Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸಂತಾನ ಕರುಣಿಸುವ ತಾಯಿ ಕೋಟ ಅಮೃತೇಶ್ವರಿ.! ಮಕ್ಕಳಿಲ್ಲದವರು ಒಮ್ಮೆ ಇಲ್ಲಿಗೆ ಬಂದರೆ ಸಂತಾನಫಲ ಸಿಗುತ್ತೆ.!

Posted on May 14, 2024 By Kannada Trend News No Comments on ಸಂತಾನ ಕರುಣಿಸುವ ತಾಯಿ ಕೋಟ ಅಮೃತೇಶ್ವರಿ.! ಮಕ್ಕಳಿಲ್ಲದವರು ಒಮ್ಮೆ ಇಲ್ಲಿಗೆ ಬಂದರೆ ಸಂತಾನಫಲ ಸಿಗುತ್ತೆ.!

 

ಇತ್ತೀಚಿನ ದಿನದಲ್ಲಿ ಸಂತಾನ ಭಾಗ್ಯ ಎನ್ನುವುದು ಕೆಲವೊಂದಷ್ಟು ಜನರಿಗೆ ಇರುವುದೇ ಇಲ್ಲ ಅಂದರೆ ಮದುವೆಯಾಗಿ 5 ವರ್ಷ ಏಳು ವರ್ಷ ತುಂಬಿದರೂ ಕೂಡ ಅವರಿಗೆ ಸಂತಾನ ಭಾಗ್ಯ ಎನ್ನುವುದು ಇರುವುದಿಲ್ಲ. ಅಂಥವರು ಎಷ್ಟೇ ಆಸ್ಪತ್ರೆಗೆ ಹೋಗಿ ತೋರಿಸಿದರು ಕೂಡ ಅವರು ಯಾವುದೇ ರೀತಿಯ ಸಮಸ್ಯೆ ಇಲ್ಲ ಆದರೂ ಕೂಡ ನಿಮಗೆ ಮಕ್ಕಳ ಫಲ ಇಲ್ಲ ಎನ್ನುವಂತಹ ಕೆಲವೊಂದಿಷ್ಟು ಮಾತುಗಳನ್ನು ಹೇಳುತ್ತಿರುತ್ತಾರೆ.

ಇಂತಹ ಕೆಲವು ಮಾತುಗಳು ಅವರ ಮನಸ್ಸಿಗೆ ತುಂಬಾ ನೋವನ್ನು ಉಂಟುಮಾಡುವುದು ಅಷ್ಟೇ ಅಲ್ಲದೆ ಅವರು ನಮಗೆ ಈ ಜೀವನವೇ ಬೇಡ ಎನ್ನುವಂತಹ ತೀರ್ಮಾನವನ್ನು ಸಹ ಮಾಡಿರುತ್ತಾರೆ ಆದರೆ ಯಾರು ಕೂಡ ಇಂತಹ ತಪ್ಪು ನಿರ್ಧಾರಗಳನ್ನು ಮಾಡಬಾರದು.

ಬದಲಿಗೆ ಪ್ರತಿಯೊಂದು ಸಮಸ್ಯೆಗೂ ಕೂಡ ಪರಿಹಾರ ಅದಕ್ಕೆ ಸರಿಯಾದ ಮಾರ್ಗ ಎನ್ನುವುದನ್ನು ನಮಗೆ ದೇವರು ಇಟ್ಟಿರುತ್ತಾನೆ. ಅದೇ ರೀತಿಯಾಗಿ ನಾವು ಎಷ್ಟೇ ಆಸ್ಪತ್ರೆಗೆ ಹೋಗಿ ತೋರಿಸಿದರು ಕೂಡ ಅಲ್ಲಿ ಆಗದೇ ಇರುವಂತಹ ಚಮತ್ಕಾರಿ ಘಟನೆಗಳು ಕೆಲವೊಮ್ಮೆ ನಾವು ದೈವದ ಮೊರೆ ಹೋದರೆ ನಮಗೆ ಖಂಡಿತವಾಗಿಯೂ ಕೂಡ ಸಿಗುತ್ತದೆ.

