Home Entertainment ಜೋಶ್ ನಲ್ಲಿ ಡ್ಯಾನ್ಸ್ ಮಾಡಲು ಹೋಗಿ ಜಾರಿ ಬಿದ್ದು ಕಾಲು ಮುರಿದುಕೊಂಡ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ.

ಜೋಶ್ ನಲ್ಲಿ ಡ್ಯಾನ್ಸ್ ಮಾಡಲು ಹೋಗಿ ಜಾರಿ ಬಿದ್ದು ಕಾಲು ಮುರಿದುಕೊಂಡ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ.

0
ಜೋಶ್ ನಲ್ಲಿ ಡ್ಯಾನ್ಸ್ ಮಾಡಲು ಹೋಗಿ ಜಾರಿ ಬಿದ್ದು ಕಾಲು ಮುರಿದುಕೊಂಡ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ.

ನಟಿ ರಾಧಿಕಾ ಕುಮಾರಸ್ವಾಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ ತಮ್ಮ ದಿನದ ಬಹುತೇಕ ಸಮಯವನ್ನು ಈ ಸೋಶಿಯಲ್ ಮೀಡಿಯಾದಲ್ಲಿ ಕಳೆಯುತ್ತಾರೆ. ಅದರಲ್ಲೂ ಕೂಡ ಡ್ಯಾನ್ಸ್ ನಲ್ಲಿ ಹೆಚ್ಚು ಆಸಕ್ತಿ ವಹಿಸಿರುವ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಬಿಡುವಿನ ಸಮಯದಲ್ಲಿ ತಮ್ಮ ನೆಚ್ಚಿನ ಹಾಡಿಗೆ ಹೆಜ್ಜೆಯನ್ನು ಹಾಕುವುದರ ಮೂಲಕ ಕಾಲ ಕಳೆಯುತ್ತಾರೆ. ಈ ವೀಡಿಯೋಸ್ಗಳನ್ನು ಸ್ವತಃ ರಾಧಿಕಾ ಕುಮಾರಸ್ವಾಮಿ ಅವರೇ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾರೆ. ಈ ವಿಡಿಯೋಸ್ ಗಳು ಈಗಾಗಲೇ ಸಾಕಷ್ಟು ಲೈಕ್ಸ್ ಮತ್ತು ವೀವ್ಸ್ ಅನ್ನು ಪಡೆದುಕೊಂಡಿದೆ ನೆಟ್ಟಿಗರಂತೂ ರಾಧಿಕಾ ಕುಮಾರಸ್ವಾಮಿ ಅವರ ಈ ವೀಡಿಯೋಸ್ಗಳನ್ನು ನೋಡಿ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ಇಷ್ಟು ಯಂಗ್ ಆಗಿ ಕಾಣುತ್ತಿರುವ ರಾಧಿಕಾ ಕುಮಾರಸ್ವಾಮಿ ಅವರ ಗ್ಲಾಮರ್ ನೋಡಿ ಪಡ್ಡೆ ಹುಡುಗರು ನಿದ್ದೆ ಕೆಡಿಸಿಕೊಂಡಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಅವರು ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದಲೂ ಕೂಡ ನಟನೆ ಮಾಡುತ್ತಾ ಬಂದಿದ್ದಾರೆ ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೂ ಕೂಡ ಚಿತ್ರರಂಗದೊಟ್ಟಿಗೆ ಅವಿನಾಭವನ ಸಂಬಂಧವನ್ನು ವಹಿಸಿಕೊಂಡಿದ್ದಾರೆ. ಮೊದಲು ನಟಿಯಾಗಿ ಮತ್ತು ಸಹಕಲವಿದೆಯಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಧಿಕಾ ಕುಮಾರಸ್ವಾಮಿ ಅವರು ಇದೀಗ ಸಿನಿಮಾದ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದಾರೆ. ಹೌದು ರಾಧಿಕಾ ಕುಮಾರಸ್ವಾಮಿ ಅವರು ನಿರ್ಮಾಪಕೀಯಾಗಿ ಗುರುತಿಸಿಕೊಂಡಿದ್ದಾರೆ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಲಕ್ಕಿ ಸಿನಿಮಾ ವನ್ನು ನಿರ್ಮಾಣ ಮಾಡಿದ್ದು ಇವರೇ ಇದರ ಜೊತೆಗೆ ಸ್ವೀಟಿ ಸಿನಿಮಾಗೂ ಕೂಡ ಬಂಡವಾಳವನ್ನು ಹೂಡಿಕೆ ಮಾಡಿದ್ದರು.

