ನಮ್ಮ ಮನೆಯಲ್ಲಿ ಇರುವಂತಹ ಮ್ಯಾಟ್ ಗಳನ್ನು ಸ್ವಚ್ಛ ಮಾಡುವುದು ಎಂದರೆ ಎಲ್ಲರಿಗೂ ಕೂಡ ಕಷ್ಟ ಏಕೆಂದರೆ ಅದರಲ್ಲಿ ಜಾಸ್ತಿ ಧೂಳು ಹಾಗೂ ಕೊಳೆ ಇರುತ್ತದೆ. ಮನೆಯಲ್ಲಿ ನಾವು ಯಾವುದೇ ಕೆಲಸ ಮಾಡಿದರು ಕೂಡ ಎಲ್ಲಿಗೆ ಹೋಗಿ ಬಂದರು ಕೂಡ ನಮ್ಮ ಕಾಲಗಳನ್ನು ಈ ಒಂದು ಮ್ಯಾಟ್ ನಲ್ಲಿ ಒರೆಸುತ್ತೇವೆ ಆದ್ದರಿಂದ ಇದರಲ್ಲಿ ಎಲ್ಲಾ ರೀತಿಯ ಧೂಳು ಕೊಳೆ ಇರುತ್ತದೆ.
ಆದ್ದರಿಂದ ಇದನ್ನು ಸ್ವಚ್ಛ ಮಾಡುವು ದು ಎಂದರೆ ಪ್ರತಿಯೊಬ್ಬರಿಗೂ ಕೂಡ ಕಷ್ಟದ ವಿಷಯ ಕೆಲವೊಮ್ಮೆ ಈ ಒಂದು ಮ್ಯಾಟ್ ನಲ್ಲಿರುವಂತಹ ಕೊಳೆಯನ್ನು ಎಷ್ಟೇ ಉಜ್ಜಿದರೂ ಕೂಡ ಓಗಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅದರಲ್ಲೂ ಮಾರುಕಟ್ಟೆ ಗಳಲ್ಲಿ ಸಿಗುವಂತಹ ರೆಡಿಮೇಡ್ ಮ್ಯಾಟ್ ಗಳನ್ನು ತಂದು ನಾವು ಉಪಯೋಗಿಸುತ್ತಿದ್ದರೆ ಅದನ್ನು ಜೋರಾಗಿ ಉಜ್ಜಿದರೆ ಸಾಕು ಅದು ಕಿತ್ತು ಹೋಗುವ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ.
ಆದ್ದರಿಂದ ಇಂತಹ ಒಂದು ಡೋರ್ ಮ್ಯಾಟ್ ಅನ್ನು ನಾವು ಹೇಗೆ ಸುಲಭವಾಗಿ ಸ್ವಚ್ಛ ಮಾಡಬಹುದು ಯಾವುದೇ ರೀತಿಯ ಉಜ್ಜಿ ತಿಕ್ಕಿ ಕೊಳೆ ತೆಗೆಯುವಂತಹ ಸನ್ನಿವೇಶಗಳು ಕೂಡ ಇರುವುದಿಲ್ಲ. ಹಾಗಾದರೆ ಯಾವ ಕೆಲವು ವಸ್ತುಗಳನ್ನು ಉಪಯೋಗಿಸುವುದರ ಮೂಲಕ ನಾವು ಯಾವ ವಿಧಾನ ಅನುಸರಿಸಿ ಸುಲಭವಾಗಿ ಕೈಯಲ್ಲಿ ಡೋರ್ ಮ್ಯಾಟ್ ಅನ್ನು ಸ್ವಚ್ಛ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿಯೋಣ.
* ಮೊದಲು ಒಂದು ಬಕೆಟ್ ನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ನಿಮಗೆ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಪ್ರಮಾಣದಲ್ಲಿ ಸೋಪ್ ಪೌಡರ್ ಅನ್ನು ಹಾಕಿಕೊಳ್ಳಬೇಕು ಆನಂತರ ಅದಕ್ಕೆ ಒಂದು ಚಮಚದಷ್ಟು ಕ್ಲಿನಿಕ್ ಪ್ಲಸ್ ಶಾಂಪೂವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳ ಬೇಕು.
ಹಾಗೂ ಕೊನೆಯದಾಗಿ ಅದಕ್ಕೆ ಒಂದು ಚಮಚ ಅಡುಗೆ ಸೋಡವನ್ನು ಹಾಕಿ ಎಲ್ಲವನ್ನು ಸಹ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಹಾಗೇನಾದರೂ ಮ್ಯಾಟ್ ಗಳಲ್ಲಿ ಹೆಚ್ಚು ಕೊಳೆ ಇದೆ ಎಂದು ನಿಮಗೆ ತಿಳಿದಿದ್ದರೆ ಆ ಒಂದು ಸಂದರ್ಭದಲ್ಲಿ ಅಡುಗೆ ಸೋಡವನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಬಹುದು.
* ಈ ರೀತಿ ತಯಾರು ಮಾಡಿಕೊಂಡಿರುವಂತಹ ನೀರಿಗೆ ಎಲ್ಲ ಮ್ಯಾಟ್ ಗಳನ್ನು ಹಾಕಿ ಒಂದು ಗಂಟೆಗಳ ತನಕ ಹಾಗೆ ಬಿಡಬೇಕು. ಆನಂತರ ಮ್ಯಾಟ್ ಗಳನ್ನು ಆ ನೀರಿನಿಂದ ಬೇರ್ಪಡಿಸಿ ಒಮ್ಮೆ ಉಜ್ಜಿದರೆ ಸಾಕು ಮ್ಯಾಟ್ ನಲ್ಲಿರುವಂತಹ ಸಂಪೂರ್ಣವಾದಂತಹ ಕೊಳೆ ಸುಲಭವಾಗಿ ಹೋಗುತ್ತದೆ.
* ಹೀಗೆ ಈ ಒಂದು ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಅನುಸರಿಸುವುದರಿಂದ ನಿಮ್ಮ ಕೆಲಸ ಹಾಗೂ ನಿಮ್ಮ ಶ್ರಮ ಎಲ್ಲವೂ ಕೂಡ ಉಳಿತಾಯವಾಗುತ್ತದೆ ಹಾಗೂ ಹೆಚ್ಚು ಶ್ರಮ ಪಡುವಂತಹ ಅಗತ್ಯತೆ ಇರುವುದಿಲ್ಲ. ಅದರಲ್ಲೂ ಈ ಒಂದು ವಿಧಾನವನ್ನು ನೀವು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗಿನ ಸಮಯ ಮ್ಯಾಟ್ ಅನ್ನು ಸ್ವಚ್ಛ ಮಾಡುವುದರಿಂದ ಅದರಲ್ಲಿ ಇರುವಂತಹ ಸಂಪೂರ್ಣವಾದ ಕೊಳೆ ಸುಲಭವಾಗಿ ಹೋಗುತ್ತದೆ.
ನೀವು ಸೋಪ್ ಪೌಡರ್ ಎಷ್ಟೇ ಉಪಯೋ ಗಿಸಿದರು ಕೂಡ ಅದರಲ್ಲಿ ಅಡುಗೆ ಸೋಡವನ್ನು ಹಾಕಿ ಉಪಯೋಗಿಸು ವುದರಿಂದ ಆ ಕೆಲಸ ಮತ್ತಷ್ಟು ಸುಲಭವಾಗಿ ಬೇಗನೆ ಆಗುತ್ತದೆ. ಆದ್ದ ರಿಂದ ಮನೆಯಲ್ಲಿ ಇರುವಂತಹ ಮಹಿಳೆಯರು ಇಂತಹ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಪ್ರಯೋಜನಕಾರಿ ಯಾಗುತ್ತದೆ ಹಾಗೂ ನಿಮಗೆ ತುಂಬಾ ಸಹಾಯವೂ ಕೂಡ ಆಗುತ್ತದೆ ಎಂದೇ ಹೇಳಬಹುದು.