ಹೌದು ನಾವು ನಮ್ಮ ಸುತ್ತ ಮುತ್ತ ಇರುವಂತಹ ಎಲ್ಲಾ ದೇವಸ್ಥಾನಗಳಿಗೆ ಹೋಗುತ್ತೇವೆ, ಏಕೆ ಎಂದರೆ ದೇವರು ನಮಗೆ ಒಳ್ಳೆಯದನ್ನು ಮಾಡಲಿ ನಮಗೆ ಒಳ್ಳೆಯ ಆಶೀರ್ವಾದವನ್ನು ಕರುಣಿಸಲಿ ಎನ್ನುವ ಉದ್ದೇಶದಿಂದ ವಿಶೇಷವಾದಂತಹ ದಿನಗಳ ಸಂದರ್ಭದಲ್ಲಿ ಹಾಗೂ ನಮ್ಮ ಮನಸ್ಸಿಗೆ ನೆಮ್ಮದಿ ಶಾಂತಿ ಬೇಕು ಎನ್ನುವಂತಹ ಸಂದರ್ಭದಲ್ಲಿ ನಾವು ದೇವ ಸ್ಥಾನಕ್ಕೆ ಹೋಗಿ ದೇವರಿಗೆ ಕೈಮುಗಿದು ಅಲ್ಲಿ ದೇವರ ದರ್ಶನವನ್ನು ಮಾಡಿಕೊಂಡು ಬರುತ್ತೇವೆ.

ಈ ರೀತಿ ನಾವು ದೇವಸ್ಥಾನಕ್ಕೆ ಹೋಗಿ ಬರುವುದರಿಂದ ನಮ್ಮ ಮನಸ್ಸಿ ನಲ್ಲಿ ಒಂದು ರೀತಿಯ ಸಮಾಧಾನ ಒಂದು ರೀತಿಯ ಶಾಂತತೆ ಎನ್ನುವುದು ಹೆಚ್ಚಾಗುತ್ತದೆ. ಆದ್ದರಿಂದಲೇ ಹೆಚ್ಚಿನ ಜನ ತಮ್ಮ ಮನಸ್ಸಿಗೆ ನೆಮ್ಮದಿಯನ್ನು ತಂದುಕೊಳ್ಳುವ ಉದ್ದೇಶದಿಂದಲೇ ದೇವಸ್ಥಾನಗಳಿಗೆ ಹೋಗಿ ಬರುವುದನ್ನು ನಾವು ಕಂಡಿರುತ್ತೇವೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಂತಾನ ಭಾಗ್ಯ ಇಲ್ಲದೆ ನೋವನ್ನು ಅನುಭವಿಸುತ್ತಿರುವವರು ಈಗ ನಾವು ಹೇಳುವ ಈ ಒಂದು ದೇವಾಲಯಕ್ಕೆ ಹೋಗಿ ಬಂದರೆ ಸಾಕು ನಿಮಗೆ ಸಂತಾನ ಭಾಗ್ಯ ಎನ್ನುವುದು ಲಭಿಸುತ್ತದೆ.

ಈ ದೇವಸ್ಥಾನದಲ್ಲಿ ನೆಲೆಗೊಂಡಿರುವಂತಹ ದೇವರುಗಳು ನಿಮಗೆ ಸಂತಾನ ಭಾಗ್ಯವನ್ನು ಕರುಣಿಸುತ್ತಾರೆ. ಈ ದೇವಸ್ಥಾನಕ್ಕೆ ಹೋಗಿ ಬಂದಂತಹ ಎಷ್ಟೋ ದಂಪತಿಗಳು ಈಗ ಸಂತಾನ ಭಾಗ್ಯವನ್ನು ಪಡೆದುಕೊಂಡು ಅವರಿಗೆ ಒಳ್ಳೆಯದಾಗಿರುವಂತಹ ಉದಾಹರಣೆಗಳನ್ನು ನಾವು ಈಗಲೂ ಸಹ ನೋಡಬಹುದು.

ಅಷ್ಟಕ್ಕೂ ಈ ದೇವಸ್ಥಾನ ಇರುವುದಾದರೂ ಎಲ್ಲಿ ಈ ದೇವಸ್ಥಾನಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ಹಾಗೂ ದೇವಸ್ಥಾನದ ವಿಳಾಸವನ್ನು ಈ ಕೆಳಗೆ ತಿಳಿಯೋಣ.

