ಶ್ರೀ ಪೋತಲೂರಿ ವೀರ ಬ್ರಹ್ಮೇಂದ್ರನವರು ತಮ್ಮ ಕಾಲಜ್ಞಾನದಲ್ಲಿ ಹೇಳಿದ ಎಲ್ಲ ವಿಷಯಗಳು ಕೂಡ ಇಲ್ಲಿಯವರೆಗೆ ನಡೆದಿದೆ ಮತ್ತು ಇನ್ನು ಕೆಲವು ಖಂಡಿತವಾಗಿಯೂ ಕೂಡ ನಡೆಯುತ್ತಿದೆ. ಭವಿಷ್ಯತ್ತನ್ನು ತನ್ನ ಮನೋ ನೇತ್ರದಿಂದ ದರ್ಶಿಸಿದಂತಹ ಬ್ರಹ್ಮೇಂದ್ರ ರವರು ಮುಂಬರುವ ದಿನಗಳಲ್ಲಿ ಏನು ನಡೆಯುತ್ತದೆ ಎಂಬ ವಿಷಯಗಳ ಕುರಿತು ಪ್ರತಿ ಯೊಂದನ್ನೂ ಕೂಡ ತಮ್ಮ ಕಾಲಜ್ಞಾನದಲ್ಲಿ ವಿವರಿಸಿದ್ದಾರೆ.
ಅವರು ರಚಿಸಿದ ಕಾಲಜ್ಞಾನದ ಪತ್ರಗಳು ಇಲ್ಲಿಯವರೆಗೆ ಕೆಲವು ಲಭ್ಯವಾಗಿದೆ ಹಾಗೂ ಇನ್ನೂ ಕೆಲವು ರಹಸ್ಯವಾಗಿಯೇ ಇದೆ. 2024ರ ನಂತರ ಕಾಲಜ್ಞಾನದ ಪ್ರಕಾರ ಖಂಡಿತವಾಗಿಯೂ ನಡೆಯುವಂತಹ ಕೆಲವೊಂದು ಘಟನೆಗಳು ಇದೆ. ಹಾಗಾದರೆ ವೀರ ಬ್ರಹ್ಮೇಂದ್ರರವರ ಕಾಲಜ್ಞಾನದ ಪ್ರಕಾರ 2024ರ ನಂತರ ನಡೆಯುವ ಆ ಘಟನೆಗಳು ಯಾವುವು?
ಎಂತಹ ಅದ್ಭುತಗಳನ್ನು ನಾವು ನೋಡಲಿದ್ದೇವೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈಗ ತಿಳಿಯೋಣ. ಶ್ರೀ ಪೋತಲೂರಿ ವೀರ ಬ್ರಹ್ಮೇಂದ್ರವರು ತಮ್ಮ ಕಾಲಜ್ಞಾನದಲ್ಲಿ ಸಾವಿರಾರು ವಿಷಯಗಳನ್ನು ಹೇಳಿದ್ದಾರೆ. ಇಲ್ಲಿಯವರೆಗೂ ಕೂಡ ಅದು ನಿಜವಾಗಿದೆ ಆದ್ದರಿಂದಲೇ ಅವರ ಕಾಲಜ್ಞಾನ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ.
ಈ ಸುದ್ದಿ ಓದಿ:- ತಕ್ಷಣ ಹಣದ ಅವಶ್ಯಕತೆ ಇದ್ದರೆ ಹೀಗೆ ಮಾಡಿ ಸಾಕು ಸಾಲ ಮಾಡೋ ಅಗತ್ಯ ಬರಲ್ಲ.!
ಕಳ್ಳ ಬಾಬಾಗಳನ್ನು ಹಿಡಿದು ಮಟ್ಟ ಹಾಕುವುದು, ಆರು ವರ್ಷದ ಬಾಲಕಿ ಗರ್ಭವತಿಯಾಗುವುದು ಮತ್ತು ಮಹಿಳೆಯರು ತಮ್ಮ ಶೀಲವನ್ನು ಮಾರಿಕೊಳ್ಳುವುದು, ಗಾಂಧಿ ಮಹಾತ್ಮರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತರುವುದು, ಹೀಗೆ ಕಾಲಜ್ಞಾನದಲ್ಲಿ ಹೇಳಿರುವ ವಿಷಯಗಳು ಬಹಳಷ್ಟು ನಿಜವಾಗಿ ನಡೆದಿದೆ.
ಶ್ರೀಪೋತಲೂರಿ ವೀರ ಬ್ರಹ್ಮೇಂದ್ರವರು ಕರ್ನೂಲು ಜಿಲ್ಲೆಯ ಬನಗಾಲಿ ಪಲ್ಲಿ ಮಂಡಲದ ಗಮ್ಮಿನಿ ರೆಡ್ಡಿ ಅಚ್ಚಮ್ಮನವರ ಮನೆಯಲ್ಲಿ ಹಸುಗಳಿಗೆ ಕಾವಲುಗಾರನಾಗಿ ಇದ್ದುಕೊಂಡು ರವಲಕೊಂಡದಲ್ಲಿ ಕಾಲಜ್ಞಾನವನ್ನು ರಚಿಸಿದ್ದಾರೆ. ರವಲಕೊಂಡ ಬನಗಾಲಿ ಪಲ್ಲಿಗೆ ಒಂದುವರೆ ಕಿಲೋಮೀಟರ್ ದೂರದ ಬೆಟ್ಟದ ಮೇಲೆ ಇದೆ ಈ ಬೆಟ್ಟದ ಗುಹೆ ಮೇಲೆ ಕುಳಿತುಕೊಂಡು ಕಾಲಜ್ಞಾನವನ್ನು ಬ್ರಹ್ಮೇಂದ್ರ ರವರು ರಚಿಸಿದ್ದಾರೆ.
