ಮನೆಗಳಲ್ಲಿ ಹಬ್ಬ ಹರಿದಿನ ಇದ್ದಾಗ ಫಂಕ್ಷನ್ ಗಳು ಇದ್ದಾಗ ತೆಂಗಿನಕಾಯಿಗಳು ಅಥವಾ ಹೊಡೆದ ತೆಂಗಿನಕಾಯಿ ಹೋಳುಗಳು ಹೆಚ್ಚಿಗೆ ಉಳಿದುಕೊಳ್ಳುತ್ತದೆ. ಇಲ್ಲ ಕುಟುಂಬ ಸಮೇತ ದೇವಸ್ಥಾನಗಳಿಗೆ ಹೋಗಿ ವಾಪಸ್ ಬಂದಾಗ ಕೂಡ ಎಲ್ಲಾ ಕಡೆ ಪೂಜೆ ಮಾಡಿ ತಂದ ತೆಂಗಿನ ಕಾಯಿ ಹೋಳುಗಳು ಹೆಚ್ಚಾಗಿ ಇರುತ್ತವೆ.
ಇಂತಹ ಸಮಯದಲ್ಲಿ ಹಾಗೆ ಬಿಟ್ಟರೆ ಇದು ವೇಸ್ಟ್ ಆಗುತ್ತದೆ ಹಾಗಾಗಿ ಇದನ್ನು ಸಮರ್ಪಕವಾಗಿ ಬಳಸಿಕೊಂಡು ಮನೆಯಲ್ಲಿಯೇ ಶುದ್ಧ ಕೊಬ್ಬರಿ ಎಣ್ಣೆ ಮಾಡುವ ವಿಧಾನವನ್ನು ನಾವು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ತೆಂಗಿನಕಾಯಿ ಉಳಿದಾಗ ಮಾತ್ರವಲ್ಲದೆ ನೀವೇ ಉದ್ದೇಶಪೂರ್ವಕವಾಗಿ ಶುದ್ಧವಾದ ಕೊಬ್ಬರಿ ಎಣ್ಣೆ ಬೇಕು ಎಂದಾಗಲ್ಲ ಈ ಸಿಂಪಲ್ ಟ್ರಿಕ್ ಬಳಸಿ ಮನೆಯಲ್ಲಿ ಕುಕ್ಕರ್, ಮಿಕ್ಸಿ ಸಹಾಯದಿಂದ ಶುದ್ಧವಾದ ಕೊಬ್ಬರಿ ಎಣ್ಣೆ ಮಾಡಿಕೊಳ್ಳಬಹುದು.
ಇದನ್ನು ಮಾಡುವುದು ಬಹಳ ಈಸಿ, ಒಂದು ದೊಡ್ಡ ಕುಕ್ಕರ್ ತೆಗೆದುಕೊಳ್ಳಿ ಅದಕ್ಕೆ ತೆಂಗಿನಕಾಯಿ ಅಥವಾ ಒಡೆದ ಹೋಳುಗಳನ್ನು ಹಾಕಿ, ಒಂದು ಚೊಂಬಿನಷ್ಟು ಅಳತೆಯಲ್ಲಿ ಅಳತೆಗೆ ಬೇಕಾದಷ್ಟು ನೀರನ್ನು ಹಾಕಿ ಒಂದು ವಿಷಲ್ ಕೂಗಿಸಿ ಈಗ ಕುಕ್ಕರ್ ಆರಿದ ಮೇಲೆ ಹೋಳುಗಳಲ್ಲಿ ಕಾಯಿಯನ್ನು ಚಾಕು ಸಹಾಯದಿಂದ ಬಿಡಿಸಿಕೊಳ್ಳಿ.
ಈ ಸುದ್ದಿ ಓದಿ:- ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಕಾಲು ದಾರಿ, ಬಂಡಿ ದಾರಿ ಕುರಿತಾದ ಮಾಹಿತಿ ರೈತರು ತಪ್ಪದೇ ನೋಡಿ.!
ನಂತರ ಅವುಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಈಗ ಎಲ್ಲಾ ಕತ್ತರಿಸಿಕೊಂಡ ತೆಂಗಿನಕಾಯಿ ಚೂರುಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಗ್ರೈಂಡ್ ಮಾಡಿ ಈಗಲೂ ಕೂಡ ಆದಷ್ಟು ನೀರನ್ನು ಅವೈಡ್ ಮಾಡಬೇಕು ನೀರು ಹಾಕದೆ ರುಬ್ಬಲು ಪ್ರಯತ್ನಿಸಿ ಸಾಧ್ಯವಾಗದಿದ್ದರೆ ಚೂರು ಚೂರು ನೀರು ಹಾಕಿ ನುಣ್ಣಗೆ ಗ್ರೈಂಡ್ ಮಾಡಿ ಒಂದು ಪಾತ್ರೆಯಲ್ಲಿ ಶೇಖರಿಸಿ ಇಟ್ಟುಕೊಳ್ಳಿ.