* ಇತಿಹಾಸ ಪ್ರಸಿದ್ಧ ವೀರಭದ್ರ ಸ್ವಾಮಿಯು ತಾಯಿ ಅಮೃತೇಶ್ವರಿ ಸಾನಿಧ್ಯ ರಕ್ಷಕನಾಗಿ ಕೋಟ 14 ಗ್ರಾಮಗಳ ಆರಾಧ್ಯ ದೇವರಾಗಿ ಪೂಜಿಸಲ್ಪಡುತ್ತಿದೆ. ಅಮೃತೇಶ್ವರಿ ದೇವಾಲಯದಲ್ಲಿ ವರ್ಷಂ ಪ್ರತಿ ಜ.9 ಮತ್ತು 10ರಂದು ನಡೆಯುವ ಹಾಲುಹಬ್ಬ ಮತ್ತು ಗೆಂಡ ಸೇವೆ ಆಕರ್ಷಣೀಯವಾಗಿರುತ್ತದೆ.

ಉಡುಪಿ ಜಿಲ್ಲೆಯ ಕೋಟ ಪೇಟೆಯ ನಡುವೆ ತಾಯಿ ಅಮೃತೇಶ್ವರಿ ಭಕ್ತರನ್ನು ಹರಸುತ್ತಿದ್ದಾಳೆ. ಕೋಟ ಅಮೃತೇಶ್ವರಿ ಎಂದಾಕ್ಷಣ ಭಕ್ತರ ಮನಸ್ಸಿನಲ್ಲಿ ಕ್ಷಣಾರ್ಧದಲ್ಲಿ ಮೈನವಿರೇಳಿಸುವಂತಹ ಶಕ್ತಿ ಈ ತಾಯಿಗಿದೆ. ನಂಬಿ ಬಂದವರಿಗೆ ತಾಯಿಯ ಅನುಗ್ರಹ ಸದಾ ಇದ್ದೇ ಇದೆ ಎನ್ನುವುದಕ್ಕೆ ತಾಯಿ ಅಮೃತೇಶ್ವರಿಯ ಹಲವು ನಿದರ್ಶನಗಳಿವೆ ದೇವಾಲಯದ ಗರ್ಭಗುಡಿಯ ಹೊರಸುತ್ತಿನಲ್ಲಿ ನೂರಾರು ಲಿಂಗಗಳು ಕಾಣಿಸುತ್ತದೆ.

ರಾವಣನ ಬಂಧು ಶಿವಭಕ್ತ ಖರಾಸುರನ ಪತ್ನಿ ಕುಂಭಮುಖಿಯ ಭಕ್ತಿಗೆ ಒಲಿದ ಶ್ರೀದೇವಿ ಕರುಣಿಸಿದ ವರದಾನವೇ ಈ ಲಿಂಗಗಳ ಸೃಷ್ಟಿಗೆ ಕಾರಣವೆನ್ನುತ್ತದೆ ಕ್ಷೇತ್ರ ಮಹಾತ್ಮ, ದೇವಿಯ ಮುಂಭಾಗದಲ್ಲಿ ಶ್ರೀ ರಕ್ತೇಶ್ವರಿಯ ಶಿಲಾಮೂರ್ತಿಯಿದೆ. ಪರಿವಾರ ದೇವತೆಗಳಾದ ವೀರಭದ್ರ, ನಾಗ ಶಿಲಾಮೂರ್ತಿಗಳಾಗಿ, ಬೊಬ್ಬರ್ಯ, ಉಮ್ಮಲ್ತಿ, ಚಿಕ್ಕು, ನಂದಿ ಹಾಗೂ ಪಂಜುರ್ಲಿ ದೈವಗಳ ಗುಡಿ ಅತಿ ಸನಿಹದಲ್ಲಿ ಇದೆ.

Astrology
WhatsApp Group Join Now
Telegram Group Join Now

Post navigation

Previous Post: ಮದುವೆ ವಿಳಂಬ ಆಗ್ತಾ ಇದ್ರೆ ಈ ಮಂತ್ರ ಹೇಳಿ, ಒಂದು ವಾರದಲ್ಲಿ ಮದುವೆ ಫಿಕ್ಸ್ ಆಗುತ್ತೆ.!
Next Post: ಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore