ಇಲಿಗಳು ಮನುಷ್ಯನಿಗೆ ಕಿರಿಕಿರಿ ಮಾಡುವ ಪ್ರಾಣಿಗಳಲ್ಲಿ ಒಂದಾಗಿದೆ. ಹಳ್ಳಿಗಳಲ್ಲಾದರೆ ರೈತರು ಬೆಳೆಯುವ ಫಸಲನ್ನು ತಿನ್ನುವುದು, ಮನೆಯಲ್ಲಿ ರೈತ ಸ್ಟೋರ್ ಮಾಡಿ ಇಟ್ಟುಕೊಂಡ ರಾಗಿ ಭತ್ತ ಜೋಳದ ಮೂಟೆಗಳನ್ನು ಕಡಿಯುವುದು, ಕಾಳು ಕಡ್ಡಿಯನ್ನು ತಿಂದು ಹಾಳು ಮಾಡುವುದು ಮನೆ ಗೋಡೆಯನ್ನು ಕೊರೆಯುವುದು ಇನ್ನು ಮುಂತಾದ ಅನೇಕ ಸಮಸ್ಯೆ ಮಾಡುತ್ತವೆ.
ಇದು ಇಷ್ಟಕ್ಕೆ ಮುಗಿಯುವುದಿಲ್ಲ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಇರುವವರೆಗೂ ಕೂಡ ಇದೇ ರೀತಿ ತೊಂದರೆ ಕೊಡುತ್ತದೆ. ಅದರಲ್ಲೂ ಗ್ರೌಂಡ್ ಫ್ಲೋರ್, ಫಸ್ಟ್ ಫ್ಲೋರ್ ನಲ್ಲಿ ಮನೆ ಇದ್ದರಂತೂ ಈ ಇಲಿಗಳ ಕಾಟ ಎಷ್ಟಿರುತ್ತದೆ ಎಂದು ಅನುಭವಿಸಿದವರಿಗೆ ಮಾತ್ರ ಗೊತ್ತು. ಇವು ಕಿರಿಕಿರಿ ಮಾಡುವುದಲ್ಲದೇ ಆರೋಗ್ಯಕ್ಕೂ ಅಷ್ಟೇ ಡೇಂಜರ್ ಆಗಿದೆ, ಈ ಇಲಿಗಳಿಂದ ಅನೇಕ ಖಾಯಿಲೆಗಳು ಬರುತ್ತವೆ.
ಈ ಹಿಂದಿನ ಶತಮಾನದಲ್ಲಿ ಕರೋನ ಮಹಾಮಾರಿಯಂತೆ ಇಡೀ ಭೂಮಿಯನ್ನು ಕಾಡಿದ ಮಹಾಮಾರಿಗಳಲ್ಲಿ ಪ್ಲೇಗ್ ಕೂಡ ಒಂದು. ಪ್ಲೇಗ್ ಆ ಕಾಲದಲ್ಲಿ ಕೋಟ್ಯಂತರ ಜನರ ಅಂತ್ಯಕ್ಕೆ ಕಾರಣವಾಗಿತ್ತು, ಈಗಲೂ ಕೂಡ ಇಲಿ ಕಡಿತಕ್ಕೆ ಒಳಗಾದವರಿಗೆ ಪ್ಲೇಗ್ ಹಾಗೂ ಇನ್ನಿತರ ಮಾರಣಾಂತಿಕ ಕಾಯಿಲೆಗಳು ಬರುವ ಗುಮಾನಿಗಳು ಇವೆ. ಹಾಗಾಗಿ ಇಲಿಗಳಿಂದ ಮನೆ ಹಾಳಾಗುತ್ತದೆ ಎನ್ನುವುದು ಮಾತ್ರವಲ್ಲದೆ ಆರೋಗ್ಯ ಕೂಡ ಹದಗೆಡುತ್ತದೆ ಎನ್ನುವ ಭಯವು ಅನೇಕರ ನೆಮ್ಮದಿಯನ್ನು ಕೆಡಿಸಿದೆ.
ಒಂದು ಕಡೆ ನಾವು ಗಣೇಶನ ವಾಹನವಾದ ಇಲಿಯನ್ನು ಪೂಜ್ಯ ಭಾವನೆಯಿಂದ ನೋಡುತ್ತೇವೆ ಆದರೆ ಅದೇ ಸಮಯದಲ್ಲಿ ಇವುಗಳಿಂದ ಆಗುವ ತೊಂದರೆ ಇದರ ಕಾಟವನ್ನು ಸಹಿಸಿಕೊಳ್ಳಲು ಆಗದೆ, ಮನೆಯಿಂದ ಇವುಗಳನ್ನು ಓಡಿಸುವಂತೆ ಮಾಡುತ್ತದೆ. ಈ ಸಮಯದಲ್ಲಿ ಏನು ಮಾಡಬೇಕು ಎನ್ನುವ ಗೊಂದಲ ಎಲ್ಲರಿಗೂ ಇರುತ್ತದೆ ಇಲಿಗಳನ್ನು ಹಿಡಿದು ಕೊ’ಲ್ಲುವುದಕ್ಕೆ ಎಲ್ಲರ ಮನಸ್ಸೂ ಒಪ್ಪುವುದಿಲ್ಲ ಮತ್ತು ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಗಾಗಿ ನಿಮಗೂ ಈ ರೀತಿ ಸಮಸ್ಯೆ ಇದ್ದರೆ ಇನ್ನು ಮುಂದೆ ಈ ಸಿಂಪಲ್ ಟ್ರಿಕ್ ಗಳನ್ನು ಫಾಲೋ ಮಾಡಿ ಸಾಕು.
