ಈಗಿರುವ ಪ್ರಪಂಚದಲ್ಲಿ ದುಡ್ಡಿಗೆ ಎಷ್ಟು ಪ್ರಾಮುಖ್ಯತೆ ಎಂದರೆ ದುಡ್ಡು ಇರುವವರಿಗೆ ಮಾತ್ರ ಇಲ್ಲಿ ಬೆಲೆ ಸಿಗುವುದು. ಪ್ರತಿದಿನ ಬೆಳಗ್ಗೆ ನಾವು ಹಾಲು ತರಕಾರಿ ತರುವುದರಿಂದ ಹಿಡಿದು ನಮ್ಮ ಯಾವುದೇ ವಹಿವಾಟು ಆರಂಭವಾಗುವುದು ಮತ್ತು ಮುಕ್ತಾಯವಾಗುವುದು ಹಣಕಾಸಿನ ಮಾತುಕತೆಯೊಂದಿಗೆ ಅಥವಾ ಹಣದ ಚಲಾವಣೆಯೊಂದಿಗೆ.
ಈಗಿನ ಪ್ರಪಂಚ ತಿರುಗುತ್ತಿರುವುದು ದುಡ್ಡಿನ ಸುತ್ತ ಹಾಗೂ ಪ್ರತಿಯೊಬ್ಬರ ಕೆಲಸದ ಮೂಲವೂ ಕೂಡ ದುಡ್ಡಿನ ಹಿಂದೆಯೇ ಹೊರಟಿದೆ ಎಂದರೂ ಸುಳ್ಳಾಗಲಾರದು. ಹೀಗಿದ್ದ ಮೇಲೆ ನಾವು ಈ ಹಣಕ್ಕೆ ಗೌರವ ಕೊಡಲೇಬೇಕು ಇಲ್ಲವಾದಲ್ಲಿ ಜೀವನದಲ್ಲಿ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ.
ಈಗಾಗಲೇ ಈ ರೀತಿ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿದ ಕಾರಣಕ್ಕೆ ಸಾಲದ ಸುಳಿಯಲ್ಲಿ ಸಿಲುಕಿರುವವರ ಉದಾಹರಣೆಯು ನಿಮಗೆ ಒಳ್ಳೆಯ ಪಾಠವಾಗುತ್ತದೆ. ಆದರೆ ಸಾಲ ಮಾಡುವುದು ತಪ್ಪಲ್ಲ ಈ ಸಾಲದ ಸುಳಿ ಒಳಗೆ ಸಿಲುಕಿ ಹೊರಗೆ ಬಾರದಂತೆ ಚಕ್ರವ್ಯೂಹದೊಳಗೆ ಸಿಕ್ಕ ಪರಿಸ್ಥಿತಿ ಆಗಬಾರದು ಅಷ್ಟೇ.
ನೀವು ಕೂಡ ಈ ರೀತಿಯಾಗಿ ಗೊತ್ತಿದ್ದೋ ಗೊತ್ತಿಲ್ಲದೆಯೇ ಈಗಾಗಲೇ ಈ ರೀತಿ ಒಂದು ಜಂಜಾಟಕ್ಕೆ ಸಿಲುಕದ್ದರೆ ನಿಮ್ಮ ಕಷ್ಟದಿಂದ ಹೇಗೆ ಹೊರಬರುವುದು ನಿಮ್ಮ ಸಾಲದ ಋಣ ಭಾರ ಇಳಿಸಿಕೊಂಡು ಮತ್ತೆ ಹೇಗೆ ಜೀರೋ ಇಂದ ಹೀರೋ ಆಗುವುದು ಎನ್ನುವುದಕ್ಕೆ ಅನುಕೂಲವಾಗುವಂತಹ ಕೆಲವೊಂದಿಷ್ಟು ಟಿಪ್ಸ್ ಗಳನ್ನು ಈ ಲೇಖನದಲ್ಲಿ ಕೊಡಲು ಇಚ್ಚಿಸುತಿದ್ದೇವೆ.
ನಮ್ಮ ನೆರೆ ಹೊರೆ ಸ್ನೇಹಿತರ ಬಳಗದಲ್ಲಿ ಮಾತ್ರವಲ್ಲದೇ ದೇಶದಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಎಂದು ಕರೆಸಿಕೊಂಡ ಸಿನಿಮಾ ತಾರೆಗಳು ಬಿಸಿನೆಸ್ ಮ್ಯಾನ್ ಗಳು ಕೂಡ ತಪ್ಪಾದ ನಿರ್ಧಾರಗಳ ಕಾರಣಕ್ಕೆ ಹೇಗೆ ಮನೆಮಠ ಆಸ್ತಿಪಾಸ್ತಿ ಕಳೆದುಕೊಂಡು ಸಾಲದಿಂದ ಬದುಕು ಹೆಸರು ಹಾಳು ಮಾಡಿಕೊಂಡರು ನೊಂದಿದ್ದಾರೆ ಎನ್ನುವುದು ಎಂದಿಗೂ ಸಾಲದ ಬಗ್ಗೆ ನಮಗೆ ಭಯವನ್ನು ಹುಟ್ಟಿಸುವ ಎಚ್ಚರಿಕೆಯ ಗಂಟೆಯಾಗಿರಬೇಕು.
