ಪ್ರತಿಯೊಬ್ಬ ಹಿಂದು ಗಳ ಮನೆಯಲ್ಲಿಯೂ ಕೂಡ ಪುಟ್ಟದಾಗಿರು ವಂತಹ ದೇವರ ಮನೆ ಇರುವುದು ಸರ್ವೇಸಾಮಾನ್ಯ. ಆದರೆ ಕೆಲವೊಂದಷ್ಟು ಜನರ ಮನೆಯಲ್ಲಿ ನಾವು ಯಾವುದೇ ರೀತಿಯ ದೇವರ ಮನೆಯನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ ಅದರಲ್ಲೂ ಪಟ್ಟಣ ಪ್ರದೇಶಗಳಲ್ಲಿ ಬೇರೆಯವರಿಗೆ ಬಾಡಿಗೆಗೆ ಕೊಡುವ ಉದ್ದೇಶದಿಂದ ಅವರು ಜಾಗ ಕಡಿಮೆ ಇದೆ ಎನ್ನುವ ಉದ್ದೇಶದಿಂದ ದೇವರ ಕೋಣೆಯನ್ನು ಮಾಡಿಸಿರುವುದಿಲ್ಲ.
ಬದಲಿಗೆ ಅಡುಗೆ ಮನೆಯಲ್ಲಿಯೇ ಚಿಕ್ಕದಾಗಿರುವಂತಹ ಒಂದು ಶೆಲ್ಫ್ ಹಾಕಿಸಿ ಅದನ್ನು ದೇವರ ಮನೆಗೆ ಎಂದು ಮಾಡಿಸಿರುತ್ತಾರೆ. ಆದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದೇವರ ಮನೆಯಲ್ಲಿ ಹೇಗೆ ಇಟ್ಟುಕೊಳ್ಳಬೇಕು ಹಾಗೂ ದೇವರ ಮನೆಯನ್ನು ನಾವು ಹೇಗೆ ಇಟ್ಟುಕೊಂಡರೆ ನಾವು ಕೋಟ್ಯಾಧೀಶರಾಗುತ್ತೇವೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಪುರುಷರೇ ಈ 6 ಗುಟ್ಟುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ..||
* ಮೊದಲೇ ಹೇಳಿದಂತೆ ಪಟ್ಟಣ ಪ್ರದೇಶದಲ್ಲಿ ಇರುವಂತಹ ಕೆಲ ವೊಂದಷ್ಟು ಮನೆಗಳಲ್ಲಿ ದೇವರಕೋಣೆಯನ್ನು ನಾವು ನೋಡಲು ಸಿಗುವುದಿಲ್ಲ. ಬದಲಿಗೆ ಅಡುಗೆ ಮನೆಯಲ್ಲಿಯೇ ಒಂದು ಮೂಲೆಯಲ್ಲಿ ದೇವರ ಪೂಜೆಯನ್ನು ಮಾಡುವ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಕೆಲವೊಂದಷ್ಟು ಜನ ನಾವು ಮಾಂಸಹಾರವನ್ನು ತಿನ್ನುವುದಿಲ್ಲ ಆದ್ದರಿಂದ ನಾವು ಅಡುಗೆ ಮನೆಯಲ್ಲಿಯೇ ದೇವರ ಮನೆಯನ್ನು ಮಾಡಿಕೊಂಡಿ ದ್ದೇವೆ ಎಂದು ಹೇಳುತ್ತಿರುತ್ತಾರೆ.
ಇನ್ನೂ ಕೆಲವೊಂದಷ್ಟು ಜನ ನಾವು ಮಾಂಸಹಾರ ತಿಂದರೂ ಸಹ ಆ ಒಂದು ಸಂದರ್ಭದಲ್ಲಿ ನಾವು ದೇವರ ಮನೆಯ ಯಾವುದೇ ವಸ್ತುಗಳನ್ನು ಮುಟ್ಟುವುದಿಲ್ಲ ಎಂದು ಸಹ ಹೇಳುತ್ತಿರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಕೂಡ ಸಸ್ಯಹಾರಿ ಗಳಾಗಿರಬಹುದು ಮಾಂಸಹಾರಿಗಳಾಗಿರಬಹುದು ಇಬ್ಬರು ಕೂಡ ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ದೇವರ ಮನೆಯನ್ನು ಮಾಡಿಕೊಳ್ಳಬಾರದು.
ಈ ಸುದ್ದಿ ಓದಿ:- Rs14490/-ರೂಪಾಯಿ ಬರ ಪರಿಹಾರ ಹಣ ಜಮಾ.!
