ತಿನ್ನುವ ಆಹಾರದಲ್ಲಿ ಉಪ್ಪು ಇಲ್ಲದೆ ಇದ್ದರೆ ಎಂತಹ ಮೃಷ್ಟಾನ್ನ ಭೋಜನವೇ ಆದರೂ ರುಚಿಸುವುದಿಲ್ಲ. ಆದರೆ ಉಪ್ಪು ಇದ್ದರೆ ಎಂತಹ ಆಹಾರವನ್ನೇ ಬೇಕಾದರೂ ರುಚಿಕರವನ್ನಾಗಿಸಬಹುದು. ಉಪ್ಪಿನ ವೈಜ್ಞಾನಿಕ ಹಾಗೂ ಆರೋಗ್ಯಕರ ಮಹತ್ವ ನಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಉಪ್ಪು ಆಹಾರ ಸಂರಕ್ಷಕವಾಗಿ ಸಮತೋಲಿತ ಆಹಾರದ ಪ್ರಮುಖ ಅಂಶವಾಗಿ ಬಹಳ ಮುಖ್ಯವಾಗುತ್ತದೆ.
ಇದನ್ನು ಹೊರತು ಪಡಿಸಿ ಜ್ಯೋತಿಷ್ಯದಲ್ಲೂ ಉಪ್ಪಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಅನ್ನುವುದು ನಿಮಗೆ ಗೊತ್ತಿದೆಯಾ. ನಾವು ನಮ್ಮ ಜೀವನದಲ್ಲಿ ಬಳಸು ವಂತಹ ಪ್ರತಿಯೊಂದು ವಸ್ತುವಿಗೂ ಜ್ಯೋತಿಷ್ಯದ ಮಹತ್ವವಿದೆ. ಅದು ನಿಂಬೆಹಣ್ಣು ಆಗಿರಲಿ ಅಥವಾ ಉಪ್ಪು ಆಗಿರಲಿ ಇವು ಅದ್ಭುತವಾದ ಚಮತ್ಕಾರಿ ಗುಣಗಳನ್ನು ಹೊಂದಿದೆ.
ಉಪ್ಪು ಜೀವನದಲ್ಲಿ ಸಕಾರಾತ್ಮಕತೆ ಹಾಗೂ ಸಂತೋಷವನ್ನು ನೀಡು ತ್ತದೆ. ಜೊತೆಗೆ ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ಸಹ ತೆಗೆದು ಹಾಕು ತ್ತದೆ. ಉಪ್ಪಿನ ಬಳಕೆಯಿಂದ ನಮ್ಮ ಅದೃಷ್ಟವನ್ನು ಹೇಗೆ ಬದಲಾಯಿಸಿ ಕೊಳ್ಳಬಹುದು ಅನ್ನೋದನ್ನ ಈಗ ತಿಳಿಯೋಣ. ಉಪ್ಪಿಗೆ ವಾಸ್ತುದೋಷ ಹಾಗೂ ಅಶುಭ ಶಕುನಗಳನ್ನು ದೂರ ಮಾಡುವಂತಹ ಶಕ್ತಿ ಇದೆ. ಆದರೆ ಅದನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿದು ಕೊಂಡಿರಬೇಕು ಅಷ್ಟೇ.
ಉಪ್ಪನ್ನು ರಾಹು ಎಂದು ಗುರುತಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಉಪ್ಪು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವಂತಹ ಸಾಧನವಾಗಿದೆ. ಇದು ಸುಖ ಮತ್ತು ಸಮೃದ್ಧಿ ಯನ್ನು ಸಹ ತರಬಲ್ಲದು. ಹಾಗಾದರೆ ಈ ಉಪ್ಪನ್ನು ಬಳಕೆ ಮಾಡುವು ದರ ಮೂಲಕ ಇದರ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳ ಬಹುದು ಎಂದು ಈಗ ತಿಳಿಯೋಣ.
* ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದೇ ವಾಸ್ತುದೋಷ ಇದೆ ಎಂದರೆ ಒಂದು ಗಾಜಿನ ಪಾತ್ರೆಯಲ್ಲಿ ಉಪ್ಪನ್ನು ತುಂಬಿ ವಾಷ್ ರೂಂನಲ್ಲಿ ಇಡಿ. ಹೀಗೆ ಇಡುವುದರಿಂದ ನಿಮ್ಮ ಮನೆಯಲ್ಲಿರುವಂತಹ ವಾಸ್ತುದೋಷವನ್ನು ದೂರಮಾಡುತ್ತದೆ. ವಾರಕ್ಕೆ ಒಮ್ಮೆ ಆ ಪಾತ್ರೆಯಲ್ಲಿ ಇರುವಂತಹ ಉಪ್ಪನ್ನು ಬದಲಿಸುತ್ತಿರಬೇಕು.
ವಾರಕ್ಕೆ ಒಮ್ಮೆ ಬದಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದರೆ ತಿಂಗಳಿಗೆ ಒಮ್ಮೆಯಾದರೂ ಬದಲಾಯಿಸಿ. ಇದರ ಜೊತೆ ಪ್ರತಿ ಗುರುವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿಯೂ ಸಹ ಮನೆಯನ್ನು ಒರೆಸುವಂತಹ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಒರೆಸಿ.
* ಇನ್ನು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಕಾಣಿಸಿ ಕೊಳ್ಳುತ್ತಿದೆ ಎಂದರೆ ಉಪ್ಪನ್ನು ಗಾಜಿನ ತಟ್ಟೆಯಲ್ಲಿ ಅಥವಾ ಗಾಜಿನ ಡಬ್ಬದಲ್ಲಿ ಹಾಕಿ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಇಡಿ. ಈಗಾಗಲೇ ಹೇಳಿದಂತೆ ಜ್ಯೋತಿಷ್ಯದ ಪ್ರಕಾರ ಉಪ್ಪು ಮತ್ತು ಗಾಜು ಎರಡು ಕೂಡ ರಾಹುವಿನ ಸಂಕೇತವಾಗಿದೆ.
ಒಂದು ವೇಳೆ ನಿಮ್ಮ ಜಾತಕದಲ್ಲಿ ರಾಹು ದೋಷ ಇದ್ದು ಅದನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಕಂಚಿನ ತಟ್ಟೆಯಲ್ಲಿ ಉಪ್ಪನ್ನು ಹಾಕಿ ಒಂದು ಮೂಲೆಯಲ್ಲಿ ಇಟ್ಟರೆ ನಕಾರಾತ್ಮಕತೆ ದೂರವಾಗಿ ರಾಹುವಿನ ಅಶುಭ ಪ್ರಭಾವ ನಿವಾರಣೆಯಾಗುತ್ತದೆ.
ಇನ್ನು ನಿಮ್ಮ ಮನೆ ಸಮೃದ್ಧಿಯಿಂದ ಇರಬೇಕು ಎಂದರೆ ಗಾಜಿನ ಲೋಟದಲ್ಲಿ ಉಪ್ಪು ಮತ್ತು ನೀರನ್ನು ಸೇರಿಸಿ ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಜೊತೆಗೆ ಅದರ ಹಿಂದೆ ಕೆಂಪು ದೀಪ ಉರಿಯುವಂತೆ ಇಡಬೇಕು. ಲೋಟದಲ್ಲಿ ನೀರು ಖಾಲಿಯಾದರೆ ಮತ್ತೆ ಮತ್ತೆ ಉಪ್ಪು ಮತ್ತು ನೀರನ್ನು ತುಂಬಿ ಇಡಿ ಇದರಿಂದ ನಿಮ್ಮ ಮನೆಯಲ್ಲಿ ಸುಖ ಸಂತೋಷ ಸಮೃದ್ಧಿ ಸದಾ ಕಾಲ ಇರುತ್ತದೆ.
ಇನ್ನು ನಿಮ್ಮ ವ್ಯಾಪಾರದಲ್ಲಿ ಪ್ರಗತಿ ಕಾಣಬೇಕು ಎಂದರೆ ಚಿಕ್ಕ ಡಬ್ಬದಲ್ಲಿ ಉಪ್ಪನ್ನು ತುಂಬಿ ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನೀವು ವ್ಯಾಪಾರ ಮಾಡುವಂತಹ ಸ್ಥಳದ ತಿಜೋರಿಯ ಮೇಲ್ಭಾಗದಲ್ಲಿ ಇರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.