* ಇಲಿಗಳಿಗೆ ಪುದೀನ ವಾಸನೆ ಆಗುವುದಿಲ್ಲ, ನೀವು ಪುದಿನ ಎಣ್ಣೆ ಅಥವಾ ಪುದಿನ ರಸ ಮಾಡಿಕೊಂಡು ಕಾಟನ್ ಉಂಡೆಗಳಿಂದ ಅದನ್ನು ಅದ್ದಿ ಇಲಿಗಳು ಓಡಾಡುವ ಸ್ಥಳದಲ್ಲೆಲ್ಲಾ ರಾತ್ರಿ ಹೊತ್ತು ಇವುಗಳನ್ನು ಸ್ಪ್ರೆಡ್ ಮಾಡಿ ಇಟ್ಟರೆ ಸಾಕು. ಈ ಪುದೀನ ಎಣ್ಣೆಯ ಅಥವಾ ಪುದಿನ ರಸದ ವಾಸನೆಗೆ ಇಲಿಗಳು ಮತ್ತೆ ಎಂದು ಆ ದಾರಿಯಲ್ಲಿ ಓಡಾಡುವುದಿಲ್ಲ ಹೀಗೆ ನಿಮ್ಮ ಮನೆಯಿಂದ ಓಡಿ ಹೋಗಿಬಿಡುತ್ತವೆ
* ಅದೇ ರೀತಿ ಇಲಿಗಳ ಬಿಲಕ್ಕೆ ಕಾಳು ಮೆಣಸಿನ ಪುಡಿ ಹಾಕುವುದು ಕೂಡ ಈ ಸಮಸ್ಯೆಯಿಂದ ನಿಮಗೆ ಪರಿಹಾರ ಕೊಡುತ್ತದೆ. ಅದೇನೆಂದರೆ ಕಾಳು ಮೆಣಸಿನ ಪುಡಿ ಘಾಟು ಇಲಿಗಳಿಗೆ ಸಹಿಸಲು ಆಗುವುದಿಲ್ಲ ಆದ್ದರಿಂದ ನೀವು ಈ ರೀತಿ ಪೆಪ್ಪರ್ ಪೌಡರ್ ಹಾಕಿದ ಜಾಗವನ್ನು ಬಿಟ್ಟು ಹೊರಟು ಹೋಗುತ್ತವೆ. ನಿಮ್ಮ ಮನೆಯಲ್ಲಿ ಇಲಿಗಳ ಬಿಲ ಇದ್ದರೆ ನೀವು ಈ ಟೆಕ್ನಿಕ್ ಉಪಯೋಗಿಸಬಹುದು
* ಇಲಿಗಳು ನಿಮ್ಮ ಮನೆಗೆ ಬರಲೇಬಾರದು ಆ ರೀತಿ ಮಾಡಬೇಕು ಎಂದುಕೊಂಡಿದ್ದರೆ ನೀವು ನಿಮ್ಮ ಮನೆಯಲ್ಲಿ ಒಂದು ಬೆಕ್ಕನ್ನು ಸಾಕಬೇಕು. ಈ ರೀತಿ ಬೆಕ್ಕುಗಳು ಓಡಾಡುವ, ಬೆಕ್ಕುಗಳು ಘರ್ಜಿಸುವ, ಬೆಕ್ಕುಗಳು ಇರುವ ಮನೆಗೆ ಇಲಿಗಳು ಎಂಟ್ರಿ ಕೊಡುವುದಿಲ್ಲ. ಬೆಕ್ಕುಗಳು ತಮ್ಮನ್ನು ಕೊಂ’ದು ತಿನ್ನುತ್ತವೆ ಎನ್ನುವ ಭಯದಲ್ಲಿ ಅಂತಹ ಮನೆಗಳಲ್ಲಿ ಓಡಾಡುವ ಧೈರ್ಯವನ್ನು ಇಲಿಗಳು ತೋರುವುದಿಲ್ಲ
* ಅಂಗಡಿಗಳಲ್ಲಿ ಸಿಗುವ ಔಷಧಿಗಳು ಇಲಿಗಳನ್ನು ಸಂಹರಿಸುತ್ತವೆ, ಆದರೆ ಮನಸ್ಸಿಗೆ ಗಿಫ್ಟ್ ಫೀಲ್ ಇರುತ್ತದೆ. ಅದಕ್ಕಿಂತ ಈ ಉಪಾಯಗಳು ಬೆಸ್ಟ್ ಎನಿಸುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.