Home Useful Information ಬಿಳಿ ಬಟ್ಟೆಗಳನ್ನು ಸ್ವಚ್ಛಗೊಳಿಸುವ ಸೂಪ‌ರ್ ಸೀಕ್ರೆಟ್ ಟಿಪ್ಸ್.!

ಬಿಳಿ ಬಟ್ಟೆಗಳನ್ನು ಸ್ವಚ್ಛಗೊಳಿಸುವ ಸೂಪ‌ರ್ ಸೀಕ್ರೆಟ್ ಟಿಪ್ಸ್.!

0
ಬಿಳಿ ಬಟ್ಟೆಗಳನ್ನು ಸ್ವಚ್ಛಗೊಳಿಸುವ ಸೂಪ‌ರ್ ಸೀಕ್ರೆಟ್ ಟಿಪ್ಸ್.!

 

ಮನೆಯಲ್ಲಿ ಕೆಲವೊಂದಷ್ಟು ಜನ ಯಾವುದೇ ಕೆಲಸವನ್ನು ಬೇಕಾದರೂ ಮಾಡಬಹುದು ಆದರೆ ಬಟ್ಟೆ ಒಗೆಯುವಂತಹ ಕೆಲಸ ಮಾತ್ರ ನನ್ನಿಂದ ಸಾಧ್ಯ ಇಲ್ಲ ಎನ್ನುವಂತಹ ಮಾತುಗಳನ್ನು ಹೇಳುತ್ತಿರುತ್ತಾರೆ. ಏಕೆಂದರೆ ಬಟ್ಟೆಯಲ್ಲಿ ಕೊಳೆ ಇರುತ್ತದೆ. ಅದನ್ನು ತಿಕ್ಕುವಂತಹ ಕೆಲಸ ಇರುತ್ತದೆ ಆದ್ದರಿಂದ ಹೆಚ್ಚಿನ ಜನ ಬೇರೆ ಕೆಲಸಗಳನ್ನು ಮಾಡುವುದಕ್ಕೆ ಇಷ್ಟಪಡುತ್ತಾರೆ.

ಆದರೆ ಯಾವುದೇ ಕಾರಣಕ್ಕೂ ಕೂಡ ಬಟ್ಟೆ ಒಗೆಯುವಂತಹ ಕೆಲಸಕ್ಕೆ ಹೋಗುವುದಿಲ್ಲ ಎಂದೇ ಹೇಳಬಹುದು. ಅದರಲ್ಲೂ ಬಿಳಿ ಬಟ್ಟೆಯನ್ನು ಸ್ವಚ್ಛಗೊಳಿಸುವುದು ಒಂದು ತಲೆನೋವಿನ ಕೆಲಸವೇ ಸರಿ. ಅದರಲ್ಲೂ ಮಕ್ಕಳ ಯೂನಿಫಾರ್ಮ್ ಅನ್ನು ಸ್ವಚ್ಛ ಗೊಳಿಸುವಷ್ಟರಲ್ಲಿ ಅವರ ಕೈ ಪೂರ್ತಿಯಾಗಿ ನೋವುಂಟಾಗಿರುತ್ತದೆ. ಏಕೆಂದರೆ ಅದರಲ್ಲಿ ಹೆಚ್ಚು ಕೊಳೆ ಧೂಳಿನಿಂದ ಕೂಡಿರುತ್ತದೆ.

ಅದನ್ನು ಸಂಪೂರ್ಣವಾಗಿ ತೆಗೆಯಬೇಕು ಎಂದರೆ ಅದನ್ನು ಉಜ್ಜಿ ತಿಕ್ಕಿ ತೊಳೆಯಲೇಬೇಕು. ಆದರೆ ಕೆಲವೊಂದಷ್ಟು ಜನ ನಮ್ಮ ಮನೆಯಲ್ಲಿ ವಾಷಿಂಗ್ ಮಷೀನ್ ಇದೆ ನಾವು ಅದರಲ್ಲಿ ಹಾಕಿ ಬಟ್ಟೆ ವಾಶ್ ಮಾಡು ತ್ತೇವೆ ಎಂದು ಹೇಳುತ್ತಿರುತ್ತಾರೆ. ಆದರೆ ನೀವು ಎಷ್ಟೇ ವಾಷಿಂಗ್ ಮಷೀನ್ ಗೆ ಬಿಳಿಯ ಬಟ್ಟೆಯನ್ನು ಹಾಕಿದರೂ ಕೂಡ ಅದು ಸಂಪೂರ್ಣ ವಾದಂತಹ ಕೊಳೆಯನ್ನು ತೆಗೆಯುವುದಿಲ್ಲ.

ಈ ಸುದ್ದಿ ಓದಿ:- ಎಷ್ಟೇ ಕೊಳೆ ಇರುವ ಮ್ಯಾಟ್ ಅನ್ನು ನಿಮಿಷದಲ್ಲಿ ಹೊಸದಾಗಿಸಿ ಜಾಸ್ತಿ ಉಜ್ಜಿ ತೊಳಿಯೋದು ಬೇಡ.!