ಅದಕ್ಕಾಗಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಕೂಡ ಸಾಲದ ಸುಳಿಯಲ್ಲಿ ಸಿಲುಕಿದವರಿಗೆ ಅದನ್ನು ಮೀರಿ ಗೆಲ್ಲುವ ಕೆಲವು ಬುದ್ಧಿ ಮಾತುಗಳನ್ನು ಹೇಳುತ್ತಾರೆ ಅವರು ಈ ಬಗ್ಗೆ ಹೇಳುವುದು ಎರಡೇ ಮಾತು. ಅದೇನೆಂದರೆ, ಎಂದು ಕೂಡ ನಡೆಯುತ್ತಿರುವ ವ್ಯಕ್ತಿ ಎಡವುತ್ತಾನೆ ಹೊರತು ಜಡದಂತೆ ಕುಳಿತಿರುವವರು ಅಲ್ಲ ಹಾಗಾಗಿ ಸಾಲ ಆದರೂ ಮನಸ್ಸಿನಲ್ಲಿ ಧೈರ್ಯ ಕೆಡಬಾರದು.
ಈ ರೀತಿ ಸಾಲಕ್ಕೆ ಸಿಲುಕುವ ಮುನ್ನವೇ ನಾನು ಮಾಡುತ್ತಿರುವ ಕೆಲಸ ಸರಿಯಾಗಿ ಇದೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಯಾವತ್ತಿಗೂ ಕೂಡ ಆಡಂಬರದ ಜೀವನ ಮಾಡುವುದಕ್ಕಾಗಿ ಅಥವಾ ಇನ್ನೊಬ್ಬರಿಗೆ ಪ್ರತಿಷ್ಠೆ ತೋರಿಸುವದಕ್ಕಾಗಿ ಕಾಂಪಿಟೇಷನ್ ಕೊಡುವುದಕ್ಕಾಗಿ ಸ್ವಂತ ಖುಷಿಗಾಗಿ ದುಂದು ವೆಚ್ಚ ಮಾಡಬಾರದು. ಈ ರೀತಿ ಮಾಡಲು ಮಾಡಿಕೊಂಡ ಸಾಲ ನಮಗೆ ಶೂಲವಾಗುತ್ತದೆ.
ನಾವು ಮಾಡುವ ಸಾಲವು ನಮಗೆ ಅದರ ನಾಲ್ಕು ಪಟ್ಟು ಅಲದಿದ್ದರೂ ದುಪ್ಪಟ್ಟು ಲಾಭ ತಂದು ಕೊಡುವಂತಹ ಕೆಲಸಕ್ಕೆ ವಿನಯೋಗ ಆಗುತ್ತಿದೆ ಎನ್ನುವುದನ್ನು ಪ್ರಶ್ನೆ ಮಾಡಿಕೊಂಡು ಈ ಉದ್ದೇಶಗಳಿಗಾಗಿ ಮಾತ್ರ ಸಾಲ ಮಾಡಬೇಕು ಒಂದು ವೇಳೆ ಈಗಾಗಲೇ ಸಾಲ ಆಗಿದ್ದರು ಧೃತಿಗೆಡದೆ ಅವುಗಳು ನಮ್ಮ ಕನಸುಗಳಿಗೆ ಅಡ್ಡಿ ಬರದಂತೆ ಮತ್ತೆ ಹೊಸ ಚೈತನ್ಯದಿಂದ ಮತ್ತೆ ಕನಸು ಕಂಡು ನಾವು ಮಾಡಿದ ಸಾಲವನ್ನು ನಾವೇ ತೀರಿಸಿ.
ಮತ್ತೆ ಜೀವನದಲ್ಲಿ ಗೆದ್ದು ನಿಲ್ಲುವ ರೀತಿ ಹಠ ಮಾಡಿ ಜೀವನದ ಮತ್ತೊಂದು ಆವೃತ್ತಿಯನ್ನು ಆರಂಭಿಸಬೇಕು ಹಾಗೂ ಈಗ ಇಟ್ಟ ಗುರಿ ಎಂದಿಗೂ ತಪ್ಪದಂತೆ ಶ್ರದ್ದೆ ನಿಷ್ಠೆಯಿಂದ ಕೆಲಸ ಮಾಡಬೇಕು ಎನ್ನುವ ಸಲಹೆ ಕೊಟ್ಟಿದ್ದಾರೆ. ಬಹುಶಃ ಸಾಲ ಮಾಡುವ ಮುನ್ನ ಅಥವಾ ಈಗಾಗಲೇ ಸಾಲಕ್ಕೆ ಸಿಲುಕಿದ ನಂತರ ಈ ಮಾತುಗಳನ್ನು ಪಾಲಿಸಿದ್ದೇ ಆದರೆ ಬಹುತೇಕರ ಸಮಸ್ಯೆ ತೀರುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.