ಏಕೆಂದರೆ ನಾವು ಆಹಾರ ತಿಂದಿರುವಂತಹ ತಟ್ಟೆ, ಲೋಟ ಇತ್ಯಾದಿ ವಸ್ತುಗಳನ್ನು ನಾವು ಅಡುಗೆ ಮನೆಯ ಸಿಂಕ್ ನಲ್ಲಿ ಇಟ್ಟಿರುತ್ತೇವೆ ಅದರ ಮೇಲೆ ಸೊಳ್ಳೆಗಳು ನೊಣಗಳು ಎಲ್ಲವೂ ಸಹ ಕೂತಿರುತ್ತದೆ. ಅವುಗಳು ದೇವರ ವಸ್ತುಗಳ ಮೇಲೆ ಹೋಗಿ ಕೂತರೆ ಅದು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ. ಇದರಿಂದ ಮನೆಯಲ್ಲಿ ದಾರಿದ್ರ್ಯ ಎನ್ನುವುದು ಹೆಚ್ಚಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಅಡಿಗೆ ಮನೆಯಲ್ಲಿ ದೇವರ ಪೂಜೆ ಮಾಡಬಾರದು.
* ನಾವು ಮನೆಯನ್ನು ನಿರ್ಮಾಣ ಮಾಡುವಂತ ಸಂದರ್ಭದಲ್ಲಿ ದೇವರ ಮನೆಯು ಪೂರ್ವಕ್ಕೆ ಇರುವ ಹಾಗೆ ಅಂದರೆ ಪೂರ್ವಕ್ಕೆ ಮುಖ ಮಾಡಿರುವಂತೆ ನಾವು ದೇವರ ಮನೆಯನ್ನು ಪ್ರತಿಷ್ಠಾಪನೆ ಮಾಡಬೇಕು.
* ಅದೇ ರೀತಿಯಾಗಿ ಕೆಲವೊಂದಷ್ಟು ಜನ ದಕ್ಷಿಣ ಗೋಡೆಗೆ ತಾಕಿರುವ ಹಾಗೆ ದೇವರ ಮನೆಯನ್ನು ನಿರ್ಮಾಣ ಮಾಡಿರುತ್ತಾರೆ ಆದರೆ ಯಾವುದೇ ಕಾರಣಕ್ಕೂ ಕೂಡ ಈ ರೀತಿಯಾಗಿ ನಿರ್ಮಾಣ ಮಾಡಬಾರದು.
ಈ ಸುದ್ದಿ ಓದಿ:- ಹೆಚ್ಚು ಹೆಚ್ಚು ಹಣ ಗಳಿಸುವುದು ಹೇಗೆ ಅಂತ ನೋಡಿ.!
* ಕೆಲವು ಮನೆಯಲ್ಲಿ ಪೂರ್ವ ದಿಕ್ಕಿಗೆ ಅಂದರೆ ಪೂರ್ವದ ಗೋಡೆಗೆ ದೇವರ ಮನೆ ತಾಗುವ ಹಾಗೆ ಅಕ್ಕಪಕ್ಕ ಬೆಡ್ರೂಮ್ ಇದ್ದು ಅವೆರಡರ ಮಧ್ಯೆ ದೇವರ ಮನೆಯನ್ನು ನಿರ್ಮಾಣ ಮಾಡುತ್ತಾರೆ ಆದರೆ ಈ ರೀತಿ ಇದ್ದರೂ ಕೂಡ ದೇವರ ಮನೆಯನ್ನು ನಿರ್ಮಾಣ ಮಾಡಬಹುದು ಆದರೆ ಯಾವುದೇ ಕಾರಣಕ್ಕೂ ಕೂಡ ಅಟ್ಯಾಚ್ ಬಾತ್ ರೂಮ್ ಇರಕೂಡದು. ಈ ರೀತಿ ಇದ್ದಂತಹ ಸಂದರ್ಭದಲ್ಲಿ ಮನೆಯಲ್ಲಿ ಋಣಾತ್ಮಕ ಶಕ್ತಿಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.
ಅಂದರೆ ಮನೆಯಲ್ಲಿ ಇಲ್ಲಸಲ್ಲದ ಜಗಳ ಕಿರಿಕಿರಿ ಮನಸ್ತಾಪ ಗಂಡ ಹೆಂಡತಿ ನಡುವೆ ಮನಸ್ತಾಪ ಉಂಟಾಗುವುದು ಹೀಗೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಇಂತಹ ಒಂದು ಸಂದರ್ಭ ದಲ್ಲಿ ಬಾತ್ರೂಮ್ ಗೋಡೆ ಹಾಗೂ ದೇವರ ಮನೆ ಗೋಡೆ ಎರಡಕ್ಕೂ ಕೂಡ ಸ್ವಲ್ಪ ಅಂತರವನ್ನು ಬಿಟ್ಟು ಆನಂತರ ದೇವರ ಮನೆಯನ್ನು ನಿರ್ಮಾಣ ಮಾಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.