ಆದ್ದರಿಂದಲೇ ಆ ಬೆಟ್ಟವನ್ನು ಬ್ರಹ್ಮೇಂದ್ರವರ ಬೆಟ್ಟಗಳು ಎಂದು ಕರೆಯುತ್ತಿರುತ್ತಾರೆ. ಇವರು ದೇಶ ಪರ್ಯಟನೆ ಮಾಡುತ್ತಾ ಕಾಲ ಜ್ಞಾನವನ್ನು ರಚಿಸಿದ್ದಾರೆ. ಪಶುಗಳ ಕಾವಲುಗಾರನಾಗಿ ಮತ್ತು ಕೆತ್ತನೆ ಕೆಲಸ ಮಾಡುತ್ತಾ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ವೀರ ಬ್ರಹ್ಮೇಂದ್ರ ರವರು ಭವಿಷ್ಯತ್ತಿನಲ್ಲಿ ನಡೆಯುವಂತಹ ಅನೇಕ ಘಟನೆಗಳನ್ನು ತಮ್ಮ ದಿವ್ಯ ದೃಷ್ಟಿಯಿಂದ ದರ್ಶನ ಪಡೆದು ಅವುಗಳನ್ನು ತಾಳೆ ಪತ್ರ ಗ್ರಂಥಗಳಲ್ಲಿ ಭದ್ರವಾಗಿ ಇರಿಸಿದ್ದಾರೆ.
ಈ ಸುದ್ದಿ ಓದಿ:- ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ.!
ಈಗ ಪ್ರಸ್ತುತ ನಡೆಯುತ್ತಿರುವಂತಹ ಅನೇಕ ವಿಷಯಗಳು ಅವರ ಕಾಲಜ್ಞಾನದಲ್ಲಿ ಇರುವಂತದ್ದೇ ಶ್ರೀ ಪೋತಲೂರಿ ವೀರ ಬ್ರಹ್ಮೇಂದ್ರನವರು ಒಂದೇ ಬಾರಿ ಅಲ್ಲದೆ ಅನೇಕ ಸಂದರ್ಭಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ತಮ್ಮ ಕಾಲಜ್ಞಾನದ ಬಗ್ಗೆ ವಿವರಿಸಿದ್ದಾರೆ. ಶ್ರೀ ವೀರ ಬ್ರಹ್ಮೇಂದ್ರ ರವರು ವಿಧಿವಶರಾಗುವ ಮುನ್ನ ಕಂದಿ ಮಲ್ಲಯ್ಯ ಪಾಳ್ಯದಲ್ಲಿ ಗಮ್ಮಿನಿ ರೆಡ್ಡಿ ಅಚ್ಚಮ್ಮಗಾರಿ ಮನೆಯ ಆವರಣದಲ್ಲಿ.
ಸುಮಾರು 14 ಸಾವಿರ ಕಾಲ ಜ್ಞಾನಪತ್ರಗಳನ್ನು ಭೂಮಿಯಲ್ಲಿ ಮುಚ್ಚಿಟ್ಟಿದ್ದಾರೆ ಅದರ ಮೇಲೆ ಒಂದು ಹುಣಸೆ ಗಿಡವನ್ನು ಸಹ ನೆಟ್ಟಿದ್ದಾರೆ ಅದು ಒಂದು ಚಿಕ್ಕ ಕೋಣೆಯಷ್ಟು ಅಗಲ ಮಾತ್ರವೇ ಇರುತ್ತದೆ. ಆಗ್ರಾಮದಲ್ಲಿ ಏನಾದರೂ ವ್ಯಾಧಿಗಳು ಮತ್ತು ಏನಾದರೂ ತೊಂದರೆಗಳು ನಡೆಯುವ ಮೊದಲು ಸೂಚನೆಯಾಗಿ.
ಆ ಹುಣಸೇ ಮರದ ಹೂವು ಕಾಯಿಗಳು ಎಲ್ಲವೂ ಕೂಡ ಒಂದೇ ರಾತ್ರಿಯಲ್ಲಿ ಉದುರಿ ಹೋಗಿ ಮುಂದೆ ನಡೆಯುವಂತಹ ಅಶುಭದ ಬಗ್ಗೆ ನಮಗೆ ತಿಳಿಯಪಡಿಸುತ್ತದೆ. ಹಾಗೆ ಆ ಹುಣಸೆ ಮರದಲ್ಲಿ ಇರುವಂತಹ ಹುಣಸೆ ಹಣ್ಣುಗಳು ಕಪ್ಪು ಬಣ್ಣಕ್ಕೆ ಬದಲಾಗಿ ತಿನ್ನುವುದಕ್ಕೆ ಆಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.