ಒಂದು ಪಾತ್ರೆಗೆ ಕಾಟನ್ ಬಟ್ಟೆ ಸಹಾಯದಿಂದ ಗ್ರೈಂಡ್ ಮಾಡಿರುವ ತೆಂಗಿನಕಾಯಿ ಇಟ್ಟು ಹಿಂಡುತ್ತಾ ಹಾಲನ್ನು ಬಸಿದುಕೊಳ್ಳಿ. ಹೀಗೆ ಇವುಗಳಿಂದ ಎಷ್ಟು ಸಾಧ್ಯ ಅಷ್ಟು ತೆಂಗಿನಕಾಯಿ ಹಾಲನ್ನು ಪಡೆದುಕೊಳ್ಳಿ. ಈಗ ಅದನ್ನು ನೀವು ಯಾವ ಪಾತ್ರೆಯಲ್ಲಿ ಎಣ್ಣೆ ಮಾಡಲು ಬಯಸುತ್ತೀರಾ ಅದಕ್ಕೆ ಹಾಕಿ ಒಂದು ಅಗಲವಾದ ಪಾತ್ರೆ ಅಥವಾ ಬಾಣಲೆಯಲ್ಲಿ ಇಟ್ಟು ಹೈ ಫ್ಲೇಮ್ ನಲ್ಲಿ ಕಾಯಿಸಿ, ಆದರೆ ಪಾತ್ರೆ ಸಿಯಬಾರದು ಆಗಾಗ ಇದನ್ನು ಆಡುತ್ತಲೇ ಇರಬೇಕು.
ಹೀಗೆ ಸುಮಾರು 15 ನಿಮಿಷಗಳ ಕಾಲ ಇದನ್ನು ಕಾಯಿಸಿದರೆ ಎಣ್ಣೆ ಮೇಲೆ ತೇಲುವುದು ನಿಮಗೆ ಗೊತ್ತಾಗುತ್ತದೆ ಮೇಲಿರುವ ಎಣ್ಣೆಯು ಬ್ರೌನ್ ಬಣ್ಣಕ್ಕೆ ಬರುತ್ತಿದೆ ಎನ್ನುವುದು ಕಂಡಾಗ ಸ್ಟೌವ್ ಆಫ್ ಮಾಡಿ ಅರಲು ಬಿಡಿ ಇದು ಆರಿದ ಮೇಲೆ ಒಂದು ಗಾಜಿನ ಸೀಸಕ್ಕೆ ಈ ಎಣ್ಣೆಯನ್ನು ಶೋಧಿಸಿಕೊಂಡು ಸೂರ್ಯನ ಬಿಸಿನಲ್ಲಿ ಒಂದು ದಿನಗಳ ಕಾಲ ಇಡೀ ನಂತರ ಬಳಸಿ.
ಈ ಸುದ್ದಿ ಓದಿ:- ಇಂದು ಮೇ 31, ಶುಭ ಶುಕ್ರವಾರ ಇನ್ನು 70 ವರ್ಷಗಳವರೆಗೆ ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ.! ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ…
ಇದರ ಘಮ ಎಷ್ಟು ಚೆನ್ನಾಗಿರುತ್ತದೆ ಎಂದರೆ ಅದರಲ್ಲೇ ನೀವು ಇದು ಶುದ್ಧ ಎಣ್ಣೆ ಎಂದು ಗುರುತಿಸಬಹುದು. ಹೀಗೆ ಮನೆಯಲ್ಲಿ ತೆಂಗಿನಕಾಯಿ ವೇಸ್ಟ್ ಆಗದಂತೆ ಶುದ್ಧವಾದ ತೆಂಗಿನ ಎಣ್ಣೆ ಮಾಡಿಕೊಂಡು ಇದನ್ನು ನೀವು ಅಡುಗೆಗೂ ಬಳಸಬಹುದು ಅಥವಾ ತಲೆ ಕೂದಲಿಗೆ ಹಚ್ಚಲು ಕೂಡ ಬಳಸಬಹುದು. ಒಮ್ಮೆ ಟ್ರೈ ಮಾಡಿ ಮತ್ತು ಇದರ ಫಲಿತಾಂಶ ಹೇಗೆ ಅನ್ನಿಸಿತು ತಪ್ಪದೆ ಕಮೆಂಟ್ ಮಾಡಿ ತಿಳಿಸಿ ಜೊತೆಗೆ ಈ ಸಿಂಪಲ್ ಟಿಪ್ಸ್ ನ್ನು ನಿಮ್ಮ ಸ್ನೇಹಿತರು ಹಾಗೂ ಸಹೋದರಿಯರ ಜೊತೆಗೂ ಕೂಡ ಹಂಚಿಕೊಳ್ಳಿ.