ಬದಲಿಗೆ ಕಾಲರ್ ! ಇರುವಂತಹ ಕೊಳೆ ಹಾಗೂ ಕಾಲಿನ ಕೆಳಗಡೆ ಇರುವಂತಹ ಬಟ್ಟೆಯಲ್ಲಿ ಹೆಚ್ಚಿನ ಕೊಳೆ ಅಂಶ ಹಾಗೆ ಇರುತ್ತದೆ. ಆದ್ದರಿಂದ ವಾಷಿಂಗ್ ಮಷೀನ್ ಬಳಸಿದರೂ ಕೂಡ ಕೊಳೆಯನ್ನು ತೆಗೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಅದರ ಬದಲು ಈಗ ನಾವು ಹೇಳುವಂತಹ ಈ ಒಂದು ಸೂಪರ್ ಟಿಪ್ಸ್ ಅನ್ನು ನೀವು ಅನುಸರಿಸುವುದರಿಂದ ಬಿಳಿ ಬಟ್ಟೆಯಲ್ಲಿರುವಂತಹ ಎಲ್ಲಾ ಕೊಳೆಯನ್ನು ಸಹ ಸಂಪೂರ್ಣವಾಗಿ ತೆಗೆಯಬಹುದು.

ಹಾಗಾದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ಹಾಗೂ ಯಾವ ಒಂದು ಪ್ರಮುಖವಾದಂತಹ ಪದಾರ್ಥವನ್ನು ಬಳಸು ವುದರಿಂದ ಬಿಳಿ ಬಟ್ಟೆಯನ್ನು ಸಂಪೂರ್ಣವಾಗಿ ಸ್ವಚ್ಛವಾಗುವಂತೆ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

* ಮೊದಲು ಒಂದು ಬಕೆಟ್ ನಲ್ಲಿ ಅರ್ದದಷ್ಟು ನೀರನ್ನು ಹಾಕಿ ಅದಕ್ಕೆ ಎರಡರಿಂದ ಮೂರು ಚಮಚ ಸೋಪ್ ಪೌಡರ್ ಹಾಗೂ ಒಂದು ಚಮಚ ಅಡುಗೆ ಸೋಡವನ್ನು ಹಾಕಬೇಕು. ಆನಂತರ ಅದಕ್ಕೆ ಒಂದು ಚಮಚ ಯಾವುದಾದರೂ ಶಾಂಪೂ ಹಾಗೂ ಒಂದು ಚಮಚ ಕಂಫರ್ಟ್ ಹಾಕಿ ಚೆನ್ನಾಗಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಈ ಫುಡ್ ಗಳು ಬೆಸ್ಟ್.!

ಅಡುಗೆ ಸೋಡಾ ಬಟ್ಟೆಯಲ್ಲಿರುವಂತಹ ಕೊಳೆಯನ್ನು ತೆಗೆಯುವುದಕ್ಕೆ ಸಹಾಯಮಾಡುತ್ತದೆ ಹಾಗೂ ಶಾಂಪೂ ಬಟ್ಟೆ ಹೊಸದರಂತೆ ಇರುವ ಹಾಗೆ ಮಾಡುತ್ತದೆ ಹಾಗೂ ಕಂಫರ್ಟ್ ಬಟ್ಟೆಯ ಪರಿಮಳವನ್ನು ಹೆಚ್ಚಿಸುತ್ತದೆ ಹೀಗೆ ಈ ರೀತಿ ತಯಾರಿಸಿಕೊಂಡಂತಹ ಬಕೆಟ್ ನೀರಿನಲ್ಲಿ ಬಿಳಿ ಬಟ್ಟೆಯನ್ನು ಹಾಕಿ ಒಂದು ಗಂಟೆಗಳ ತನಕ ಹಾಗೆ ಬಿಡಬೇಕು.

ಆನಂತರ ಆ ಬಟ್ಟೆಯನ್ನು ತೆಗೆದು ಒಂದು ಸಲ ಉಜ್ಜಿದರೆ ಸಾಕು ಬಿಳಿ ಬಟ್ಟೆಯಲ್ಲಿ ಇರುವಂತಹ ಕೊಳೆ ಎಲ್ಲವೂ ಕೂಡ ಸಂಪೂರ್ಣವಾಗಿ ಆಚೆ ಬರುತ್ತದೆ. ಯಾವುದೇ ರೀತಿಯ ಹೆಚ್ಚಿನ ಶ್ರಮಪಡುವ ಅವಶ್ಯಕತೆ ಇರುವುದಿಲ್ಲ. ಹಾಗೂ ಹೆಚ್ಚಿನ ಸಮಯವೂ ಕೂಡ ಬೇಕಾಗುವುದಿಲ್ಲ. ಮೊದಲೇ ಹೇಳಿದಂತೆ ಸುಲಭವಾಗಿ ಕಡಿಮೆ ಸಮಯದಲ್ಲಿ ಈ ಒಂದು ಕೆಲಸವನ್ನು ಮಾಡುವುದರಿಂದ.

ಬಿಳಿ ಬಟ್ಟೆಯಲ್ಲಿರುವಂತಹ ಎಲ್ಲಾ ಕೊಳೆಯನ್ನು ಸಹ ಸಂಪೂರ್ಣವಾಗಿ ತೆಗೆಯಬಹುದು. ಹಾಗೂ ಕೊಳೆ ಇರುವಂತಹ ಪ್ರತಿಯೊಂದು ಬಟ್ಟೆಯನ್ನು ಒಗೆಯುವಂತಹ ಸಂದರ್ಭದಲ್ಲಿ ಈ ಒಂದು ವಿಧಾನವನ್ನು ಅನುಸರಿಸುವುದು ತುಂಬಾ ಒಳ್ಳೆಯದು.

LEAVE A REPLY

Please enter your comment!
Please enter your name here