Home Useful Information ಸೈಟ್ ಕೊಳ್ಳುವಾಗ ಈ ಅಂಶಗಳನ್ನು ಮರೆಯದಿರಿ.!

ಸೈಟ್ ಕೊಳ್ಳುವಾಗ ಈ ಅಂಶಗಳನ್ನು ಮರೆಯದಿರಿ.!

0
ಸೈಟ್ ಕೊಳ್ಳುವಾಗ ಈ ಅಂಶಗಳನ್ನು ಮರೆಯದಿರಿ.!

 

ನಾವು ಸೈಟ್ ಖರೀದಿ ಮಾಡುವಂತಹ ಸಂದರ್ಭದಲ್ಲಿ ಕೆಲವೊಂದಷ್ಟು ವಾಸ್ತು ನಿಯಮಗಳನ್ನು ತಿಳಿದುಕೊಂಡು ಅದರಂತೆ ಸೈಟ್ ಖರೀದಿ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಹಾಗೂ ಮುಂದಿನ ದಿನದಲ್ಲಿ ನಾವು ಆ ಒಂದು ಸ್ಥಳದಲ್ಲಿ ಮನೆಯನ್ನು ನಿರ್ಮಾಣ ಮಾಡಿ ಅಲ್ಲಿ ನೆಮ್ಮದಿಯ ಸುಖವಾದಂತಹ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ.

ಹಾಗೇನಾದರೂ ನೀವು ಯಾವುದೇ ವಿಚಾರಗಳನ್ನು ಗಮನಿಸದೇ ವಾಸ್ತು ಶಾಸ್ತ್ರಕ್ಕೆ ವಿರುದ್ಧವಾಗಿ ಆ ಒಂದು ಸೈಟ್ ಇದ್ದರೆ ನೀವು ಅಲ್ಲಿ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ. ನಿಮ್ಮ ಆರೋಗ್ಯದ ಮೇಲೆ ತೊಂದರೆಗಳು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಅದು ನೇರವಾಗಿ ಪರಿಣಾಮ ಬೀರುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಸೈಟ್ ಖರೀದಿ ಮಾಡುವಂತಹ ಸಂದರ್ಭದಲ್ಲಿ ವಾಸ್ತು ನಿಯಮಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ಸೈಟ್ ಖರೀದಿ ಮಾಡುವಂತಹ ಸಂದರ್ಭದಲ್ಲಿ ನಾವು ನಮ್ಮ ಸೈಟ್ ಯಾವ ಒಂದು ಸ್ಥಾನದಲ್ಲಿ ಇದೆ ಅಂದರೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಈ ದಿಕ್ಕುಗಳಲ್ಲಿ ಯಾವ ಒಂದು ಸನ್ನಿವೇಶ ಅಂದರೆ ಯಾವ ಪರಿಸ್ಥಿತಿ ಇದೆ ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಓಡುತ್ತಿರುವ 7 ಕುದುರೆಗಳ ಚಿತ್ರವನ್ನು ಯಾವ ದಿಕ್ಕಿಗೆ ಹಾಕಿದರೆ ಹಣದ ಮಳೆ ಆಗುತ್ತೆ.!

ನಮ್ಮ ಸೈಟ್ ಯಾವಾಗಲೂ ಕೂಡ ಪೂರ್ವ ದಿಕ್ಕಿಗೆ ಹಾಗೂ ಉತ್ತರ ದಿಕ್ಕಿಗೆ ಎತ್ತರವಾಗಿ ಇರಬೇಕು ಹೀಗಿದ್ದರೆ ಅದು ತುಂಬಾ ಶುಭ ಎಂದು ಹೇಳುತ್ತಾರೆ. ಅದೇ ರೀತಿಯಾಗಿ ಪೂರ್ವ ದಿಕ್ಕು ಅಥವಾ ಉತ್ತರ ದಿಕ್ಕಿಗೆ ನಿಮ್ಮ ಸೈಟ್ ನಿಂದ ಅರ್ಧ ಕಿಲೋ ಮೀಟರ್ ಒಂದು ಕಿಲೋಮೀಟರ್ ಅಂತರದಲ್ಲಿ ಯಾವುದಾದರೂ ಕೆರೆ ಅಥವಾ ನಾಲೆ ಇದ್ದರೆ ಅದು ಕೂಡ ತುಂಬಾ ಶುಭ ಶಕುನ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.

* ಅದೇ ರೀತಿಯಾಗಿ ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿನ ಕಡೆ ನಿಮ್ಮ ಸೈಟ್ ನಿಂದ ಅರ್ಧ ಕಿಲೋ ಮೀಟರ್ ಅಥವಾ ಒಂದು ಕಿಲೋಮೀಟರ್ ಅಂತರದಲ್ಲಿ ಕೆರೆ ಹಾಗೂ ನಾಲೆಗಳು ಬರಬಾರದು. ಹಾಗೂ ಕೆರೆ ಹಾಗೂ ನಿಮ್ಮ ಸೈಟ್ ಮಧ್ಯ ಭಾಗದಲ್ಲಿ ಅಂದರೆ ಆ ಒಂದು ಅಂತರದಲ್ಲಿ ಬೇರೆ ಯಾವುದಾದರೂ ಮನೆ ಇದ್ದರೆ ಅದರಿಂದ ಬರುವಂತಹ ಋಣಾತ್ಮಕ ಶಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರುವುದಿಲ್ಲ.

* ನಿಮ್ಮ ಸೈಟ್ ನಿಂದ 300 ಮೀಟರ್ ಸುತ್ತಳತೆಯಲ್ಲಿ ಯಾವುದೇ ರೀತಿಯ ಸ್ಮಶಾನಗಳು ಬರಬಾರದು. ಹಾಗೂ ನಿಮ್ಮ ಸೈಟ್ ಸುತ್ತಲೂ ಅಂದರೆ 300 ಮೀಟರ್ ಅಂತರದಲ್ಲಿ ಯಾವುದೇ ದೇವಸ್ಥಾನ ಮಸೀದಿ ಚರ್ಚ್ ಇರಬಾರದು ಹಾಗೂ ಅಲ್ಲಿ ನೀವು ಯಾವುದೇ ಕಾರಣಕ್ಕೂ ಮನೆಯನ್ನು ಕಟ್ಟಬಾರದು ಅವುಗಳ ನೆರಳುಗಳು ನಮ್ಮ ಮನೆಯ ಮೇಲೆ ಬೀಳಬಾರದು.

ಈ ಸುದ್ದಿ ಓದಿ:- ದೇವರ ಮನೆ ಕ್ಲೀನಿಂಗ್, ಕಳಸ, ದೀಪ, ವಿಗ್ರಹ ಸ್ವಚ್ಚತೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಚಾರ.!

* ಪೂರ್ವ ಹಾಗೂ ಈಶಾನ್ಯ ದಿಕ್ಕಿನ ಮಧ್ಯಭಾಗದಲ್ಲಿ ರಸ್ತೆ ಬರಬಹುದು ಅದೇ ರೀತಿಯಾಗಿ ಪೂರ್ವ ಮತ್ತು ಆಗ್ನೇಯ ದಿಕ್ಕಿನ ಮಧ್ಯಭಾಗದಲ್ಲಿ ಯಾವುದೇ ಕಾರಣಕ್ಕೂ ರಸ್ತೆ ಬರಬಾರದು. ಪಶ್ಚಿಮ ಹಾಗೂ ವಾಯುವ್ಯ ದಿಕ್ಕಿಗೆ ರಸ್ತೆ ಬಂದರೆ ತುಂಬಾ ಒಳ್ಳೆಯದು. ಅದೇ ರೀತಿಯಾಗಿ ಉತ್ತರ ಹಾಗೂ ಈಶಾನ್ಯ ದಿಕ್ಕಿಗೆ ರಸ್ತೆ ಬರಬಹುದು.

ಅದೇ ರೀತಿಯಾಗಿ ಉತ್ತರ ದಿಕ್ಕು ಹಾಗೂ ವಾಯುವ್ಯ ದಿಕ್ಕಿಗೆ ರಸ್ತೆ ಬರಬಾರದು ಇದು ತುಂಬಾ ಕೆಟ್ಟದ್ದು ಹಾಗೂ ಪಶ್ಚಿಮ ಹಾಗೂ ವಾಯುವ್ಯ ದಿಕ್ಕಿಗೆ ರಸ್ತೆ ಬರಬಹುದು ಇದು ಕೂಡ ತುಂಬಾ ಒಳ್ಳೆಯದು. ಹಾಗೂ ನಿಮ್ಮ ಸೈಟ್ ನಿಂದ 100 ಮೀಟರ್ ದೂರದಲ್ಲಿ ಹೈಟೆನ್ಶನ್ ವಯರ್ ಇದ್ದರೆ ಸೂಕ್ತ ಬದಲಿಗೆ ಹತ್ತಿರದಲ್ಲಿ ಇದ್ದರೆ ಆ ಒಂದು ಸೈಟ್ ಅನ್ನು ಖರೀದಿ ಮಾಡಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

LEAVE A REPLY

Please enter your comment!
Please enter your name here