಲಸಗಳನ್ನು ಮಾಡಬೇಕು. ಈ ರೀತಿ ಮಾಡಿದ್ದೆ ಆದಲ್ಲಿ ನಾವು ಪ್ರತಿಯೊಂದರಲ್ಲಿಯೂ ಕೂಡ ಅಭಿವೃದ್ಧಿ ಯಶಸ್ಸನ್ನು ಪಡೆಯುತ್ತೇವೆ.
ಇದರಿಂದ ನಮ್ಮ ಆರ್ಥಿಕ ಅಭಿವೃದ್ಧಿ ಎನ್ನುವುದು ಹೆಚ್ಚಾಗುತ್ತದೆ. ಚಮತ್ಕಾರಿ ರೀತಿಯಲ್ಲಿ ನಮಗೆ ಹಣಕಾಸಿನ ಹೊಳೆಯೇ ಹರಿಯುತ್ತದೆ. ಅದೇ ರೀತಿಯಾಗಿ ಯಾವ ಒಂದು ದಿಕ್ಕಿನಲ್ಲಿ ಈ ಒಂದು 7 ಓಡುತ್ತಿರುವಂತಹ ಕುದುರೆಯ ಚಿತ್ರಣವನ್ನು ಹಾಕಬೇಕು ಎಂದು ನೋಡುವುದಾದರೆ.
ನಿಮ್ಮ ಮನೆಯ ಮುಖ್ಯವಾಗಿಲು ಪೂರ್ವ ದಿಕ್ಕಿಗೆ ಇದ್ದರೆ ದಕ್ಷಿಣದ ಗೋಡೆಗೆ ನೀವು ಈ ಒಂದು ಕುದುರೆಯ ಫೋಟೋವನ್ನು ಹಾಕಬೇಕು ಆದರೆ ಆ ಎಲ್ಲಾ ಕುದುರೆಗಳ ಮುಖ ಉತ್ತರ ದಿಕ್ಕನ್ನು ನೋಡುತ್ತಿರಬೇಕು ಇದನ್ನು ಗಮನದಲ್ಲಿಟ್ಟುಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.