ಇವೆರಡು ಸಿನಿಮಾದ ನಂತರ ಧಮಯಂತಿ ಎಂಬ ಸಿನಿಮಾದಲ್ಲಿ ನಟನೆ ಮಾಡಿದರು ಈ ಸಿನಿಮಾಗೆ ಇವರೇ ಬಂಡವಾಳವನ್ನು ಹಾಕಿದ್ದು ಸ್ವತಃ ಇವರೇ ಈ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತು. ಆದರೆ ಈ ಸಿನಿಮಾ ತೆರೆ ಕಂಡ ನಂತರ ರಾಧಿಕಾ ಕುಮಾರಸ್ವಾಮಿ ಅವರು ಎಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ. ಆದರೂ ಕೂಡ ಸುವರ್ಣ ಚಾನೆಲ್ ನಲ್ಲಿ ಬರುತ್ತಿದ್ದಂತಹ ಡಾನ್ಸ್ ಕಾರ್ಯಕ್ರಮ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡರು. ಈ ಶೋನಲ್ಲಿ ಸಿಕ್ಕಾಪಟ್ಟೆ ಹೆಸರು ಮತ್ತು ಖ್ಯಾತಿಯನ್ನು ಪಡೆದುಕೊಂಡರು ಮೊದಲಿನಿಂದಲೂ ಡಾನ್ಸ್ ನಲ್ಲಿ ಹೆಚ್ಚು ಆಸಕ್ತಿ ವಹಿಸಿಕೊಂಡಿದ್ದಂತಹ ರಾಧಿಕಾ ಕುಮಾರಸ್ವಾಮಿ ಅವರಿಗೆ ಈ ವೇದಿಕೆ ಒಂದು ವರದಾನವಾಯಿತು.

ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಮಗಳು ಆದಂತಹ ಶಮಿಕಾ ಅವರೊಟ್ಟಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ, ಶಮಿಕಾ ಅವರ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ನೀಡುತ್ತಿರುವ ಕಾರಣ ಸ್ಯಾಂಡಲ್ವುಡ್ ಇಂದ ಸ್ವಲ್ಪ ದೂರ ಉಳಿದಿದ್ದರೆ ಆದರೂ ಕೂಡ ಆಗಾಗ ಡ್ಯಾನ್ಸ್ ಮಾಡುವುದರ ಮೂಲಕ ಮತ್ತೆ ಸುದ್ದಿಯಾಗುತ್ತಾರೆ. ಆದರೆ ಇದೀಗ ಮತ್ತೊಮ್ಮೆ ಡಾನ್ಸ್ ಮಾಡುವ ಮೂಲಕವೇ ಟ್ರೋಲ್ ಗೆ ಒಳಗಾಗಿದ್ದಾರೆ ಹೌದು. ರಾಧಿಕಾ ಕುಮಾರಸ್ವಾಮಿ ಅವರು ಡಾನ್ಸ್ ಕ್ಲಾಸ್ ನಲ್ಲಿ ತಮ್ಮ ಮಾಸ್ಟರ್ ನೊಂದಿಗೆ ಡಾನ್ಸ್ ಮಾಡುವಂತಹ ಸಮಯದಲ್ಲಿ ಆಯತಪ್ಪಿ ಕೆಳಗೆ ಜಾರಿ ಬಿದ್ದಿದ್ದಾರೆ. ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರ ಕಾಲಿಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಯಲ್ಲಿಯೇ ಬೆಡ್ ರೆಸ್ಟ್ ನಲ್ಲಿ ಇದ್ದಾರಂತೆ. ಈ ವಿಡಿಯೋವನ್ನು ಸ್ವತಃ ರಾಧಿಕಾ ಕುಮಾರಸ್ವಾಮಿ ಅವರೇ ತಮ್ಮ instagram ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಏನೋ ಮಾಡಲು ಹೋಗಿ ಮತ್ತೊಂದ್ ಏನೋ ಆಯಿತು ಎಂಬ ಮಾದರಿಯಲ್ಲಿ ಜೋಶ್ ನಲ್ಲಿ ಡ್ಯಾನ್ಸ್ ಮಾಡಲು ಹೋಗಿ ಈ ರೀತಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here